'ಆಂಡ್ರಾಯ್ಡ್‌ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್‌' ಸ್ಮಾರ್ಟ್‌ಫೋನ್‌ಗಳು.!!

|

ತೈವಾನ್ ಮೂಲದ ಜನಪ್ರಿಯ ಕಂಪನಿ ಆಸೂಸ್ ತನ್ನ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಕಷ್ಟು ಹೊಸತನದ ಬದಲಾವಣೆಗಳನ್ನು ಅಳವಡಿಸಿಕೊಂಡಿದ್ದು, ಇದೀಗ ಕಂಪನಿಯು ತನ್ನ ಎಲ್ಲ ಸ್ಮಾರ್ಟ್‌ಪೋನ್‌ಗಳಲ್ಲಿ ಹೊಸತನದ ಅಪ್‌ಡೇಟ್ 'ಆಂಡ್ರಾಯ್ಡ್‌ 9 ಪೈ' ಆಪರೇಟಿಂಗ್ ಸಿಸ್ಟಮ್ ಅನ್ನು ಒದಗಿಸಲು ಮುಂದಾಗಿದೆ. ಇದರಿಂದ ಇನ್ನು ಸ್ಮಾರ್ಟ್‌ಫೋನ್ ಬಳಕೆಯಲ್ಲಿ ಯಾವುದೇ ಅಡೆತಡೆಗಳು ಹೆಚ್ಚಾಗಿ ಕಂಡುಬರುವುದಿಲ್ಲ.

'ಆಂಡ್ರಾಯ್ಡ್‌ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್‌' ಸ್ಮಾರ್ಟ್‌ಫೋನ್‌ಗಳು.!!

ಆಸೂಸ್ ಸಂಸ್ಥೆಯ ಮುಂಬರಲಿರುವ ಎಲ್ಲ ಸ್ಮಾರ್ಟ್‌ಫೋನ್‌ಗಳು ಅಂಡ್ರಾಯ್ಡ್‌ 9 ಪೈ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿರಲಿದ್ದು, ಇದರೊಂದಿಗೆ ಹಳೆಯ ಸ್ಮಾರ್ಟ್‌ಫೋನ್‌ಗಳಿಗೂ ಅಪ್‌ಟೇಟ್‌ ಆಯ್ಕೆ ಒದಗಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ಓಎಸ್‌ನಲ್ಲಿ ಹೊಂದಿಕೊಳ್ಳಬಲ್ಲ ಬ್ಯಾಟರಿ, ಬೆಳಕಿನ ಪ್ರಖರತೆ, ಡಾರ್ಕ್‌ ಮೋಡ್‌ ಗಳಂತಹ ಸುಧಾರಿತ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

'ಆಂಡ್ರಾಯ್ಡ್‌ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್‌' ಸ್ಮಾರ್ಟ್‌ಫೋನ್‌ಗಳು.!!

ಈ ಓಎಸ್‌ ತನ್ನ ಕೃತಕ ಬುದ್ಧಿಮತ್ತೆಯಿಂದ ಸ್ಮಾರ್ಟ್‌ಫೋನ್‌ಗಳಲ್ಲಿ ವೇಗವಾಗವಾಗಿ ಕೆಲಸವನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ವರ್ಷದಲ್ಲಿ ಆಸೂಸ್ ಕಂಪನಿಯು 'ಆಂಡ್ರಾಯ್ಡ್‌ 9 ಪೈ' ಓಎಸ್‌ಗೆ ಅಪ್‌ಡೇಟ್‌ ಮಾಡಲಿರುವ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆ ಪಟ್ಟಿಯಲ್ಲಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂದು ನೋಡೋಣ ಬನ್ನಿರಿ.

'ಆಂಡ್ರಾಯ್ಡ್‌ 9 ಪೈ' OS ಗೆ ಬಡ್ತಿ ಪಡೆಯಲಿವೆ 'ಆಸೂಸ್‌' ಸ್ಮಾರ್ಟ್‌ಫೋನ್‌ಗಳು.!!

ಆಸೂಸ್‌ ಝೆನ್‌ಫೋನ್ 4 ಮ್ಯಾಕ್ಸ್ (ZC554KL)
ಆಸೂಸ್‌ ಝೆನ್‌ಫೋನ್ 4 ಸೆಲ್ಫಿ (ZD553KL)
ಆಸೂಸ್‌ ಝೆನ್‌ಫೋನ್ 4 ಮ್ಯಾಕ್ಸ್ (ZC520KL)
ಆಸೂಸ್‌ ಝೆನ್‌ಫೋನ್ ಲೈವ್ (ZB553KL)
ಆಸೂಸ್‌ ಝೆನ್‌ಫೋನ್ 4 ಮ್ಯಾಕ್ಸ್ (ZB520KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಪ್ಲಸ್ (M1) (ZB570TL)
ಆಸೂಸ್‌ ಝೆನ್‌ಫೋನ್ 5Q (ZC600KL)
ಆಸೂಸ್‌ ಝೆನ್‌ಫೋನ್ ಲೈವ್ (ಎಲ್ 1) (ZA550KZ / ZA551KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಪ್ರೋ (ZB602KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಪ್ರೋ (ZB601KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ (M1) (ZB555KL / ZB556KL)
ಆಸೂಸ್‌ ಝೆನ್‌ಫೋನ್ 5 (ZE620KL)
ಆಸೂಸ್‌ ಝೆನ್‌ಫೋನ್ 5Z (ZS620KL)
ಆಸೂಸ್‌ ROG ಫೋನ್ (ZS600KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಪ್ರೊ (ಎಂ 2) (ZB631KL / ZB630KL)
ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ (M2) (ZB633KL / ZB632KL)

Best Mobiles in India

English summary
Asus has revealed the names of its ZenFone smartphones that will be getting the Android 9 Pie update over the coming months.to know morevisit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X