15,000 ರುಪಾಯಿ ಒಳಗೆ ಇರುವ 64ಎಂಪಿ ಹಿಂಭಾಗದ ಕ್ಯಾಮರಾವಿರುವ ಸ್ಮಾರ್ಟ್ ಫೋನ್ ಗಳು

By Gizbot Bureau
|

ಸ್ಮಾರ್ಟ್ ಫೋನ್ ಗಳು ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಡಿವೈಸ್ ಗಳೆನಿಸಿದ್ದು ಪ್ರತಿಯೊಬ್ಬರೂ ಕೂಡ ತಮ್ಮ ದೈನಂದಿನ ಚಟುವಟಿಕೆಯನ್ನು ಇದರಿಂದಲೇ ಪ್ರಾರಂಭಿಸುತ್ತಾರೆ ಎಂದರೆ ತಪ್ಪಿಲ್ಲ. ನಮ್ಮ ಜೀವನದ ಪ್ರಮುಖ ಘಟನೆಗಳನ್ನು ಕ್ಯಾಪ್ಚರ್ ಮಾಡುವುದಕ್ಕೆ ಮತ್ತು ಇತರರೊಂದಿಗೆ ಯಾವಾಗಲೂ ಕೂಡ ಸಂಪರ್ಕದಲ್ಲಿರುವುದಕ್ಕೆ ಈ ಡಿವೈಸ್ ಗಳು ನೆರವಾಗಿವೆ. ಕ್ಯಾಮರಾವನ್ನು ಸಪರೇಟ್ ಆಗಿ ಹಿಡಿದು ಓಡಾಡುವ ಅಗತ್ಯತೆಯನ್ನು ಈ ಸ್ಮಾರ್ಟ್ ಫೋನ್ ಗಳು ಇದೀಗ ದೂರವಾಗಿಸಿದೆ. ಸದ್ಯ ಮುಂದುವರಿದಿರುವ ತಂತ್ರಜ್ಞಾನದಲ್ಲಿ ಸ್ಮಾರ್ಟ್ ಫೋನ್ ಫೋಟೋಗ್ರಫಿ ಬಹಳ ಅತ್ಯುತ್ತಮವಾಗಿದೆ.

ಫೋನ್

ಬಜೆಟ್ ಬಗ್ಗೆ ಆಲೋಚನೆ ಮಾಡುವ ಭಾರತೀಯರಿಗೂ ಸೇರಿದಂತೆ ವಿಶ್ವದಾದ್ಯಂತ ಇರುವ ಜನರ ಮನಸ್ಸಿಗೆ ಅನುಗುಣವಾಗಿ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಗಳು ಕೂಡ ಎಚ್ಚೆತ್ತುಕೊಂಡು ಅಗತ್ಯಕ್ಕೆ ಅನುಸಾರವಾಗಿರುವಂತಹ ಡಿವೈಸ್ ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ.

ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ ಗಳಿರುವ ಡಿವೈಸ್ ಗಳನ್ನು ಸಾಮಾನ್ಯವಾಗಿ ನಾವುಗಳು ಇಷ್ಟಪಡುತ್ತೇವೆ. ಇದೀಗ ಚೀನಾ ಬ್ರ್ಯಾಂಡ್ನ ಗಳು ಈ ಬೇಡಿಕೆಯನ್ನು ಪೂರೈಸುತ್ತಿದ್ದು ಭಾರತದಲ್ಲಿ ಯಶಸ್ಸು ಗಳಿಸುತ್ತಿದೆ ಮತ್ತು ಕೈಗೆಟುಕುವ ಬೆಲೆಯಲ್ಲಿ ಫೋನ್ ಗಳನ್ನು ನೀಡುತ್ತಿವೆ.

ಸ್ಮಾರ್ಟ್ ಫೋನ್ ಫೋಟೋಗ್ರಫಿಯ ಬಗ್ಗೆ ಮಾತನಾಡುವುದಾದರೆ ಶಿಯೋಮಿ ಸಂಸ್ಥೆ ಮೊದಲ ಡುಯಲ್ ಕ್ಯಾಮರಾವನ್ನು ಪರಿಚಯಿಸಿದ್ದು 15,000 ರುಪಾಯಿ ಒಳಗೆ ರೆಡ್ಮಿ ನೋಟ್ 7 ಪ್ರೋ ಬಿಡುಗಡೆಗೊಳಿಸಿತ್ತು. ಇದುವೆ 48MP ಕ್ಯಾಮರಾ ಸೆನ್ಸರ್ ಇದ್ದ ಮೊದಲ ಕೈಗೆಟುಕುವ ಬೆಲೆಯ ಮೊಬೈಲ್ ಫೋನ್ ಆಗಿತ್ತು.

ಮೊಬೈಲ್ ಕ್ಯಾಮರಾ ತಂತ್ರಗಾರಿಕೆಯನ್ನೇ ಪ್ರಮುಖವಾಗಿಸಿಕೊಂಡ ಹಲವು ದೊಡ್ಡ ದೊಡ್ಡ ಸಂಸ್ಥೆಗಳು 64MP ಕ್ಯಾಮರಾ ಸೆನ್ಸರ್ ಇರುವ ಫೋನ್ ನ್ನು ಬಿಡುಗಡೆಗೊಳಿಸಿದ್ದು 15K ಸೆಗ್ಮೆಂಟ್ ನಲ್ಲಿ ಇವುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಾವಿಲ್ಲಿ ಕೆಲವು ಡಿವೈಸ್ ಗಳ ಪಟ್ಟಿಯನ್ನು ನೀಡುತ್ತಿದ್ದೇವೆ.

ರಿಯಲ್ ಮಿ 6

ರಿಯಲ್ ಮಿ 6

MRP: Rs 12,999

ಪ್ರಮುಖ ವೈಶಿಷ್ಟ್ಯತೆಗಳು

• 6.5 ಇಂಚಿನ FHD+ IPS ಟಚ್ ಸ್ಕ್ರೀನ್ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಹೆಲಿಯೋ ಜಿ90ಟಿ ಪ್ರೊಸೆಸರ್

• 4/6/8GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 64MP + 8MP + 2MP + 2MP ಕ್ವಾಡ್ ಕ್ಯಾಮರಾ

• 16MP ಸೆಲ್ಫೀ ಕ್ಯಾಮರಾ

• ಫೇಸ್ ಅನ್ ಲಾಕ್

• ಡುಯಲ್ 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5

• 4300 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ31

MRP: Rs 14,999

ಪ್ರಮುಖ ವೈಶಿಷ್ಟ್ಯತೆಗಳು

• 6.4 ಇಂಚಿನ FHD+ AMOLED ಡಿಸ್ಪ್ಲೇ

• ಆಕ್ಟಾ ಕೋರ್ Exynos 9611 ಪ್ರೊಸೆಸರ್

• 6GB RAM ಜೊತೆಗೆ 64GB/128GB (UFS 2.1) ROM

• ಡುಯಲ್ ಸಿಮ್

• 64MP + 8MP + 5MP + 5MP ಕ್ವಾಡ್ ಹಿಂಭಾಗದ ಕ್ಯಾಮರಾಗಳು ಜೊತೆಗೆ LED ಫ್ಲ್ಯಾಶ್

• 32MP ಮುಂಭಾಗದ ಕ್ಯಾಮರಾ

• 4ಜಿ ವೋಲ್ಟ್

• ವೈಫೈ

• 6000 MAh ಬ್ಯಾಟರಿ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

ಶಿಯೋಮಿ ರೆಡ್ಮಿ ನೋಟ್ 8 ಪ್ರೋ

MRP: Rs 13,999

ಪ್ರಮುಖ ವೈಶಿಷ್ಟ್ಯತೆಗಳು

• 6.38 ಇಂಚಿನ FHD+ ಡಿಸ್ಪ್ಲೇ

• 2GHz ಆಕ್ಟಾ ಕೋರ್ ಹೆಲಿಯೋ G90T ಪ್ರೊಸೆಸರ್

• 6/8GB RAM ಜೊತೆಗೆ 64/128GB ROM

• ಡುಯಲ್ ಸಿಮ್

• 64MP + 8MP + 2MP + 2MP ಕ್ವಾಡ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್

• 20MP ಮುಂಭಾಗದ ಕ್ಯಾಮರಾ

• ಫಿಂಗರ್ ಪ್ರಿಂಟ್ ಸೆನ್ಸರ್

• 4ಜಿ ವೋಲ್ಟ್/ವೈಫೈ

• ಬ್ಲೂಟೂತ್ 5 LE

• 4500 MAh ಬ್ಯಾಟರಿ

ರಿಯಲ್ ಮಿ XT

ರಿಯಲ್ ಮಿ XT

MRP: Rs. 14,989

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 712 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 4GB / 6GB / 8GB (LPPDDR4x) RAM, 64GB/128GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• ColorOS 6.0 ಆಧಾರಿತ ಆಂಡ್ರಾಯ್ಡ್ 9.0 (ಪೈ)

• 64MP ಹಿಂಭಾಗದ ಕ್ಯಾಮರಾ + 8MP + 2MP + 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4ಜಿ ವೋಲ್ಟ್

• 4000mAh ಬ್ಯಾಟರಿ (ಟಿಪಿಕಲ್) ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್

Most Read Articles
Best Mobiles in India

English summary
Speaking of smartphone photography, Xiaomi was the first brand to experiment with a dual-camera setup under Rs. 15,000 price tag with the Redmi Note 7 Pro. That’s not it, it was the first device to launch with a 48MP camera sensors in the affordable mobile space. Taking forward the advancement in mobile camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X