ಸ್ಮಾರ್ಟ್‌ಫೋನ್‌ ಹ್ಯಾಕ್‌ ಮಾಡಲು 193 ಮಾರ್ಗ..! ಅಬ್ಬಾ..!

By Gizbot Bureau
|

ಆಂಡ್ರಾಯ್ಡ್‌ನ ಮತ್ತೊಂದು ಆವೃತ್ತಿಯ ಬಿಡುಗಡೆಗೆ ವೇದಿಕೆ ಸಜ್ಜಾಗಿದ್ದು, ಆಂಡ್ರಾಯ್ಡ್ 10 ಅಥವಾ ಕ್ಯೂ ಎಂದು ಕರೆಯಲ್ಪಡುವ ಆಂಡ್ರಾಯ್ಡ್‌ನ ಹತ್ತನೇ ಆವೃತ್ತಿಯನ್ನು ಬಳಕೆದಾರರ ಕೈಗಿಡಲು ಗೂಗಲ್‌ ರೆಡಿಯಾಗಿದೆ. ಸದ್ಯ ಬಳಸುತ್ತಿರುವ ಆಂಡ್ರಾಯ್ಡ್‌ನಲ್ಲಿ 193 ಸುರಕ್ಷತಾ ದೋಷಗಳಿದ್ದು, ಹ್ಯಾಕರ್‌ಗಳು ಸುಲಭವಾಗಿ ನಿಮ್ಮ ಸ್ಮಾರ್ಟ್‌ಫೋನ್‌ನ್ನು ನಿಯಂತ್ರಿಸಬಹುದೆಂಬ ಮಾಹಿತಿ ಬೆಳಕಿಗೆ ಬಂದಿದೆ. ಈ ಎಲ್ಲ ಭದ್ರತಾ ದೋಷಗಳನ್ನು ಆಂಡ್ರಾಯ್ಡ್‌ 10 ಬಿಡುಗಡೆಯೊಂದಿಗೆ ಗೂಗಲ್‌ ಪರಿಹರಿಸಲು ಮುಂದಾಗಿದೆ.

ಡೀಫಾಲ್ಟ್‌ ಸೆಕ್ಯುರಿಟಿ ಪ್ಯಾಚ್‌

ಡೀಫಾಲ್ಟ್‌ ಸೆಕ್ಯುರಿಟಿ ಪ್ಯಾಚ್‌

2019-09-01 ಅಥವಾ ನಂತರದ ಭದ್ರತಾ ಪ್ಯಾಚ್ ಮಟ್ಟ ಹೊಂದಿರುವ ಆಂಡ್ರಾಯ್ಡ್ ಕ್ಯೂ ಸಾಧನಗಳು ಭದ್ರತಾ ದೋಷಗಳಿಂದ ರಕ್ಷಿಸಲ್ಪಟ್ಟಿವೆ (ಎಒಎಎಸ್‌ಪಿಯಲ್ಲಿ ಬಿಡುಗಡೆಯಾದ ಆಂಡ್ರಾಯ್ಡ್ ಕ್ಯೂ 2019-09-01ರ ಡೀಫಾಲ್ಟ್ ಸೆಕ್ಯುರಿಟಿ ಪ್ಯಾಚ್ ಮಟ್ಟವನ್ನು ಹೊಂದಿದೆ) ಎಂದು ಗೂಗಲ್ ತನ್ನ ಆಂಡ್ರಾಯ್ಡ್‌ ಭದ್ರತಾ ಬುಲೆಟಿನ್‌ನಲ್ಲಿ ತಿಳಿಸಿದೆ.

ದುರುಪಯೋಗವಾಗಿಲ್ಲ

ದುರುಪಯೋಗವಾಗಿಲ್ಲ

ಸುರಕ್ಷತಾ ದೋಷಗಳಲ್ಲಿ ರಿಮೋಟ್ ಕೋಡ್ ಎಕ್ಸಿಕ್ಯೂಶನ್, ಸೇವೆಯ ನಿರಾಕರಣೆ ಮತ್ತು ಆಂಡ್ರಾಯ್ಡ್ ರನ್‌ ಟೈಂ ಸಮಸ್ಯೆಯೂ ಸೇರಿವೆ. ಈ ಎಲ್ಲ ಸಮಸ್ಯೆಗಳು ಹ್ಯಾಕರ್‌ಗಳಿಗೆ ಅನುಕೂಲ ಮಾಡಿಕೊಡಬಹುದಾಗಿದೆ. ಏಕೆಂದರೆ, ಗೂಗಲ್ ಈ ಸಮಸ್ಯೆಗಳ ತೀವ್ರತೆಯ ಪ್ರಮಾಣದಲ್ಲಿ ಮಧ್ಯಮ ಎಂದು ರೇಟ್ ಮಾಡಿದೆ. ಹಲವಾರು ದೋಷಗಳನ್ನು ಹೊಂದಿದ್ದರೂ ಸಹ, ಈ ದುರ್ಬಲತೆಗಳಿಂದ ಯಾವುದೇ ದುರುಪಯೋಗವಾದ ಯಾವುದೇ ವರದಿಗಳು ಇನ್ನೂ ಸಿಕ್ಕಿಲ್ಲ ಎಂದು ಗೂಗಲ್ ದೃಢಪಡಿಸಿದೆ.

ಆಂಡ್ರಾಯ್ಡ್‌ 10ಗೆ ಬನ್ನಿ

ಆಂಡ್ರಾಯ್ಡ್‌ 10ಗೆ ಬನ್ನಿ

ಆಂಡ್ರಾಯ್ಡ್‌ ಭದ್ರತಾ ದೋಷಗಳಿಂದ ಮುಕ್ತಿ ಪಡೆಯಲು ಬಳಕೆದಾರರು ಇತ್ತೀಚಿನ ಆಂಡ್ರಾಯ್ಡ್ 10 ಆವೃತ್ತಿಗೆ ಅಪ್‌ಡೇಟ್‌ ಆಗುವುದು ಪ್ರಮುಖವಾಗಿದೆ. ಆಂಡ್ರಾಯ್ಡ್ ಪ್ಲಾಟ್‌ಫಾರ್ಮ್‌ನ ಹೊಸ ಆವೃತ್ತಿಗಳಲ್ಲಿನ ವರ್ಧನೆಯಿಂದ ಆಂಡ್ರಾಯ್ಡ್‌ನಲ್ಲಿನ ಅನೇಕ ಸಮಸ್ಯೆಗಳನ್ನು ಪರಿಹರಿಸಲಾಗಿದೆ ಎಂದು ಸರ್ಚ್‌ ಇಂಜಿನ್‌ ದೈತ್ಯ ಗೂಗಲ್ ಹೇಳಿದೆ.

ಆಪ್‌ ಪಬ್ಲಿಷ್‌ಗೆ 3 ದಿನ

ಆಪ್‌ ಪಬ್ಲಿಷ್‌ಗೆ 3 ದಿನ

ಎಲ್ಲಾ ಬಳಕೆದಾರರು ಆಂಡ್ರಾಯ್ಡ್ 10ಗೆ ಅಪ್‌ಡೇಟ್‌ ಆಗಲು ಸಾಕಷ್ಟು ಸಮಯ ಬೇಕಾಗಿದ್ದು, ಗೂಗಲ್ ತನ್ನ ಆಪ್ ಸ್ಟೋರ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಎಲ್ಲಾ ಹೊಸ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳ ಅನುಮೋದನೆಗಾಗಿ ಕನಿಷ್ಠ ಮೂರು ದಿನಗಳ ಅಗತ್ಯ ಎಂಬ ಕಡ್ಡಾಯ ನಿಯಮವನ್ನು ಗೂಗಲ್ ಜಾರಿಗೆ ತಂದಿದೆ. ಇದರರ್ಥ ನೀವು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ನಿಮ್ಮ ಆಂಡ್ರಾಯ್ಡ್‌ ಅಪ್ಲಿಕೇಶನ್‌ನ್ನು ತಕ್ಷಣ ಪ್ರಕಟಿಸಲು ಸಾಧ್ಯವಿಲ್ಲ. ಅಲ್ಲದೆ, ಅನುಮೋದನೆ ಪ್ರಕ್ರಿಯೆ ಯಾವಾಗ ಎಂಬುದರ ಕುರಿತು ಡೆವಲಪರ್‌ಗಳಿಗೆ ಯಾವುದೇ ನಿರ್ದಿಷ್ಟ ದಿನಾಂಕ ಅಥವಾ ಸಮಯದ ಚೌಕಟ್ಟನ್ನು ನೀಡಲಾಗುವುದಿಲ್ಲ. ಈ ಕನಿಷ್ಠ ಮೂರು ದಿನಗಳ ಅನುಮೋದನೆ ಪ್ರಕ್ರಿಯೆಯ ಕಾರಣ ಏನೆಂದರೆ ಬಳಕೆದಾರರಿಗೆ ಉತ್ತಮ ರಕ್ಷಣೆ ನೀಡುವುದು.

ಪ್ರತ್ಯೇಕ ಪ್ರಕ್ರಿಯೆ

ಪ್ರತ್ಯೇಕ ಪ್ರಕ್ರಿಯೆ

ಅಪ್ಲಿಕೇಶನ್ ಅನುಮೋದನೆ ಪ್ರಕ್ರಿಯೆಯು ಪ್ರತ್ಯೇಕವಾಗಿದ್ದು, ಗೂಗಲ್‌ ಮಾಡುವ "ಮುಚ್ಚಿದ ಆಲ್ಫಾ ವಿಮರ್ಶೆ" ಗೆ ಸಂಬಂಧಿಸಿಲ್ಲ. "ಮುಚ್ಚಿದ ಆಲ್ಫಾ ವಿಮರ್ಶೆ"ಯ ನಂತರ, ಗೂಗಲ್‌ನಿಂದ ಅಂತಿಮ ಅನುಮೋದನೆಗಾಗಿ ಆಪ್‌ ಕನಿಷ್ಠ ಮೂರು ದಿನಗಳವರೆಗೆ ಕಾಯಬೇಕಾಗುತ್ತದೆ. ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಮೆಲ್‌ವೇರ್ ವೈರಸ್‌ನ ಪ್ರಮುಖ ಮೂಲಗಳಲ್ಲಿ ಒಂದಾಗಿರುವುದರಿಂದ, ಹೊಸ ನೀತಿಯು ವಿಕೃತ ಆಂಡ್ರಾಯ್ಡ್ ಅಪ್‌ಗಳಿಗೆ ಕಡಿವಾಣ ಹಾಕಲಿದೆ.

Best Mobiles in India

Read more about:
English summary
Android OS Over 193 Security Vulnerabilities And Google Is Yet To Fix Them

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X