ಸದ್ಯದಲ್ಲೇ ಬಿಡುಗಡೆ ಆಗಲಿವೆ ಈ ಟಾಪ್‌ ಸ್ಮಾರ್ಟ್‌ಫೋನ್‌ಗಳು!

|

ಪ್ರಸ್ತುತ ಸ್ಮಾರ್ಟ್‌ಫೋನ್‌ ಪ್ರತಿಯೊಬ್ಬರ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ದಿಸೆಯಲ್ಲಿ ದೇಶಿಯ ಮಾರುಕಟ್ಟೆಯಲ್ಲಿಯು ಸಹ ಸ್ಮಾರ್ಟ್‌ಫೋನ್ ಡಿಮ್ಯಾಂಡ್ ಸಹ ಇಮ್ಮಡಿಯಾಗುತ್ತಿದೆ. ಇತ್ತೀಚಿಗಷ್ಟೆ ಸಾಕಷ್ಟು ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ಕೊಟ್ಟಿದ್ದು, ಅವುಗಳಲ್ಲಿ ಕೆಲವು ಅತ್ಯುತ್ತಮ ಫೀಚರ್ಸ್‌ಗಳಿಂದ ಗ್ರಾಹಕರ ಗಮನ ಸೆಳೆದಿವೆ. ಅದೇ ರೀತಿ ಅತೀ ಶೀಘ್ರದಲ್ಲೇ ಮಾರುಕಟ್ಟೆಗೆ ಮತ್ತಷ್ಟು ಪವರ್‌ಫುಲ್‌ ಸ್ಮಾರ್ಟ್‌ಫೋನ್‌ಗಳು ಲಗ್ಗೆ ಇಡಲಿವೆ.

ಭಾರತೀಯ ಮಾರುಕಟ್ಟೆ

ಹೌದು, ಭಾರತೀಯ ಮಾರುಕಟ್ಟೆಗೆ ಸದ್ಯದಲ್ಲಿಯೇ ಸ್ಯಾಮ್‌ಸಂಗ್, ಶಿಯೋಮಿ, ರೆಡ್ಮಿ, ರಿಯಲ್‌ ಮಿ, ಸಂಸ್ಥೆಗಳ ಹಲವು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ. ಇವುಗಳಲ್ಲಿ ಬಹುತೇಕ ಎಲ್ಲವು ಮೀಡ್‌ರೇಂಜ್ ಮಾದರಿಯ ಸ್ಮಾರ್ಟ್‌ಫೋನ್‌ಗಳಾಗಿರಲಿದ್ದು, ಸದ್ಯ ಟ್ರೆಂಡಿಂಗ್‌ನಲ್ಲಿರುವ ತ್ರಿವಳಿ/ಕ್ವಾಡ್‌ ಕ್ಯಾಮೆರಾ ಆಯ್ಕೆ, ಪವರ್‌ಫುಲ್ ಪ್ರೊಸೆಸರ್, ಹೈ ಎಂಡ್ RAMನಂತಹ ಫೀಚರ್ಸ್‌ಗಳು ಇರಲಿವೆ ಎನ್ನುವ ಸೂಚನೆಗಳನ್ನು ಈಗಾಗಲೇ ಕೆಲವು ಲೀಕ್ ಮಾಹಿತಿಗಳು ತಿಳಿಯಪಡಿಸಿವೆ. ಹಾಗಾದರೇ ಸದ್ಯದಲ್ಲಿಯೇ ಮಾರುಕಟ್ಟೆಗೆ ಎಂಟ್ರಿ ಕೊಡಲಿರುವ ಟಾಪ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದರ ಮಾಹಿತಿ ತಿಳಿಯಲು ಮುಂದೆ ಓದಿರಿ.

ರೆಡ್ಮಿ ಕೆ30

ರೆಡ್ಮಿ ಕೆ30

ಶಿಯೋಮಿ ಕಂಪನಿಯ ಬಹುನಿರೀಕ್ಷಿತ ''ರೆಡ್ಮಿ ಕೆ30'' ಸ್ಮಾರ್ಟ್‌ಫೋನ್ ಈಗಾಗಲೇ ಗ್ರಾಹಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದೆ. ಈ ಫೋನ್ ಕ್ವಾಡ್‌ ಕ್ಯಾಮೆರಾ, 4500 mAh ಬ್ಯಾಟರಿ. 6GB RAM, ಸ್ಯಾಪ್‌ಡ್ರಾಗನ್ 765 ಪ್ರೊಸೆಸರ್‌ ನಂತಹ ಹೈ ಎಂಡ್‌ ಫೀಚರ್ಸ್‌ಗಳನ್ನು ಹೊಂದಿರಲಿದೆ. ಇನ್ನು ಈ ಫೋನ್ ಚೀನಾದಲ್ಲಿ 5G ಮತ್ತು ಭಾರತದಲ್ಲಿ 4G ವೇರಿಯಂಟ್ ಮಾದರಿಯಲ್ಲಿ ಲಗ್ಗೆ ಇಡಲಿದೆ. ಬೆಲೆ ಅಂದಾಜು 23-25 ಸಾವಿರ ಇರಲಿದೆ.

ಸ್ಯಾಮ್‌ಸಂಗ್ ಎಸ್‌11

ಸ್ಯಾಮ್‌ಸಂಗ್ ಎಸ್‌11

ಗ್ಯಾಲ್ಯಾಕ್ಸಿ ಎಸ್‌ 10 ಸರಣಿಯ ಯಶಸ್ಸಿನ ನಂತರ ಸ್ಯಾಮ್‌ಸಂಗ್‌ ಇದೀಗ ''ಗ್ಯಾಲ್ಯಾಕ್ಸಿ ಎಸ್‌11'' ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಸ್ಮಾರ್ಟ್‌ಫೋನಿನ ಮುಖ್ಯ ಹೈಲೈಟ್‌ ಅಂದ್ರೆ ಇದು 108ಎಂಪಿ ಸೆನ್ಸಾರ್ ಕ್ಯಾಮೆರಾ ಹೊಂದಿರಲಿದೆ. ಉಳಿದಂತೆ 5,000mAh ಬ್ಯಾಟರಿ ಲೈಫ್ ಜೊತೆ ಫಾಸ್ಟ್ ಚಾರ್ಜಿಂಗ್ ಬೆಂಬಲ ಈ ಫ್ಲ್ಯಾಗ್‌ಶಿಪ್‌ ಸ್ಮಾರ್ಟ್‌ಫೋನಿನ ಪ್ಲಸ್‌ ಪಾಯಿಂಟ್ ಆಗಿರಲಿದೆ.

ಮಿ ನೋಟ್ 10

ಮಿ ನೋಟ್ 10

ಬರಲಿರುವ ''ಮಿ ನೋಟ್ 10'' ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 108ಎಂಪಿ ಸೆನ್ಸಾರ್ ಪಡೆದಿರಲಿದೆ ಎನ್ನಲಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 8 GB RAM ಹಾಗೂ ಫಾಸ್ಟ್ ಚಾರ್ಜಿಂಗ ಸಪೋರ್ಟ್ ಜೊತೆಗೆ 5260mAh ಬ್ಯಾಟರಿ ಲೈಫ್ ಸೌಲಭ್ಯಗಳನ್ನು ಒಳಗೊಂಡಿರಲಿದೆ. ಈ ಫೋನ್ ಬೆಲೆ ಅಂದಾಜು 30-32 ಸಾವಿರ ಆಸುಪಾಸಿನಲ್ಲಿರಲಿದೆ.

ವಿವೋ ಎಕ್ಸ್ 30

ವಿವೋ ಎಕ್ಸ್ 30

ಚೀನಾ ಮೂಲದ ವಿವೋ ಸಹ ಸದ್ಯದಲ್ಲಿಯೇ ವಿವೋ ಎಕ್ಸ್‌ 30 ಹೆಸರಿನ ಟಾಪ್‌ ಸ್ಮಾರ್ಟ್‌ಫೋನ್‌ ಒಂದನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಈ ಫೋನ್ ಸ್ಯಾಮ್‌ಸಂಗ್ Exynos 980 ಪ್ರೊಸೆಸರ್ ಪಡೆದಿರಲಿದ್ದು, 60x ಸೂಪರ್ ಜೂಮ್ ಸೌಲಭ್ಯವನ್ನು ಪಡೆದಿರಲಿದೆ. ಹಾಗೆಯೇ 33w ಫಾಸ್ಟ್‌ ಚಾರ್ಜಿಂಗ್ ಅನುಕೂಲವನ್ನು ಹೊಂದಿರಲಿದೆ ಎಂದು ನಿರೀಕ್ಷಿಸಲಾಗಿದೆ. ವಿವೋ ಎಕ್ಸ್‌ 30 ಜೊತೆಗೆ ವಿವೋ ಎಕ್ಸ್‌ 30 ಪ್ರೊ ಸಹ ಲಾಂಚ್ ಆಗಲಿದೆ.

Most Read Articles
Best Mobiles in India

English summary
We collected all the most important upcoming smartphones In India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X