ಐಫೋನ್ 4Sಗೆ ಇಂದಿನಿಂದಲೇ ಬುಕ್ಕಿಂಗ್ ಆರಂಭ

Posted By: Staff
ಐಫೋನ್ 4Sಗೆ ಇಂದಿನಿಂದಲೇ ಬುಕ್ಕಿಂಗ್ ಆರಂಭ

ಬಹುನಿರೀಕ್ಷಿತ ಐಫೋನ್ 4S ಮುಂದಿನ ವಾರದಲ್ಲಿ ಭಾರತಕ್ಕೆ ಕಾಲಿಡಲಿದೆ. ನವೆಂಬರ್ 25 ರಂದು ಭಾರತಕ್ಕೆ ಬರಲಿರುವ ಐಫೋನ್ 4Sಗೆ ಏರ್ ಸೆಲ್ ಕಂಪನಿ ಇಂದಿನಿಂದ, ಅಂದರೆ ನ. 18 ರಿಂದ ಬುಕಿಂಗ್ ಪ್ರಾರಂಭಿಸಿರುವುದಾಗಿ ತಿಳಿಸಿದೆ.

ಐಫೋನ್ ಬರುತ್ತಿರುವುದಷ್ಟೇ ವಿಶೇಷವಲ್ಲ, ಭಾರತೀಯರಿಗೆಂದು ಡಬಲ್ ಬೆನೆಫಿಟ್ ಹೊತ್ತು ಬರುತ್ತಿರುವುದು ವಿಶೇಷ. ಅದೇನೇಂದರೆ GSM ಮತ್ತು CDMA ಗ್ರಾಹಕರಿಗೂ ಈ ಮೊಬೈಲ್ ಅನುಗುಣವಾಗಲಿದೆ. ಮುಂಚಿತವಾಗಿಯೇ ಐಫೋನ್ 4Sಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ವಿಶೇಷ ಪ್ರಾಧಾನ್ಯತೆ ನೀಡುವ ನಿರೀಕ್ಷೆಯೂ ಇದೆ.

ಐಫೋನ್ 4S ಮೊಬೈಲ್ 16 ಜಿಬಿ, 32 ಜಿಬಿ ಮತ್ತು 64 ಜಿಬಿಯ ಮೂರು ವಿಧದಲ್ಲಿ ಲಭ್ಯವಿದೆ. ಆಪಲ್ ಕಂಪನಿ ಯಾವಾಗಲೂ ಉತ್ತಮ ವಿನ್ಯಾಸ ನೀಡುವುದು ಎಂಬ ನಂಬಿಕೆ ಐಫೋನ್ 4S ನಿಂದಲೂ ಉಳಿದುಕೊಂಡಿದೆ.

ಐಫೋನ್ 4S ವಿಶೇಷತೆ:

*  iOS 5 ಆಪರೇಟಿಂಗ್ ಸಿಸ್ಟಮ್

* 4.5 x 2.31 x .037 ಇಂಚಿನ ಸುತ್ತಳತೆ

* 3.5 ಇಂಚಿನ ಡಿಸ್ಪ್ಲೇ, ಟಚ್ ಸೌಲಭ್ಯ

* 8 ಮೆಗಾ ಪಿಕ್ಸಲ್ ಕ್ಯಾಮೆರಾ

* ಬ್ಲೂಟೂಥ್ ಮತ್ತು ವೈ-ಫೈ ಸಂಪರ್ಕ

ಐಫೋನ್ 4S ಅತ್ಯುನ್ನತ ಬ್ಯಾಟರಿ ಹೊಂದಿದ್ದು, ಉತ್ತಮ ಟಾಕ್ ಟೈಂ ಮತ್ತು ಸ್ಟ್ಯಾಂಡ್ ಬೈ ಟೈಂ ನೀಡಲಿದೆ ಎಂದು ಕಂಪನಿ ತಿಳಿಸಿದೆ.ಇದರೊಂದಿಗೆ ಆಧುನಿಕ ಅಪ್ಲಿಕೇಶನ್ ಗಳನ್ನೂ ಕೂಡ ಅಳವಡಿಸಲಾಗಿದೆ.

ವಿಶೇಷವಾದ ‘Siri’ ಅಪ್ಲಿಕೇಶನ್ ಕೂಡ ಇದೆ. ಈ ಐಫೋನ್ 4S ಭಾರತದಲ್ಲಿ ಒಳ್ಳೆ ಮಾರಾಟವಾಗುವ ನಿರೀಕ್ಷೆಯಿದ್ದು, ಮೊಬೈಲ್ ಬಿಡುಗಡೆಗೊಳ್ಳುವ ದಿನವೇ ಬೆಲೆಯನ್ನು ಘೋಷಿಸಲಾಗುವುದು ಎಂದು ಕಂಪನಿ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot