ಸ್ಮಾರ್ಟ್‌ಫೋನ್‌ನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ ಕೃತಕ ಬುದ್ಧಿಮತ್ತೆ..!

By Lekhaka
|

ಭವಿಷ್ಯದಲ್ಲಿ ಇನ್ಯಾವ ರೀತಿಯ ಮೊಬೈಲ್ ಫೋನ್ ಬರುತ್ತೋ ಎಂದು ಆಗಾಗ ಮಾತನಾಡಿಕೊಳ್ಳುತ್ತೇವೆ. ಸದ್ಯ ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿ ಆಗುತ್ತಿರುವ ಬದಲಾವಣೆಗಳು ಇಂತಹದ್ದೊಂದು ಪ್ರಶ್ನೆಯನ್ನು ಹುಟ್ಟುಹಾಕಿದೆ. ದಿನದಿಂದ ದಿನಕ್ಕೆ ಕೈಯಲ್ಲಿ ಪ್ರಪಂಚ ನೋಡುವಂತಾಗಿರುವುದು ಖಂಡಿತ ಮನುಷ್ಯನ ಸಾಧನೆಯೇ ಸರಿ. ಇನ್ನು ಹೆಚ್ಚು ತಂತ್ರಜ್ಞಾನ ಮುಂದುವರಿಯಲಿದೆ ಎಂಬುದರಲ್ಲಿ ಯಾವುದೇ ಅನುಮಾನಗಳಿಲ್ಲ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸೌಲಭ್ಯಗಳು ಮೊಬೈಲ್ ಜಗತ್ತಿನಲ್ಲಿ ಕಾಣಬಹುದು.

ಸ್ಮಾರ್ಟ್‌ಫೋನ್‌ನಲ್ಲಿ ಮಹತ್ತರ ಬದಲಾವಣೆ ತರುತ್ತಿದೆ ಕೃತಕ ಬುದ್ಧಿಮತ್ತೆ..!

ಮುಂದಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳಲ್ಲಿ ಗಮನಿಸಬಹುದಾದ ಮಹತ್ವದ ವಿಚಾರ ಅಂದ್ರೆ ಅದು ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್. ಎಐಯಿಂದ ಹಲವು ಪ್ರಯೋಜನಗಳಿದ್ದರೂ ಕೂಡ ಕೈಯಲ್ಲಿ ಹಿಡಿಯುವ ಸ್ಮಾರ್ಟ್ ಫೋನ್ ನಂತಹ ಸಾಧನದಲ್ಲಿ ಅದನ್ನು ಲಿಮಿಟ್ ಮಾಡಲಾಗಿದೆ.

ಮುಂದಿನ ವರ್ಷಗಳಲ್ಲಿ ನಿಮಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದಾಗಿ ಸಿಗುವ ಪ್ರಮುಖ 5 ಸ್ಮಾರ್ಟ್ ಫೋನ್ ಅನುಭವಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ.

ಕಡಿಮೆ ಬೆಲೆಯ ಮೊಬೈಲ್ ಫೋನ್ ಗಳಲ್ಲೂ ಕೂಡ ಎಐ ಚಾಲಿತ ಚಿಪ್ ಸೆಟ್ ಗಳ ಲಭ್ಯತೆ 

ಕಡಿಮೆ ಬೆಲೆಯ ಮೊಬೈಲ್ ಫೋನ್ ಗಳಲ್ಲೂ ಕೂಡ ಎಐ ಚಾಲಿತ ಚಿಪ್ ಸೆಟ್ ಗಳ ಲಭ್ಯತೆ 

UNISOC ಭಾರತೀಯ ಬಳಕೆದಾರರ ದೈನಂದಿನ ಜೀವನದಲ್ಲಿ ಏಐ ಬಳಸುವ ಬಗ್ಗೆ ಹೊಸದೊಂದು ಮಾರ್ಗವನ್ನು ಕಂಡುಹಿಡಿದಿದ್ದಾರೆ.ಭಾರತೀಯ ಮಾರುಕಟ್ಟೆಯಲ್ಲಿ ಇದು 40 ಶೇಕಡಾ ಪಾಲವನ್ನು ಹೊಂದಿದೆ ಮತ್ತು ಭವಿಷ್ಯದ ಫೋನ್ ಗಾಗಿ ಇನ್ವೆಸ್ಟ್ ಮಾಡಲಾಗಿದೆ. UNISOC ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ್ನು ಬೆಂಬಲಿಸುವ ಚಿಪ್ ಸೆಟ್ ಬಿಡುಗಡೆಗೆ ಚಿಂತನೆ ಮಾಡಲಾಗುತ್ತಿದೆ.
ಫೇಶಿಯಲ್ ರೆಕಗ್ನಿಷನ್ ಸೇರಿದಂತೆ ಕೆಲವು ಪ್ರಮುಖ ಅಡ್ವಾನ್ಸ್ಡ್ ವೈಶಿಷ್ಟ್ಯತೆಗಳನ್ನು ಭಾರತೀಯ ಬಳಕೆದಾರರಿಗಾಗಿ ಅಭಿವೃದ್ಧಿ ಪಡಿಸುವ ಚಿಂತನೆ ಆಗಿದೆ. ಮೊಬೈಲ್ ಫೋನ್ ಗಳ ಭದ್ರತೆ ಕಾಪಾಡುವುದು, ಆನ್ ಲೈನ್ ಟ್ರಾನ್ಸ್ಯಾಕ್ಷನ್ ಗೆ ಫೇಶಿಯಲ್ ರೆಕಗ್ನಿಷನ್ ತಂತ್ರಜ್ಞಾನ ಅಳವಡಿಕೆ ಹೀಗೆ ಹಲವು ವೈಶಿಷ್ಟ್ಯತೆಗಳ ಬಗ್ಗೆ ಚಿಂತನೆ ನಡೆಸಲಾಗಿದೆ.

ಎಐ ಪ್ರಾಯೋಗಿಕವಾಗಿ ಬಳಸಿ ವಯಕ್ತಿಕ ಮತ್ತು ಸಂದರ್ಬ ಸಹಿತ ಕರೆಗಳನ್ನು ಸ್ವಯಂಚಾಲಿತಗೊಳಿಸುವಿಕೆ 

ಎಐ ಪ್ರಾಯೋಗಿಕವಾಗಿ ಬಳಸಿ ವಯಕ್ತಿಕ ಮತ್ತು ಸಂದರ್ಬ ಸಹಿತ ಕರೆಗಳನ್ನು ಸ್ವಯಂಚಾಲಿತಗೊಳಿಸುವಿಕೆ 

ಟೆಕ್ಸ್ಟ್ ಟು ಸ್ಪೀಚ್ ಸೇವೆಗಳಿಗಾಗಿ ಎಐಯನ್ನು ದೊಡ್ಡ ಮಟ್ಟದಲ್ಲಿ "Personalized Contextual Automated Calls."ಗಳ ರೂಪದಲ್ಲಿ ಬಳಕೆ ಮಾಡಲು ಯೋಜಿಸಲಾಗುತ್ತಿದೆ. ಭಾಷೆಯಲ್ಲಿ ಸಂಪೂರ್ಣ ಹಿಡಿತ ಸಾಧಿಸಿ ಗ್ರಾಹಕರ ಅನುಭವವನ್ನು ಆ ಮೂಲಕ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಹಲವು ಡಾಟಾ ಸೋರ್ಸ್ ಮತ್ತು ಗ್ರಾಹಕರ ಅಗತ್ಯತೆಯನ್ನು ಪರಿಶೀಲಿಸಿ ಇದನ್ನು ಸಾಧಿಸಲಾಗುತ್ತದೆ.

ಕ್ಯಾಮರಾ ಲಾಭಗಳು 

ಕ್ಯಾಮರಾ ಲಾಭಗಳು 

ಎಐ ಬಳಸಿ ಕ್ಯಾಮರಾ ವೈಶಿಷ್ಟ್ಯತೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸದ್ಯ ಎಲ್ಲಾ ಫೋನ್ ತಯಾರಕರು ಪರಿಶ್ರಮ ಪಡುತ್ತಿದ್ದಾರೆ. ಎಐ ಬಳಸಿ ಫೋನ್ ಕ್ಯಾಮರಾ ಇಂಟರ್ ಫೇಸ್ ವಸ್ತುವನ್ನು ಗುರುತಿಸುವ ಸಾಮರ್ಥ್ಯವನ್ನು ಪಡೆಯಬೇಕು ಎಂಬುದು ಇದರ ಹಿಂದಿನ ಉದ್ದೇಶ.( ಆಹಾರ, ಬೆಂಕಿ, ಲ್ಯಾಂಡ್ ಸ್ಕೇಪ್ ಹೀಗೆ ಇತ್ಯಾದಿ) ಮತ್ತು ಆ ಮೂಲಕ ಅತ್ಯುತ್ತಮ ಚಿತ್ರವನ್ನು ತೆಗೆಯಲು ಮೊಬೈಲ್ ಕ್ಯಾಮರಾದಿಂದ ಸಾಧ್ಯವಾಗಬೇಕು ಎಂಬ ಉದ್ದೇಶವನ್ನು ಹೊಂದಲಾಗಿದೆ. ಎಐ ಮೂಲಕ ಫೇಶಿಯಲ್ ಫೀಚರ್ ಗಳನ್ನು ಗುರುತಿಸುವಿಕೆ ಕಾರ್ಯವು ಸ್ವಯಂಚಾಲಿತವಾಗಿ ನಡೆಯಬೇಕು ಎಂಬ ಬಗ್ಗೆ ಕೆಲಸಗಳು ನಡೆಯುತ್ತಿದೆ. ಭವಿಷ್ಯದಲ್ಲಿ ಇದು ಸಾಧ್ಯವಾಗುವುದನ್ನು ಅಲ್ಲಗೆಲೆಯುವಂತಿಲ್ಲ.

ಭಾಷಾಂತರಕ್ಕೆ ನೆರವು

ಭಾಷಾಂತರಕ್ಕೆ ನೆರವು

ಈಗ ಸದ್ಯ ಟ್ರಾನ್ಸ್ ಲೇಷನ್ ಆಪ್ ಗಳು ಲಭ್ಯವಿದ್ದು ಅವುಗಳು ನೀವು ನೀಡುವ ಟೆಕ್ಸ್ಟ್ ಗಳನ್ನು ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ತರ್ಜುಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಆದರೆ ಇವುಗಳಿಗೆ ಅಂತರ್ಜಾಲದ ಸಂಪರ್ಕ ಬೇಕಾಗುತ್ತದೆ. ಆನ್ ಬೋರ್ಡ್ ಎಐ ಬಳಸುವಿಕೆಯಿಂದ ಭವಿಷ್ಯದಲ್ಲಿ ಬೇರೆಬೇರೆಯ ಭಾಷೆಗೆ ನಿಮ್ಮ ಭಾಷೆಯನ್ನು ತರ್ಜುಮೆ ಮಾಡಲು ಯಾವುದೇ ಇಂಟರ್ನೆಟ್ ಸಂಪರ್ಕದ ಅಗತ್ಯವೇ ಇಲ್ಲದೇ ನಿಮ್ಮ ಮೊಬೈಲ್ ಗಳು ಮಾಡುವ ಸಾಮರ್ಥ್ಯವನ್ನು ಪಡೆಯುತ್ತವೆ.

ವಾಯ್ಸ್ ಅಸಿಸ್ಟೆಂಟ್ 

ವಾಯ್ಸ್ ಅಸಿಸ್ಟೆಂಟ್ 

ವಾಯ್ಸ್ ಅಸಿಸ್ಟೆಂಟ್ ಈಗಾಗಲೇ ನಮ್ಮ ನಡುವೆ ಇದೆ. ಸಿರಿ, ಗೂಗಲ್ ಅಸಿಸ್ಟೆಂಟ್, ಕೋರ್ಟಾನಾ ಮತ್ತು ಅಲೆಕ್ಸಾ ವಾಯ್ಸ್ ಅಸಿಸ್ಟೆಂಟ್ ಗಳು ಎಐ ಬಳಸಿ ನೀವು ಏನು ಹೇಳುತ್ತಿದ್ದೀರಿ ಮತ್ತು ಏನು ಪ್ರತ್ಯತ್ತರ ನೀಡಬೇಕು ಎಂಬುದನ್ನು ಅರ್ಥೈಸಿಕೊಳ್ಳಲಿವೆ.ವಾಯ್ಸ್ ಅಸಿಸ್ಟೆಂಟ್ ಗಳು ಕೇವಲ ಕ್ವೆರಿಗೆ ರಿಪ್ಲೈ ಕೊಡುವುದು ಮಾತ್ರವಲ್ಲ ಬದಲಾಗಿ ಕೆಲವು ಟಾಸ್ಕ್ ಗಳನ್ನು ಕೂಡ ಮಾಡಲಿವೆ. ಆನ್ ಲೈನ್ ಆರ್ಡರ್ ಗಳನ್ನ ಮಾಡುವುದು, ನಿರ್ಧಿಷ್ಟ ಸಾಂಗ್ ಹುಡುಕಾಡುವುದು, ಮೆಸೇಜ್ ಟೈಪ್ ಮಾಡುವುದು ಇತ್ಯಾದಿ.

Best Mobiles in India

English summary
Five ways AI is changing your smartphone experience. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X