Subscribe to Gizbot

ಒಂದಾದ ಆಸುಸ್-ಫ್ಲಿಪ್‌ಕಾರ್ಟ್‌ ಜೋಡಿ: ಮಾರುಕಟ್ಟೆಯಲ್ಲಿ ಹೊಸ ಸಂಚಲನ..!

Written By:

ಭಾರತೀಯ ಇಕಾಮರ್ಸ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ದೇಶಿಯ ಮೂಲದ ಫ್ಲಿಪ್‌ಕಾರ್ಟ್‌, ಆನ್‌ಲೈನ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸತನಗಳಿಗೆ ಕಾರಣವಾಗಿರುವುದಲ್ಲದೇ, ಮಾರುಕಟ್ಟೆಯಲ್ಲಿ ಹೆಚ್ಚಿನ ಪಾಲನ್ನು ಹೊಂದಿದೆ. ಹೊಸ ಸ್ಮಾರ್ಟ್‌ಫೋನ್ ಲಾಂಚ್ ಮತ್ತು ಎಕ್ಸ್‌ಕ್ಲೂಸಿವ್‌ನಲ್ಲಿ ಹಿಡಿತವನ್ನು ಸಾಧಿಸಿರುವ ಫ್ಲಿಪ್‌ಕಾರ್ಟ್‌ ಇಂದು ಹೊಸದೊಂದು ಘೋಷಣೆಯನ್ನು ಮಾಡಿದೆ.

ಒಂದಾದ ಆಸುಸ್-ಫ್ಲಿಪ್‌ಕಾರ್ಟ್‌ ಜೋಡಿ: ಮಾರುಕಟ್ಟೆಯಲ್ಲಿ ಹೊಸ ಸಂಚಲನ..!

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಸಂಬಂಧಿಸಿದಂತೆ ಎರಡು ಘೋಷಣೆಗಳನ್ನು ಮಾಡುವುದಾಗಿ ತಿಳಿಸಿದ್ದ ಫ್ಲಿಪ್‌ಕಾರ್ಟ್‌, ಇಂದು ನಡೆದ ಕಾರ್ಯಕ್ರಮವೊಂದಲ್ಲಿ ಎರಡು ವಿಷಯಗಳನ್ನು ಬಿಚ್ಚಿಟ್ಟಿದೆ. ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಥೈವಾನ್ ಮೂಲದ ಅಸುಸ್ ನೊಂದಿಗೆ ದೀರ್ಘಕಾಲಿಕ ಒಪ್ಪಂದವನ್ನು ಮಾಡಿಕೊಂಡಿದೆ. ಇನ್ನು ಮುಂದೆ ಫ್ಲಿಪ್‌ಕಾರ್ಟ್‌ ಅಸುಸ್ ಸ್ಮಾರ್ಟ್‌ಫೋನ್‌ಗಳ ಪ್ರೀಮಿಯಮ್ ಪಾಟ್ನರ್ ಆಗಲಿದೆ. ಅಲ್ಲದೇ ದೇಶದಲ್ಲಿ ಆಸುಸ್ ಸ್ಮಾರ್ಟ್‌ಫೋನ್‌ಗಳನ್ನು ಆನ್‌ಲೈನಿನಲ್ಲಿ ಮಾರಾಟ ಮಾಡಲಿದೆ.

ಓದಿರಿ: ಈಗಲೇ ಡೌನ್‌ಲೋಡ್ ಮಾಡಿ: ಪ್ರತಿ ತಿಂಗಳು ರೂ.750 ಕ್ಯಾಷ್ ಬ್ಯಾಕ್ ನೀಡುವ ಪೇಮೆಂಟ್ ಆಪ್..!

ಮತ್ತೊಂದು ಅಂಶವೆಂದರೆ ಆಸುಸ್ ಲಾಂಚ್ ಮಾಡಲು ಮುಂದಾಗಿರುವ ಜೆನ್‌ಫೋನ್ ಮ್ಯಾಕ್ಸ್ ಪ್ರೋ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಇದೆ ಏಪ್ರಿಲ್ 23ರಂದು ಫ್ಲಿಪ್‌ಕಾರ್ಟ್‌ ಮೂಲಕವೇ ಪರಿಚಯ ಮಾಡಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಮಧ್ಯಮ ಸರಣಿಯಲ್ಲಿ ಲಭ್ಯವಿರಲಿದ್ದು, ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನು ಮೂಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದಾದ ಆಸುಸ್-ಫ್ಲಿಪ್‌ಕಾರ್ಟ್‌ ಜೋಡಿ: ಮಾರುಕಟ್ಟೆಯಲ್ಲಿ ಹೊಸ ಸಂಚಲನ..!

ಭಾರತೀಯ ಮಾರುಕಟ್ಟೆಯಲ್ಲಿ ಈಗಾಗಲೇ ಹೆಚ್ಚಿನ ಬಳಕೆದಾರರನ್ನು ತಲುಪಿರುವ ಆಸುಸ್, ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯನ್ನು ಸೃಷ್ಠಿಸಿಕೊಳ್ಳುವ ಸಲುವಾಗಿ ಫ್ಲಿಪ್‌ಕಾರ್ಟ್‌ನೊಂದಿಗೆ ಕೈ ಜೋಡಿಸಿದೆ ಎನ್ನಲಾಗಿದೆ. ಇನ್ನು ಮುಂದೆ ಯಾವುದೇ ಆಸುಸ್ ಫೋನ್‌ಗಳನ್ನು ಕೊಳ್ಳಬೇಕಾದರೆ ಫ್ಲಿಪ್‌ಕಾರ್ಟಿನಿಂದಲೇ ಖರೀಸಬೇಕಾಗಲಿದೆ. ಇದು ಫ್ಲಿಪ್‌ಕಾರ್ಟ್‌ ಮತ್ತು ಅಸುಸ್ ಎರಡಕ್ಕೂ ಸಹಾಯವಾಗಲಿದೆ.

ಮೊಬೈಲ್‌ನಲ್ಲಿಯೇ 'PF' ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?

ಈಗಾಗಲೇ ಶಿಯೋಮಿ ಸೇರಿದಂತೆ ಹಲವು ಸ್ಮಾರ್ಟ್‌ಫೋನ್ ಕಂಪನಿಗಳೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುವ ಫ್ಲಿಪ್‌ಕಾರ್ಟ್, ಇದೇ ಮೊದಲ ಬಾರಿಗೆ ಪ್ರೈಮರಿ ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಸಲುವಾಗಿ ಆಸುಸ್ ನೊಂದಿಗೆ ಕೈ ಜೋಡಿಸಿದೆ ಎನ್ನಲಾಗಿದೆ.

English summary
Asus announces strategic partnership with Flipkart. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot