ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ, BSNL: ಇವುಗಳಲ್ಲಿ ಬೆಸ್ಟ್ ಆಫರ್ ಯಾವುದು? ಆಯ್ಕೆ ಬುದ್ದಿವಂತರಿಗೆ!

ಜಿಯೋ ತಾನು ನೀಡುವುದು ಮಾತ್ರವಲ್ಲದೇ ಇತರೇ ಕಂಪನಿಗಳಿಂದಲೂ ಜನ ಸಾಮಾನ್ಯರಿಗೆ ಬೆಸ್ಟ್ ಆಫರ್ ಗಳನ್ನು ಕೊಡಿಸಲು ಮುಂದಾಗಿದೆ ಎಂದರೆ ತಪ್ಪಾಗುವುದಿಲ್ಲ.

|

ರಿಲಯನ್ಸ್ ಮಾಲೀಕತ್ವದ ಜಿಯೋ ತಾನು ಮಾತ್ರವೇ ಜನ ಸಾಮಾನ್ಯರಿಗೆ ಉತ್ತಮ ಕೊಡುಗೆಗಳನ್ನು ನೀಡುವುದು ಮಾತ್ರವಲ್ಲದೇ ಇತರೇ ಕಂಪನಿಗಳಿಂದಲೂ ಜನ ಸಾಮಾನ್ಯರಿಗೆ ಬೆಸ್ಟ್ ಆಫರ್ ಗಳನ್ನು ಕೊಡಿಸಲು ಮುಂದಾಗಿದೆ ಎಂದರೆ ತಪ್ಪಾಗುವುದಿಲ್ಲ.

ಜಿಯೋ, ಏರ್‌ಟೆಲ್, ವೊಡಾಫೋನ್, ಐಡಿಯಾ, BSNL: ಇವುಗಳಲ್ಲಿ ಬೆಸ್ಟ್ ಆಫರ್ ಯಾವುದು?

ಓದಿರಿ: ಟಾಪ್‌ಎಂಡ್‌ ಫೋನ್‌ಗಳಿಗೆ ನಡುಕ: ನೋಕಿಯಾ 8 ಬೆಲೆ ಲೀಕ್ ಆಯ್ತು! ಬಿಡುಗಡೆ ಎಂದು?

ಜಿಯೋ ನೀಡಿದೆ ಇದಕ್ಕಾಗಿ ನಾವು ನೀಡಬೇಕು ಎಂದು ಇತರೇ ಕಂಪನಿಗಳು ಮುಗಿ ಬಿದ್ದು ಗ್ರಾಹಕರನ್ನು ಸೆಳೆಯಲು ಹೊಸ ಹೊಸ ಆಫರ್ ಗಳನ್ನು ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಈ ಹಿನ್ನಲೆಯಲ್ಲಿ ಮಾರುಕಟ್ಟೆಯಲ್ಲಿರು ವಿವಿಧ ಟೆಲಿಕಾಂ ಕಂಪನಿಗಳ ವಿವಿಧ ಆಫರ್ ಬಗ್ಗೆ ಮಾಹಿತಿ ಇಲ್ಲಿದೆ.

ವೊಡಾಫೋನ್:

ವೊಡಾಫೋನ್:

ಟೆಲಿಕಾಂ ವಲಯದಲ್ಲಿ ಸದ್ಯ ವೊಡಾಫೋನ್ ಆಫರ್ ಹೆಚ್ಚು ಸದ್ದು ಮಾಡುತ್ತಿದೆ. ಅದುವೇ ರೂ.244 ಪ್ಲಾನ್, ಇದು 70 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ ಒಂದು GB ಡೇಟಾವನ್ನು ನೀಡಲಿದೆ. ಅಲ್ಲದೇ ವೊಡಾಫೋನ್ ನಿಂದ ವೊಡಾಫೋನ್ ಗೆ ಅನಿಯಮಿತಿ ಕರೆಗಳನ್ನು ಮಾಡುವ ಅವಕಾಶವನ್ನುನಿಡಿದೆ. ಇದೇ ಮಾದರಿಯಲ್ಲಿ ರೂ. 346 ಪ್ಲಾನ್ ಸಹ ದೊರೆಯುತ್ತಿದ್ದು, ಇದರಲ್ಲಿ ಪ್ರತಿ ವಾರಕ್ಕೆ 1200 ನಿಮಿಷಗಳ ಉಚಿತ ಕರೆಯ ಲಾಭವನ್ನು ಪಡೆಯಬಹುದಾಗಿದೆ.

ರಿಲಯನ್ಸ್ ಜಿಯೋ:

ರಿಲಯನ್ಸ್ ಜಿಯೋ:

ಜಿಯೋ ಧನ್ ಧನಾ ಧನ್ ಆಫರ್ ಅನ್ನು ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆಯನ್ನು ಮಾಡಿ ಹೊಸದಾಗಿ ರೂ.399 ರ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದ್ದು, ಪ್ರತಿ ನಿತ್ಯ 1GB 4G ಡೇಟಾವನ್ನು ಬಳಕೆಗೆ ನೀಡಲಿದೆ. ಇದರೊಂದಿಗೆ ರೂ.349 ಆಫರ್ ದೊರೆಯುತ್ತಿದ್ದು, ಇದರಲ್ಲಿ 20GB ಡೇಟಾ ಗ್ರಾಹಕರ ಬಳಕೆಗೆ ದೊರೆಯಲಿದೆ. ಇವು ಸದ್ಯದ ಜನಪ್ರಿಯ ಆಫರ್ ಗಳಾಗಿದ್ದು, ಇನ್ನು ಆಫರ್ ಗಳು ಲಭ್ಯವಿದೆ.

ಏರ್‌ಟೆಲ್:

ಏರ್‌ಟೆಲ್:

ಜಿಯೋ ಆಫರ್ ಬಿಟ್ಟ ಬೆನ್ನಲೇ ಏರ್‌ಟೆಲ್ ಸಹ ಆಫರ್ ಗಳ ಮೇಲೆ ಆಫರ್ ಘೋಷಣೆ ಮಾಡಿದೆ. ಇದರಲ್ಲಿ ಜನಪ್ರಿಯ ಆಫರ್ ಗಳೇಂದರೆ ರೂ.349 ಹಾಗೂ ರೂ.549. ಈ ಎರಡು ಆಫರ್ ಗಳಲ್ಲಿ ಗ್ರಾಹಕರು ಉಚಿತ ಡೇಟಾ ಮತ್ತು ಕರೆ ಮಾಡುವ ಅವಕಾಶವನ್ನು ಪಡೆಯಲಿದ್ದಾರೆ. ರೂ.349ಗೆ ಪ್ರತಿ ನಿತ್ಯ ಒಂದು GB ಡೇಡಾ ಬಳಕೆಗೆ ದೊರೆಯುತ್ತದೆ ಹಾಗೆಯೇ ರೂ.549ಕ್ಕೆ ಪ್ರತಿ ನಿತ್ಯ 2GB ಡೇಟಾ ಬಳಕೆಗೆ ದೊರೆಯಲಿದೆ.

ಐಡಿಯಾ:

ಐಡಿಯಾ:

ಐಡಿಯಾ ಉತ್ತಮ ಆಫರ್ ಗಳನ್ನು ನೀಡಲು ಮುಂದಾಗಿದೆ. ಇದುವೇ ರೂ.96ಕ್ಕೆ 28 ದಿನಗಳ ವ್ಯಾಲಿಡಿಟಿಗೆ 6GB 3G ಡೇಟಾವನ್ನು ಬಳಕೆದಾರರಿಗೆ ನೀಡಲಿದೆ. ಆದರೆ ಇದರಲ್ಲಿ ಉಚಿತ ಕರೆ ಸೇವೆಯೂ ಲಭ್ಯವಿಲ್ಲ. ಹೆಚ್ಚಿನ ಡೇಟಾ ಮತ್ತು ಉಚಿತ ಕರೆಯ ಲಾಭ ಬೇಕು ಎನ್ನುವವರಿಗೆ ರೂ.396ರ ಆಫರ್ ಇದೆ.

BSNL:

BSNL:

BSNL ಸಹ ಹೊಸ ಹೊಸ ಆಫರ್ ಗಳನ್ನು ಲಾಂಚ್ ಮಾಡುತ್ತಿದ್ದರೂ ಸಹ 4G ಸೇವೆ ಇಲ್ಲದಿರುವುದುದೇ ದೊಡ್ಡ ಹಿನ್ನಡೆಯಲಾಗಿದೆ. ಪ್ರತಿ ನಿತ್ಯ 3GB-5GB ಡೇಟಾ ಆಫರ್ ಗಳು BSNLನಲ್ಲಿ ಕಾಣಸಿಗುತ್ತಿದೆ. ವೇಗ ಇಂಟರ್ನೆಟ್ ಬೇಕು ಎಂದವರಿಗೆ BSLN ಇಷ್ಟವಾಗುತ್ತಿಲ್ಲ.

Best Mobiles in India

Read more about:
English summary
We take a quick look at the best data and talk value offers launched by all the major telcos since the Jio Summer Surprise offer was launched. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X