ಹೊಸ ಸ್ಮಾರ್ಟ್ ಫೋನ್ ಖರೀದಿಸುವುದಕ್ಕೆ ಅಮೇಜಾನ್ ನಲ್ಲಿ ರಿಯಾಯಿತಿ

By Gizbot Bureau
|

ಕೋವಿಡ್-19 ನಿಂದಾಗಿ ಮೇ 31 ರ ವರೆಗೆ ಭಾರತದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಅಗತ್ಯ ವಸ್ತುಗಳನ್ನು ಹೊರತು ಪಡಿಸಿ ಇತರೆ ವಸ್ತುಗಳನ್ನು ಮಾರುವುದಕ್ಕೆ ಆನ್ ಲೈನ್ ಪೂರೈಕೆದಾರರಿಗೆ ಅವಕಾಶವಿರಲಿಲ್ಲ.ರೆಡ್ ಝೋನ್ ಹೊರತು ಪಡಿಸಿ ಇದೀಗ ಎಲ್ಲಾ ವಸ್ತುಗಳನ್ನು ಇದೀಗ ಮಾರುವುದಕ್ಕೆ ಅವಕಾಶ ನೀಡಲಾಗಿದೆ. ಇದರಲ್ಲಿ ಸ್ಮಾರ್ಟ್ ಫೋನ್ ಗಳು ಕೂಡ ಸೇರಿವೆ.

ಅಮೇಜಾನ್

ಅಂದಾಜು ಎರಡು ತಿಂಗಳ ನಂತರ ಇದೀಗ ಸ್ಮಾರ್ಟ್ ಫೋನ್ ಮಾರಾಟ ಪುನರಾರಂಭಗೊಂಡಿದೆ.ಆನ್ ಲೈನ್ ಮಾರಾಟ ಮಳಿಗೆ ಅಮೇಜಾನ್ ಇದೀಗ ಆಕರ್ಷಕ ರಿಯಾಯಿತಿಗಳನ್ನು ನೀಡಲು ಪ್ರಾರಂಭಿಸಿದೆ.

ಒಂದು ವೇಳೆ ನೀವು ಹೊಸ ಸ್ಮಾರ್ಟ್ ಫೋನ್ ಖರೀದಿಸುವುದಕ್ಕೆ ಆಲೋಚಿಸುತ್ತಿದ್ದರೆ ಇದೀಗ ಸರಿಯಾದ ಸಮಯವಾಗಿದೆ. ನಿಮ್ಮ ಫೇವರೆಟ್ ಡಿವೈಸ್ ಗಳನ್ನು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಸುವುದಕ್ಕೆ ಅಮೇಜಾನಿನಲ್ಲಿ ಅವಕಾಶವಿದೆ.

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ ಕಳೆದ ವರ್ಷ ಬಿಡುಗಡೆಗೊಂಡಿರುವ ಡಿವೈಸ್ ಆಗಿದ್ದು ಇದರಲ್ಲಿ 6.67-ಇಂಚಿನ ಫ್ಯೂಯಿಡ್ AMOLED ಡಿಸ್ಲ್ಪೇ ಜೊತೆಗೆ 90Hz ರಿಫ್ರೆಶ್ ರೇಟ್ , ಟ್ರಿಪಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ಮತ್ತುಇತರೆ ಗುರುತಿಸಬಹುದಾದ ಹಲವು ವೈಶಿಷ್ಟ್ಯ ತೆಗಳಿವೆ. 12 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ನೀವಿದನ್ನು ಖರೀದಿಸಬಹುದಾಗಿದೆ.ಇದರ ಆರಂಭಿಕ ಬೆಲೆ 47,999 ರುಪಾಯಿಗಳು.

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8

ರೆಡ್ಮಿ ನೋಟ್ 8 ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಲಭ್ಯವಿದ್ದು ಆರಂಭಿಕವಾಗಿ ಮಾಸಿಕ Rs. 541ಕಟ್ಟಿ ಖರೀದಿಸಬಹುದು.. 4GB RAM + 64GB ROM ವೇರಿಯಂಟ್ ಇದೀಗ ರಿಯಾಯಿತಿಯಲ್ಲಿ ಲಭ್ಯವಿದ್ದು ಅಮೇಜಾನ್ ನಲ್ಲಿ ಆರಂಭಿಕ ಬೆಲೆ 11,499 ರುಪಾಯಿಗಳಿಗಿದೆ.

ಆಪಲ್ ಐಫೋನ್ ಎಕ್ಸ್ ಎಸ್ ಮ್ಯಾಕ್ಸ್

ಆಪಲ್ ಐಫೋನ್ ಎಕ್ಸ್ ಎಸ್ ಮ್ಯಾಕ್ಸ್

ಆಪಲ್ ಐಫೋನ್ ಎಕ್ಸ್ ಎಸ್ ಮ್ಯಾಕ್ಸ್ 2018 ರಲ್ಲಿ ಬಿಡುಗಡೆಯಾಗಿರುವ ಫೋನ್ ಆಗಿದ್ದು ಈ ಪೋರ್ಟಲ್ ನಲ್ಲಿ ಇದರ ಬೆಲೆ 69,999 ರುಪಾಯಿಗಳು. ಇದು ಬಿಡುಗಡೆಗೊಂದಾಗ ನೂತನ ತಂತ್ರಗಾರಿಕೆಯನ್ನು ಅಳವಡಿಸಿ ಕೊಂಡಿರುವ ಡಿವೈಸ್ ಆಗಿತ್ತು.ಇದೀಗ ಆಕರ್ಷಕ ಬೆಲೆಯಲ್ಲಿ ನೀವು ಈ ಡಿವೈಸ್ ನ್ನು ಖರೀದಿಸಬಹುದಾಗಿದೆ.

ಒಪ್ಪೋ ಎ5 2020

ಒಪ್ಪೋ ಎ5 2020

ಒಪ್ಪೋ ಎ5 2020 ನಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 665 SoC, 3GB RAM, ಆಂಡ್ರಾಯ್ಡ್ 9 ಪೈ, 5000 mAh ಬ್ಯಾಟರಿ ಮತ್ತು ಇತರೆ ಹಲವು ವೈಶಿಷ್ಟ್ಯತೆಗಳಿವೆ.ಈ ಫೋನ್ ನ್ನು ನೀವು ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದು ಮತ್ತು ಇಎಂಐ ಪಾವತಿ ಆಯ್ಕೆ ಕೂಡ ಇದೆ.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ ಗುರುತಿಸಬಹುದಾದ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ. 90Hz ರಿಫ್ರೆಶ್ ರೇಟ್ , QHD+ ಡಿಸ್ಪ್ಲೇ, ಮತ್ತು ಪಾಪ್ ಅಪ್ ಸೆಲ್ಪೀ ಕ್ಯಾಮರಾ ಸೆನ್ಸರ್ ಇದರಲ್ಲಿದೆ. ಒನ್ ಪ್ಲಸ್ 7ಪ್ರೋ ಅಮೇಜಾನ್‌ಸೇಲ್ ನಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಆರಂಭಿಕವಾಗಿ 42,999 ರುಪಾಯಿ ಬೆಲೆಗೆ ಲಭ್ಯವಿದೆ.12 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20+

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್20+

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್_20+ 6.7-ಇಂಚಿನ ಡೈನಾಮಿಕ್ AMOLED ಡಿಸ್ಪ್ಲೇ ಮತ್ತು ಆಕರ್ಷಕ ಕ್ಯಾಮರಾ ವ್ಯವಸ್ಥೆ ಯನ್ನು ಹೊಂದಿದೆ. ಈ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ನ್ನು 77,999 ರುಪಾಯಿಗೆ ಖರೀದಿಸಬಹುದಾಗಿದ್ದು 4,000 ರುಪಾಯಿಯ ಇನ್ಸೆಂಟ್ ರಿಯಾಯಿತಿ ಹೆಚ್ಡಿಎಫ್ಸಿ ಬ್ಯಾಂಕಿನ ಕಾರ್ಡ್ ನಲ್ಲಿ ಖರೀದಿಸಿದರೆ ಲಭ್ಯವಾಗುತ್ತದೆ.

Best Mobiles in India

Read more about:
English summary
Amazon Special Offers On Smartphones: Buy Your Favorite Smartphone After Lockdown

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X