ಒನ್ ಪ್ಲಸ್ 6ಟಿ ಅಥವಾ ಒನ್ ಪ್ಲಸ್ 7 ಎರಡರಲ್ಲಿ ಯಾವುದು ಬೆಸ್ಟ್?

By Gizbot Bureau
|

ಒನ್ ಪ್ಲಸ್ 7 ಬಿಡುಗಡೆಗೊಳ್ಳುವುದಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಮೇಜಾನ್ ಇಂಡಿಯಾದಲ್ಲಿ ಇದೀಗ ಒನ್ ಪ್ಲಸ್ 6ಟಿಗೆ ಭರ್ಜರಿ ರಿಯಾಯಿತಿ ಬೆಲೆ ಇದೆ. ಹಾಗಾಗಿ ಒನ್ ಪ್ಲಸ್ 7 ಗಾಗಿ ಕಾಯಬೇಕೋ ಅಥವಾ ರಿಯಾಯಿತಿ ಬೆಲೆಯಲ್ಲಿ ಒನ್ ಪ್ಲಸ್ 6ಟಿಯನ್ನು ಖರೀದಿಸಿಬಿಡಬೇಕೊ ಎಂಬ ಗೊಂದಲ ಹೆಚ್ಚಿನ ಮೊಬೈಲ್ ಖರೀದಿದಾರರಿಗೆ ಕಾಡುತ್ತಿದೆ.

ಒನ್ ಪ್ಲಸ್ 6ಟಿ ಅಥವಾ ಒನ್ ಪ್ಲಸ್ 7 ಎರಡರಲ್ಲಿ ಯಾವುದು ಬೆಸ್ಟ್?

ಮೊದಲ ಬಾರಿಗೆ ಅಮೇಜಾನ್ ನಲ್ಲಿ ಈ ತಿಂಗಳು ರಿಯಾಯಿತಿಯಲ್ಲಿ ಒನ್ ಪ್ಲಸ್ 6ಟಿ ಲಭ್ಯವಿತ್ತು. ಇದೀಗ ಪುನಃ ಅಮೇಜಾನ್ ಸಮ್ಮರ್ ಸೇಲ್ ನಲ್ಲಿ ಡಿಸ್ಕೌಂಟ್ ಬೆಲೆ ಇದೆ. ಹಾಗಾಗಿಯೇ ಗೊಂದಲ ಸೃಷ್ಟಿಯಾಗಿದೆ. ಆದರೆ ನಿಮ್ಮ ಗೊಂದಲವನ್ನು ಪರಿಹರಿಸುವುದಕ್ಕೆ ಈ ಲೇಖನ ನಿಮ್ಮ ನೆರವಿಗೆ ಬರುತ್ತದೆ.

ಭಾರತದಲ್ಲಿ ಇದೀಗ ಒನ್ ಪ್ಲಸ್ 6ಟಿ 37,999 ರುಪಾಯಿ ಬೆಲೆಗೆ ಕಳೆದ ವರ್ಷದ ನವೆಂಬರ್ ನಲ್ಲಿ ಲಭ್ಯವಾಗಿತ್ತು.ಆದರೆ ಇದೀಗ ಇದಕ್ಕಿಂತಲೂ ಕಡಿಮೆ ಬೆಲೆಗೆ ಅಮೇಜಾನ್ ಸಮ್ಮರ್ ಸೇಲ್ ನಲ್ಲಿ ಲಭ್ಯವಾಗುತ್ತದೆ. ಹಾಗಾಗಿ ನಿಮ್ಮ ಗೊಂದಲದ ಪರಿಹಾರಕ್ಕಾಗಿ ಮುಂದೆ ಓದಿ

ಒಟ್ಟಾರೆ ಅಪ್ ಗ್ರೇಡ್:

ಒಟ್ಟಾರೆ ಅಪ್ ಗ್ರೇಡ್:

ಮುಂಬರುವ ಒನ್ ಪ್ಲಸ್ 7 ಒನ್ ಪ್ಲಸ್ 7 ಸರಣಿಯ ಭಾಗವಾಗಿರುತ್ತದೆ. ಹಾಗಾಗಿ ಕೇವಲ ಒಂದೇ ಸ್ಮಾರ್ಟ್ ಫೋನ್ ಈ ಬಾರಿ ಬಿಡುಗಡೆಗೊಳ್ಳುವುದಿಲ್ಲ. ಒನ್ ಪ್ಲಸ್ 7 ಪ್ರೋದಲ್ಲಿ ಅತ್ಯಂತ ದೊಡ್ಡ ಅಪ್ ಗ್ರೇಡ್ ಮತ್ತು ಫೀಚರ್ ಗಳು ಲಭ್ಯವಾಗುತ್ತದೆ. ರೆಗ್ಯುಲರ್ ಒನ್ ಪ್ಲಸ್ 7 ಕೇವಲ ಕೆಲವು ಅಪ್ ಗ್ರೇಡ್ ಗಳನ್ನು ಮಾತ್ರವೇ ಹೊಂದಿರುತ್ತದೆ. ಈಗಾಗಲೇ ಕಂಪೆನಿಯು ಒನ್ ಪ್ಲಸ್ 7 ಪ್ರೋ ಟೀಸರ್ ನ್ನು ಬಿಡುಗಡೆಗೊಳಿಸಿದೆ. ಆದರೆ ರೆಗ್ಯುಲರ್ ಒನ್ ಪ್ಲಸ್ 7 ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿಗಳನ್ನು ತಿಳಿಸಿಲ್ಲ. ಹಾಗಾಗಿ ಈ ಬಾರಿ ಕಂಪೆನಿಯು ಒನ್ ಪ್ಲಸ್ 7 ಪ್ರೋ ಮೇಲೆ ಹೆಚ್ಚಿನ ಗಮನವನ್ನು ಹರಿಸಿದೆ. ಆದರೆ ಪ್ರೋ ಮಾಡೆಲ್ ಒನ್ ಪ್ಲಸ್ 6ಟಿಗೆ ಹೋಲಿಸಿದರೆ ಹೆಚ್ಚು ದುಬಾರಿಯಾಗಿರುವ ಸಾಧ್ಯತೆ ಇದೆ. ಹಾಗಾಗಿ ಒನ್ ಪ್ಲಸ್ 7 ನಲ್ಲಿ ನೀವು ಹೆಚ್ಚು ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನಲಾಗುತ್ತಿದೆ.

ಎರಡರಲ್ಲೂ ಒಂದೇ ರೀತಿಯ ಡಿಸ್ಪ್ಲೇ:

ಎರಡರಲ್ಲೂ ಒಂದೇ ರೀತಿಯ ಡಿಸ್ಪ್ಲೇ:

ಒನ್ ಪ್ಲಸ್ 6ಟಿ ಮತ್ತು ಒನ್ ಪ್ಲಸ್ 7 ಎರಡರಲ್ಲೂ ಕೂಡ ಒಂದೇ ರೀತಿಯ ಡಿಸ್ಪ್ಲೇ ಇರುತ್ತದೆ. ಮುಂಬರುವ ರೆಗ್ಯುಲರ್ ಒನ್ ಪ್ಲಸ್ 7 ಸ್ಮಾರ್ಟ್ ಫೋನಿನಲ್ಲಿ ವಾಟರ್ ಡ್ರಾಪ್ ಸ್ಟೈಲ್ ನಲ್ಲಿರುವ ನಾಚ್ ಇರುವ ಡಿಸ್ಪ್ಲೇ ಇರುತ್ತದೆ ಮತ್ತು ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ಇರುತ್ತದೆ. ಡಿಸ್ಪ್ಲೇ ಸೈಜ್ ಮತ್ತು ಗುಣಮಟ್ಟದಲ್ಲಿ ಯಾವುದೇ ಹೆಚ್ಚಿನ ಅಪ್ ಗ್ರೇಡ್ ಇರುವುದಿಲ್ಲ ಎಂದು ತಿಳಿಸಲಾಗಿದೆ. ಕೆಲವು ಫೀಚರ್ ಗಳು ಹೆಚ್ಚಿನದ್ದಾಗಿದ್ದರೂ ಕೂಡ ಕೆಲವು ಫೀಚರ್ ಗಳು ಡಿಸ್ಪ್ಲೇಯಲ್ಲಿ ಸೇಮ್ ಆಗಿರುತ್ತದೆ ಎಂದು ಅಂದಾಜಿಸಲಾಗಿದೆ.

ಅಪ್ ಗ್ರೇಡ್ ಆಗಿರುವ ಹಾರ್ಡ್ ವೇರ್:

ಅಪ್ ಗ್ರೇಡ್ ಆಗಿರುವ ಹಾರ್ಡ್ ವೇರ್:

ಹೊಸ ಒನ್ ಪ್ಲಸ್ ನಲ್ಲಿ ಕ್ವಾಲ್ಕಂ ಚಿಪ್ ಸ್ನ್ಯಾಪ್ ಡ್ರ್ಯಾಗನ್ 855 ಇರುತ್ತದೆ. ಒನ್ ಪ್ಲಸ್ 6ಟಿ ಹಳೆಯ ಕ್ವಾಲ್ಕಂ ಫ್ಲ್ಯಾಗ್ ಶಿಪ್ ಚಿಪ್ ಸ್ಲ್ನ್ಯಾಪ್ ಡ್ರ್ಯಾಗನ್ 845 ನಲ್ಲಿ ರನ್ ಆಗುತ್ತದೆ. ಹಾಗಾಗಿ ದಿನಂಪ್ರತಿ ಬಳಕೆ ಮತ್ತು ಪ್ರದರ್ಶನದಲ್ಲಿ ಹೆಚ್ಚಿನ ನಿರೀಕ್ಷೆಗಳಿಲ್ಲ. ಕಠಿಣವಾಗಿರುವ ಟಾಸ್ಕ್ ಗಳನ್ನು ಕೂಡ ನಿಭಾಯಿಸುವ ಸಾಮರ್ಥ್ಯವನ್ನು ಈ ಹಾರ್ಡ್ ವೇರ್ ಗಳು ಹೊಂದಿವೆ. ಒನ್ ಪ್ಲಸ್ 6ಟಿ ಮತ್ತು ಮುಂಬರುವ ಒನ್ ಪ್ಲಸ್ 7 ಎರಡೂ ಕೂಡ ದೊಡ್ಡ ದೊಡ್ಡ ಗೇಮ್ ಗಳನ್ನು ಮತ್ತು ಕಠಿಣ ಟಾಸ್ಕ್ ಗಳನ್ನು ಕೂಡ ಸುಲಭವಾಗಿ ನಿಭಾಯಿಸುವ ತಾಕತ್ತನ್ನು ಹೊಂದಿದೆ.

ಒಂದೇ ರೀತಿಯ ಸಾಫ್ಟ್ ವೇರ್:

ಒಂದೇ ರೀತಿಯ ಸಾಫ್ಟ್ ವೇರ್:

ಮುಂಬರುವ ಒನ್ ಪ್ಲಸ್ 7 ಸರಣಿ ಫೋನ್ ಗಳು ಕೂಡ ಆಕ್ಸಿಜೆನ್ ಓಎಸ್ ಸಾಫ್ಟ್ ವೇರ್ ಆಧಾರಿತ ಹೊಸ ಆಂಡ್ರಾಯ್ಡ್ ಕ್ಯೂ ಅಲ್ಲ ಬದಲಾಗಿ ಆಂಡ್ರಾಯ್ಡ್ 9.0 ಪೈ ನಲ್ಲಿ ರನ್ ಆಗುತ್ತದೆ.ಅಂದರೆ ಇದು ಒನ್ ಪ್ಲಸ್ 6ಟಿ ಯಲ್ಲೂ ಇದೆ. ಅಂದರೆ ಎರಡೂ ಫೋನ್ ಗಳಲ್ಲೂ ಕೂಡ ಆಂಡ್ರಾಯ್ಡ್ ಕ್ಯೂ ಅಪ್ ಗ್ರೇಡ್ ಕೆಲವೇ ತಿಂಗಳಲ್ಲಿ ಆಗುವ ಸಾಧ್ಯತೆ ಇದೆ. ಆಂಡ್ರಾಯ್ಡ್ ಕ್ಯೂ ಮೂಲಕ ಒನ್ ಪ್ಲಸ್ ನಲ್ಲಿ ಹೊಸ ಅಪ್ ಡೇಟ್ ಮಾಡಲು ಸಾಧ್ಯವಿದೆ ಉದಾಹರಣೆಗೆ ನೇವಿಗೇಷನ್ 3ಡಿ ಮತ್ತು ಇತ್ಯಾದಿಗಳು ಇದರಲ್ಲಿರುತ್ತದೆ.

ಕ್ಯಾಮರಾಗಳು:

ಕ್ಯಾಮರಾಗಳು:

ಒನ್ ಪ್ಲಸ್ 6ಟಿ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ಹಿಂಭಾಗದಲ್ಲಿ ಹೊಂದಿದ್ದು 16ಎಂಪಿ ಪ್ರೈಮರಿ ಕ್ಯಾಮರಾ ಸೋನಿ IMX 519 ಸೆನ್ಸರ್ ಜೊತೆಗೆ 20 ಎಂಪಿ Exmor RS ಡೆಪ್ತ್ ಸೆಕೆಂಡರಿ ಸೆನ್ಸರ್ ನ್ನು ಹೊಂದಿದೆ. ಇದು 4616 x 3464 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ರೆಗ್ಯುಲರ್ ಒನ್ ಪ್ಲಸ್ 7 ಮಾಡೆಲ್ ನಲ್ಲೂ ಕೂಡ ಡುಯಲ್ ಹಿಂಭಾಗದ ಕ್ಯಾಮರಾ ಸೆಟ್ ಅಪ್ ನ್ನು ನಿರೀಕ್ಷಿಸಲಾಗಿದ್ದು 48ಎಂಪಿ ಲೆನ್ಸ್ ನ್ನು ಪ್ರೈಮರಿ ಸೆನ್ಸರ್ ಆಗಿ ಹೊಂದಿರುವ ಸಾಧ್ಯತೆ ಇದೆ. ಆದರೆ ಇನ್ನೊಂದು ವರದಿಯ ಪ್ರಕಾರ ಒನ್ ಪ್ಲಸ್ 7 ಪ್ರೋದಲ್ಲಿ ಮಾತ್ರವೇ 48ಎಂಪಿ ಲೆನ್ಸ್ ಇರುತ್ತದೆ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಕ್ಯಾಮರಾ ವಿಚಾರದಲ್ಲೂ ಕೂಡ ಒನ್ ಪ್ಲಸ್ 7 ಮತ್ತು ಒನ್ ಪ್ಲಸ್ 6ಟಿಯಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.

ಬೆಲೆ:

ಬೆಲೆ:

ಒನ್ ಪ್ಲಸ್ 7 ಖಂಡಿತ ದುಬಾರಿಯಾಗಿರುತ್ತದೆ. ಒನ್ ಪ್ಲಸ್ 7 ಪ್ರೋ ಕೂಡ ಸ್ವಲ್ಪ ದುಬಾರಿಯೇ ಆಗಿರುತ್ತದೆ. ಅಂದಾಜು 40,000ದ ಹತ್ತಿರ ಇರುವ ಸಾಧ್ಯತೆ ಇದೆ.ಇನ್ನೊಂದೆಡೆ ಒನ್ ಪ್ಲಸ್ 6ಟಿ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಸದ್ಯ 35,000 ಕ್ಕೂ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಅಂದರೆ ಸದ್ಯದ ಮಟ್ಟಿಗೆ ಒನ್ ಪ್ಲಸ್ 6ಟಿ ಖರೀದಿಸುವುದೇ ಸೂಕ್ತವೆಂಬಂತೆ ಭಾಸವಾಗುತ್ತದೆ.

ರಿಯಾಯಿತಿಯಲ್ಲಿರುವ ಒನ್ ಪ್ಲಸ್ 6ಟಿ ಅಥವಾ ಒನ್ ಪ್ಲಸ್ 7 : ಯಾವುದು ಖರೀದಿಸುವುದು ಸೂಕ್ತ?

ಒಟ್ಟಾರೆ ಎಲ್ಲಾ ಫೀಚರ್ ಮತ್ತು ಬೆಲೆಯನ್ನು ಗಮನಿಸಿದರೆ ಮಾರುಕಟ್ಟೆಯಲ್ಲಿ ಸಧ್ಯ ಒನ್ ಪ್ಲಸ್ 6ಟಿ ಖರೀದಿಸುವುದು ರೆಗ್ಯುಲರ್ ಒನ್ ಪ್ಲಸ್ 7 ಖರೀದಿಸುವುದಕ್ಕಿಂತ ಒಳ್ಳೆಯದು ಎಂದು ಹೇಳಲಾಗುತ್ತದೆ. ಅದರಲ್ಲೂ ಅಮೇಜಾನ್ ಸಮ್ಮರ್ ಸೇಲ್ ನಲ್ಲಿ ಸದ್ಯ ಒನ್ ಪ್ಲಸ್ 6ಟಿಗೆ ರಿಯಾಯಿತಿ ಇರುವುದರಿಂದಾಗಿ ಈ ಅವಕಾಶವನ್ನು ತಪ್ಪಿಸಿಕೊಳ್ಳುವುದು ಒಳ್ಳೆಯದಲ್ಲ ಎಂಬುದು ನಮ್ಮ ಸಲಹೆ. ಆದರೆ ನಮ್ಮ ಈ ಸಲಹೆ ಯಾರು ರೆಗ್ಯುಲರ್ ಒನ್ ಪ್ಲಸ್ 7 ಖರೀದಿಸುವುದಕ್ಕೆ ಪ್ಲಾನ್ ಮಾಡುತ್ತಿದ್ದಾರೋ ಅವರಿಗೆ ಎಂಬುದನ್ನು ಮರೆಯಬೇಡಿ.

Best Mobiles in India

English summary
Buy Discounted OnePlus 6T Or Wait For Oneplus 7

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X