ಜಿಯೋ ಮಣಿಸುವ ಸಲುವಾಗಿ ನಂಬಲಾದ ಬೆಲೆಗೆ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದ ಏರ್‌ಟೆಲ್..!

|

ಭಾರ್ತಿ ಏರ್‌ಟೆಲ್ ಟೆಲಿಕಾಂ ವಲಯದಲ್ಲಿ ಜಿಯೋದೊಂದಿಗೆ ನೇರಾ ನೇರಾ ಸ್ಪರ್ಧೆಯನ್ನು ಎದುರಿಸುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಜಿಯೋ ಫೋನ್ ಸದ್ದು ಮಾಡುತ್ತಿದೆ, ಅಲ್ಲದೇ ಉಚಿತ ಆಂಡ್ರಾಯ್ಡ್ ಫೋನ್ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ. ಇದೇ ಸಂದರ್ಭದಲ್ಲಿ ಏರ್‌ಟೆಲ್ ಕಾರ್ಬನ್‌ನೊಂದಿಗೆ ಸೇರಿಕೊಂಡು ಮತ್ತೇರಡು ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಜಿಯೋ ಮಣಿಸುವ ಸಲುವಾಗಿ ನಂಬಲಾದ ಬೆಲೆಗೆ ಎರಡು ಸ್ಮಾರ್ಟ್‌ಫೋನ್ ಬಿಡುಗಡೆ

ಓದಿರಿ: ವಾಟ್ಸ್‌ಆಪ್‌ನ ಈ ಹೊಸ ಆಯ್ಕೆಯನ್ನು ಬಳಕೆ ಮಾಡುವ ಮುನ್ನ ಎಚ್ಚರ! ಸಮಸ್ಯೆ ಎದುರಿಸಬೇಕಾಗಬಹುದು!

A1 ಇಂಡಿಯನ್ ಮತ್ತು A41 ಪವರ್ ಎನ್ನುವ ಎರಡು ಕಾರ್ಬನ್ ಫೋನ್‌ಗಳನ್ನು ಏರ್‌ಟೆಲ್ ಬಿಡುಗಡೆ ಮಾಡಲು ಎರ್‌ಟೆಲ್ ಸಿದ್ದವಾಗಿದೆ. ಈ ಎರಡು ಸ್ಮಾರ್ಟ್‌ಫೋನ್‌ ಗಳು ಅತೀ ಕಡಿಮೆ ಬೆಲೆಗ ದೊರೆಯಲಿದ್ದು, ಗ್ರಾಹಕರು ಕ್ಯಾಷ್ ಬ್ಯಾಕ್ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.

ಬೆಲೆಯಲ್ಲಿ ಭಾರೀ ಕಡಿಮೆ:

ಬೆಲೆಯಲ್ಲಿ ಭಾರೀ ಕಡಿಮೆ:

A1 ಇಂಡಿಯನ್ ಸ್ಮಾರ್ಟ್‌ಫೋನ್ ರೂ.4,390 ಆಗಿದ್ದು, ಆದರೆ ಏರ್‌ಟೆಲ್‌ನೊಂದಿಗೆ ರೂ.1799ಕ್ಕೆ ದೊರೆಯಲಿದೆ ಎನ್ನಲಾಗಿದೆ. ಇದೇ ಮಾದರಿಯಲ್ಲಿ A41 ಪವರ್ ಸ್ಮಾರ್ಟ್‌ಫೋನ್ ರೂ. 4,290ಆಗಿದ್ದು, ಆದರೆ ಏರ್‌ಟೆಲ್‌ನೊಂದಿಗೆ ರೂ,1,849ಕ್ಕೆ ಈ ಸ್ಮಾರ್ಟ್‌ಫೋಣ್ ಮಾರಾಟವಾಗಲಿದೆ.

ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯಚರಣೆ:

ಆಂಡ್ರಾಯ್ಡ್ ನ್ಯಾಗದಲ್ಲಿ ಕಾರ್ಯಚರಣೆ:

ಈ ಎರಡು ಸ್ಮಾರ್ಟ್‌ಫೋನ್‌ಗಳು ಆಂಡ್ರಾಯ್ಡ್‌ ನ್ಯಾಗಾದಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಎಲ್ಲಾ ಆಪ್‌ಗಳನ್ನು ಇದರಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ. ಎಲ್ಲಾ ಆಪ್‌ಗಳು ಇದರಲ್ಲಿ ಕಾರ್ಯನಿರ್ವಹಿಸಲಿದೆ.

ಫೋನ್ ವಿಶೇಷತೆ:

ಫೋನ್ ವಿಶೇಷತೆ:

ಈ ಸ್ಮಾರ್ಟ್‌ಫೋನ್ ಗಳಲ್ಲಿ 4 ಇಂಚಿನ ಡಿಸ್‌ಪ್ಲೇಯನ್ನು ಕಾಣಬಹುದಾಗಿದೆ. ಅಲ್ಲದೇ 1GB RAM ಹಾಗೂ ಡ್ಯುಯಲ್ ಸಿಮ್ ಕಾರ್ಡ್ ಮತ್ತು ಡ್ಯುಯಲ್ ಕ್ಯಾಮೆರಾಗಳನ್ನು ಕಾಣಬಹುದಾಗಿದೆ. ಅಲ್ಲೇ 4G VoLTE ಬಳಕೆ ಮಾಡಿಕೊಳ್ಳಬಹುದಾಗಿದೆ.

ಅಲ್ಲದೇ ಏರ್‌ಟೆಲ್ ಆಫರ್ ಲಭ್ಯ:

ಅಲ್ಲದೇ ಏರ್‌ಟೆಲ್ ಆಫರ್ ಲಭ್ಯ:

ಇದಲ್ಲದೇ ಈ A1 ಇಂಡಿಯನ್ ಮತ್ತು A41 ಪವರ್ ಸ್ಮಾರ್ಟ್‌ಫೋನ್‌ನೊಂದಿಗೆ ಏರ್‌ಟೆಲ್‌ ಆಫರ್ ಅನ್ನು ಕಾಣಬಹುದು. ಈ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೊಸ ಆಫರ್ ಅಲ್ಲದೇ ಕ್ಯಾಷ್ ಬ್ಯಾಕ್ ಅನ್ನು ಸಹ ಘೋಷಣೆ ಮಾಡಲಾಗಿದೆ.

Best Mobiles in India

English summary
Airtel Offers Karbonn A1 Indian, A41 Power Smartphones Starting At Rs. 1,799. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X