ಹೊಸ ಐಫೋನ್ 6 ಖರೀದಿ ಈ ಸೈಟ್‌ಗಳಲ್ಲಿ ನಡೆಯಲಿ!!!

Written By:

ಆಪಲ್ ತನ್ನ ಐಫೋನ್ 6 ಅನ್ನು ಭಾರತದಲ್ಲಿ ಲಾಂಚ್ ಮಾಡಿರದಿದ್ದರೂ ಈ ಫೋನ್ ಅನ್ನು ನಿಮಗೆ ಇಬೇನಲ್ಲಿ ಖರೀದಿಸಬಹುದಾಗಿದೆ ಎಂಬ ವಿಷಯ ನಿಮಗೆ ಗೊತ್ತೇ? ನಿಜವಾಗಿಯೂ ಇತ್ತೀಚಿನ ಐಫೋನ್ 6 ಯುಎಸ್ ಮಾರುಕಟ್ಟೆಯಲ್ಲಿ ನಾಲ್ಕು ಮಿಲಿಯನ್ ಯೂನಿಟ್‌ಗಳ ಭರ್ಜರಿ ಮಾರಾಟವನ್ನು ಪಡೆದುಕೊಂಡಿದ್ದು ಮೊದಲ ದಿನದಲ್ಲೇ ಭರ್ಜರಿ ಮಾರಾಟವನ್ನು ಈ ಫೋನ್‌ಗಳು ಪಡೆದುಕೊಂಡಿವೆ.

ಆಪಲ್ ಇನ್ನೂ ತನ್ನ ಐಫೋನ್ 6 ಅನ್ನು ಅಧಿಕೃತವಾಗಿ ಲಾಂಚ್ ಮಾಡಿಲ್ಲ, ಆದರೆ ಇ ಕಾಮರ್ಸ್ ಸೈಟ್‌ಗಳು ಈ ಫೋನ್ ಅನ್ನು ಖರೀದಿಸುವ ಅದ್ಭುತ ಕೊಡುಗೆಗಳನ್ನು ನೀಡುತ್ತಿದ್ದು ನಿಜಕ್ಕೂ ಇದು ಗ್ರಾಹಕರಿಗೆ ಬಂಪರ್ ಸುಗ್ಗಿಯಾಗಿದೆ. ಅತ್ಯಂತ ಕಡಿಮೆ ದರದ್ದು ಎಂಬ ಹಣೆಪಟ್ಟಿಯನ್ನು ಧರಿಸಿಕೊಂಡಿರುವ ಐಫೋನ್ 6 ಭಾರತದಲ್ಲಿ ರೂ 68,500 ಕ್ಕೆ ಲಭ್ಯವಾಗುತ್ತಿದೆ.

ಇದಕ್ಕೆಂದೇ ನಮ್ಮ ಇಂದಿನ ಲೇಖನದಲ್ಲಿ ಐಫೋನ್ 6 ಅನ್ನು ಮಾರಾಟ ಮಾಡುವ ವಿವಿಧ ಬೆಲೆಗಳನ್ನು ಹೊಂದಿರುವ ಇತರ ಆನ್‌ಲೈನ್ ಸೈಟ್‌ಗಳ ಮಾಹಿತಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದು ಇದು ನಿಜಕ್ಕೂ ವಿಶೇಷವಾಗಿದೆ.

4.7 ಇಂಚಿನ ಡಿಸ್‌ಪ್ಲೇಯೊಂದಿಗೆ ಐಫೋನ್ 6 ಬಂದಿದ್ದು ಹೊಸ ಆಪಲ್ A8 ಚಿಪ್ ಆಧಾರಿತ 20 ಮಾನೋಮೀಟರ್ ಪ್ರಕ್ರಿಯೆ ಮತ್ತು ಉತ್ತಮ GPU ಅಂದರೆ ಇದು 84 ಸಲ ಹೆಚ್ಚು ವೇಗವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಐಓಎಸ್ 8 ಇದ್ದು ಇದು 8MP ಇನ್‌ಸೈಟ್ ಕ್ಯಾಮೆರಾವನ್ನು ಹೊಂದಿದೆ. ಇದು 1.2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಹೊಂದಿದ್ದು ಹೊಸ BSI ಸೆನ್ಸಾರ್‌ನಿಂದ ಕೂಡಿದೆ.

ಇದು ವೈಫೈ ಕಾಲಿಂಗ್ ವಿಶೇಷತೆಯನ್ನು ಕೂಡ ಹೊಂದಿದ್ದು 150 Mbps LTE, 20 LTE ಬ್ಯಾಂಡ್ಸ್ ಅನ್ನು ಬೆಂಬಲಿಸುತ್ತದೆ ಇದು ಟಚ್ ಐಡಿ ಅಂಶವನ್ನು ಕೂಡ ಹೊಂದಿದೆ. ಕೆಳಗಿನ ಸ್ಲೈಡ್‌ಗಳಲ್ಲಿ ಐಫೋನ್‌ 6 ನ ಬೆಲೆಯನ್ನು ತಿಳಿಸುವ ಹತ್ತು ಇ ಕಾಮರ್ಸ್ ಸೈಟ್‌ಗಳ ಜಾಲವನ್ನು ನಾವು ನಿಮಗೆ ತೋರಿಸುತ್ತಿದ್ದೇವೆ.

ಆಪಲ್ ಐಓಎಸ್ 8 ನ ಅದ್ಭುತ ವಿಶೇಷತೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
This article tells about Apple iPhone 6 Not Available in India But You Can Buy via Ebay: Top 10 Online Deals.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot