Just In
- 15 hrs ago
ವಾಟ್ಸಾಪ್ ಡೆಸ್ಕ್ಟಾಪ್ ಕಾಲಿಂಗ್ ಫೀಚರ್ಸ್ ಅನ್ನು ಬಳಸುವುದು ಹೇಗೆ?
- 16 hrs ago
ಜಬರ್ದಸ್ತ್ ಫಿಟ್ನೆಸ್ ಫೀಚರ್ಸ್ಗಳೊಂದಿಗೆ ಎಂಟ್ರಿ ಕೊಡಲಿದೆ ಒಪ್ಪೊ ಬ್ಯಾಂಡ್ ಸ್ಟೈಲ್!
- 16 hrs ago
ಮೊಜ್ ಅಪ್ಲಿಕೇಶನ್ ವೀಡಿಯೊಗಳನ್ನು ಡೌನ್ಲೋಡ್ ಮಾಡುವುದು ಹೇಗೆ?
- 17 hrs ago
MS ವರ್ಡ್ ಡಾಕ್ಯುಮೆಂಟ್ ಫೈಲ್ ಅನ್ನು PDF ಮಾದರಿಯಲ್ಲಿ ಸೇವ್ ಮಾಡುವುದು ಹೇಗೆ?
Don't Miss
- News
ಸಂಪುಟದ 6 ಸಚಿವರು ಕೋರ್ಟ್ ಮೊರೆ ಹೋಗಿದ್ದೇಕೆ?: ಬಿ ಸಿ ಪಾಟೀಲ್ ಸ್ಪಷ್ಟನೆ
- Automobiles
ಇವಿ ವಾಹನಗಳಿಗೆ ಚಾರ್ಜಿಂಗ್ ಸೌಲಭ್ಯ ಒದಗಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಹೆಚ್ಪಿಸಿಎಲ್
- Finance
ಮಾರ್ಚ್ 06ರ ಪೆಟ್ರೋಲ್, ಡೀಸೆಲ್ ದರ ಇಲ್ಲಿದೆ
- Lifestyle
ದಿನ ಭವಿಷ್ಯ: ನಿಮ್ಮ ರಾಶಿಗೆ ಶನಿವಾರ ದಿನ ಹೇಗಿರಲಿದೆ ನೋಡಿ
- Movies
ಖ್ಯಾತ ನಿರ್ಮಾಪಕಿ ವಿರುದ್ಧ ಪ್ರಕರಣ ದಾಖಲಿಸಿದ ನಟ ಸುನಿಲ್ ಶೆಟ್ಟಿ
- Education
KSCCF Recruitment 2021: 45 ಲೆಕ್ಕಿಗರು, ಎಫ್ಡಿಎ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಸಮಬಲ ಸಾಧಿಸಿದ ಗೋವಾ ಎಫ್ಸಿ, ಮುಂಬೈ ಎಫ್ಸಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೂಲ್‌ಪ್ಯಾಡ್ ಕಂಪನಿಯ ಈ ಹೊಸ ಸ್ಮಾರ್ಟ್‌ಫೋನ್ ಬೆಲೆ 5,999 ಮಾತ್ರ.!!
ಚೀನಾ ಮೂಲದ ಪ್ರಮುಖ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳು ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವುದರ ಮೂಲಕ ತಮ್ಮ ಪ್ರಾಬಲ್ಯವನ್ನು ಸಾಧಿಸುತ್ತಿವೆ. ಅವುಗಳಲ್ಲಿ ಕೂಲ್‌ಪ್ಯಾಡ್ ಸ್ಮಾರ್ಟ್‌ಫೋನ್ ಕಂಪನಿ ಸಹ ಒಂದು. ಇತ್ತೀಚಿನ ಕೆಲ ತಿಂಗಳಿಂದ ಯಾವುದೇ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡದೇ ಸೈಲೆಂಟ್ ಆಗಿದ್ದ ಕೂಲ್‌ಪ್ಯಾಡ್ ಕಂಪನಿ ಇದೀಗ ಶಾಕ್ ಕೊಡಲು ಮುಂದಾಗಿದೆ.!
ಹೌದು, ಕೂಲ್‌ಪ್ಯಾಡ ಕಂಪನಿಯು 'ಕೂಲ್‌ಪ್ಯಾಡ್ ಕೂಲ್ 3' ಹೆಸರಿನ ಅತೀ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್ ಒಂದನ್ನು ಬಿಡುಗಡೆ ಮಾಡಿದ್ದು, ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಸ್ಥಾನ ಹೊಂದವ ಗುರಿ ಹೊಂದಿದೆ ಎನ್ನಲಾಗುತ್ತಿದೆ. ಕಂಪನಿ ಈ ಹಿಂದೆ ಬಿಡುಗಡೆ ಮಾಡಿದ್ದ ಕೂಲ್‌ಪ್ಯಾಡ ನೋಟ್ 6 ಸ್ಮಾರ್ಟ್‌ಫೋನಿನ ಡಿಸ್‌ಪ್ಲೇ ಡಿಸೈನ್ ಆಕರ್ಷಣಿಯವಾಗಿರಲಿಲ್ಲ. ಇಂಥಹ ಕೆಲ ಲೋಪಗಳನ್ನು, ಕೂಲ್ 3 ಸ್ಮಾರ್ಟ್‌ಫೋನ್‌ನಲ್ಲಿ ಸರಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಇತರೆ ಕಂಪನಿಗಳ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳೊಂದಿಗೆ ಫೈಪೋಟಿಗೆ ಸಿದ್ಧವಾಗಿಯೇ ಎಂಟ್ರಿ ಕೊಟ್ಟಿರುವ 'ಕೂಲ್‌ಪ್ಯಾಡ ಕೂಲ 3' ಸ್ಮಾರ್ಟ್‌ಫೋನ್ ಹೊಸ ಆಂಡ್ರಯ್ಡ್ 9 ಪೈ ಯನ್ನು ಹೊಂದಿದ್ದು, ಇದರೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಯನ್ನು ಹೊಂದಿದೆ. ಹಾಗಾದರೇ 'ಕೂಲ್‌ಪ್ಯಾಡ ಕೂಲ 3' ಸ್ಮಾರ್ಟ್‌ಫೋನ್ ಇತರೆ ಏನೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಡಿಸ್‌ಪ್ಲೇ
ಕೂಲ್‌ಪ್ಯಾಡ ಕಂಪನಿಯ ಕೂಲ್ 3 ಸ್ಮಾರ್ಟ್‌ಫೋನ್ 720x1500 ಪಿಕ್ಸಲ್ ಸಾಮರ್ಥ್ಯದ ರೆಸಲ್ಯೂಶನ್ ನೊಂದಿಗೆ 5.71 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಹೊಂದಿದೆ. ಕಡಿಮೆ ಬೆಲೆಗೆ ಉತ್ತಮ ಡಿಸ್‌ಪ್ಲೇ ನೀಡುವ ಪ್ರಯತ್ನ ಎನ್ನಬಹುದಾಗಿದೆ.

ಪ್ರೊಸೆಸರ್
ಮಧ್ಯಮ ಶ್ರೇಣಿಯ ಬೆಲೆಯ ಸ್ಮಾರ್ಟ್‌ಫೋನ್ ಎಂಬ ಹಣೆಪಟ್ಟಿಯಲ್ಲಿ ಬಿಡುಗಡೆಗೊಂಡ ಈ ಕೂಲ್ 3 ಸ್ಮಾರ್ಟ್‌ಫೋನ್ 1.3 ಗಿಗಾಹರ್ಡ್ ಸಾಮರ್ಥ್ಯದೊಂದಿಗೆ ಆಕ್ಟಾಕೋರ್ ಯುನಿಕೋರ್ ಪ್ರೊಸೆಸರ್ ಈ ಸ್ಮಾರ್ಟ್‌ಫೋನ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ತನ್ನ ವರ್ಗದಲ್ಲಿಯೇ ತಕ್ಕಮಟ್ಟಿನ ಪ್ರೊಸೆಸರ್ ಸಾಮರ್ಥ್ಯ ಇದಾಗಿದೆ.

ಮೆಮೊರಿ
ಕೂಲ್‌ಪ್ಯಾಡ್ ಕೂಲ್ 3 ಸ್ಮಾರ್ಟ್‌ಫೋನ್ 2GB RAM ಸಾಮರ್ಥ್ಯದೊಂದಿಗೆ 16 GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಬಾಹ್ಯ ಸಾಮರ್ಥ್ಯವನ್ನು 128 GB ವರೆಗೂ ವಿಸ್ತರಿಸುವ ಅವಕಾಶ ನೀಡಲಾಗಿದೆ.

ಕ್ಯಾಮೆರಾ
ಹಿಂಬದಿಯಲ್ಲಿ ಒಟ್ಟು ಎರಡು ಕ್ಯಾಮೆರಾಗಳನ್ನು ನೀಡಲಾಗಿದೆ. ಅದರಲ್ಲಿ ಪ್ರಾಥಮಿಕ ಕ್ಯಾಮೆರಾ 8 ಮೆಗಾಪಿಕ್ಸಲ್ ಸಾಮರ್ಥ್ಯವನ್ನು ಹೊಂದಿದ್ದರೇ, ಸೆಕೆಂಡರಿ ಕ್ಯಾಮೆರಾ 0.3 ಸಾಮರ್ಥ್ಯವನ್ನು ಒಳಗೊಂಡಿದೆ. ಇನ್ನು ಮುಂಬದಿಯಲ್ಲಿ ಸೆಲ್ಫೀಗಾಗಿಯೇ 5 ಮೆಗಾಪಿಕ್ಸಲ್ ಸಾಮರ್ಥ್ಯದ ಕ್ಯಾಮೆರಾವನ್ನು ನೀಡಿಲಾಗಿದೆ.

ಬ್ಯಾಟರಿ
ಈ ಬಜೆಟ್ ಸ್ಮಾರ್ಟ್‌ಫೋನ್ 3000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಸಾಧಾರಣವಾಗಿ ಒಂದು ದಿನ ಬಾಳಿಕೆ ಬರುತ್ತದೆ. ಮಧ್ಯಮ ಶ್ರೇಣಿಯ ದರದ ಸ್ಮಾರ್ಟ್‌ಫೋನ್‌ಗಳಲ್ಲಿ ಹೆಚ್ಚಿನ ಬ್ಯಾಟರಿ ನಿರೀಕ್ಷಿಸಲಾಗದು.

ಬೆಲೆ.?
ಈ ಮೊದಲೇ ತಿಳಿಸಿದಂತೆ ಕೂಲ್‌ಪ್ಯಾಡ್ ಕೂಲ್ 3 ಸ್ಮಾರ್ಟ್‌ಫೋನ್ ಕಡಿಮೆ ದರದ ಸ್ಮಾರ್ಟ್‌ಫೋನ್ ಆಗಿದ್ದು, ಮಿಡ್‌ನೈಟ್ ಬ್ಲ್ಯಾಕ್, ರೂಬಿ ಬ್ಲ್ಯಾಕ್, ಓಸಿಯನ್ ಇಂಡಿಗೋ ಮತ್ತು ಟಿಲ್ ಗ್ರೀನ್ ಬಣ್ಣಗಳಲ್ಲಿ ದೊರೆಯಲಿದೆ. ಈ ಸ್ಮಾರ್ಟ್‌ಫೋನ್ ಬೆಲೆ 5,999 ರೂ.ಗಳು ಆಗಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190