ಭಾರತದಲ್ಲಿ ಲಭ್ಯವಿರುವ ಪ್ರಮುಖ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳು; ಫೀಚರ್ಸ್‌ ಏನು?

|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಬಳಕೆ ಕೇವಲ ಕರೆ ಮಾಡುವುದಕ್ಕಲ್ಲದೇ ಬದಲಾಗಿ ಹಲವಾರು ರೀತಿಯಲ್ಲಿ ಬಳಕೆಗೆ ಬರುತ್ತದೆ. ಅದರಲ್ಲೂ ಹೆಚ್ಚಾಗಿ ಯುವ ಪೀಳಿಗೆ ಗೇಮಿಂಗ್‌ ಆಡಲೆಂದೇ ಮೊಬೈಲ್‌ ಖರೀದಿಗೆ ಮುಂದಾಗುತ್ತಾರೆ. ಸದ್ಯ ಮಾರುಕಟ್ಟೆಯಲ್ಲಿ ಹಲವು ಗೇಮಿಂಗ್‌ ಫೋನ್‌ಗಳ ಆಯ್ಕೆ ಲಭ್ಯ ಇದೆ.

ಸ್ಮಾರ್ಟ್‌ಫೋನ್‌

ಹೌದು, ಮೊಬೈಲ್‌ ಮಾರುಕಟ್ಟೆಯಲ್ಲಿ ಗೇಮಿಂಗ್ ಸ್ಮಾರ್ಟ್‌ಫೋನ್‌ಗಳಿಗೆ ಉತ್ತಮ ಬೇಡಿಕೆ ಇದೆ. ಇದೇ ಕಾರಣಕ್ಕೆ ಹಲವು ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳು ಹಲವು ಗೇಮಿಂಗ್‌ ಫೋನ್‌ಗಳನ್ನು ಪರಿಚಯಿಸಿವೆ. ಫೋನ್‌ಗಳು ಗೇಮಿಂಗ್‌ಗೆ ಪೂರಕವಾದ ಪೀಚರ್ಸ್ಗಳನ್ನು ಒಳಗೊಂಡಿವೆ. ಹಾಗಾದರೆ ನೀವು ಖರೀದಿಸಬಹುದಾದ ಅತ್ಯುತ್ತಮ ಗೇಮಿಂಗ್‌ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ ಓದಿರಿ.

ಮೋಟೊರೊಲಾ

ಆಪಲ್, ಸ್ಯಾಮ್‌ಸಂಗ್, ಮೋಟೊರೊಲಾ ಸೇರಿದಂತೆ ಇತರೆ ಫೋನ್‌ಗಳು ಹೆಚ್ಚು ಬೇಡಿಕೆಯಲ್ಲಿ ಇವೆ. ಇವುಗಳ ಜೊತೆಗೆ ಗೇಮಿಂಗ್‌ ಫೋನ್‌ಗಳು ಹೆಚ್ಚು ಆಕರ್ಷಕ ಆಗಿವೆ. ಆಸುಸ್ ROG, ರೆಡ್‌ ಮ್ಯಾಜಿಕ್‌ ಮತ್ತು ಬ್ಲಾಕ್‌ ಶಾರ್ಕ್‌ನಂತಹ ಕೆಲವು ಫೋನ್‌ಗಳು ಗೇಮಿಂಗ್‌ ಗಾಗಿಯೇ ರೂಪಿತವಾಗಿವೆ. ಈ ಫೋನ್‌ಗಳು ಹೆಚ್ಚಿನ ವೇಗದೊಂದಿಗೆ ಗೇಮ್‌ ಪ್ರಿಯರನ್ನು ಆಕರ್ಷಿಸಿವೆ. ನೀವೇನಾದರೂ ಗೇಮಿಂಗ್‌ ಫೋನ್‌ ಖರೀದಿಸುವುದಿದ್ದರೆ ಈ ಲೇಖನದಲ್ಲಿ ನೀಡಿರುವ ಕೆಲವು ಗೇಮಿಂಗ್‌ ಫೋನ್‌ಗಳು ಸಹಾಯಕವಾಗಬಹುದು.

ರೆಡ್ ಮ್ಯಾಜಿಕ್ 7

ರೆಡ್ ಮ್ಯಾಜಿಕ್ 7

ಈ ಸ್ಮಾರ್ಟ್‌ಫೋನ್‌ 6.8 ಇಂಚು ಡಿಸ್ಪ್ಲೆ ಹೊಂದಿದ್ದು, 165Hz ರೀಫ್ರೇಶ್ ರೇಟ್‌ ಜೊತೆ OLED ಡಿಸ್ಪ್ಲೇ ಹೊಂದಿದೆ. ಈ ಫೋನ್‌ ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 8 Gen 1 ರಲ್ಲಿ ಕಾರ್ಯನಿರ್ವಹಿಸಲಿದ್ದು, ಇದು 12/16/18GB RAM ಮತ್ತು 128/256GB ಆಂತರಿಕ ಸಂಗ್ರಹಣೆ ಸಾಮರ್ಥ್ಯದಲ್ಲಿ ಲಭ್ಯ. ಇದರೊಂದಿಗೆ 4500mAh ಬ್ಯಾಟರಿ ಸಾಮರ್ಥ್ಯವನ್ನು ಒಳಗೊಂಡಿದೆ. ಸೈಡ್-ಮೌಂಟೆಡ್ ಟಚ್ ಬೇಸ್ಡ್ ಶೋಲ್ಡರ್ ಟ್ರಿಗ್ಗರ್‌ಗಳು, ಹ್ಯಾಪ್ಟಿಕ್ ಫೀಡ್‌ಬ್ಯಾಕ್ ನಂತಹ ಆಯ್ಕೆಗಳನ್ನು ಇದು ಒಳಗೊಂಡಿದೆ. ಇದು ಟ್ರಿಪಲ್ ಕ್ಯಾಮೆರಾ ಒಳಗೊಂಡಿದ್ದು,64 ಮೆಗಾಪಿಕ್ಸೆಲ್ ಇದೆ. 8 ಎಂಪಿಯ ಸೆಲ್ಪಿ ಕ್ಯಾಮೆರಾ ಇದೆ.

ಬ್ಲ್ಯಾಕ್ ಶಾರ್ಕ್ 5 ಪ್ರೊ

ಬ್ಲ್ಯಾಕ್ ಶಾರ್ಕ್ 5 ಪ್ರೊ

ಈ ಸ್ಮಾರ್ಟ್‌ ಫೋನ್‌ ಬಲವಾದ ಗೇಮಿಂಗ್ ಕಾರ್ಯಕ್ಷಮತೆ ಹೊಂದಿದೆ. 6.67 ಇಂಚಿನ ಡಿಸ್ಪ್ಲೆ ಹೊಂದಿದ್ದು, 144Hz ರೀಫ್ರೇಶ್ ರೇಟ್‌ ಹಾಗೂ ಉತ್ತಮ ಪ್ರಮುಖ ಕ್ಯಾಮೆರಾ ಹೊಂದಿದೆ. ಚಿಪ್‌ಸೆಟ್ ಕ್ವಾಲ್ಕಾಮ್ SM8450 ಸ್ನಾಪ್ಡ್ರಾಗನ್ 8 Gen 1 ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್ ರಲ್ಲಿ ಇದು ಕಾರ್ಯನಿರ್ವಹಿಸಲಿದೆ. ಅದರಂತೆ 128GB ಆಂತರಿಕ ಸ್ಟೋರೇಜ್‌ನ 8GB RAM, 256GB ಆಂತರಿಕ ಸ್ಟೋರೇಜ್‌ನ 8GB RAM, 256GB ಆಂತರಿಕ ಸ್ಟೋರೇಜ್‌ನ 12GB RAM, 512GB ಆಂತರಿಕ ಸ್ಟೋರೇಜ್‌ನ 16GB RAMನಲ್ಲಿ ಈ ಮೊಬೈಲ್‌ ಲಭ್ಯ. 4650 mAh ಬ್ಯಾಟರಿ ಇದ್ದು, 120W ವೇಗದ ಚಾರ್ಜಿಂಗ್ ಸೌಲಭ್ಯ ಇದೆ. ಈ ಸ್ಮಾರ್ಟ್‌ ಫೋನ್‌ 108 ಮೆಗಾಪಿಕ್ಸೆಲ್‌ನ ಟ್ರಿಪಲ್ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

Asus ROG ಫೋನ್ 6 ಪ್ರೊ

Asus ROG ಫೋನ್ 6 ಪ್ರೊ

ಈ ಸ್ಮಾರ್ಟ್‌ ಫೋನ್‌ 6.78 ಇಂಚು ಡಿಸ್ಪ್ಲೆ ಹೊಂದಿದ್ದು, 165Hz ರೀಫ್ರೇಶ್ ರೇಟ್‌ ಹೊಂದಿದೆ. ಚಿಪ್‌ಸೆಟ್‌ ಕ್ವಾಲ್ಕಾಮ್ SM8475 ಸ್ನಾಪ್‌ಡ್ರಾಗನ್‌ 8+ Gen 1 ಹೊಂದಿದ್ದು, ಇದು ಸಹ ಗೇಮ್‌ ಆಡಲು ಉಪಯುಕ್ತವಾಗಿದೆ. ಆಂಡ್ರಾಯ್ಡ್ 12 ಓಎಸ್ ರಲ್ಲಿ ಇದು ಕಾರ್ಯನಿರ್ವಹಿಲಿದೆ. ಅದರಂತೆ 512GB ಆಂತರಿಕ ಸ್ಟೋರೇಜ್‌ನ 18GB RAM ನಲ್ಲಿ ಈ ಮೊಬೈಲ್‌ ಲಭ್ಯ. 6000 mAh ಬ್ಯಾಟರಿ ಬಲ ಇದ್ದು, 65W ವೇಗದ ಚಾರ್ಜಿಂಗ್ ವ್ಯವಸ್ಥೆ ಇದೆ. ಈ ಸ್ಮಾರ್ಟ್‌ ಫೋನ್‌ 50 ಮೆಗಾಪಿಕ್ಸೆಲ್‌ನ ಟ್ರಿಪಲ್ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

ಪೊಕೊ F4 GT

ಪೊಕೊ F4 GT

ಈ ಸ್ಮಾರ್ಟ್‌ಫೋನಿನ ವಿಶೇಷತೆ ಎಂದರೆ ವೇಗದ ಚಾರ್ಜಿಗ್‌ ವ್ಯವಸ್ಥೆ. ಇದು 6.7 ಇಂಚಿನ ಡಿಸ್‌ಪ್ಲೆ ಹೊಂದಿದ್ದು, 120Hz ರೀಫ್ರೇಶ್ ರೇಟ್‌ ಹೊಂದಿದೆ ಹಾಗೂ ಸ್ನ್ಯಾಪ್ಡ್ರಾಗನ್ 8 ಜೆನ್ 1 ಚಿಪ್ಸೆಟ್ ಹಾಗೂ ಆಂಡ್ರಾಯ್ಡ್ 12 ಓಎಸ್ ರಲ್ಲಿ ಇದು ಕಾರ್ಯನಿರ್ವಹಿಲಿದೆ. ಸ್ಟೋರೆಜ್‌ ವಿಷಯಕ್ಕೆ ಬಂದರೆ 12GB RAM ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್‌ ವ್ಯವಸ್ಥೆ ಈ ಸ್ಮಾರ್ಟ್‌ಫೋನ್‌ನಲ್ಲಿದೆ. 4700mAh ಬ್ಯಾಟರಿ ಶಕ್ತಿ ಈ ಫೋನ್‌ನಲ್ಲಿದೆ. ಕ್ಯಾಮೆರಾ ಕಡೆ ಕಣ್ಣಾಯಿಸುವುದಾದರೆ 64 ಮೆಗಾಪಿಕ್ಸೆಲ್‌ನ ಪ್ರಮುಖ ಕ್ಯಾಮೆರಾದ ಜೊತೆ ಟ್ರಿಪಲ್ ಕ್ಯಾಮೆರಾ ಹಾಗೂ 20 ಮೆಗಾಪಿಕ್ಸೆಲ್‌ನ ಸೆಲ್ಫಿ ಕ್ಯಾಮೆರಾ ಹೊಂದಿದೆ.

ರೆಡ್ ಮ್ಯಾಜಿಕ್ 7S ಪ್ರೊ

ರೆಡ್ ಮ್ಯಾಜಿಕ್ 7S ಪ್ರೊ

ಈ ಮೊಬೈಲ್‌ನ ಪ್ರಮುಖ ವಿಶೇಷತೆ ಎಂದರೆ 960Hz ಟಚ್ ಮಾದರಿ ದರ ಹಾಗೂ ಪ್ರಭಾವಶಾಲಿ ಬ್ಯಾಟರಿ. ಈ ಫೋನ್‌ 6.8 ಇಂಚಿನ ಡಿಸ್‌ಪ್ಲೆ ಹೊಂದಿದೆ ಹಾಗೆ 520Hz ರೀಫ್ರೇಶ್ ರೇಟ್‌ ಹೊಂದಿದೆ ಮತ್ತು ಸ್ನ್ಯಾಪ್ಡ್ರಾಗನ್ 8 ಜೆನ್ 1 ಚಿಪ್ಸೆಟ್ ಹಾಗೂ ಆಂಡ್ರಾಯ್ಡ್ 12 ಓಎಸ್ ರಲ್ಲಿ ಕಾರ್ಯನಿರ್ವಹಿಸಲಿದೆ. ಇದು ಸೆಕೆಂಡಿಗೆ 960 ಬಾರಿ ಸ್ಪರ್ಶವನ್ನು ಪತ್ತೆ ಮಾಡುತ್ತದೆ. ಸ್ಟೋರೇಜ್‌ ವಿಷಯಕ್ಕೆ ಬಂದರೆ ಇದರಲ್ಲಿ 256GB ಆಂತರಿಕ ಸ್ಟೋರೇಜ್‌ ಜೊತೆಗೆ 12GB RAM, 512GB ಆಂತರಿಕ ಸ್ಟೋರೇಜ್‌ ಜೊತೆಗೆ 16GB RAM, 512GB ಆಂತರಿಕ ಸ್ಟೋರೇಜ್‌ ಜೊತೆಗೆ 18GB RAM, 1TB ಆಂತರಿಕ ಸ್ಟೋರೇಜ್‌ ಜೊತೆಗೆ 18GB RAM ನಲ್ಲಿ ಈ ಮೊಬೈಲ್‌ ಲಭ್ಯ. 64 ಮೆಗಾಪಿಕ್ಸೆಲ್‌ನ ಮುಖ್ಯ ಕ್ಯಾಮೆರಾ ಹಾಗೂ 16 ಮೆಗಾಪಿಕ್ಸೆಲ್‌ನ ಸೆಲ್ಪಿ ಕ್ಯಾಮರಾ ಇದರಲ್ಲಿದೆ.

Best Mobiles in India

English summary
here are the best gaming mobiles in india withmobiles all specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X