ಎಂಟ್ರಿ ಕೊಡಲಿದೆ 'ಆಂಡ್ರಾಯ್ಡ್‌10 Q' OS; ವೇಗವಾಗಲಿದೆ ಸ್ಮಾರ್ಟ್‌ಫೋನ್‌ ಕಾರ್ಯವೈಖರಿ.!!

|

ಬಹುತೇಕ ಸ್ಮಾರ್ಟ್‌ಫೋನ್‌ ಪ್ರಿಯರು 'ಆಂಡ್ರಾಯ್ಡ್‌ ಅಪರೇಟಿಂಗ್ ಸಿಸ್ಟಮ್‌' ಬೆಸ್ಟ್ ಅನ್ನುತ್ತಾರೆ. ಅಪಾರ ಬಳಕೆದಾರರನ್ನು ಹೊಂದಿ ಅತೀ ಜನಪ್ರಿಯ ಓಎಸ್‌ ಆಗಿದ್ದು, ನಿರಂತರ ಅಪ್‌ಡೇಟ್‌ ಆಗುತ್ತಾ ನೂತನ ಫೀಚರ್ಸ್‌ಗಳನ್ನು ಪರಿಚಯಿಸಿ ಬಳಕೆದಾರರಿಗೆ ಹೊಸತನದ ಅನುಭವ ನೀಡುತ್ತಲೇ ಬಂದಿದೆ. ಪ್ರಸ್ತುತ ಆಂಡ್ರಾಯ್ಡ್‌ ವರ್ಷ್‌ನ್‌ ಮತ್ತೆ ಅಪ್‌ಡೇಟ್‌ ಆಗಿದ್ದು, ಇದೀಗ 'ಆಂಡ್ರಾಯ್ಡ್‌ 10 Q' ಗೆ ಬಂದು ನಿಂತಿದೆ.

ಎಂಟ್ರಿ ಕೊಡಲಿದೆ 'ಆಂಡ್ರಾಯ್ಡ್‌10 Q' OS; ವೇಗವಾಗಲಿದೆ ಫೋನ್‌ ಕಾರ್ಯವೈಖರಿ.!!

ಹೌದು, ಅಂಡ್ರಾಯ್ಡ್‌ ಪೈ 9.0 ಓಎಸ್‌ ಸಹ ಅಪ್‌ಡೇಟ್‌ ಆಗಿದ್ದು, ಇನ್ನು ಸ್ಮಾರ್ಟ್‌ಫೋನ್‌ಗಳಲ್ಲಿ 'ಆಂಡ್ರಾಯ್ಡ್‌ 10 Q' ಅಪರೇಟಿಂಗ್ ಸಿಸ್ಟಮ್ ಜಾರಿಗೆಬರಲಿದೆ. ಈ ಹೊಸ ವರ್ಷನ್ ಗೂಗಲ್ ಪಿಕ್ಸಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮತ್ತು ಮುಂಬರುವ ಫೋಲ್ಡೆಬಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಇರಲಿದೆ. ಜೊತೆಗೆ ಸೆಟ್ಟಿಂಗ್ಸ್‌ ಮತ್ತು ಡಾರ್ಕ್‌ ಮೋಡ್‌ ನಂತಹ ಹಲವು ಹೊಸತನಗಳನ್ನು ಬಳಕೆದಾರರಿಗೆ ಪರಿಚಯಿಸಲಿದ್ದು, ಹಿಂದಿನ ಓಎಸ್‌ಗಳಿಗಿಂತ ಭಿನ್ನ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗುತ್ತಿದೆ.

ಎಂಟ್ರಿ ಕೊಡಲಿದೆ 'ಆಂಡ್ರಾಯ್ಡ್‌10 Q' OS; ವೇಗವಾಗಲಿದೆ ಫೋನ್‌ ಕಾರ್ಯವೈಖರಿ.!!

ಗೂಗಲ್ ಡೆವಲಪರ್ಸ್ ಸಿದ್ಧಪಡಿಸಿರುವ ಈ 'ಆಂಡ್ರಾಯ್ಡ್‌ 10 Q' ಅಪರೇಟಿಂಗ್ ಸಿಸ್ಟಮ್, ಅಚ್ಚರಿಯ ಅಂಶಗಳನ್ನು ಹೊಂದಿದ್ದು, ಪ್ರೈವೆಸಿ ಸೆಟ್ಟಿಂಗ್ ಆಯ್ಕೆಗಳು, ಶೇರಿಂಗ್‌ ಆಯ್ಕೆಗಳು, ವೈಫೈಗೆ ಮತ್ತು ಕ್ಯಾಮೆರಾಗೆ ಸಂಬಂಧಿಸಿದಂತೆ ಮುಂದುವರಿದ ಫೀಚರ್ಸ್‌ಗಳುನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ. ಹಾಗಾದರೇ ಇನ್ನಿತರೆ ಯಾವೆಲ್ಲಾ ಫೀಚರ್ಸ್‌ಗಳು ಇರಲಿವೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಾರ್ಕ ಮೋಡ್‌

ಡಾರ್ಕ ಮೋಡ್‌

ಗ್ರಾಹಕರ ಬಹುನಿರೀಕ್ಷಿತ ಡಾಕರ್ ಮೋಡ್‌ ಫೀಚರ್ಸ್‌ ಅನ್ನು ಆಂಡ್ರಾಯ್ಡ್‌ 10 Q ಓಎಸ್‌ ಹೊತ್ತು ತರಲಿದೆ. ರಾತ್ರಿ ವೇಳೆ ಸ್ಮಾರ್ಟ್‌ಫೋನಿನ ಬೆಳಕಿನ ಪ್ರಖರತೆಯನ್ನು ತಗ್ಗಿಸಿ ಬ್ಯಾಟರಿ ಬಾಳಿಕೆಯನ್ನು ಉಳಿಸಲು ಈ ಫೀಚರ್ಸ್‌ ಉಪಯುಕ್ತವಾಗಿದೆ. ಆದರೆ ಡಾರ್ಕ್‌ ಮೋಡ್‌ ಆಯ್ಕೆಗೆ ಬದಲಾಯಿಸಿಕೊಳ್ಳು ಸೆಟ್ಟಿಂಗ್‌ನಲ್ಲಿಯೇ ನೇರವಾಗಿ ಆಯ್ಕೆ ನೀಡಬಹುದು ಅಥವಾ ಪರ್ಯಾಯ ದಾರಿ ನೀಡಬಹುದು ಎಂದು ಹೇಳಲಾಗುತ್ತಿದೆ.

ಸುಧಾರಿತ ಪ್ರೈವೆಸಿ ಸೆಟ್ಟಿಂಗ್

ಸುಧಾರಿತ ಪ್ರೈವೆಸಿ ಸೆಟ್ಟಿಂಗ್

ಬರಲಿರುವ ಹೊಸ ಆಂಡ್ರಾಯ್ಡ್‌ 10 Q ಓಎಸ್‌ ಪ್ರೈವೆಸಿ ಸೆಟ್ಟಿಂಗ್ ಆಯ್ಕೆಗಳಲ್ಲಿ ಹೆಚ್ಚಿನ ಭದ್ರತೆಯ ಅಂಶಗಳನ್ನು ಹೊಂದಿರಲಿದ್ದು, ಬಳಕೆದಾರರ ಮಾಹಿತಿ ಸುರಕ್ಷತೆ ಒತ್ತು ನೀಡಲಿದೆ. ಕೆಲವೊಮ್ಮೆ ಆಪ್‌ ಇನ್‌ಸ್ಟಾನ್‌ ಮಾಡುವಾಗ ಅನಗತ್ಯವಾಗಿ ಲೊಕೇಶನ್ ಮತ್ತು ಗ್ಯಾಲರಿಗಳ ಆಕ್ಸ್‌ಸ್ ಕೇಳುತ್ತವೆ ಇಂಥ ಆಯ್ಕೆಗಳಿಗೆ ತಡೆತರುವ ಕೆಲಸ ಮಾಡಲಿದೆ. ವೈಫೈ ನೆಟವರ್ಕ್‌ನಲ್ಲಿ ವಿಳಾಸದ ಬಗ್ಗೆ ಗೌಪ್ಯತೆ ಕಾಯ್ದುಕೊಳ್ಳುವಂತಹ ಸುಧಾರಿತ ಆಯ್ಕೆಗಳು ಇರಲಿವೆ ಎನ್ನಲಾಗುತ್ತಿದೆ.

ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌

ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳಿಗೆ ಸಪೋರ್ಟ್‌

ಇನ್ನು ಫೋಲ್ಡೇಬಲ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಡುವ ಕಾಲ ದೂರ ಉಳಿದಿಲ್ಲ. ಆಂಡ್ರಾಯ್ಡ್‌10 Q' ಓಎಸ್‌ ಫೋಲ್ಡೇಬಲ್ ಫೋನ್‌ಗಳಿಗೆ ಅತ್ಯುತ್ತಮ ಸಪೋರ್ಟ್‌ ನೀಡುವ ಸುಧಾರಿತ ತಳಹದಿಯನ್ನು ಹೊಂದಿರುತ್ತದೆ. Onresume ಮತ್ತು onPause ನಂತಹ ಆಯ್ಕೆಗಳ ಇರಲಿದ್ದು, ಮಲ್ಟಿ ಆಪ್‌ ಬಳಕೆ ಸುಲಭವಾಗಿರುತ್ತದೆ ಮತ್ತು ಆಪ್‌ಗಳ ರೀಸೈಜ್‌ ಮಾಡಿಕೊಳ್ಳುವ ಆಯ್ಕೆ ಸಹ ಇರಲಿದೆ ಎನ್ನಲಾಗುತ್ತಿದೆ.

ಶೇರ್‌ಗೆ ಶಾರ್ಟ್‌ಕಟ್‌ ದಾರಿ

ಶೇರ್‌ಗೆ ಶಾರ್ಟ್‌ಕಟ್‌ ದಾರಿ

ಆಂಡ್ರಾಯ್ಡ್ 10 Q ಓಎಸ್‌ ಶೇರ್‌ ಮಾಡಲು ಸರಳ ಶಾರ್ಟ್‌ಕಟ್‌ ಮಾರ್ಗಗಳನ್ನು ಅಳವಡಿಸಿಕೊಂಡಿರಲಿದೆ. ಯಾವುದೇ ಮಾಹಿತಿಯನ್ನು ಇತರರಿಗೆ ಶೇರ್‌ ಮಾಡಲು ಇಂದು ಆಪ್‌ನಲ್ಲಿ ಸೇಲೆಕ್ಟ್‌ ಮಾಡಿಕೊಂಡು ಇನ್ನೊಂದು ಆಪ್‌ಗೆ ಹೋಗಿ ಶೇರ್‌ ಮಾಡುವ ಅಗತ್ಯ ಇರುವುದಿಲ್ಲ. ಬದಲಿಗೆ ಸೆಲೆಕ್ಟ್ ಮಾಡಿರುವ ಅಲ್ಲಿಯೇ ಹಂಚಿಗೆಯ ಆಯ್ಕೆ ನೀಡಲಾಗಿರುತ್ತದೆ, ನೇರವಾಗಿ ಶೇರ್‌ ಮಾಡಬಹುದಾಗಿರುತ್ತದೆ.

ಆಂಡ್ರಾಯ್ಡ್ 10 Q ಅಪ್‌ಗ್ರೇಡ್‌ ಹೇಗೆ.?

ಆಂಡ್ರಾಯ್ಡ್ 10 Q ಅಪ್‌ಗ್ರೇಡ್‌ ಹೇಗೆ.?

ಆರಂಭದಲ್ಲಿ ಆಂಡ್ರಾಯ್ಡ್‌ 10 Q ಓಎಸ್‌ ಗೂಗಲ್‌ ಪಿಕ್ಸಲ್‌ ಸ್ಮಾರ್ಟ್‌ಫೋನ್‌ ಸರಣಿಯಲ್ಲಿ ಮಾತ್ರ ಬರಲಿದ್ದು, ಆನಂತರ ಬರಲಿರುವ ಹೊಸ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಓಎಸ್‌ ಇರಲಿದೆ. ಹಾಗೂ ಫೋಲ್ಡೇಬಲ್‌ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಈ ಹೊಸ ಆಂಡ್ರಾಯ್ಡ್‌ ಓಎಸ್‌ ಇರಲಿದೆ ಎಂದು ಹೇಳಲಾಗುತ್ತಿದ್ದು, ಈಗಾಗಲೇ ಆಂಡ್ರಾಯ್ಡ್‌ 9.0 ಪೈ ಓಎಸ್‌ ಇರುವ ಸ್ಮಾರ್ಟ್‌ಫೋನ್‌ ಅಪ್‌ಗ್ರೇಡ್‌ ಸಪೋರ್ಟ್‌ ಮಾಡಿದರೇ ಆಂಡ್ರಾಯ್ಡ್‌10 Q ಓಎಸ್‌ ಹೊಂದಬಹುದು ಆದರೆ ಆ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಿಲ್ಲ.

Best Mobiles in India

English summary
Here are some of the features that will be baked into the upcoming Android 10 Q update.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X