ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

Written By:

ಹೊಸ ವರ್ಷಕ್ಕೆ ಎಲ್ಲಾ ಮೊಬೈಲ್ ತಯಾರಕ ಕಂಪನಿಗಳು ಹೊಸ ಹೊಸ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡುತ್ತಿದ್ದು, ಇದೇ ಸಾಲಿನಲ್ಲಿ ಈಗ ಕೂಲ್‌ಪ್ಯಾಡ್ ಕಂಪನಿಯೂ LeEco ಜೊತೆಗೆ ಸೇರಿ ಅಭಿವೃದ್ಧಿಪಡಿಸಿರುವ Cool 1 Dual ಎಂಬ ಹೊಸದೊಂದು ಸ್ಮಾರ್ಟ್‌ಪೋನ್ ಅನ್ನು ಜನವರಿ 5 ರಂದು ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಈ ಪೋನ್ ಆನ್‌ಲೈನ್ ನಲ್ಲಿ ಮಾತ್ರ ಲಭ್ಯವಿರಲಿದೆ ಎಂದು ಕಂಪನಿ ತಿಳಿಸಿದೆ.

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

ಸೇಲ್ ಆರಂಭವಾದ 10 ನಿಮಿಷದಲ್ಲಿ Redmi 3S, Redmi 3S Prime ಸೋಲ್ಡ್ ಔಟ್

3 GB RAM ಮತ್ತು 32GB ಇಂಟರ್ನಲ್ ಮೊಮೊರಿ ಮತ್ತು 4GB RAM ಮತ್ತು 32GB ಇಂಟರ್ನಲ್ ಮೊಮೊರಿ ಸಾಮರ್ಥ್ಯದ ಎರಡು ಮಾದರಿಯ ಪೋನ್‌ಗಳು ಮಾರುಕಟ್ಟೆಗೆ ಬರುತ್ತಿದ್ದು, ಎರಡೂ ಪೋನಿನ ಬೆಲೆಯನ್ನು 13.999 ರೂ.ಗಳೆಂದು ನಿಗಧಿ ಮಾಡಿದೆ. ಆದರೆ 4GB RAM ಮಾದರಿ ಕೇವಲ ಜನವರಿ 5 ರಿಂದ ಅಮೆಜಾನ್ ಲಭ್ಯ ವಿರಲಿದ್ದು, 3 GB RAM ಮಾದರಿ ಪೋನ್‌ಗಳು ಮುಂದಿನ ದಿನಗಳಲ್ಲಿ ಸಾಮಾನ್ಯ ಸ್ಟೋರ್ ಗಳಲ್ಲಿ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Cool 1 Dual ಎರಡು ಬಣ್ಣದಲ್ಲಿ ಲಭ್ಯ:

Cool 1 Dual ಎರಡು ಬಣ್ಣದಲ್ಲಿ ಲಭ್ಯ:

ಕೂಲ್‌ಪ್ಯಾಡ್‌ನ ಕೂಲ್ 1 ಡುಯಲ್ ಪೊನ್ ಎರಡು ಬಣ್ಣದಲ್ಲಿ ಲಭ್ಯವಿದೆ ಎನ್ನಲಾಗಿದೆ. ಗೋಲ್ಡನ್ ಮತ್ತು ಸಿಲ್ವರ್ ಬಣ್ಣದಲ್ಲಿದೆ. ಈ ಪೋನಿನಲ್ಲಿ 5.5 ಇಂಚಿನ full-HD (1080x1920 p) ಡೀಸ್‌ಪ್ಲೇ ಇದ್ದು, ಹೆಚ್ಚಿನ ಬ್ರೈಟ್‌ನೆಸ್ ಈ ಡಿಸ್‌ಪ್ಲೇಯಲ್ಲಿದ್ದು, ಚಿತ್ರಗಳು ಮತ್ತು ವಿಡಿಯೋಗಳು ಬೇರೆ ಎಲ್ಲಾ ಪೋನಿಗಳಿಗಿಂತ ಉತ್ತಮವಾಗಿರಲಿದೆ.

4000mAh ಬ್ಯಾಟರಿ: ದೀರ್ಘಕಾಲ ಬಾಳಿಕೆಗಾಗಿ

4000mAh ಬ್ಯಾಟರಿ: ದೀರ್ಘಕಾಲ ಬಾಳಿಕೆಗಾಗಿ

ಕೂಲ್‌ಪ್ಯಾಡ್‌ನ ಕೂಲ್ 1 ಡುಯಲ್ ಪೋನಿನಲ್ಲಿ 4000mAh ಬ್ಯಾಟರಿ ಅಳವಡಿಸಲಾಗಿದ್ದು, ದೀರ್ಘಕಾಲದ ಬ್ಯಾಟರಿ ಬಾಳಿಕೆಗೆ, ಮತ್ತು ಹೆಚ್ಚು ಕಾಲ ವಿಡಿಯೋ ನೋಡಲು ಇದು ಸಹಾಯಕಾರಿಯಾಗಿದ್ದು, ಪದೇಪದೇ ಚಾರ್ಜ್ ಮಾಡುವ ಅಗತ್ಯ ಬಿಳುವುದಿಲ್ಲ.

3 GB ಅಥವಾ 4GB RAM: ವೇಗದ ಕಾರ್ಯ ನಿರ್ವವಹಣೆಗೆ

3 GB ಅಥವಾ 4GB RAM: ವೇಗದ ಕಾರ್ಯ ನಿರ್ವವಹಣೆಗೆ

ಕೂಲ್‌ಪ್ಯಾಡ್‌ನ ಕೂಲ್ 1 ಡುಯಲ್ ಪೋನಿನಲ್ಲಿ ವೇಗದ ಕಾರ್ಯ ನಿರ್ವಹಣೆಗಾಗಿಯೇ 64-ಬಿಟ್ ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 652 SoC ಅಳವಡಿಸಲಾಗಿದ್ದು, 1.8GHz +1.4GHz ವೇಗ ಹೊಂದಿದೆ. 3 GB ಅಥವಾ 4GB RAM ಈ ಪೋನಿನಲ್ಲಿದೆ. Adreno 510 GPU ಸಹ ಇದೆ.

13 MP ಕ್ಯಾಮೆರಾ: ಉತ್ತಮ ಪೋಟೋಗಾಗಿ

13 MP ಕ್ಯಾಮೆರಾ: ಉತ್ತಮ ಪೋಟೋಗಾಗಿ

ಉತ್ತಮ ಛಾಯಾಚಿತ್ರಗಳನ್ನು ಸೆರೆಹಿಯುವ ಸಲುವಾಗಿ ಹಿಂಭಾಗದಲ್ಲಿ 13 MP ಕ್ಯಾಮೆರಾ ಇದೆ. ಇದರೊಂದಿಗೆ ಡುಯಲ್ ಟೋನ್ ಎಲ್‌ಇಡಿ ಫ್ಲಾಷ್ ಇದೆ. ಜೊತೆಗೆ ಕಲರ್ ಸೆನ್ಸಾರ್ ಸೇರಿದಂತೆ ಇನ್ನು ಹಲವು ವಿಶೇಷತೆಗಳಿದೆ. ಮುಂಭಾಗದಲ್ಲಿ 8 MP ಕ್ಯಾಮೆರಾ ಇದ್ದು, 80 ವೈಡ್ ಆಂಗಲ್ ಪೋಟೋ ತೆಗೆಯಬಹುದಾಗಿದೆ. ಸೆಲ್ಫಿ ಕ್ಲಿಕಿಸಲು ಇದು ಸಹಾಯಕಾರಿಯಾಗಿದೆ.

ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

ಕೂಲ್‌ಪ್ಯಾಡ್‌ನ ಕೂಲ್ 1 ಡುಯಲ್ ಪೋನಿನಲ್ಲಿ 4G, ವೈ-ಫೈ, ಬ್ಲೂಟೂತ್ 4.1, ಇನ್ಫ್ರಾರೆಡ್, ಜಿಪಿಎಸ್ ಯುಎಸ್‌ಬಿ ಟೈಪ್ ಸಿ, 3.5mm ಆಡಿಯೋ ಜಾಕ್. ಮ್ಯಾಗ್ನೆಟೊಮೀಟರ್ ಮುಂತಾದ ಹಲವು ವಿಶೇಷಗಳು ಇದೆ. ಈ ಪೋನ್ 173 ಗ್ರಾಂ ತೂಕವಿದ್ದು, 152x74.8x8.2mm ಸುತ್ತಳತೆ ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Coolpad on Wednesday launched the Cool 1 Dual in India, The smartphone will be made available in two variants. to Know more visit kannada.gozot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot