ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ನಲ್ಲಿ ಮಿಡ್ ರೇಂಜಿನ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಗ್ರೇಟ್ ಇಂಡಿಯನ್ ಫೆಸ್ಟಿವಲ್ ನ ನಂತರ ಅಮೇಜಾನ್ ಇದೀಗ ಫ್ಯಾಬ್ ಫೋನ್ ಫೆಸ್ಟ್ ನ್ನು ಆಯೋಜಿಸುತ್ತಿದೆ. ಈ ಸೇಲ್ ನಲ್ಲಿ ಹಲವಾರು ಮಿಡ್ ರೇಂಜಿನ ಸ್ಮಾರ್ಟ್ ಫೋನ್ ಗಳು ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಲಭ್ಯವಾಗುತ್ತದೆ. 10% ದ ವರೆಗೆ ಉಳಿತಾಯ ಮಾಡುವ ಅವಕಾಶವಿದೆ ಅಂದರೆ ಸುಮಾರು 2,000 ರುಪಾಯಿಯನ್ನು ಒಂದು ಹ್ಯಾಂಡ್ ಸೆಟ್ ಖರೀದಿಯಲ್ಲಿ ಉಳಿತಾಯ ಮಾಡಬಹುದು.

ಅಮೇಜಾನ್

ಅಮೇಜಾನ್ ನಲ್ಲಿರುವ ಆಫರ್ ಗಳಲ್ಲಿ 1,500 ರುಪಾಯಿಯ ಹೆಚ್ ಡಿಎಫ್ ಸಿ ಬ್ಯಾಂಕಿನ ಕ್ರೆಡಿಟ್/ಡೆಬಿಟ್ ಕಾರ್ಡ್ ಮತ್ತು ಇಎಂಐ ಟ್ರಾನ್ಸ್ಯಾಕ್ಷನ್ ಗಳಿಗೆ ಲಭ್ಯವಾಗುತ್ತದೆ. ಏರ್ ಟೆಲ್ 4ಜಿ ಡಬಲ್ ಡಾಟಾ ಆಫರ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಗಳು ಲಭ್ಯವಾಗುತ್ತದೆ. ಈ ಫೋನ್ ಗಳ ಖರೀದಿಯಿಂದಾಗಿ ನೀವು 2,500 ರುಪಾಯಿಯನ್ನು ಅನ್ ಲಾಕ್ ಮಾಡುವ ಅವಕಾಶವಿದೆ ಮತ್ತು ಇದೇ ಸಮಯದಲ್ಲಿ ನಿಮಗೆ ಫ್ಲೈಟ್ ಟಿಕೆಟ್ ನಲ್ಲಿ ಹೆಚ್ಚುವರಿಯಾಗಿ 500 ರುಪಾಯಿ ರಿಯಾಯಿತಿ ಸಿಗುತ್ತದೆ.

ಪೋಕೋ ಎಫ್1

ಪೋಕೋ ಎಫ್1

ಈ ಸ್ಮಾರ್ಟ್ ಫೋನ್ ನ್ನು ನೀವು 7,800 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿ ಮಾಡಬಹುದು. ಸದ್ಯ ಈ ಫೋನಿನ ಬೆಲೆ 18,999 ರುಪಾಯಿಗಳು. ಇದರಲ್ಲಿ 4,000 mAh ನ ಬ್ಯಾಟರಿ ಸೌಲಭ್ಯ ಜೊತೆಗೆ ಕ್ವಿಕ್ ಚಾರ್ಜ್ 3.0 ತಂತ್ರಗಾರಿಕೆಯನ್ನು ಅಳವಡಿಸಲಾಗಿದೆ.

ವಿವೋ ವೈ15

ವಿವೋ ವೈ15

ಈ ಹ್ಯಾಂಡ್ ಸೆಟ್ ನ್ನು ನೀವು 611 ರುಪಾಯಿಯ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಅಪ್ಪಾರಿಯೋ ರೀಟೈಲ್ ಪ್ರೈವೇಟ್ ಲಿಮಿಟೆಡ್ ನಲ್ಲಿ ಹೆಚ್ಚುವರಿಯಾಗಿ 500 ರುಪಾಯಿ ರಿಯಾಯಿತಿ ಸಿಗುತ್ತದೆ. ಈ ಫೋನಿನ ಪ್ರಮುಖ ವೈಶಿಷ್ಟ್ಯತೆಯೆಂದರೆ ಇದರಲ್ಲಿ 5,000 mAh ನ ಬ್ಯಾಟರಿ ಸೌಲಭ್ಯವಿದೆ.

ಒಪ್ಪೋ ಎ5 2020

ಒಪ್ಪೋ ಎ5 2020

ಈ ಸ್ಮಾರ್ಟ್ ಫೋನಿನ ಬೆಲೆ 13,999 ರುಪಾಯಿಗಳು ಅಂದರೆ 13% ರಿಯಾಯಿತಿ ನಿಮಗೆ ಲಭ್ಯವಾಗುತ್ತದೆ. ಇದರಲ್ಲಿ 12MP + 8MP + 2MP + 2MP ಹಿಂಭಾಗದ ಕ್ಯಾಮರಾ ಸೆಟ್ ಅಪ್ ಇದ್ದು 5,000 mAh ಬ್ಯಾಟರಿ ಸೌಲಭ್ಯ ಜೊತೆಗೆ ರಿವರ್ಸ್ ಚಾರ್ಜಿಂಗ್ ಗೆ ಬೆಂಬಲವನ್ನು ಇದು ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30

ಈ ಫೋನ್ ನ್ನು ನೀವು 471 ರುಪಾಯಿಯ ಮಾಸಿಕ ಇಎಂಐ ಆಯ್ಕೆಯಲ್ಲಿ ಖರೀದಿಸಬಹುದು. ಹೆಚ್ಚುವರಿಯಾಗಿ ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ ಖರೀದಿಸಿದರೆ 5% ಇನ್ಸೆಂಟ್ ರಿಯಾಯಿತಿ ಸಿಗುತ್ತದೆ. ಈ ಹ್ಯಾಂಡ್ ಸೆಟ್ 6.4-ಇಂಚಿನ FHD+ ಡಿಸ್ಪ್ಲೇಯನ್ನು ಹೊಂದಿದೆ.

ಆಪಲ್ ಐಫೋನ್ 6ಎಸ್

ಆಪಲ್ ಐಫೋನ್ 6ಎಸ್

ಈ ಡಿವೈಸ್ ಗೆ ವಡಾಫೋನ್ ಐಫೋನ್ ಫಾರ್ ಎವರ್ ನ ಅಡಿಯಲ್ಲಿ ಕಡಿಮೆ ಬೆಲೆಯಲ್ಲಿ ರಿಪೇರ್ ಮಾಡಿಸಿಕೊಳ್ಳುವ ಅವಕಾಶ, ಬದಲಾಯಿಸಿಕೊಳ್ಳುವ ಮತ್ತು ಅಪ್ ಗ್ರೇಡ್ ಮಾಡಿಕೊಳ್ಳುವ ಅವಕಾಶ ಲಭ್ಯವಿರುತ್ತದೆ. ಇದು ಐಓಎಸ್ 12 ನಲ್ಲಿ ರನ್ ಆಗಲಿದ್ದು ಗ್ರೂಪ್ ಫೇಸ್ ಟೈಮ್ ಫೀಚರ್ ನ್ನು ಒಳಗೊಂಡಿದೆ.

ಹುವಾಯಿ ವೈ9 ಪ್ರೈಮ್

ಹುವಾಯಿ ವೈ9 ಪ್ರೈಮ್

ಪಿಕ್ ಅಪ್ ಪಾಯಿಂಟ್ ನಲ್ಲಿ ನೀವು ಈ ಹ್ಯಾಂಡ್ ಸೆಟ್ ನ್ನು ಖರೀದಿಸದರೆ ನಿಮಗೆ 15 ರುಪಾಯಿ ಕ್ಯಾಷ್ ಬ್ಯಾಕ್ ಸಿಗುತ್ತದೆ. ಎಕ್ಸ್ ಚೇಂಜ್ ಆಫರ್ ನಲ್ಲಿ ಖರೀದಿಸುವುದಾದರೆ 9,300 ರುಪಾಯಿಯವರೆಗಿನ ರಿಯಾಯಿತಿಯನ್ನು ಪಡೆದುಕೊಳ್ಳಬಹುದು.ಆಂಡ್ರಾಯ್ಡ್ 9 ಪೈ ನಲ್ಲಿ ಇದು ರನ್ ಆಗಲಿದ್ದು EMUI 9.0.1 OS ನ್ನು ಹೊಂದಿದೆ.

ಓಪ್ಪೋ ಕೆ3

ಓಪ್ಪೋ ಕೆ3

32% ರಿಯಾಯಿತಿ ಅಂದರೆ 16,990 ರುಪಾಯಿ ಬೆಲೆಗೆ ಈ ಫೋನ್ ನ್ನು ಖರೀದಿಸುವ ಅವಕಾಶ ನಿಮಗೆ ಅಮೇಜಾನ್ ನಲ್ಲಿ ಸಿಗುತ್ತದೆ. ಇಎಂಐ ಆಯ್ಕೆಯಾದರೆ ತಿಂಗಳಿಗೆ 800 ರುಪಾಯಿ ಪಾವತಿಸಿ ಖರೀದಿಸಬಹುದು. 6GB RAM ಮತ್ತು 64GB ROM ಸ್ಟೋರೇಜ್ ವ್ಯವಸ್ಥೆಯನ್ನು ಇದು ಹೊಂದಿದೆ.

ವಿವೋ ವಿ15

ವಿವೋ ವಿ15

ಎಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಅಥವಾ ಕ್ರೆಡಿಟ್ ಇಎಂಐ ನಲ್ಲಿ 10,000 ರುಪಾಯಿ ಅಥವಾ ಅದಕ್ಕಿಂತ ಮೇಲ್ಪಟ್ಟು ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ ಸಿಗುತ್ತದೆ. ಈ ಫೋನಿನ ಪ್ರಮುಖ ಹೈಲೆಟ್ ಎಂದರೆ 32MP ಪಾಪ್ ಅಪ್ ಸೆಲ್ಫೀ ಸೆನ್ಸರ್ ನ್ನು ಅಳವಡಿಸಲಾಗಿರುತ್ತದೆ.

10.or ಜಿ2

10.or ಜಿ2

ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ ಈ ಸ್ಮಾರ್ಟ್ ಫೋನ್ ನ್ನು 5% ರಿಯಾಯಿತಿಯಲ್ಲಿ ಖರೀದಿಸುವ ಅವಕಾಶವಿದೆ. ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್ ಅಪ್ ನ್ನು ಹೊಂದಿದೆ.

 ಹಾನರ್ 20ಐ

ಹಾನರ್ 20ಐ

5,000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಾಗುತ್ತದೆ. ಇದರಲ್ಲಿ ಟ್ರಿಪಲ್ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಅಳವಡಿಸಲಾಗಿದೆ ಮತ್ತು ಆಕ್ಟಾ ಕೋರ್ ಪ್ರೊಸೆಸರ್ ನ್ನು ಜೋಡಿಸಲಾಗಿದೆ.

Best Mobiles in India

English summary
The list that we have shared comes with some smartphones which can be availed via Amazon at plenty of amazing deals. You can save 10% up to Rs. 2,000 on purchasing these handsets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X