ಸ್ಯಾಮ್‌ಸಂಗ್ ಹಿಂದಿಕ್ಕಿದ ಆಪಲ್‌ನಿಂದ ನೂತನ ದಾಖಲೆ ನಿರ್ಮಾಣ

Written By:

ಜಾಗತಿಕ ಮೊಬೈಲ್ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿರುವ ಆಪಲ್ ಈ ಬಾರಿ ಚೈನಾ ಮಾರುಕಟ್ಟೆಯಲ್ಲಿ ನಂ.1 ವನ್ನು ಕಳೆದುಕೊಂಡರು, ಜಾಗತಿಕ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಹೆಚ್ಚಿಸಿಕೊಂಡಿದ್ದು, ಈ ವರ್ಷದ ಮೊದಲ ಕ್ವಾಟರ್‌ನಲ್ಲಿ 78 ಮಿಲಿಯನ್ ಐಪೋನ್ ಮಾರಾಟ ಮಾಡಿ ಸ್ಪರ್ಧೆಯಲ್ಲಿ ಸ್ಯಾಮ್‌ಸಂಗ್ ಅನ್ನು ಹಿಂದಕ್ಕಿದೆ.

ಓದಿರಿ: 6GB RAM ಹೊಂದಿರುವ ನೋಕಿಯಾ ಪಿ1 ಪ್ರಿಮಿಯಮ್ ಸ್ಮಾರ್ಟ್‌ಪೋನ್

ಸ್ಯಾಮ್‌ಸಂಗ್ ಹಿಂದಿಕ್ಕಿದ ಆಪಲ್‌ನಿಂದ ನೂತನ ದಾಖಲೆ ನಿರ್ಮಾಣ

ಕಳೆದ ವರ್ಷದಲ್ಲಿ 74.78 ಮಿಲಿಯನ್ ಐಪೋನ್ ಮಾರಾಟವಾಗಿತ್ತು. ಆದರೆ ಈ ಬಾರಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಿದ್ದು, 78.29 ಮಿಲಿಯನ್ ಐಪೋನ್‌ಗಳು ಜಾಗತಿಕವಾಗಿ ಮಾರಾಟವಾಗಿದೆ ಎನ್ನಲಾಗಿದೆ. ಈ ಕುರಿತು ಮಾತನಾಡಿದ ಆಪಲ್ ಸಿಇಓ ಟಿಮ್ ಕುಕ್, ಈ ಭಾರಿ ನಾವು ಅತೀ ಹೆಚ್ಚು ಐಪೋನ್, ಮ್ಯಾಕ್, ಆಪಲ್ ವಾಚ್ ಅನ್ನು ಮಾರಾಟ ಮಾಡಿದ್ದೇವೆ ಎಂದು ಹೇಳಿದ್ದಾರೆ.

2016 ಡಿಸೆಂಬರ್ 31 ಕ್ಕೆ ಕೊನೆಯಾದ ಫಸ್ಟ್‌ ಕ್ವಾಟರ್ ನಲ್ಲಿ ಆಪಲ್ 78.4 ಬಿಲಿಯನ್ ಡಾಲರ್ ಆದಾಯವನ್ನು ಆಪಲ್ ಗಳಿಸಿದ್ದು. ಇಷ್ಟು ಪ್ರಮಾಣದ ಆದಾಯ ಹಿಂದೆಂದೂ ಆಪಲ್ ನೋಡಿರಲಿಲ್ಲ ಎನ್ನಲಾಗಿದೆ. ಆದಾಯ ಗಳಿಕೆ ಮತ್ತು ಹೆಚ್ಚು ಪೋನುಗಳ ಮಾರಾಟಲ್ಲಿ ಈ ಬಾರಿ ಆಪಲ್ ಮೊದಲ ಸ್ಥಾನದಲ್ಲಿದ್ದರೆ, ಸ್ಯಾಮ್‌ಸಂಗ್ ಎರಡನೇ ಸ್ಥಾನದಲ್ಲಿದ್ದು, ಹಾವಾಯ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಓದಿರಿ: ಫೇಸ್‌ಬುಕ್‌ನ ಹೊಸ ಆಲೋಚನೆ: ಟಿವಿ ಲೋಕಕ್ಕೆ ಹೊಸ ಹೆಜ್ಜೆ

ಸ್ಯಾಮ್‌ಸಂಗ್ ಹಿಂದಿಕ್ಕಿದ ಆಪಲ್‌ನಿಂದ ನೂತನ ದಾಖಲೆ ನಿರ್ಮಾಣ

ಆಪಲ್ ನೂತನವಾಗಿ ಬಿಡುಗಡೆ ಮಾಡಿದ ಐಪೋನ್ 7 ಜಾಗತೀಕವಾಗಿ ಹೆಚ್ಚಿನ ಖ್ಯಾತಿಯನ್ನು ಗಳಿಸಿದ್ದಲ್ಲದೇ ಅತೀ ಹೆಚ್ಚು ಮಾರಾಟ ಸಹ ಆಗಿದೆ. ಆದರೆ ಇದೇ ಸಂದರ್ಭದಲ್ಲಿ ಆಪಲ್ 7ಗೆ ಪ್ರತಿ ಸ್ಪರ್ಧಿಯಾಗಿ ಮಾರುಕಟ್ಟೆ ಪ್ರವೇಶಿದ ಸ್ಯಾಮ್‌ಸಂಗ್ ನೋಟ್ 7 ಬ್ಯಾಟರಿ ಸಮಸ್ಯೆಯಿಂದ ಸ್ಪೋಟಗೊಳ್ಳುತ್ತಿದ್ದ ಹಿನ್ನಲೆಯಲ್ಲಿ ಸ್ಯಾಮ್‌ಸಂಗ್ ಈ ಬಾರಿ ಹೆಚ್ಚಿನ ಹೊಡೆದ ತಿಂದಿದೆ ಎನ್ನಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿ ಆಪಲ್‌ನ ಐಪೋನ್ 7, 6s, 5SE ಸ್ಮಾರ್ಟ್‌ಪೋನುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಆಪಲ್‌ ಮೊದಲ ಸ್ಥಾನವನ್ನು ಅಲಂಕರಿಸಲು ಸಾಧ್ಯವಾಗಿದೆ ಎನ್ನಲಾಗಿದೆ.

Read more about:
English summary
Apple just announced another record breaking quarter. Apple announced its financial results for its fiscal 2017 first quarter which ended on 31 December. to know more visit kannada.gizbo.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot