ಫೇಸ್‌ಬುಕ್ ಸ್ಲಿಂಗ್‌ಶಾಟ್ ಇನ್ನಷ್ಟು ನವೀಕರಣಗಳತ್ತ

Written By:

ಫೇಸ್‌ಬುಕ್‌ನ ಫೋಟೋ ಸಂದೇಶಿಸುವಿಕೆ ಅಪ್ಲಿಕೇಶನ್ ಸ್ಲಿಂಗ್‌ಶಾಟ್ ಅನ್ನು ಗುರುವಾರ ನವೀಕರಿಸಲಾಗಿದ್ದು ಇನ್ನಷ್ಟು ವೈವಿಧ್ಯಮಯ ಅಂಶಗಳನ್ನು ಇದರಲ್ಲಿ ಸೇರ್ಪಡೆಗೊಳಿಸಲಾಗಿದೆ. ಕಳೆದ ತಿಂಗಳಷ್ಟೇ ಈ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಲಾಗಿತ್ತು.

ಪ್ರತಿಕ್ರಿಯೆ ಸಂದೇಶಗಳಿಗೆ ಬಳಕೆದಾರರು ಇದೀಗ ಪ್ರತಿಕ್ರಿಯಿಸಬಹುದಾಗಿದ್ದು ಇದರೊಂದಿಗೆ ಸ್ಲಿಂಗ್‌ಶಾಟ್‌ನ ಸಿಗ್ನೇಚರ್ "ಶಾಟ್-ಫಾರ್-ಶಾಟ್" ನಿರ್ಗಮಿಸಲಿದೆ.

ಸ್ಲಿಂಗ್‌ಶಾಟ್ ಬಳಕೆಯಲ್ಲಿದೆ ಮಜಾ

ಮುಂಚೆ ಬಳಕೆದಾರರು ತಮ್ಮದೇ ಆದ ಅಭಿಪ್ರಾಯವನ್ನು ಮೊದಲು ಕಳುಹಿಸಲಾಗದೇ ಸಂದೇಶವನ್ನು ಮಾತ್ರವೇ ನೋಡಬಹುದಾಗಿತ್ತು. ಈ ನಿಯಮ ದೈನಂದಿನ ಸಂದೇಶಗಳಿಗೆ ಕೂಡ ಅನ್ವಯವಾಗುತ್ತಿತ್ತು. ಇಲ್ಲಿ ಏಕ ಪ್ರತಿಕ್ರಿಯೆ ಮಾತ್ರ ಸಾಧ್ಯವಾಗುತ್ತಿತ್ತು. ಇದೀಗ ಬಳಕೆದಾರರು ಮಿತಿಯಲ್ಲದಷ್ಟು ಪ್ರತಿಕ್ರಿಯೆ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬಹುದಾಗಿದೆ.

ಈ ಬದಲಾವಣೆ ಅಷ್ಟೊಂದು ದೊಡ್ಡದೇನಲ್ಲವಾದರೂ ಬಳಕೆದಾರರಿಗೆ ಹೆಚ್ಚು ಅನುಕೂಲವನ್ನು ಮಾಡಿಕೊಟ್ಟಿದೆ ಎಂದೇ ಹೇಳಬಹುದು. ಪ್ರತಿಕ್ರಿಯೆಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ಕಳುಹಿಸಿಕೊಡುವ ವಿಶಿಷ್ಟ ವಿಧಾವನ್ನು ಫೇಸ್‌ಬುಕ್ ಸ್ಲಿಂಗ್‌ಶಾಟ್‌ನಲ್ಲಿ ಅಳವಡಿಸುತ್ತಿರುವುದು ನಿಜಕ್ಕೂ ಖುಷಿಯ ವಿಷಯವಾಗಿದೆ.

"ಮೈ ಪೀಪಲ್" ಟ್ಯಾಬ್ ಅನ್ನು ಸೇರಿಸುವ ಮೂಲಕ ಸ್ನೇಹಿತರನ್ನು ಸೇರಿಸಿಕೊಳ್ಳುವ ವಿಧಾನವನ್ನು ನವೀಕರಣವು ಸುಧಾರಿಸಿದ್ದು ಇದರಿಂದ ನಿಮ್ಮ ಫೇಸ್‌ಬುಕ್ ಗೆಳೆಯರು ಮತ್ತು ನಿಮ್ಮ ಸಂಪರ್ಕಗಳಲ್ಲಿರುವ ಗೆಳೆಯರನ್ನು ಒಂದೇ ಪಟ್ಟಿಯಲ್ಲಿ ಇರಿಸಬಹುದಾಗಿದೆ. ಅಪ್ಲಿಕೇಶನ್ ಅನ್ನು ಹೊಂದಿಲ್ಲದಿರುವ ಸಂಪರ್ಕಗಳಿಗೆ ಬಳಕೆದಾರರು ಅಪ್ಲಿಕೇಶನ್ ಮೂಲಕ ಪಠ್ಯ ಸಂದೇಶವನ್ನು ಕೂಡ ಕಳುಹಿಸಬಹುದು.

Read more about:
English summary
This article tells about Facebook Updates Slingshot With Unlimited Reactions.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot