Subscribe to Gizbot

ಏನೀದು ಡ್ಯುಯಲ್ ಕ್ಯಾಮೆರಾ.? ನೀವು ತಿಳಿಯಲೇ ಬೇಕಾದ ವಿಷಯಗಳು.!

Written By:

ಸದ್ಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಡ್ಯುಯಲ್ ಕ್ಯಾಮೆರಾ ಟ್ರೆಂಡ್ ಹೆಚ್ಚಾಗಿದ್ದು, ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿಯೂ ಡ್ಯುಯಲ್ ಕ್ಯಾಮೆರಾ ಇರುವುದನ್ನು ನಾವು ಕಾಣಬಹುದಾಗಿದೆ. ಈ ಹಿನ್ನಲೆಯಲ್ಲಿ ಸಾಕಷ್ಟು ಬಳಕೆದಾರರಿಗೆ ಈ ಡ್ಯುಯಲ್ ಕ್ಯಾಮೆರಾ ಎಂದರೇನು ಎಂಬುದು ತಿಳಿದಿಲ್ಲ. ಎರಡು ಲೈನ್ಸ್ ಗಳನ್ನು ಅಳವಡಿಸಲಾಗಿರುತ್ತದೆ ಎನ್ನುವುದನ್ನು ಬಿಟ್ಟರೆ, ಇದು ಹೇಗೆ ಕಾರ್ಯನಿರ್ವಹಿಸಲಿದೆ. ಇದರಿಂದಾಗಿ ಏನು ಲಾಭ ಎನ್ನುವುದನ್ನು ತಿಳಿಯುವ ಪ್ರಯತ್ನವನ್ನು ಮಾಡಿಲ್ಲ.

ಏನೀದು ಡ್ಯುಯಲ್ ಕ್ಯಾಮೆರಾ.? ನೀವು ತಿಳಿಯಲೇ ಬೇಕಾದ ವಿಷಯಗಳು.!

ಈ ಹಿನ್ನಲೆಯಲ್ಲಿ ಡ್ಯುಯಲ್ ಕ್ಯಾಮೆರಾ ತಂತ್ರಜ್ಞಾನದ ಹೇಗೆ ಕಾರ್ಯನಿರ್ವಹಿಸಲಿದೆ, ಫೋಟೋ ತೆಗೆಯುವ ಸಂದರ್ಭದಲ್ಲಿ ಈ ಎರಡು ಕ್ಯಾಮೆರಾಗಳು ಹೇಗೆ ಕಾರ್ಯನಿರ್ವಹಿಸಲಿವೆ ಎನ್ನುವುದನ್ನು ತಿಳಿಸುವ ಪ್ರಯತ್ನವು ಇದಾಗಿದೆ. ಇದರಿಂದಾಗಿ ನೀವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡ್ಯುಯಲ್ ಕ್ಯಾಮೆರಾವನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏನೀದು ಡ್ಯುಯಲ್ ಕ್ಯಾಮೆರಾ:

ಏನೀದು ಡ್ಯುಯಲ್ ಕ್ಯಾಮೆರಾ:

ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಅಡ್ಡವಾಗಿ ಇಲ್ಲವೇ ಉದ್ದದಲ್ಲಿ ಕಾಣಿಸಿಕೊಳ್ಳುವ ಡ್ಯುಯಲ್ ಕ್ಯಾಮೆರಾ ಸೆಟಪ್ ನಲ್ಲಿ ಹೆಸರೇ ಹೇಳುವಂತೆ ಎರಡು ಕ್ಯಾಮೆರಾ ಲೆನ್ಸ್ ಗಳನ್ನು ಕಾಣಬಹುದಾಗಿದೆ. ಇದರಲ್ಲಿ ಒಂದು ಪ್ರಾಥಮಿಕ ಲೆನ್ಸ್ ಮತ್ತೊಂದನ್ನು ಹೆಚ್ಚುವರಿ ಲೆನ್ಸ್ ಎಂದು ಕರೆಯಲಾಗುತ್ತದೆ. ಮೊದಲ ಲೆನ್ಸ್ ನೀವು ಬಯಸುವ ವಸ್ತುವನ್ನು ಸೆರೆಹಿಡಿಯಲು ಮುಂದಾದರೆ ಇನ್ನೊಂದು ಕ್ಯಾಮೆರಾ ಬ್ಯಾಕ್‌ಗ್ರಾಂಡ್, ಲೈಟ್ ಮುಂತಾದ ಅಂಶಗಳನ್ನು ಸೆರೆಹಿಡಿದು, ಫೋಟೋವಿನಲ್ಲಿ ಡೆಪ್ತ್ ಆಫ್ ಫಿಲ್ಡ್ ಏಫೆಕ್ಟ್ ಮೂಲಕ ಹಿಂಬದಿಯನ್ನು ಬ್ಲರ್ ಮಾಡಿ ಫೋಟೊವನ್ನು ಉತ್ತಮವಾಗಿ ಕಾಣುವಂತೆ ಮಾಡಲಿದೆ.

ಡ್ಯುಯಲ್ ಕ್ಯಾಮೆರಾ ಉಪಯೋಗವೇನು?

ಡ್ಯುಯಲ್ ಕ್ಯಾಮೆರಾ ಉಪಯೋಗವೇನು?

ಉತ್ತಮವಾದ ಶಾರ್ಪ್ ಇಮೇಜ್‌ಗಳನ್ನು ಸೆರೆಹಿಡಿಯಲು ಡ್ಯುಯಲ್ ಕ್ಯಾಮೆರಾ ಸಹಾಯ ಮಾಡಲಿದ್ದು, ಇದರಲ್ಲಿ ಸಾಮಾನ್ಯವಾಗಿ ಒಂದು ವೈಡ್ ಆಂಗಲ್ ಲೆನ್ಸ್ ಆಗಲಿದ್ದು, ಅಗಲವಾದ ಚಿತ್ರಗಳನ್ನು ಸೆರೆಹಿಡಿಲು ಬಳಕೆಯಾದರೆ. ಮತ್ತೊಂದು ಜೂಮ್ ಲೈನ್ಸ್ ಆಗಲಿದ್ದು, ದೂರದ ವಸ್ತುಗಳನ್ನು ಜೂಮ್ ಮಾಡಿ ಸೆರೆಹಿಡಿಯಲು ಸಹಾಯವನ್ನು ಮಾಡಲಿದೆ. ಇದರಿಂದಾಗಿ ನಿಮ್ಮ ಫೋಟೋಗಳು ಉತ್ತಮವಾಗಿ ಮೂಡಿಬರಲಿದೆ.

ಡ್ಯುಯಲ್ ಕ್ಯಾಮೆರಾ ಬೆಸ್ಟ್..?

ಡ್ಯುಯಲ್ ಕ್ಯಾಮೆರಾ ಬೆಸ್ಟ್..?

ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದ ಮಾತ್ರವೇ ಅದು ಸಿಂಗಲ್ ಲೆನ್ಸ್ ಗಿಂತಲೂ ಉತ್ತಮವಾಗಿದೆ ಎಂದಲ್ಲ. ಉತ್ತಮ ಫೋಟೋಗಳನ್ನು ಸೆರೆಹಿಡಿಯುವುದು ಸೆನ್ಸರ್ ಗ್ರಾತ್ರ, ಪಿಕ್ಸಲ್, ಅಪರ್ಚರ್ ಗಳ ಮೇಲೆ ನಿರ್ಧಾರಿತವಾಗಿರುತ್ತದೆ. ಈ ಅಂಶಗಳನ್ನು ಉತ್ತಮವಾಗಿರುವ ಸಿಂಗಲ್ ಲೆನ್ಸ್‌ನಲ್ಲಿಯೂ ಬೆಸ್ಟ್ ಪೋಟೋಗಳನ್ನು ಸೆರೆಹಿಡಿಯಬಹುದು.

ಸೆಲ್ಫಿಗಾಗಿ ಡ್ಯುಯಲ್ ಕ್ಯಾಮೆರಾ:

ಸೆಲ್ಫಿಗಾಗಿ ಡ್ಯುಯಲ್ ಕ್ಯಾಮೆರಾ:

ಸದ್ಯ ಸ್ಮಾರ್ಟ್‌ಫೋನಿನಲ್ಲಿ ಸೆಲ್ಫಿ ಆಧ್ಯತೆ ಹೆಚ್ಚಾಗುತ್ತಿದ್ದು, ಬಳಕೆದಾರರು ಸೆಲ್ಪಿಗಾಗಿ ಡ್ಯುಯಲ್ ಕ್ಯಾಮೆರಾವನ್ನು ನೀಡಲಾಗುತ್ತಿದೆ. ಇದರಲ್ಲಿ ಹೆಚ್ಚಾಗಿ ಬೊಕ್ಕೆ ಎಫೆಕ್ಟ್ ಅನ್ನು ಪಡೆಯುವ ಸಲುವಾಗಿ ಡ್ಯುಯಲ್ ಕ್ಯಾಮೆರಾ ಬಳಸಿಕೊಳ್ಳಲಾಗುತ್ತಿದೆ. ಹಿಂಭಾಗದ ಕ್ಯಾಮೆರಾಕ್ಕೆ ಹೋಲಿಸಿದರೆ ಮುಂಭಾಗದ ಡ್ಯುಯಲ್ ಕ್ಯಾಮೆರಾದ ಕೆಲಸ ಕಡಿಮೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Dual cameras in smartphones: Everything you need to know. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot