ಆಪಲ್‌ ಐಫೋನ್‌ 5 Vs ಐಫೋನ್‌ 4S

By Super
|
ಆಪಲ್‌ ಐಫೋನ್‌ 5 Vs ಐಫೋನ್‌ 4S

ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿ ಬುಧವಾರ ನಡೆದ ವಿಶೇಷ ಕಾರ್ಯಕ್ರಮ ವೊಂದರಲ್ಲಿ ಆಪಲ್‌ ಸಂಸ್ಥೆಯು ತನ್ನಯ ಬಹುನಿರೀಕ್ಷಿತ ಸಿಕ್ಸ್ತ್‌ ಜೆನೆರೇಷನ್‌ ಫೊನ್‌ ಎಂದೇ ಕರೆಸಿಕೊಂಡಿರುವ ಐಫೋನ್‌ 5 ನ್ನು ಬಿಡುಗಡೆ ಮಾಡಿದೆ.

ಅಂದಹಾಗೆ ಈಗಾಗಲೇ ಐಫೋನ್‌ 4S ಕೊಂಡವರಿಗೆ ಐಫೋನ್‌ 5 ಖರೀದಿಸಬೇಕಿತ್ತೇ? ಎಂಬ ಪ್ರಶ್ನೆ ಕಾಡುತ್ತಿದೆ. ಅದಕ್ಕಾಗಿಯೇ ಐಫೋನ್‌ 5 ಹಾಗೂ ಐಫೋನ್‌ 4S ಗಳಲ್ಲಿ ಯಾವುದು ಉತ್ತಮ ಎಂದು ಎರಡರ ನಡುವಿನ ವ್ಯತ್ಯಾಸಗಳನ್ನು ಗಿಜ್ಬಾಟ್‌ ನಿಮ್ಮೆದುರು ತಂದಿದೆ.

ಫಾರ್ಮ್‌ ಫಾಕ್ಟರ್‌:

ಐಫೋನ್‌ 5 ನ ಸುತ್ತಳತೆ 123.8 x 58.6 x 7.6 mm ಹಾಗೂ 112 ಗ್ರಾಂ ತೂಕವಿದ್ದು ಐಫೋನ್‌ 4S ಗಿಂತಲೂ ಹಗುರವಾಗಿದೆ, ಅಂದಹಾಗೆ ಐಫೋನ್‌ 4S ಸುಮಾರು 140 ಗ್ರಾಂ ತೂಕವಿದ್ದು 115.2 x 58.6 x 9.3 mm ಸುತ್ತಳತೆ ಹೊಂದಿದೆ. ಸಂಪೂರ್ಣ ಗ್ಲಾಸ್‌ ಹಾಗೂ ಅಲ್ಯೂಮೀನಿಯಂ ನಿಂದ ಮಾಡಲಾಗಿರು ಐಫೋನ್‌ 5 ಆಪಲ್‌ ಈವರೆಗೂ ಸಿದ್ಧಪಡಿಸಿರುವ ಅತ್ಯಂತ ಹಗುರವಾದ ಐಫೋನ್‌ ಆಗಿದೆ.

ದರ್ಶಕ: ಈ ವಿಚಾರದಲ್ಲಿ ಐಫೋನ್‌ 4S ಗೆ ಹೋಲಿಸಿದರೆ ಐಫೋನ್‌ 5 ನಾಲ್ಕು ಇಂಚಿನ LED-backlit IPS ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕ (ರೆಟಿನಾ ಡಿಸ್ಪ್ಲೆ ಹೊಂದಿಲ್ಲ) ಹಾಗೂ 1136 x 640 ಪಿಕ್ಸೆಲ್‌ ರೆಸೆಲ್ಯೂಷನ್‌ ಸೇರಿದಂತೆ ಸುಮಾರು 326 ppi ನ ಪಿಕ್ಸೆಲ್‌ ಡೆನ್ಸಿಟಿಯ ದೊಡ್ಡ ಸ್ಕ್ರೀನ್‌ ಹೊಂದಿದೆ.

ಮತ್ತೊಂದೆಡೆ ಐಫೊನ್‌ 4S 3.5 ಇಂಚಿನ LED-backlit IPS ಸಾಮರ್ತ್ಯದ ಟಚ್‌ಸ್ಕ್ರೀನ್‌ ದರ್ಶಕದ ಜೊತೆಗೆ 960 x 640 ಪಿಕ್ಸೆಲ್‌ ರೆಸೆಲ್ಯೂಷನ್‌ ಹಾಗೂ ಸುಮಾರೂ 330 ppi ಪಿಕ್ಸೆಲ್‌ ಡೆನ್ಸಿಟಿ ಹೊಂದಿದೆ.

ಪ್ರೊಸೆಸರ್‌: ಐಫೊನ್‌ 5 ಆಪಲ್‌ನ ನೂತನ A6 ಚಿಪ್‌ಸೆಟ್‌ ಪ್ರೊಸೆಸರ್‌ ಒಳಗೊಂಡಿದ್ದು, ಐಫೊನ್‌ 4S ನಲ್ಲಿನ ಆಪಲ್‌ A5 ಚಿಪ್‌ಸೆಟ್‌ ಗಿಂತಲೂ ಚಿಕ್ಕದಾಗಿದ್ದು ಶಕ್ತಿಶಾಲಿಯಾಗಿದೆ.

ಆಪರೇಟಿಂಗ್‌ ಸಿಸ್ಟಂ: ಈ ವಿಭಾಗದಲ್ಲಿ ಐಫೋನ್‌ 5 ಆಪಲ್‌ನ ನೂತನ WWDC iOS 6 OS ಚಾಲಿತವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಐಫೋನ್‌ 4S ಈಹಿಂದಿನ iOS 5 ಆಪರೇಟಿಂಗ್‌ ಸಿಸ್ಟಂ ಹೊಂದಿದೆ. ಅಲ್ಲದೆ iOS 6 ಆಪರೇಟಿಂಗ್‌ ಸಿಸ್ಟಂ ನೂತನ ಸಿರಿ(siri) ಸೇರಿದಂತೆ 200 ಕ್ಕೂ ಹೆಚ್ಚಿನ ಫೀಚರ್ಸಸಗಳನ್ನು ಹೊಂದಿದೆ ಹಾಗೂ ನೇಟೀವ್‌ ಮ್ಯಾಪಿಂಗ್‌, ಹೈಯರ್‌ ಫೇಸ್‌ಬುಕ್‌ ಇಂಟೆಗ್ರೇಷನ್‌ ಸೇರಿದಂತೆ ಹಲವು ಆಕರ್ಷಣೆ ಗಳನ್ನು ಹೊಂದಿದೆ.

ಕ್ಯಾಮೆರಾ: ಎರಡೂ ಐಫೋನ್‌ ಗಳಲ್ಲಿಯೂ 8MP ನ ಆಟೋ ಫೋಕಸ್‌ ಹೊಂದಿರುವ ಹಿಂಬದಿಯ ಕ್ಯಾಮೆರಾ, LED ಫ್ಲಾಷ್‌, geo-ಟ್ಯಾಗಿಂಗ್‌, ಟಚ್‌ ಫೋಕಸ್‌, ಪೇಸ್‌ ಡಿಟೆಕ್ಷನ್‌ ಹಾಗೂ HDR ಸೇರಿದಂತೆ HD 1080p ಸಾಮರ್ತ್ಯದ @30fps ವಿಡಿಯೋ ಸೆರೆಹಿಡಿಯಬಲ್ಲದು.

ಇದೆಲ್ಲಾ ಹೊರತು ಪಡಿಸಿದರೆ ವಿಡಿಯೋ ಕರೆಗಾಗಿ ಐಫೋನ್‌ 5 ನಲ್ಲಿ 1.3MP ಸಾಮರ್ತ್ಯದ ಮುಂಬದಿಯ ಕ್ಯಾಮೆರಾ ಇದ್ದರೆ ಐಫೋನ್‌ 4S ನಲ್ಲಿ VGA ಕ್ಯಾಮೆರಾ ಇದೆ.

ಸ್ಟೋರೇಜ್‌: ಈ ವಿಷಯದಲ್ಲಿ, ಐಫೋನ್‌ 5 ಹಾಗೂ ಐಫೋನ್‌ 4S ಗಳು ಮೂರು ಬಗೆಯ ಸಂರಚನೆಯಲ್ಲಿ ಲಭ್ಯವಿದೆ – 16GB/32GB/64GB, ಗಳಲ್ಲಿ ಲಭ್ಯವಿದ್ದು ಎಲ್ಲದರಲ್ಲಯೂ 1GB RAM ಒಳಗೊಂಡಿದೆ.

ಕನೆಕ್ಟಿವಿಟಿ: ಕನೆಕ್ಟಿವಿಟಿ ಗೆ ಸಂಬಂಧಿಸಿದಂತೆ ಐಫೊನ್‌ 5 ನಲ್ಲಿ ಅತ್ಯಾದುನಿಕ ಸಾಧನಗಳಾದ DC-HSDPA 42Mbps, HSDPA 21Mbps, HSUPA 5.76Mbps, 4G LTE, Wi-Fi 802.11 a/b/g/n, Wi-Fi ಪ್ಲಸ್‌ ಸೆಲ್ಯೂಲರ್‌, ಬ್ಲೂಟೂತ್‌ v4.0 ಜೊತೆಗೆ A2DP ಹಾಗೂ ಮೈಕ್ರೋ USB 2.0 ಗಳನ್ನು ಒಳಗೊಂಡಿದೆ.

ಆದರೆ ಐಫೊನ್‌ 4S ನಲ್ಲಿ HSDPA 14.4Mbps, HSUPA 5.8Mbps, Wi-Fi 802.11 b/g/n, Wi-Fi ಹಾಟ್‌ಸ್ಪಾಟ್‌, ಬ್ಲೂಟುತ್‌ 4.0 ಜೊತೆಗೆ A2DP ಹಾಗೂ ಮೈಕ್ರೋ USB 2.0 ಹೊಂದಿದೆ.

ಬ್ಯಾಟರಿ: ಆಪಲ್‌ನ ಪ್ರಕಾರ ಐಫೊನ್‌ 5 ನಲ್ಲಿ Li-Po ಬ್ಯಾಟೆರಿ ಇದ್ದು 225 ಗಂಟೆಗಳ ಸ್ಟಾಂಡ್‌ಬೈ ಹಾಗೂ 8 ಗಂಟೆಗಳ ಟಾಕ್‌ಟೈಮ್‌ ನೀಡಬಲ್ಲದು, ಆದರೆ ಐಫೊನ್‌ 4S ನಲ್ಲಿನ 1,432 mAh Li-Po ಬ್ಯಾಟರಿ 200 ಗಂಟೆಗಳ ಸ್ಟಾಂಡ್‌ಬೈ ಹಾಗೂ 8 ಗಂಟೆಗಳ ಟಾಕ್‌ಟೈಮ್‌ ನೀಡುತ್ತದೆ.

ಬೆಲೆ: ಖರೀದಿಸುವ ವಿಚಾರದಲ್ಲಿ ಆಪಲ್ ಎರಡಕ್ಕೂ ಒಂದೇ ಬೆಲೆ ನಿಗದಿ ಪಡಿಸಿದೆ. ಐಫೊನ್‌ 5 ನ ಬೆಲೆ 16 GB ಸಾಮರ್ತ್ಯಕ್ಕೆ $199 (ಸುಮಾರು Rs 11,000), 32 GB ಸಾಮರ್ತ್ಯಕ್ಕೆ $299 (ಸುಮಾರು Rs 16,500) ಹಾಗೂ 64GB ಸಾಮರ್ತ್ಯಕ್ಕೆ $399 (ಸುಮಾರು. Rs 22,000) ನಿಗದಿ ಪಡಿಸಿದೆ.

Read in English

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X