ಏಪ್ರಿಲ್ 11 ರಿಂದ ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್!

By Gizbot Bureau
|

ಅಮೇಜಾನ್ ಇಂಡಿಯಾದ ಫ್ಯಾಬ್ ಫೋನ್ ಫೆಸ್ಟ್ ಸೇಲ್ ಈ ವಾರಾಂತ್ಯದಲ್ಲಿ ಆರಂಭವಾಗುತ್ತಿದೆ. ಎಪ್ರಿಲ್ 11 ರಿಂದ ಎಪ್ರಿಲ್ 13 ರ ವರೆಗೆ ಈ ಸೇಲ್ ನ್ನು ಆನ್ ಲೈನ್ ಮಾರುಕಟ್ಟೆ ತಾಣ ನಡೆಸುತ್ತದೆ. ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಎಪ್ರಿಲ್ 2019 ಎಡಿಷನ್ ನಲ್ಲಿ ರಿಯಾಯಿತಿ ಮತ್ತು ಸಾಕಷ್ಟು ಆಫರ್ ಗಳನ್ನು ಮೊಬೈಲ್ ಫೋನ್ ಗಳಿಗೆ ಮತ್ತು ಆಕ್ಸಸರೀಸ್ ಗಳಿಗೆ ನೀಡುವ ಬಗ್ಗೆ ಆನ್ ಲೈನ್ ಮಳಿಗೆ ಮಾತು ಕೊಟ್ಟಿದೆ. ಕಳೆದ ತಿಂಗಳ ಅಮೇಜಾನ್ ಸೇಲಿನ ಎಡಿಷನ್ ನ್ನು ನೀವು ತಪ್ಪಿಸಿಕೊಂಡಿದ್ದರೆ ಖಂಡಿತ ಈ ಬಾರಿ ತಪ್ಪಿಸಿಕೊಳ್ಳಬೇಡಿ. ಐಫೋನ್ ಎಕ್ಸ್, ರಿಯಲ್ ಮಿ ಯು1 ಮತ್ತು ಒನ್ ಪ್ಲಸ್ 6ಟಿಯನ್ನು ಖರೀದಿಸುವ ಸುವರ್ಣಾವಕಾಶ ಇದೀಗ ಲಭ್ಯವಾಗಿದೆ.

ಮೊಬೈಲ್ ಫೋನ್ ಗಳಿಗೆ ಅಮೇಜಾನ್ ಸೇಲ್ : ಫ್ಯಾಬ್ ಫೋನ್ ಫೆಸ್ಟ್ ನ ನಿರೀಕ್ಷೆಗಳು

ಮೊಬೈಲ್ ಫೋನ್ ಗಳಿಗೆ ಅಮೇಜಾನ್ ಸೇಲ್ : ಫ್ಯಾಬ್ ಫೋನ್ ಫೆಸ್ಟ್ ನ ನಿರೀಕ್ಷೆಗಳು

ಎಪ್ರಿಲ್ 11 ರಂದು ಯಾವೆಲ್ಲ ದೊಡ್ಡ ಆಫರ್ ಗಳು ಇರಲಿವೆ ಎಂಬ ಬಗ್ಗೆ ಈಗಾಗಲೇ ಅಮೇಜಾನ್ ಕೆಲವು ಟೀಸರ್ ಗಲನ್ನು ಬಿಡುಗಡೆಗೊಳಿಸಿದೆ.ಫ್ಯಾಬ್ ಫೋನ್ ಫೆಸ್ಟ್ ಸೇಲ್ ನಲ್ಲಿ ಒನ್ ಪ್ಲಸ್ 6ಟಿ ನ್ನು ಅತೀ ಕಡಿಮೆ ಬೆಲೆಗೆ ಅಂದರೆ ಇದುವರೆಗೂ ಇಷ್ಟು ಕಡಿಮೆ ಬೆಲೆಗೆ ನೀವಿದ್ದನ್ನು ನಿರೀಕ್ಷೆಯೂ ಮಾಡಿದರ ಬೆಲೆಯಲ್ಲಿ ನೀಡಲಾಗುತ್ತದೆ ಎಂದು ಹೇಳಿದೆ.

ಹೌದು ಒನ್ ಪ್ಲಸ್ 6ಟಿಗೆ ಅತ್ಯಂತ ದೊಡ್ಡ ಆಫರ್ ನೀಡಲಾಗುವುದು ಎಂದು ಅಮೇಜಾನ್ ತಿಳಿಸಿದೆ.

ಆಪಲ್ ಐಫೋನ್:

ಆಪಲ್ ಐಫೋನ್:

ಆಪಲ್ ನ ಐಫೋನ್ ಎಕ್ಸ್ ಗೂ ಭರ್ಜರಿ ರಿಯಾಯಿತಿ ಬೆಲೆಯಲ್ಲಿ ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್ ನಲ್ಲಿ ಲಭ್ಯವಾಗಲಿದೆ. ಅಂತಿಮ ರಿಯಾಯಿತಿ ಬೆಲೆಯನ್ನು ಅಮೇಜಾನ್ ಇದುವರೆಗೂ ಪ್ರಕಟಿಸಿಲ್ಲ. ಆದರೆ, ನೋ ಕಾಸ್ಟ್ ಇಎಂಐ ಆಯ್ಕೆಯನ್ನ ಐಫೋನ್ ಎಕ್ಸ್ ಗೆ ನೀಡಲಾಗುತ್ತದೆ ಎಂಬುದನ್ನು ತಿಳಿಸಿದೆ.

ಆಪಲ್ ಇಂಡಿಯಾ:

ಆಪಲ್ ಇಂಡಿಯಾ ಕೂಡ ಸದ್ಯ ಐಫೋನ್ ಎಕ್ಸ್ಆರ್ ನ್ನು ರಿಯಾಯಿತಿ ಬೆಲೆಯಲ್ಲಿ ನೀಡುತ್ತಿದ್ದು ಕ್ಯಾಷ್ ಬ್ಯಾಕ್ ಆಫರ್ ನ್ನು ಕೂಡ ಹೆಚ್ ಡಿಎಫ್ ಸಿ ಬ್ಯಾಂಕಿನ ಗ್ರಾಹಕರಿಗೆ ನೀಡುತ್ತಿದೆ.

ಹಾನರ್ ಫೋನ್:

ಹಾನರ್ ಫೋನ್:

ಇನ್ನು ಹಾನರ್ ಸ್ಮಾರ್ಟ್ ಫೋನ್ ಗಳು ಕೂಡ ಈ ಸೇಲ್ ನಲ್ಲಿ ಲಭ್ಯವಿರುತ್ತದೆ. ಅಮೇಜಾನ್ ತಿಳಿಸುವಂತೆ 8,000 ರುಪಾಯಿವರೆಗೆ ಹಾನರ್ ಫೋನ್ ಗಳಿಗೆ ಈ ಸೇಲ್ ನಲ್ಲಿ ರಿಯಾಯಿತಿ ಸಿಗಲಿದೆ ಎನ್ನಲಾಗಿದೆ.

ಒಪ್ಪೋ ಫೋನ್:

ಒಪ್ಪೋ ಫೋನ್:

ಒಪ್ಪೋ ಫೋನ್ ಗಳು ಕೂಡ ಹೆಚ್ಚುವರಿ ಡಿಸ್ಕೌಂಟ್ ನ್ನು ಹೊಂದಿರುತ್ತದೆ. ಎಕ್ಸ್ ಜೇಂಜ್ ಆಫರ್ ಕೂಡ ಈ ಸೇಲ್ ನಲ್ಲಿ ಸಿಗುತ್ತದೆ. ರಿಯಲ್ ಮಿ ಯು1 ನ್ನು ಕೂಡ ಅಮೇಜಾನ್ ಈಗಾಗಲೇ ಟೀಸರ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ನೀಡುವ ಬಗ್ಗೆ ತಿಳಿಸಿದೆ.

ರಿಯಾಯಿತಿ ಜೊತೆಗೆ ಮತ್ತಷ್ಟು ಆಫರ್:

ರಿಯಾಯಿತಿಯನ್ನು ಹೊರತು ಪಡಿಸಿ ಅಮೇಜಾನ್ ನಲ್ಲಿ ಇತರೆ ಆಫರ್ ಗಳು ಕೂಡ ಸ್ಮಾರ್ಟ್ ಫೋನ್ ಗಳಿಗೆ ಸಿಗುತ್ತದೆ. ಸಂಪೂರ್ಣ ಡ್ಯಾಮೇಜ್ ಪ್ರೊಟೆಕ್ಷನ್ ಪ್ಲಾನ್, ನೋ ಕಾಸ್ಟ್ ಇಎಂಐ ಪೇಮೆಂಟ್ ಆಯ್ಕೆ, ಎಕ್ಸ್ ಚೇಂಜ್ ಆಫರ್ ಗಳು ಇತ್ಯಾದಿಗಳು ಇರಲಿದೆ. ಹಳೆಯ ಸ್ಮಾರ್ಟ್ ಫೋನ್ ಗಳಿಗೆ 6% ರಿಯಾಯಿತಿ ನೀಡುವ ಬಗ್ಗೆ ಕ್ಯಾಷಿಫೈ ಜೊತೆಗೆ ಅಮೇಜಾನ್ ಇಂಡಿಯಾ ಕೈಜೋಡಿಸಿದೆ.

ಇತರೆ ಆಫರ್ ಗಳು:

ಅಮೇಜಾನ್ ಫ್ಯಾಬ್ ಫೋನ್ ಫೆಸ್ಟ್ ಸೇಲ್ ನಲ್ಲಿ ಫೋನ್ ಗಳಿಗೆ ಮಾತ್ರವೇ ರಿಯಾಯಿತಿ ಅಲ್ಲ ಬದಲಾಗಿ ಮೊಬೈಲ್ ಆಕ್ಸಸರೀಸ್ ಗಳಿಗೂ ಕೂಡ ರಿಯಾಯಿತಿ ಸಿಗುತ್ತದೆ. ಕೇಸ್ ಗಳು, ಪವರ್ ಬ್ಯಾಂಕ್ ಗಳು, ಹೆಡ್ ಫೋನ್ ಗಳು, ಚಾರ್ಜರ್ ಗಳು, ಸೆಲ್ಫೀ ಸ್ಟಿಕ್ ಗಳು ಮತ್ತು ಇತ್ಯಾದಿಗಳು ಕೂಡ ರಿಯಾಯಿತಿ ಬೆಲೆಯಲ್ಲಿ ಖರೀದಿಸುವ ಸುವರ್ಣಾವಕಾಶ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.

Most Read Articles
Best Mobiles in India

English summary
Amazon Fab Phones Fest Sale Set to Return With Deals on iPhone X, OnePlus 6T, Realme U1, and More

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X