ರೂ.501 ರ 'ಛಾಂಪ್‌ಒನ್ ಸಿ1' ಫೋನ್‌ ರಿಜಿಸ್ಟರ್‌ ಆರಂಭ: ವಿಶೇಷತೆಗಳೇನು?

Written By:

ಛಾಂಪ್‌ಒನ್ ಎಂಬ ಕಂಪನಿಯೊಂದು ತನ್ನ 'ಛಾಂಪ್‌ಒನ್‌ ಸಿ1' ಬೆಲೆ ರೂ. 7999 ರ ಸ್ಮಾರ್ಟ್‌ಫೋನ್ ಅನ್ನು ರೂ.501 ಕ್ಕೆ ಮಾರಾಟ ಮಾಡುತ್ತಿದೆ. ಬಹುಸಂಖ್ಯಾತರಿಗೆ ತಿಳಿಯದ, ಪ್ರಖ್ಯಾತವು ಅಲ್ಲದ ಈ ಕಂಪನಿ ಕ್ಯಾಶ್‌ ಆನ್‌ ಡಿಲಿವರಿ ಮೂಖಾಂತರ ತನ್ನ ಸ್ಮಾರ್ಟ್‌ಫೋನ್‌ 'ಛಾಂಪ್‌ಒನ್ ಸಿ1' ಅನ್ನು ತನ್ನ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್‌ ಮಾಡಿಸಿಕೊಳ್ಳುವ ಮೂಲಕ ಮಾರಾಟ ಮಾಡಲು ಸಿದ್ಧವಾಗಿದೆ. ಅಂದಹಾಗೆ ಮೊದಲ ಫ್ಲ್ಯಾಶ್‌ ಮಾರಾಟ ಸೆಪ್ಟೆಂಬರ್‌ 2 ರಂದು ಎಂದು ತಿಳಿಯಲಾಗಿದೆ.

ಬೆಲೆ ರೂ. 501 ಕ್ಕೆ ಖರೀದಿಸಬಹುದಾದ ಈ ಸ್ಮಾರ್ಟ್‌ಫೋನ್‌ ಅನ್ನು ಯಾರು ಖರೀದಿಸಬಹುದು, ಹೇಗೆ, ಛಾಂಪ್‌ಒನ್‌ ಸಿ1 ಫೀಚರ್‌ಗಳೇನು ಎಂದು ತಿಳಿಯಲು ಲೇಖನದ ಸ್ಲೈಡರ್‌ನಲ್ಲಿನ ಮಾಹಿತಿ ಓದಿರಿ.

2G ಫೋನ್‌ನಲ್ಲಿ ರಿಲಾಯನ್ಸ್ ಜಿಯೋ 4G ಸಿಮ್ ವರ್ಕ್‌ ಆಗುತ್ತದೆಯೇ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

'ಛಾಂಪ್‌ಒನ್‌ ಸಿ1' ಸ್ಮಾರ್ಟ್‌ಫೋನ್‌ ಆಂಡ್ರಾಯ್ಡ್ 5.1 ಲಾಲಿಪಪ್ ಓಎಸ್‌ನಿಂದ ರನ್‌ ಆಗಲಿದ್ದು, ಡ್ಯುಯಲ್‌ ಸಿಮ್‌ ಸಪೋರ್ಟ್‌ ಮಾಡಲಿದೆ.

 'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

5 ಇಂಚಿನ HD ಐಪಿಎಸ್‌ ಡಿಸ್‌ಪ್ಲೇ, 1.3 GHz ಮೀಡಿಯಾ ಟೆಕ್‌ MT6735 ಕ್ವಾಡ್ ಕೋರ್‌ ಪ್ರೊಸೆಸರ್ ಹೊಂದಿದ್ದು, 16GB ಇನ್‌ಬಿಲ್ಡ್‌ ಆಂತರಿಕ ಮೆಮೊರಿ ಆಫರ್‌ ನೀಡುತ್ತಿದೆ.

 'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

'ಛಾಂಪ್ಒನ್‌ ಸಿ1' ಸ್ಮಾರ್ಟ್‌ಫೋನ್‌ ಫೀಚರ್

ದೃಗ್ವಿಜ್ಞಾನ ಜೊತೆಗಿನ 8MP ಹಿಂಭಾಗ ಕ್ಯಾಮೆರಾ, 5MP ಮುಂಭಾಗ ಕ್ಯಾಮೆರಾ ಫೀಚರ್ ಹೊಂದಿದೆ. 2500mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

 'ಛಾಂಪ್ಒನ್‌ ಸಿ1' ಸಂಪರ್ಕಗಳು

'ಛಾಂಪ್ಒನ್‌ ಸಿ1' ಸಂಪರ್ಕಗಳು

4G LTE ಸಪೋರ್ಟ್‌ ಜೊತೆಗೆ, 'ಬಿಳಿ, ಬೆಳ್ಳಿ ಮತ್ತು ಚಿನ್ನದ ಬಣ್ಣಗಳಲ್ಲಿ ಸ್ಮಾರ್ಟ್‌ಫೋನ್‌ ಸೊರೆಯಲಿದೆ.

ಸ್ಮಾರ್ಟ್‌ಫೋನ್‌ ಖರೀದಿ

ಸ್ಮಾರ್ಟ್‌ಫೋನ್‌ ಖರೀದಿ

ಸ್ಮಾರ್ಟ್‌ಫೋನ್‌ ಖರೀದಿ ಮಾಹಿತಿ ಸೋಮವಾರ ವೈರಲ್‌ ಆಗುತ್ತಿದ್ದಂತೆಯೇ ಕಂಪನಿ ವೆಬ್‌ಸೈಟ್‌ champ1india.com/# ನಲ್ಲಿ 'ಈಗಾಗಲೇ ಅಸ್ತಿತ್ವದಲ್ಲಿರುವ ಗ್ರಾಹಕರಿಗೆ ಮಾತ್ರ' ಎಂದು ಮಾಹಿತಿ ಅಪ್‌ಲೋಡ್‌ ಮಾಡಲಾಗಿದೆ.

 ಸ್ಮಾರ್ಟ್‌ಫೋನ್ ಖರೀದಿ

ಸ್ಮಾರ್ಟ್‌ಫೋನ್ ಖರೀದಿ

ವೆಬ್‌ಸೈಟ್‌ champ1india.com ಉತ್ತಮವಾಗೆ ಕಾಣುತ್ತಿದ್ದು, ಆದರೆ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ರಿಜಿಸ್ಟರ್‌ ಬಟನ್ ಮೇಲೆ ಕ್ಲಿಕ್ ಮಾಡಿದರೆ ಯಾವುದೇ ಪ್ರತಿಕ್ರಿಯೆ ದೊರೆಯದೇ ಇನ್‌ಆಕ್ಡೀವ್‌ ಆಗಿದೆ. ಅಲ್ಲದೇ ಪೇಮೆಂಟ್‌ ಗೇಟ್‌ವೇ ಕ್ಲೋಸ್ ಆಗಿದ್ದು, ರಿಜಿಸ್ಟರ್‌ 24 ಗಂಟೆಗಳ ನಂತರ ಲಭ್ಯ ಎಂದು ಹೇಳಲಾಗಿದೆ. ಸ್ಮಾರ್ಟ್‌ಫೋನ್‌ ಕ್ಯಾಶ್‌ ಆನ್‌ ಡಿಲಿವರಿ ಅಂತಲೂ ಹೇಳಲಾಗಿದೆ.

 ಇದು ಇನ್ನೊಂದು ಫ್ರೀಡಂ 251 ಆಗಿರಬಹುದಾ?

ಇದು ಇನ್ನೊಂದು ಫ್ರೀಡಂ 251 ಆಗಿರಬಹುದಾ?

ಆರಂಭದಲ್ಲಿ ಮೋಸ ಎನಿಸಿಕೊಂಡ ಪ್ರೀಡಂ 251 ಸ್ಮಾರ್ಟ್‌ಫೋನ್‌ ಅಂತಿಮವಾಗಿ ರಿಜಿಸ್ಟರ್‌ ಮಾಡಿದವರ ಕೈ ಸೇರಿದೆ. ಆದೇ ರೀತಿಯಲ್ಲಿ ಇದು ಇರಬಹುದಾ ಎಂಬ ಸಂಶಯ ಹಲವರಿಗೆ ಕಾಡುತ್ತಿದೆ. ಆದರೆ ಸೆಪ್ಟೆಂಬರ್‌ 2 ರಂದು ಫ್ಲ್ಯಾಶ್‌ ಸೇಲ್‌ ಆರಂಭ ಎನ್ನಲಾಗಿದ್ದು, ಕಾದುನೋಡಬೇಕಿದೆ. ನೀವು ರಿಜಿಸ್ಟರ್‌ ಮಾಡಲು ಬಯಸಿದಲ್ಲಿ champ1india.com ಗೆ ಭೇಟಿ ನೀಡಿ. ಕಂಪನಿ ಜೋಧ್‌ಪುರ್‌ ಮೂಲದ ಕಂಪನಿ ಎಂದು ತಿಳಿಯಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
'ChampOne C1' Smartphone Registrations Open, Rs.501 cash on delivery. Read more about this in kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot