Subscribe to Gizbot

ಭಾರತೀಯ ಬಳಕೆದಾರರು ಮೆಚ್ಚಿಕೊಂಡಿರುವ ಟಾಪ್ ಫೋನ್ಸ್

Written By:

ನಾವು ಖರೀದಿಸುವ ಯಾವುದೇ ಉತ್ಪನ್ನವಾಗಿರಲಿ ಅದು ಉತ್ತಮ ಗುಣಮಟ್ಟದ್ದಾಗಿರಬೇಕು. ಬೆಲೆಗೆ ತಕ್ಕಂತೆ ಇರಬೇಕು ಎಂದೇ ಬಯಸುತ್ತೇವೆ. ಇಲೆಕ್ಟ್ರಾನಿಕ್ ಉಪಕರಣಗಳ ವಿಷಯಕ್ಕೆ ಬಂದಾಗ ಇನ್ನಷ್ಟು ಕಾಳಜಿಯನ್ನು ನಾವು ವಹಿಸಬೇಕಾಗುತ್ತದೆ. ನೀವು ಖರೀದಿಸುತ್ತಿರುವುದು ಫೋನೇ ಆಗಿದ್ದರೂ ಅದರ ಬ್ರ್ಯಾಂಡ್, ಬೆಲೆ, ಫೋನ್‌ನಲ್ಲಿರುವ ವಿಶೇಷತೆಗಳು, ಫೋನ್‌ನಿಂದ ನಮಗೆ ದೊರೆಯುವ ಸೌಲಭ್ಯಗಳು ಹೀಗೆ ಎಲ್ಲದಕ್ಕೂ ಗಮನವನ್ನು ನೀಡಬೇಕು.

ಓದಿರಿ: ಸ್ಮಾರ್ಟ್‌ಫೋನ್ ಚಟಕ್ಕೆ ಬಲಿಯಾಗುವ ಮುನ್ನ ಎಚ್ಚೆತ್ತುಕೊಳ್ಳಿ!

ಇಂದಿನ ಲೇಖನದಲ್ಲಿ ನಿಮಗೆ ಅತ್ಯುತ್ತಮ ಎಂದೆನಿಸಿರುವ ಟಾಪ್ ಫೋನ್‌ಗಳ ಮಾಹಿತಿಗಳನ್ನು ನೀಡುತ್ತಿದ್ದು ವಿಶ್ವದಲ್ಲೇ 'ಬೆಸ್ಟ್' ಎಂಬ ಹೆಗ್ಗಳಿಕೆಗೆ ಇವುಗಳು ಕಾರಣವಾಗಿವೆ. ಬನ್ನಿ ಆ ಫೋನ್‌ಗಳು ಯಾವುವು ಎಂಬುದನ್ನು ನೋಡೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7

ಪ್ರಮುಖ ವಿಶೇಷತೆಗಳು:
5.1 ಇಂಚಿನ ಡಿಸ್‌ಪ್ಲೇಯನ್ನು ಇದು ಪಡೆದುಕೊಂಡಿದ್ದು, ಇದರ ಬ್ಯಾಟರಿ ಅತ್ಯುತ್ತಮವಾಗಿದೆ. ಕ್ಯಾಮೆರಾದಲ್ಲಿ F1.7 ಲೆನ್ಸ್ ಅನ್ನು ಪಡೆದುಕೊಂಡಿದ್ದು, ಕಡಿಮೆ ಲೈಟ್‌ನಲ್ಲೂ ಇದು ಪರಿಣಾಮಕಾರಿ ಎಂದೆನಿಸಲಿದೆ. ಟಚ್ ವಿಜ್ ಸಾಫ್ಟ್‌ವೇರ್ ಅನ್ನು ಇದು ಪಡೆದಿದ್ದು ಬೆಲೆ ರೂ 48,000 ಆಗಿದೆ.

ಆಪಲ್ ಐಫೋನ್ ಎಸ್6

ಆಪಲ್ ಐಫೋನ್ ಎಸ್6

ಪ್ರಮುಖ ವಿಶೇಷತೆಗಳು
ಐಫೋನ್ 6 ನಂತಿರುವ ಐಫೋನ್ 6ಎಸ್ ನಿಜಕ್ಕೂ ಅತ್ಯುತ್ತಮ ಫೋನ್ ಎಂದೆನಿಸಿದೆ. ಫಾಸ್ಟ್ ಪ್ರೊಸೆಸರ್ ಅನ್ನು ಇದು ಪಡೆದುಕೊಂಡಿದ್ದು ಫ್ಲಾಲೆಸ್ ಸ್ಕ್ರೀನ್ ಇದರಲ್ಲಿದೆ. ಕಡಿಮೆ ರೆಸಲ್ಯೂಶನ್ ಮಾತ್ರವಲ್ಲದೆ 12 ಎಮ್‌ಪಿ ಕ್ಯಾಮೆರಾವನ್ನು ಇದು ಒಳಗೊಂಡಿದೆ. ಇದು ಉತ್ತಮ ಸಾಫ್ಟ್‌ವೇರ್ ಅನ್ನು ಹೊಂದಿದೆ. ಡಿವೈಸ್‌ನ 64 ಜಿಬಿ 59,000 ಕ್ಕೆ ಲಭ್ಯವಿದೆ.

ಎಚ್‌ಟಿಸಿ 10

ಎಚ್‌ಟಿಸಿ 10

ಪ್ರಮುಖ ವಿಶೇಷತೆಗಳು
ತೈವಾನ್‌ನ ಕಂಪೆನಿ, ಆಂಡ್ರಾಯ್ಡ್ ಫೋನ್‌ಗಳನ್ನು ತಯಾರಿಸುವುದರಲ್ಲಿ ನಿಪುಣ ಎಂದೆನಿಸಿದ್ದು ನೋಟದಲ್ಲೂ ಅತ್ಯಪೂರ್ಣ ಎಂದೆನಿಸಿದೆ. ಹಾರ್ಡ್‌ವೇರ್ ವಿಷಯಕ್ಕೆ ಬಂದಾಗ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 820 ಪ್ರೊಸೆಸರ್ ಮತ್ತು 32 ಜಿಬಿ ಸಂಗ್ರಹಣೆಯನ್ನು ಪಡೆದಿದೆ. ಬೆಲೆ ರೂ 46,000 ಆಗಿದೆ.

 ಹುವಾವೆ ನೆಕ್ಸಸ್ 6ಪಿ

ಹುವಾವೆ ನೆಕ್ಸಸ್ 6ಪಿ

ಪ್ರಮುಖ ವಿಶೇಷತೆಗಳು
ಗೂಗಲ್ ಅಧಿಕೃತವಾಗಿ ಬೆಂಬಲವನ್ನೀಯುತ್ತಿರುವ ಡಿವೈಸ್ ಆಗಿದೆ ನೆಕ್ಸಸ್ 6 ಪಿ. ದೊಡ್ಡ ಸ್ಕ್ರೀನ್‌ಗಳನ್ನು ಪಡೆದುಕೊಂಡಿದೆ. 5.7 ಇಂಚಿನ ಸ್ಕ್ರೀನ್ ಅನ್ನು ಇದು ಹೊಂದಿದ್ದು ಸ್ಲಿಕ್ ಮೆಟಲ್ ಬಾಡಿಯನ್ನು ಪಡೆದುಕೊಂಡಿದೆ. ಫೋನ್‌ನ ಕ್ಯಾಮೆರಾ ಅತ್ಯಾಕರ್ಷಕವಾಗಿದ್ದು, 3 ಜಿಬಿ RAM ಮತ್ತು 32 ಜಿಬಿ ಸಂಗ್ರಹಣೆಯನ್ನು ಹೊಂದಿದೆ.

ಮೋಟೋ ಎಕ್ಸ್ ಫೋರ್ಸ್

ಮೋಟೋ ಎಕ್ಸ್ ಫೋರ್ಸ್

ಪ್ರಮುಖ ವಿಶೇಷತೆಗಳು
ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್, 4 ಜಿಬಿ RAM, 21 ಮೆಗಾಪಿಕ್ಸೆಲ್ ಕ್ಯಾಮೆರಾ ಹಾಗೂ 64 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಮೋಟೋ ಎಕ್ಸ್ ಫೋರ್ಸ್ ಶಾಟರ್ ಪ್ರೂಫ್ ಸ್ಕ್ರೀನ್ ಅನ್ನು ಪಡೆದುಕೊಂಡಿದ್ದು ನಿಮಗೆ ಇದನ್ನು ಬ್ರೇಕ್ ಮಾಡಲಾಗುವುದಿಲ್ಲ. ಬೆಲೆ ರೂ 36,000 ಆಗಿದೆ.

ಒನ್ ಪ್ಲಸ್ 3

ಒನ್ ಪ್ಲಸ್ 3

ಪ್ರಮುಖ ವಿಶೇಷತೆಗಳು
30,000 ಕ್ಕಿಂತ ಕಡಿಮೆ ಬೆಲೆಯಲ್ಲಿ ಈ ಡಿವೈಸ್ ಬರುತ್ತಿದ್ದು ನೀವು ಹೆಚ್ಚು ದರದ ಫೋನ್ ಮೇಲೆ ವೆಚ್ಚ ಮಾಡುತ್ತಿಲ್ಲ ಎಂದಾದಲ್ಲಿ ಈ ಫೋನ್ ಅತ್ಯುತ್ತಮ ಎಂದೆನಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we come out an idea of good phones which have superb phone features and affordable price also.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot