ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಸಿಲಿಕಾನ್‌ ಸಿಟಿ ಇನ್ನು "ಆಪಲ್‌ ಸಿಟಿ"!!

|

ಸಿಲಿಕಾನ್‌ ಸಿಟಿ, ಗ್ರೀನ್‌ ಸಿಟಿ, ಹಾಗೂ ಸಾಫ್ಟ್‌ವೇರ್ ಹಬ್ ಆಗಿರುವ ಬೆಂಗಳೂರು 2017 ನೇ ವರ್ಷದಲ್ಲಿ "ಆಪಲ್‌ ಸಿಟಿ" ಎನ್ನುವ ಹೆಸರನ್ನು ಪಡೆಯುತ್ತದೆ.! ಹೌದು, ಜಗತ್ತಿನ ನಂಬರ್ ಒನ್ ಸ್ಮಾರ್ಟ್‌ಫೋನ್‌ ಕಂಪೆನಿ ಆಪಲ್ ಭಾರತದಲ್ಲಿಯೇ ಮೊದಲ ಭಾರಿ ತನ್ನ ಮೊಬೈಲ್ ತಯಾರಿಕಾ ಕಂಪೆನಿಯನ್ನು ಬೆಂಗಳೂರಿನಲ್ಲಿ ತೆರೆಯುತ್ತದೆ.!

ಇದರಿಂದ ಬೆಂಗಳೂರಿಗೆ ಮತ್ತೊಂದು ಗರಿ ಸಿಗಲಿದ್ದು, ನಗರದ ಇಂಡಸ್ಟ್ರಿಯಲ್ ಏರಿಯಾ ಪೀಣ್ಯದಲ್ಲಿ ಇದಕ್ಕಾಗಿ ಆಪಲ್ ಕಂಪೆನಿ ಎಲ್ಲಾ ರೀತಿಯ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿದುಬಂದಿದೆ.! ಇನ್ನು ಸ್ಮಾರ್ಟ್‌ಫೋನ್ ಕೈಗಾರಿಕಾ ಒಕ್ಕೂಟದ ಮಾಹಿತಿಯ ಪ್ರಕಾರ 2017 ವರ್ಷದ ಏಪ್ರಿಲ್‌ನಲ್ಲಿ ಆಪಲ್ ತನ್ನ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಯನ್ನು ಆರಂಭಿಸಲಿದೆ.

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಇನ್ನು

ಯಾವುದೇ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಎಷ್ಟು?

ಭಾರತದಲ್ಲಿ ಆಪಲ್‌ ಐಫೋನ್‌ಗಳಿಗೆ ಉತ್ತಮ ಮಾರುಕಟ್ಟೆ ಇದ್ದು, ಆಪಲ್‌ಗೆ ಪ್ರತಿವರ್ಷವೂ ಶೇ 21 ಪರ್ಸೆಂಟ್‌ನಷ್ಟು ಆದಾಯ ಹೆಚ್ಚುತ್ತಿದೆ. ಹಾಗೆಯೇ, ಆಪಲ್ ಸ್ಮಾರ್ಟ್‌ಫೋನ್‌ಗಳ ದರ ಹೆಚ್ಚಾಗಿರುವುದರಿಂದ ಲಾಭದ ಪ್ರಮಾಣ ಕಡಿಮೆಯಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. . ಹಾಗಾಗಿ, ಭಾರತದಲ್ಲಿಯೇ ಸ್ಮಾರ್ಟ್‌ಫೋನ್ ತಯಾರಿಸಿ ಕಡಿಮೆ ಬೆಲೆಗೆ ಆಪಲ್‌ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುವ ಉದ್ದೇಶ ಆಪಲ್‌ನದ್ದು!

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಇನ್ನು

ಇನ್ನು ಆಪಲ್ ತನ್ನ ಸ್ಮಾರ್ಟ್‌ಫೋನ್‌ ಕೈಗಾರಿಕೆಯನ್ನು ಭಾರತದಲ್ಲಿ ತೆರೆದರೆ ಐಫೋನ್‌ಗಳ ಮೇಲೆ ಶೇಕಡ 15 ರಿಂದ 20 ಪರ್ಸೆಂಟ್ ನಷ್ಟು ಬೆಲೆ ಇಳಿಕೆಯಾಗುತ್ತದೆ ಇದರಿಂದ ಇತರ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳಿಗೆ ಸೆಡ್ಡು ಹೊಡೆಯಬಹುದು ಎನ್ನುವುದು ಆಪಲ್ ಕಂಪೆನಿಯ ಯೋಚನೆ.

ಬೆಂಗಳೂರಿನಲ್ಲಿ ತಯಾರಾಗಲಿದೆ ಆಪಲ್ ಸ್ಮಾರ್ಟ್‌ಫೋನ್!..ಇನ್ನು

ಬೆಂಗಳೂರಿನಲ್ಲಿ ಕೇವಲ ಆಪಲ್ ಸ್ಮಾರ್ಟ್‌ಫೋನ್‌ಗಳಲ್ಲದೇ, ಆಪಲ್ ಟಿವಿ, ಆಪಲ್ ವಾಚ್‌ಗಳು ಸಹ ಇಲ್ಲೇ ತಯಾರಾಗುತ್ತವೆ ಎನ್ನಲಾಗಿದೆ. ಆಪಲ್‌ ಕಂಪೆನಿಯ ಸಂಸ್ಥಾಪಕ ಮತ್ತು ಸಿಇಒ ಟೀಮ್ ಕುಕ್ ಭಾರತದಲ್ಲಿ ಪ್ರವಾಸ ಕೈಗೊಂಡಿದ್ದಾಗ ತಮ್ಮ ಕಂಪೆನಿಯ ಕೈಗಾರಿಕೆಯನ್ನು ಬೆಂಗಳೂರಿನಲ್ಲಿ ಆರಂಭಿಸಲು ಇಚ್ಚಿಸಿದ್ದಾರೆ ಎಂದು ತಿಳಿದುಬಂದಿದೆ.

Best Mobiles in India

English summary
Apple plans to make iPhones for the Indian market in Bengaluru.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X