ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವೈರಸ್ ಆಲಾರ್ಟ್ ಮೇಸೆಜ್ ಬರುತ್ತಿದೆಯೇ..? ಹಾಗಿದ್ರೆ ಸಮಸ್ಯೆ ಖಂಡಿತ..!

|

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಸಾಕಷ್ಟು ಹೆಚ್ಚಿಗೆ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಅಲ್ಲದೇ ಸುಲಭವಾಗಿ ಎಲ್ಲರನ್ನು ತಲುಪುತ್ತಿದೆ. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳ ಮೇಲೆ ದಾಳಿ ನಡೆಸಲು ಹ್ಯಾಕರ್ಸ್ ಗಳು ಹಲವಾರು ರೀತಿಯಲ್ಲಿ ಪ್ರಯತ್ನ ಪಡುತ್ತಿರುತ್ತಾರೆ. ಈ ಬಾರಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಮೇಲೆ ದಾಳಿ ಮಾಡಲು ಹೊಸ ದಾರಿಯೊಂದನ್ನು ಹುಡುಕಿಕೊಂಡಿದೆ ಎನ್ನಲಾಗಿದೆ.

ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ವೈರಸ್ ಆಲಾರ್ಟ್ ಮೇಸೆಜ್ ಬರುತ್ತಿದೆಯೇ..?

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಫೆಕ್ ವೈರಸ್ ಮೇಸೆಜ್ ಅನ್ನು ಕಳುಹಿಸಿ ಅವರನ್ನು ಮರಳು ಮಾಡುವ ಯೋಜನೆಯೊಂದನ್ನು ರೂಪಿಸಿರುವ ಹ್ಯಾಕರ್ಸ್ ಗಳು, ಅನೇಕ ಮಂದಿಯನ್ನು ಯಾಮಾರಿಸಿ ಹಣ ದೋಚುವ ಮತ್ತು ಬ್ಲಾಕ್ ಮೇಲ್ ಮಾಡುವುದನ್ನು ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ನಲ್ಲಿ ಫೇಕ್ ವೈರಸ್ ಮೇಸೆಜ್ ಬಂದರೆ ಏನು ಮಾಡಬೇಕು ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ.

ಫೇಕ್ ವೈರಸ್ ಮೇಸೆಜ್:

ಫೇಕ್ ವೈರಸ್ ಮೇಸೆಜ್:

ಇದು ಸಾಮಾನ್ಯವಾಗಿ ವೆಬ್ ಬ್ರೌಸಿಂಗ್ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ. ಇದು ವೈರಸ್ ಅಲ್ಲ, ಬದಲಿಗೆ ಹ್ಯಾಕರ್ಸ್ ಗಳು ನಿಮ್ಮ ಸ್ಮಾರ್ಟ್ ಫೋನಿಗೆ ಎಂಟ್ರಿಯನ್ನು ಪಡೆದುಕೊಳ್ಳುವ ಸಲುವಾಗಿ ರಚಿಸಿರುವ ಬಲೆಯಾಗಿದೆ. ನೀವು ವೈರಸ್ ಬರುವುದು ಎಂದು ಅವುಗಳ ಮೇಲೆ ಕ್ಲಿಕ್ ಮಾಡಿದರೆ ಖಂಡಿತವಾಗಿ ತೊಂದರೆಯನ್ನು ಅನುಭವಿಸಬೇಕಾಗುತ್ತದೆ.

ಕ್ಲಿಕ್ ಮಾಡಬೇಡಿ:

ಕ್ಲಿಕ್ ಮಾಡಬೇಡಿ:

ಯಾವುದೇ ಕಾರಣಕ್ಕೂ ಫೇಕ್ ವೈರಸ್ ಮೇಸೆಜ್ ಮೇಲೆ ಕ್ಲಿಕ್ ಮಾಡಲು ಹೋಗಬೇಡಿ. ಇದರಿಂದಾಗಿ ನಿಮ್ಮ ತೊಂದರೆಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ತೀರಾ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ. ಇದರಿಂದಾಗಿ ಫೇಕ್ ವೈರಸ್ ಅಲಾರ್ಟ್ ಬಂದ ಸಂದರ್ಭದಲ್ಲಿ ನಿಮ್ಮ ಬ್ರೌಸರ್ ಅನ್ನು ಬಂದ್ ಮಾಡಿ.

ಏನು ಮಾಡಬೇಕು:

ಏನು ಮಾಡಬೇಕು:

ನೀವು ಬ್ರೌಸಿಂಗ್ ಮಾಡುವ ಸಂದರ್ಭದಲ್ಲಿ ವೈರಸ್ ಅಲಾರ್ಟ್ ಎನ್ನುವ ಮೇಸೆಜ್ ಬಂದ ಸಂದರ್ಭದಲ್ಲಿ ಬಳಕೆದಾರರು ತಕ್ಷಣವೇ ವೆಬ್ ಬ್ರೌಸರ್ ನಲ್ಲಿ ಪೇಜ್ ಅನ್ನು ಕ್ಲೌಸ್ ಮಾಡಿ, ನಂತರದಲ್ಲಿ ಬ್ರೌಸರ್ ನಿಂದ ಹೊರಗೆ ಬಂದು ಟಾಸ್ಕ್ ಬಾರಿನಲ್ಲಿ ಬ್ರೌಸರ್ ಟಾಸ್ಕ್ ಅನ್ನು ಕ್ಲೊಸ್ ಮಾಡಿರಿ.

ಇದು ಸುಳ್ಳು:

ಇದು ಸುಳ್ಳು:

ಇದು ಶುದ್ಧ ಸುಳ್ಳಾದ ಮಾಹಿತಿಯಾಗಿದ್ದು, ಬಳಕೆದಾರರನ್ನು ದಾರಿ ತಪ್ಪಿಸುವ ಮೇಸೆಜ್ ಆಗಿದೆ. ಯಾವುದೇ ಕಾರಣಕ್ಕೂ ವೈರಸ್ ಬಂದ ಸಂದರ್ಭದಲ್ಲಿ ಈ ರೀತಿಯಾದ ಅಲರ್ಟ್ ಬರುವುದಿಲ್ಲ. ಇದು ಹೆಚ್ಚಿನ ಸಂದರ್ಭದಲ್ಲಿ ಮೋಸದ ಜಾಲವಾಗಿರುತ್ತದೆ. ಇಲ್ಲೇ ಯಾವುದಾದರು ಆಪ್ ಲಿಂಕ್ ಆಗಿರುತ್ತದೆ. ಈ ನಿಟ್ಟಿನಲ್ಲಿ ಎಚ್ಚರಿಕೆ ಅಗತ್ಯ.

Best Mobiles in India

English summary
Android Phone Users Plagued by Fake Virus Alerts. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X