Subscribe to Gizbot

ವಿಶೇಷ ಟಾರಿಫ್ ಯೋಜನೆಗಳೊಂದಿಗೆ ಏರ್‌ಟೆಲ್ 4ಜಿ

Written By:

ಚಂಡೀಘಡ್, ಮೊಹಾಲಿ, ಪಂಚಾಕ್ಲು ಮತ್ತು ಲುಧಿಯಾನದಲ್ಲಿ ಏರ್‌ಟೆಲ್ 4ಜಿ ಯನ್ನು ಲಾಂಚ್ ಮಾಡಿದ ನಂತರ ಪಂಜಾಬ್ ಪ್ರಾಂತ್ಯದಲ್ಲಿ ಕೂಡ ಇದೀಗ ಏರ್‌ಟೆಲ್ ತನ್ನ ಸೌಲಭ್ಯವನ್ನು ವಿಸ್ತರಿಸಲಿದೆ. ಜಲಂಧರ್ ಮತ್ತು ಹರಿಯಾಣದ ನಗರಗಳಿಗೂ ಕೂಡ 4ಜಿ ಯನ್ನು ವಿಸ್ತರಿಸಲಿರುವ ಕಾರ್ಯವನ್ನು ಏರ್‌ಟೆಲ್ ಮಾಡುತ್ತಿದೆ.

ಜಲಧರ್ ಪ್ರಾಂತ್ಯದಲ್ಲಿ ಏರ್‌ಟೆಲ್ ಬಳಕೆದಾರರು ಡಾಂಗಲ್‌ಗಳು, ವೈ-ಫೈ ಸಿಪಿಇಎಸ್ ಹಾಗೂ ಮೊಬೈಲ್ ಫೋನ್‌ಗಳನ್ನು ಬಳಸಿಕೊಂಡು 4ಜಿ ಯನ್ನು ಪ್ರವೇಶಿಬಹುದಾಗಿದ್ದು ಇದು ಬಳಕೆದಾರರಿಗೆ ವೇಗವಾದ ಬ್ರಾಡ್‌ಬಾಂಡ್ ಅನುಭವವನ್ನು ನೀಡಲಿದೆ. ಆಪಲ್ ಐಫೋನ್ 5s ಹಾಗೂ 5C ಗ್ರಾಹಕರು 4ಜಿ ಅನುಭವವನ್ನು ಅನುಭವಿಸಬಹುದು.

ವಿಶೇಷ ಟಾರಿಫ್ ಯೋಜನೆಗಳೊಂದಿಗೆ ಏರ್‌ಟೆಲ್ 4ಜಿ

ಇಷ್ಟಲ್ಲದೆ ಏರ್‌ಟೆಲ್ ತನ್ನ 4ಜಿ ವ್ಯಾಪ್ತಿಯನ್ನು ಕೋಲ್ಕತ್ತಾ, ಬೆಂಗಳೂರು ಹಾಗೂ ಫೂನೆಗೆ ವಿಸ್ತರಿಸುತ್ತಿದ್ದು ಬೆಂಗಳೂರು ಈಗಾಗಲೇ 4ಜಿ ಯನ್ನು ಹೊಂದಿರುವ ನಗರವಾಗಿದೆ. ಇಲ್ಲಿನ ಗ್ರಾಹಕರು 4ಜಿ ಯನ್ನು ತಮ್ಮ ಮೊಬೈಲ್‌ಗಳಲ್ಲಿ ಬಳಸಬಹುದಾಗಿದೆ. ಮೇಲೆ ತಿಳಿಸಿದ ವಲಯಗಳಲ್ಲಿ 4ಜಿ ಫೋನ್‌ಗಳನ್ನು ಆಪರೇಟ್‌ ಮಾಡಬಹುದಾದ ವಿಷಯ ನಿಮಗೆ ಗೊತ್ತಿರದಿದ್ದಲ್ಲಿ ಆಪಲ್ ಐಫೋನ್ 5S (ಮಾಡೆಲ್‌ಗಳು A1530& A1518) ಮತ್ತು ಐಫೋನ್ 5C (ಮಾಡೆಲ್‌ಗಳು A1529 & A1516) ಬಳಕೆದಾರರು ಯುನಿವರ್ಸಲ್ ಸಿಮ್/4ಜಿ ಸಿಮ್‌ಗೆ ಅಪ್‌ಗ್ರೇಡ್ ಮಾಡುವ ಮೂಲಕ ಬಳಕೆದಾರರು 4ಜಿ ಯ ಅದ್ಭುತ ಅನುಭವವನ್ನು ಪಡೆದುಕೊಳ್ಳಬಹುದು.

ಪೋಸ್ಟ್‌ ಪೈಡ್ ಬಳಕೆದಾರರಿಗಾಗಿ (ಮೊಬೈಲ್‌ಗಳು, ಡಾಂಗಲ್‌ಗಳು ಮತ್ತು ಸಿಪಿಇಗಳಿಗೆ) ರೂ. 999 ಗಳ ವಿಶೇಷ ಪ್ಯಾಕ್ ಅನ್ನು ಏರ್‌ಟೆಲ್ ಲಾಂಚ್ ಮಾಡಿದೆ ಹಾಗೂ ರೂ. 995 ರ (ಪ್ರಿ ಪೈಡ್) ಪ್ಯಾಕ್ 4ಜಿ ಡೇಟಾದ 10ಜಿಬಿಯೊಂದಿಗೆ ಬಂದಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot