ಆಪಲ್ ಐಓಎಸ್ 8 ನ ಅದ್ಭುತ ವಿಶೇಷತೆಗಳು

Written By:

ಹೆಚ್ಚು ಕಾತರತೆಯ ಆಪಲ್ ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಲಾಂಚ್ ನಂತರ, ಕ್ಯಾಪರ್ಟಿನೋ ಆಧಾರಿತ ಐಓಎಸ್ 8 ನವೀಕರಣವು ನಿನ್ನೆ ಬಿಡುಗಡೆಯಾಗಿದ್ದು ಭಾರತೀಯ ಆಪಲ್ ಬಳಕೆದಾರರು ಇದನ್ನು ತಮ್ಮ ಐಫೋನ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.

ನೀವು ಐಓಎಸ್‌ಗೆ ಸಂಯೋಜನೆಯಾಗುವ ಡಿವೈಸ್‌ ಅನ್ನು ಹೊಂದಿದ್ದೀರಿ ಎಂದಾದಲ್ಲಿ ಇದು ಐಓಎಸ್ 8 ನೊಂದಿಗೆ ಸಂಯೋಜನೆಯಾಗಬೇಕೆಂದೇನಿಲ್ಲ. ಆಪಲ್ ಜೂನ್‌ನಲ್ಲಿ ಘೋಷಣೆ ಮಾಡಿದಂತೆ, ಐಓಎಸ್‌ನ ಹೊಸ ಆವೃತ್ತಿಯು ಐಫೋನ್ 4s, ಐಫೋನ್ 5, ಐಫೋನ್ 5c, ಐಫೋನ್ 5s, ಐಪೋಡ್ ಟಚ್ ಐದನೇ ಜನರೇಶನ್, ಐಪ್ಯಾಡ್ 2, ಐಪ್ಯಾಡ್ ಜೊತೆಗೆ ರೆಟೀನಾ ಡಿಸ್‌ಪ್ಲೇ, ಐಪ್ಯಾಡ್ ಏರ್, ಐಪ್ಯಾಡ್ ಮಿನಿ, ಐಪ್ಯಾಡ್ ಮಿನಿ ಜೊತೆಗೆ ರೆಟೀನಾ ಡಿಸ್‌ಪ್ಲೇಯೊಂದಿಗೆ ಸಂಯೋಜನೆಗೊಳ್ಳಲಿದೆ.

ಹೊಸ ಘೋಷಿತ ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಐಓಎಸ್ 8 ಪೂರ್ವ ಸ್ಥಾಪಿತ ಪ್ಲಾಟ್‌ಫಾರ್ಮ್‌ನೊಂದಿಗೆ ಬಂದಿದ್ದು, ಐಫೋನ್ 4 ಐಓಎಸ್ 8 ನವೀಕರಣಕ್ಕೆ ಬೆಂಬಲ ನೀಡುತ್ತಿಲ್ಲ.

ನಿಮ್ಮ ಐಓಎಸ್ ಡಿವೈಸ್ ಅಥವಾ ಐಟ್ಯೂನ್‌ಗಳ ಮೂಲಕ ಬಳಕೆದಾರರು ನೇರವಾಗಿ ಈ ನವೀಕರಣವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಿಮ್ಮ ಐಓಎಸ್ ಡಿವೈಸ್‌ನಿಂದ ನವೀಕರಣವನ್ನು ಮಾಡಲು, ಸೆಟ್ಟಿಂಗ್ಸ್ > ಸಾಫ್ಟ್‌ವೇರ್ ಅಪ್‌ಡೇಟ್ ಇದಕ್ಕೆ ಹೋಗಬೇಕು. ಐಟ್ಯೂನ್‌ಗಳಲ್ಲಿ, ನವೀಕರಣಕ್ಕಾಗಿ ಪರಿಶೀಲಿಸಿ ಮತ್ತು ಸೂಚನೆಗಳನ್ನು ಅನುಸರಿಸಿ.

ಇನ್ನಷ್ಟು ಹೆಚ್ಚಾಗಿ ಐಓಎಸ್ 8 ಐಓಎಸ್ 7 ಗಿಂತ ಭಿನ್ನವಾಗಿಲ್ಲ ಆದರೆ ನೀವು ಖಂಡಿತ ಇಷ್ಟಪಡುವ ಹೆಚ್ಚಿನ ವಿಶೇಷತೆಗಳೊಂದಿಗೆ ಇದು ಬಂದಿದ್ದು ನಿಜಕ್ಕೂ ಇದು ಮನಮೋಹಕವಾಗಿದೆ. ಇದನ್ನು ಬಳಸುವ ಮನಮೋಹಕ ವಿಶೇಷತೆಗಳು ಇಲ್ಲಿದ್ದು ಇಲ್ಲಿ ನೋಟ ಹರಿಸಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೀಬೋರ್ಡ್ ಬದಲಾವಣೆಗಳು

ಕೀಬೋರ್ಡ್ ಬದಲಾವಣೆಗಳು

#1

ಐಫೋನ್ ಅನ್ನು ಪ್ರಸ್ತುತಪಡಿಸಿದ ನಂತರದಿಂದ, ಆಪಲ್ ಹೇಳುವಂತೆ ಐಓಎಸ್ 8 ಹೆಚ್ಚಿನ ಬದಲಾವಣೆಗಳನ್ನು ತನ್ನ ಐಫೋನ್‌ಗಳಲ್ಲಿ ತಂದಿದೆ. ಆಂಡ್ರಾಯ್ಡ್‌ನಲ್ಲಿರುವ ಅತಿ ಜನಪ್ರಿಯ ಪರಿಕರವಾದ ಸ್ವೈಪ್ ಇನ್ನು ಐಓಎಸ್ 8 ನಲ್ಲಿ ಕೂಡ ಕಾಣಬಹುದಾಗಿದೆ.

ಫೋಟೋಗಳು

ಫೋಟೋಗಳು

#2

ಐಫೋನ್ ಇದೀಗ ಹೊಸ ಫೋಟೋ ಸಂಪಾದನೆ ಅಪ್ಲಿಕೇಶನ್‌ಗಳನ್ನು ಹೊಂದಿದ್ದು, ನೀವು ಕ್ಲೌಡ್‌ನಲ್ಲಿ ಹೆಚ್ಚು ಫೋಟೋಗಳನ್ನು ಸಂಗ್ರಹಿಸಬಹುದಾಗಿದೆ. ಇನ್ನಷ್ಟು ಚೆನ್ನಾಗಿ ಫೋಟೋಗಳನ್ನು ನೀವು ಇದರಲ್ಲಿ ಸಂಪಾದಿಸಬಹುದಾಗಿದ್ದು, ಬಳಕೆದಾರರು ಹೆಚ್ಚುವರಿ ಐಕ್ಲೌಡ್ ಸಂಗ್ರಹಣೆಯನ್ನು ಖರೀದಿಸಬಹುದಾಗಿದೆ.

ಕುಟುಂಬ ಹಂಚಿಕೆ (ಫ್ಯಾಮಿಲಿ ಶೇರಿಂಗ್)

ಕುಟುಂಬ ಹಂಚಿಕೆ (ಫ್ಯಾಮಿಲಿ ಶೇರಿಂಗ್)

#3

ನಿಮಗೆ ಈ ವೈಶಿಷ್ಟ್ಯವನ್ನು ಬಳಸಿಕೊಂಡು ನಿಮ್ಮ ಕುಟುಂಬದ ಆರು ಜನರನ್ನು ಡಿವೈಸ್‌ನಾದ್ಯಂತ ಐಟ್ಯೂನ್‌ಗಳ ಖರೀದಿಗೆ ಸೇರಿಸಬಹುದಾಗಿದೆ. ತಮ್ಮ ಮಕ್ಕಳ ಖರೀದಿಯ ಮೇಲೂ ಪಾಲಕರಿಗೆ ಕಣ್ಣಿಡುವ ಅನೂಹ್ಯ ವ್ಯವಸ್ಥೆಯನ್ನು ಇದು ಹೊಂದಿದೆ.

ಸಿರಿ

ಸಿರಿ

#4

ಸಿರಿ ಇದೀಗ ಶಾಜಮ್ ಸಂಗೀತ ಗುರುತಿಸುವಿಕೆ ಸೇವೆಯನ್ನು ಹೊಂದಿದ್ದು, ನಿಮ್ಮ ಧ್ವನಿಯೊಂದಿಗೆ ವಿಷಯವನ್ನು ಖರೀದಿಸುವ ಮತ್ತು 22 ಭಾಷೆಗಳವರೆಗೆ ಗುರುತಿಸುವ ವ್ಯವಸ್ಥೆಯನ್ನು ಇದು ಹೊಂದಿದೆ.

ಐಕ್ಲೌಡ್ ಡ್ರೈವ್ ಮತ್ತು ಸಂದೇಶಗಳ ಅಪ್ಲಿಕೇಶನ್

ಐಕ್ಲೌಡ್ ಡ್ರೈವ್ ಮತ್ತು ಸಂದೇಶಗಳ ಅಪ್ಲಿಕೇಶನ್

#5

ಐಓಎಸ್ 8 ನೊಂದಿಗೆ ಇದು ಸಂಯೋಜನೆಗೊಳ್ಳುವಂತೆ ಐಕ್ಲೌಡ್ ಡ್ರೈವ್ ಅನ್ನು ಆಪಲ್ ತಯಾರಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Top 5 iOS 8 Features You Should Know.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot