ಒನ್ ಪ್ಲಸ್ 6 ಗೆ ಸಂಕಟ ಶುರು: ಬಂದಿದೆ ಆಸುಸ್ ಜೆನ್ ಫೋನ್ 5z...!

|

ಭಾರತೀಯ ಮಾರುಕಟ್ಟೆಗೆ ಹೊಸದೊಂದು ಫಾಗ್ ಶಿಪ್ ಸ್ಮಾರ್ಟ್ ಫೋನ್ ಅನ್ನು ಲಾಂಚ್ ಮಾಡುವುದಾಗಿ ತಿಳಿಸಿದ್ದ ಖ್ಯಾತ ಇ ಕಾಮರ್ಸ್ ಸಂಸ್ಥೆ ಫ್ಲಿಪ್ ಕಾರ್ಟ್, ತೈವಾನ್ ಮೂಲದ ಸ್ಮಾರ್ಟ್ ಫೋನ್ ತಯಾಕರ ಕಂಪನಿ ಆಸುಸ್ ನಿರ್ಮಿಸಿರುವ ಆಸುಸ್ ಜೆನ್ ಫೋನ್ 5z ಅನ್ನು ಲಾಂಚ್ ಮಾಡಿದ್ದು, ಜುಲೈ 4 ರಿಂದ ಈ ಸ್ಮಾರ್ಟ್ ಫೋನ್ ಮಾರಾಟವನ್ನು ಆರಂಭಿಸಲಿದೆ. ಈಗಾಗಲೇ ಹಲವು ಸ್ಮಾರ್ಟ್ ಫೋನ್ ಗಳು ಹೊಸದಾಗಿ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವ ಸಂದರ್ಭದಲ್ಲಿ ಆಸುಸ್ ಜೆನ್ ಫೋನ್ 5z ಆಗಮನ ಭಾರೀ ಕುತೂಹಲವನ್ನು ಕೆರಳಿಸಿದೆ.

ಒನ್ ಪ್ಲಸ್ 6 ಗೆ ಸಂಕಟ ಶುರು: ಬಂದಿದೆ ಆಸುಸ್ ಜೆನ್ ಫೋನ್ 5z...!

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನ್ ಟಾಪ್ ಎಂಡ್ ಸ್ಮಾರ್ಟ್ ಫೋನ್ ಆಗಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಸಿಗುತ್ತಿರುವ ಶಿಯೋಮಿ, ಹಾನರ್, ಒನ್ ಪ್ಲಸ್ ಸ್ಮಾರ್ಟ್ ಫೊನ್ ಗಳಿಗೆ ಸೆಡ್ಡು ಹೊಡೆಯಲಿದೆ ಎನ್ನಲಾಗಿದೆ. ಅದರಲ್ಲಿಯೂ ಒನ್ ಪ್ಲಸ್ 6 ಸ್ಮಾರ್ಟ್ ಫೋನ್ ಗೆ ಸಮೀಪದ ಪ್ರತಿ ಸ್ಪರ್ಧಿ ಯಾಗಿದ್ದು, ಬೆಲೆ ಸೇರಿದಂತೆ ಎಲ್ಲಾ ವಿಭಾಗದಲ್ಲಿಯೂ ಸದ್ದು ಮಾಡಲಿದೆ.

ಆಸುಸ್ ಜೆನ್ ಫೋನ್ 5z ಡಿಸ್ ಪ್ಲೇ

ಆಸುಸ್ ಜೆನ್ ಫೋನ್ 5z ಡಿಸ್ ಪ್ಲೇ

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ 6.2 ಇಂಚಿನ ಡಿಸ್ ಪ್ಲೇಯನ್ನು ಹೊಂದಿದ್ದು, FHD+ ಗುಣಮಟ್ಟವನ್ನು ಹೊಂದಿದೆ. ಐಫೋನ್ X ಮಾದರಿಯಲ್ಲಿ ನೋಚ್ ಡಿಸ್ ಪ್ಲೇ ವಿನ್ಯಾಸವನ್ನು ಈ ಸ್ಮಾರ್ಟ್ ಫೋನಿನಲ್ಲಿ ಕಾಣಬಹುದಾಗಿದೆ. ಉತ್ತಮವಾದ ಪಿಚ್ಚರ್ ಕ್ವಾಲಿಟಿಯನ್ನು ಹೊಂದಿದ್ದು, ವಿಡಿಯೋ ನೋಡುವ ಮತ್ತು ಗೇಮ್ ಆಡುವ ಅನುಭವವು ಉತ್ತಮವಾಗಿದೆ.

ಆಸುಸ್ ಜೆನ್ ಫೋನ್ 5z ಪ್ರೋಸೆಸರ್:

ಆಸುಸ್ ಜೆನ್ ಫೋನ್ 5z ಪ್ರೋಸೆಸರ್:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ ಅತೀ ವೇಗದ ಪ್ರೋಸೆಸರ್ ಆಗಿರುವ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 845 ಅನ್ನು ಅಳವಡಿಲಾಗಿದ್ದು, ಇದರೊಂದಿಗೆ 8 GB RAM ಅನ್ನು ಸಹ ನೀಡಲಾಗಿದೆ. ಇದಲ್ಲದೇ 256 GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ. ಈ ಹಿನ್ನಲೆಯಲ್ಲಿ ಎಲ್ಲಾ ವಿಭಾಗದಲ್ಲಿಯೂ ಈ ಸ್ಮಾರ್ಟ್ ಫೋನ್ ಟಾಪ್ ಎಂಡ್ ಆಗಿದೆ.

ಡ್ಯುಯಲ್ ಕ್ಯಾಮೆರಾ:

ಡ್ಯುಯಲ್ ಕ್ಯಾಮೆರಾ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಳವಡಿಸಲಾಗಿದ್ದು, 12 MP + 8 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಇದರಲ್ಲಿ ಉತ್ತಮವಾದ ಚಿತ್ರಗಳನ್ನು ಸೆರೆಹಿಡಿಯಲು ಹಲವು ಆಯ್ಕೆಯನ್ನು ನೀಡಲಾಗಿದೆ. ಇದ್ಲದೇ ಮುಂಭಾಗದಲ್ಲಿ 8 MP ಕ್ಯಾಮೆರಾವನ್ನು ಸೆಲ್ಫಿಗಾಗಿ ನೀಡಲಾಗಿದ್ದು, ಉತ್ತಮವಾದ ಸೆಲ್ಫಿಗಳನ್ನು ಸೆರೆಹಿಡಿಯಬಹುದಾಗಿದೆ.

ಬ್ಯಾಟರಿ:

ಬ್ಯಾಟರಿ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನಲ್ಲಿ 3300mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದಲ್ಲದೇ ಆಂಡ್ರಾಯ್ಡ್ ಒರಿಯೋದೊಂದಿಗೆ ಜನ್ UI ಅನ್ನು ಅಳವಡಲಾಗಿದ್ದು, ಇದು ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ. ಅಲ್ಲದೇ ಹೆಚ್ಚಿನ ಆಪ್ ಡೇಟ್ ಅನ್ನು ನೀಡಲಿದೆ.

WhatsApp users will now be able to hide received media from gallery - KANNADA GIZBOT
ಬೆಲೆ:

ಬೆಲೆ:

ಆಸುಸ್ ಜೆನ್ ಫೋನ್ 5z ಸ್ಮಾರ್ಟ್ ಫೋನಿನ ಬೆಲೆಯೂ ರೂ.38000ರ ಆಸುಪಾಸಿನಲ್ಲಿ ದೊರೆಯಲಿದೆ ಎನ್ನಲಾಗಿದೆ. ಈಗಾಗಲೇ ಹಲವು ಮಾರುಕಟ್ಟೆಯಲ್ಲಿ ಇದೇ ಬೆಲೆಗೆ ಮಾರಾಟವಾಗುತ್ತಿದೆ. ಅಲ್ಲದೇ ಈಗಾಗಲೇ ಸದ್ದು ಮಾಡುತ್ತಿರುವ ಒನ್ ಪ್ಲಸ್ 6 ಮತ್ತು ಹಾನರ್ 10ಗೆ ಸೆಡ್ಡು ಹೊಡೆಯುವ ಮಾದರಿಯಲ್ಲಿ ಬೆಲೆಯನ್ನು ನಿರ್ಧರಿಸಲಿದೆ ಎನ್ನಲಾಗಿದೆ.

Best Mobiles in India

English summary
Asus Zenfone 5z to launch in India on July 4 on Flipkart. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X