2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

|

ನಮಗೆಲ್ಲಾ ಗೊತ್ತಿರುವಂತೆ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ ಟಾಪ್, ಕ್ಯಾಮೆರ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲು ಇ - ಕಾಮರ್ಸ್ ವೆಬ್ ಪುಟಗಳೇ ಉತ್ತಮ ಜಾಗ. ಕೊಡುಗೆ ಮತ್ತು ರಿಯಾಯಿತಿಯ ವಿಷಯಕ್ಕೆ ಬಂದರೆ ಅಮೆಜಾನ್ ಉತ್ತಮವೆನ್ನುವುದರಲ್ಲಿ ಅನುಮಾನವಿಲ್ಲ.

2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ಓದಿರಿ: ಈ ಅಪ್ಲಿಕೇಶನ್ ಇದ್ದರೆ ಸಾಕು ಏರ್‌ಟೆಲ್‌ 5ಜಿಬಿ ಇಂಟರ್ನೆಟ್ ಉಚಿತ

ಬಳಕೆದಾರರ ಅನುಭವವನ್ನು ಹೆಚ್ಚಿಸಲು, ಕಂಪನಿಯು ಅಮೆಜಾನ್ ಪ್ರೈಮ್ ಸದಸ್ಯತ್ವವನ್ನು ಪರಿಚಯಿಸಿದೆ, ಒಂದರಿಂದ ಎರಡು ದಿನದೊಳಗೆ ವಸ್ತು ನಿಮ್ಮ ಕೈಸೇರುತ್ತದೆ. ಕೆಲವು ಉತ್ತಮ ಉತ್ಪನ್ನಗಳ ಒಂದು ಪಟ್ಟಿಯನ್ನಿಲ್ಲಿ ತಯಾರಿಸಿದ್ದೇವೆ. ಒಮ್ಮೆ ನೋಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸ್ಯಾಮ್ಸಂಗ್ ಆನ್ 7 ಪ್ರೊ.

ಸ್ಯಾಮ್ಸಂಗ್ ಆನ್ 7 ಪ್ರೊ.

ಕಡಿಮೆ ಬೆಲೆಯಲ್ಲಿ ಉತ್ತಮ ಬ್ರ್ಯಾಂಡೆಡ್ ಸ್ಮಾರ್ಟ್ ಫೋನ್ ಖರೀದಿಸುವುದು ಯಾವಾಗಲೂ ಉತ್ತಮ. ಅಂತಹ ಡೀಲ್ ಅನ್ನು ನೀವು ನೋಡುತ್ತಿದ್ದರೆ, 4 ಪರ್ಸೆಂಟ್ ರಿಯಾಯತಿ ಇರುವ 10,690 ರುಪಾಯಿಯ ಗ್ಯಾಲಕ್ಸಿ ಆನ್ 7 ಪ್ರೋ ಉತ್ತಮ ಆಯ್ಕೆ. ಚಿನ್ನ ಮತ್ತು ಕಪ್ಪು ಬಣ್ಣಗಳಲ್ಲಿ ಇದು ಲಭ್ಯ. ಒಂದು ವರ್ಷದ ತಯಾರಕರ ವ್ಯಾರಂಟಿ ಮತ್ತು ಆರು ತಿಂಗಳ ಬ್ರ್ಯಾಂಡ್ ವಾರಂಟಿ ಇದಕ್ಕೆ ಲಭ್ಯವಿದೆ.

ಶಿಯೋಮಿ ಎಂ.ಐ 4ಐ.

ಶಿಯೋಮಿ ಎಂ.ಐ 4ಐ.

ನಿಮ್ಮ ತಮ್ಮನಿಗೋ ತಂಗಿಗೋ ಒಂದು ಫೋನು ಉಡುಗೊರೆಯಾಗಿ ನೀಡಬೇಕೆಂದಿದ್ದೀರಾ? ಇಲ್ಲಿದೆ ನೋಡಿ! ಶಿಯೋಮಿ ಎಂ.ಐ 4ಐ ಅಮೆಜಾನ್ ಇಂಡಿಯಾದಲ್ಲಿ ಮೂರು ಬಣ್ಣಗಳಲ್ಲಿ ಲಭ್ಯ - ಗ್ರೇ, ಬಿಳಿ ಮತ್ತು ಪಿಂಕ್; ಬೆಲೆ 11,799 ರುಪಾಯಿ. ಅಮೆಜಾನ್ ಪ್ರೈಮ್ ಡೆಲಿವರಿಯನ್ನೂ ಆಯ್ದುಕೊಳ್ಳಬಹುದು. 5ಇಂಚಿನ ಪರದೆ, ಉತ್ತಮ ಚಿತ್ರಗಳಿಗಾಗಿ 13 ಮೆಗಾಪಿಕ್ಸೆಲ್ಲಿನ ಕ್ಯಾಮೆರ ಇದರಲ್ಲಿದೆ.

ಬ್ಲ್ಯಾಕ್ ಬೆರ್ರಿ Z3.

ಬ್ಲ್ಯಾಕ್ ಬೆರ್ರಿ Z3.

ಬ್ಲ್ಯಾಕ್ ಬೆರ್ರಿಯ ಅಭಿಮಾನಿಗಳಿಗಾಗಿ ಈ ಡೀಲ್! 56 ಪರ್ಸೆಂಟ್ ರಿಯಾಯತಿ ಇರುವ ಕೇವಲ 6,975 ರುಪಾಯಿಗೆ ಬ್ಲ್ಯಾಕ್ ಬೆರ್ರಿ Z3 ಲಭ್ಯವಿದೆ. ನಿಜದಂತೆ ಕಾಣುವ ವೀಡಿಯೋ ಮತ್ತು ಫೋಟೋಗಳನ್ನು ಅನುಭವಿಸಬೇಕೆಂದರೆ ಬ್ಲ್ಯಾಕ್ ಬೆರ್ರಿ Z3 ಅನ್ನು ಅಮೆಜಾನ್ ಇಂಡಿಯಾದಿಂದ ಖರೀದಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಏಸಸ್ ಎ555ಎಲ್.ಎ - ಎಕ್ಸ್.ಎಕ್ಸ್2384ಟಿ 15.6 ಇಂಚಿನ ಲ್ಯಾಪ್ ಟಾಪ್.

ಏಸಸ್ ಎ555ಎಲ್.ಎ - ಎಕ್ಸ್.ಎಕ್ಸ್2384ಟಿ 15.6 ಇಂಚಿನ ಲ್ಯಾಪ್ ಟಾಪ್.

ಕಾಲೇಜಿಗೆ ಹೋಗುವ ಹುಡುಗರು ಲ್ಯಾಪ್ ಟಾಪ್ ಹುಡುಕುತ್ತಿದ್ದೀರಾ? ಇಲ್ಲಿದೆ ನೋಡಿ! ಕಲರ್ ಟೆಂಪರೇಚರ್ ಕರೆಕ್ಷನ್ ಆಯ್ಕೆ ಇರುವ ಉತ್ತಮ ತಂತ್ರಜ್ಞಾನದ ಲ್ಯಾಪ್ ಟಾಪ್ ಅನ್ನು ಏಸಸ್ ಬಿಡುಗಡೆಗೊಳಿಸಿದೆ. 30,034 ರುಪಾಯಿಯ ಈ ಲ್ಯಾಪ್ ಟಾಪಿನಲ್ಲಿ ಐ ಕೇರ್ ಮೋಡ್ ಇದೆ, ಇದು ನೀಲಿ ಬೆಳಕನ್ನು 33 ಪ್ರತಿಶತಃ ಕಡಿಮೆ ಮಾಡುತ್ತದೆ, ಓದುವುದು ಹಿತಕರವಾಗಿರುತ್ತದೆ ಮತ್ತು ನಿಮ್ಮ ಕಣ್ಣು ಸುಸ್ತಾಗುವುದು ತಪ್ಪುತ್ತದೆ.

ಲಿನೊವೊ ಜಿ50 - 80 15.6 ಇಂಚಿನ ಲ್ಯಾಪ್ ಟಾಪ್.

ಲಿನೊವೊ ಜಿ50 - 80 15.6 ಇಂಚಿನ ಲ್ಯಾಪ್ ಟಾಪ್.

ದೊಡ್ಡದಿದ್ದಷ್ಟೂ ಒಳ್ಳೆಯದು! 15.6 ಇಂಚಿನ ಪರದೆಯಿರುವ, ಫುಲ್ ಕೀಬೋರ್ಡ್ ಇರುವ ಲಿನೊವೊ ಲ್ಯಾಪ್ ಟಾಪಿನ ಬೆಲೆ ಕೇವಲ 34,990. 8ಜಿಬಿ ರ್ಯಾಮ್, 1ಟಿಬಿ ಸ್ಟೋರೇಜ್ ಇದರಲ್ಲಿದೆ! ತಿಂಗಳಿಗೆ 3,125ರುಪಾಯಿಯಷ್ಟು ಇ.ಎಮ್.ಐ ಕಟ್ಟಿ ಕೊಳ್ಳುವ ಆಯ್ಕೆಯೂ ಇದೆ.

ಡೆಲ್ ಇನ್ಸ್ಪಿರಾನ್ 3555 15.6 ಇಂಚಿನ ಲ್ಯಾಪ್ ಟಾಪ್.

ಡೆಲ್ ಇನ್ಸ್ಪಿರಾನ್ 3555 15.6 ಇಂಚಿನ ಲ್ಯಾಪ್ ಟಾಪ್.

ಬಹಳಷ್ಟು ಮನೆಗಳಲ್ಲಿ ಡೆಸ್ಕ್ ಟಾಪ್ ಕಣ್ಮರೆಯಾಗುತ್ತಿದೆ. ಲ್ಯಾಪ್ ಟಾಪುಗಳ ಖ್ಯಾತಿ ಹೆಚ್ಚುತ್ತಿದೆ. 25 ಸಾವಿರಕ್ಕಿಂತ ಹೆಚ್ಚಿನ ಹಣವನ್ನು ಲ್ಯಾಪ್ ಟಾಪಿಗೆಂದು ಖರ್ಚು ಮಾಡಲು ನಿಮಗೆ ಇಷ್ಟವಿಲ್ಲದಿದ್ದರೆ, ತಲೆ ಕೆಡಿಸಿಕೊಳ್ಳಬೇಡಿ! ಅದೂ ಲಭ್ಯವಿದೆ. 4ಜಿಬಿ ರ್ಯಾಮ್, 500 ಜಿಬಿ ರಾಮ್, ವಿಂಡೋಸ್ 10 ಒಎಸ್, 15.6 ಇಂಚಿನ ಪರದೆಯಿರುವ ಡೆಲ್ ಲ್ಯಾಪ್ ಟಾಪ್ 22,355 ರುಪಾಯಿಗೆ ಅಮೆಜಾನ್ ಇಂಡಿಯಾದಲ್ಲಿ ಲಭ್ಯವಿದೆ.

ಅಲ್ಟ್ರಾ ಥಿನ್ ವೈರ್ ಲೆಸ್ 2.4ghz ಆಪ್ಟಿಕಲ್ ಮೌಸ್.

ಅಲ್ಟ್ರಾ ಥಿನ್ ವೈರ್ ಲೆಸ್ 2.4ghz ಆಪ್ಟಿಕಲ್ ಮೌಸ್.

ನಿಮ್ಮ ಟ್ಯಾಪ್ ಟಾಪಿನ ಟಚ್ ಪ್ಯಾಡ್ ಉಪಯೋಗಿಸಲು ನಿಮಗೆ ಇಚ್ಛೆ ಇರದಿದ್ದಲ್ಲಿ, ಇದು ಉತ್ತಮ ಆಯ್ಕೆ. ಈ ಅಲ್ಟ್ರಾ ಥಿನ್ ಮೌಸ್ನಲ್ಲಿ ನ್ಯಾನೋ ಯು.ಎಸ್.ಬಿ ಡಾಂಗಲ್ ಇದೆ ಮತ್ತು ಆಟೋಮ್ಯಾಟಿಕ್ ಆನ್ ಆಫ್ ಸೌಲಭ್ಯವಿದೆ. ಅಮೆಜಾನ್ ಇಂಡಿಯಾದಲ್ಲಿ ಕೇವಲ 299 ರುಪಾಯಿಗೆ ಇದು ಲಭ್ಯ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟೆಕ್ನೋಟೆಕ್ ಟಿಟಿ - ಜಿ03 ವೈರ್ ಲೆಸ್ ಆಪ್ಟಿಕಲ್ ಮೌಸ್.

ಟೆಕ್ನೋಟೆಕ್ ಟಿಟಿ - ಜಿ03 ವೈರ್ ಲೆಸ್ ಆಪ್ಟಿಕಲ್ ಮೌಸ್.

ಇದು ಹುಡುಗಿಯರಿಗಾಗಿಯೇ ತಯಾರಿಸಿದಂತಿದೆ! ಈ ಆಪ್ಟಿಕಲ್ ಮೌಸ್ ಅನ್ನು ಅಮೆಜಾನ್ ಪ್ರೈಮ್ ಡೆಲಿವರಿಯಲ್ಲಿ ಕೇವಲ 297 ರುಪಾಯಿಗೆ ಖರೀದಿಸಬಹುದು.

ಡೆಲ್ ವೆನ್ಯೂ 8 ಪ್ರೊ 3000 ಸೀರೀಸ್ ಟ್ಯಾಬ್ಲೆಟ್.

ಡೆಲ್ ವೆನ್ಯೂ 8 ಪ್ರೊ 3000 ಸೀರೀಸ್ ಟ್ಯಾಬ್ಲೆಟ್.

ಭಾರದ ವಸ್ತುಗಳನ್ನು ಹೊತ್ತೊಯ್ಯಲು ನಿಮಗೆ ಇಷ್ಟವಿಲ್ಲವಾ? ತುಂಬಾ ಅಲೆಯುತ್ತೀರಾ? ಡೆಲ್ ನ ಈ ಅಲ್ಟ್ರಾ ಥಿನ್ ಟ್ಯಾಬ್ಲೆಟ್ ನಿಮಗಾಗಿಯೇ ಇದೆ! ಅಮೆಜಾನ್ ಇಂಡಿಯಾದಲ್ಲಿ 10,917 ರುಪಾಯಿಗೆ ಇದು ಲಭ್ಯ. 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ, ಒಂದು ವರ್ಷದ ತಯಾರಕರ ವ್ಯಾರಂಟಿ ಮತ್ತು ಆರು ತಿಂಗಳ ಬ್ರ್ಯಾಂಡ್ ವಾರಂಟಿ ಇದಕ್ಕೆ ಲಭ್ಯವಿದೆ. 8 ಇಂಚಿನ ಮಲ್ಟಿ ಟಚ್, ಫುಲ್ ಹೆಚ್.ಡಿ ಪರದೆಯಿದೆ.

ಝೋಲೋ ಪ್ಲೇ ಟೆಗ್ರಾ ನೋಟ್ ಟ್ಯಾಬ್ಲೆಟ್.

ಝೋಲೋ ಪ್ಲೇ ಟೆಗ್ರಾ ನೋಟ್ ಟ್ಯಾಬ್ಲೆಟ್.

ನಿಮ್ಮ ಮೊಬೈಲ್ ಫೋನಿನಲ್ಲಿ ಆಟಗಳನ್ನಾಡಲು ಬಯಸುತ್ತೀರಾ? ಆಟವಾಡುವ ಹುಚ್ಚು ನಿಮಗಿದ್ದಲ್ಲಿ, ಎನ್.ವಿಡಿಯಾ ಚಿಪ್ ಇರುವ ಟ್ಯಾಬ್ಲೆಟ್ ಅನ್ನು ಗಮನಿಸುವುದು ಸೂಕ್ತ. 5x ಸ್ಪೀಡಿನೊಂದಿಗೆ ಆಟವಾಡಲು ಝೋಲೋ ಪ್ಲೇ ಟೆಗ್ರಾ ನೋಟ್ ಅತ್ಯಂತ ಸೂಕ್ತ. ಅಮೆಜಾನ್ ಇಂಡಿಯಾದಲ್ಲಿ 7,099 ರುಪಾಯಿಗಳಿಗೆ ಇದು ಲಭ್ಯ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
As we all know, e-commerce websites are the best place to buy tech gadgets including mobiles, tablets, laptops, cameras and other electronics. The Indian subsidiary of Amazon is indeed the best when it comes to offers and discounts.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X