ಫ್ಲಿಪ್ ಕಾರ್ಟ್ ಆಪಲ್ ವೀಕ್ ಸೇಲ್‌ನಲ್ಲಿ ಐಫೋನ್‌ಗಳು ಭಾರೀ ರಿಯಾಯಿತಿಯಲ್ಲಿ ಸಿಗಲಿವೆ!!

  ಫ್ಲಿಪ್ ಕಾರ್ಟ್ ನ ಮತ್ತೊಂದು ರಿಯಾಯಿತಿ ಮಾರಾಟದ ವಾರ ನಿಮ್ಮ ಮುಂದೆ ಬರಲಿದೆ. ಹೌದು, ಫ್ಲಿಪ್ ಕಾರ್ಟ್ ಆಪಲ್ ವೀಕ್ ಸೇಲ್ ಬರುತ್ತಿದೆ. 6 ದಿನಗಳ ಆಪಲ್ ವೀಕ್ ಸೇಲ್ ಬರುತ್ತಿದ್ದು, ಆಪಲ್ ಕಂಪೆನಿಯ ಪ್ರೊಡಕ್ಟ್ ಗಳು ಫ್ಲಿಪ್ ಕಾರ್ಟ್ ನಲ್ಲಿ ಭಾರೀ ರಿಯಾಯಿತಿ ದರದಲ್ಲಿ ನಿಮ್ಮ ಖರೀದಿಗೆ ಲಭ್ಯವಾಗಲಿದೆ. ಫ್ಲಿಪ್ ಕಾರ್ಟ್ನಲ್ಲಿ ಐಫೋನ್ ಗಳಾದ ಆಪಲ್ ನ ವಾರ್ಷಿಕೋರ್ಷದ ಎಡಿಷನ್ ಆಗಿರುವ iPhone X, MacBooks, iPads, AirPods and Apple Watch Series ಗಳು ಅತೀ ಕಡಿಮೆ ಬೆಲೆಗೆ ಗ್ರಾಹಕರನ್ನು ಸೆಳೆಯಲಿವೆ.

  ಫ್ಲಿಪ್ ಕಾರ್ಟ್ ಆಪಲ್ ವೀಕ್ ಸೇಲ್‌ನಲ್ಲಿ ಐಫೋನ್‌ಗಳು ಭಾರೀ ರಿಯಾಯಿತಿಯಲ್ಲಿ

  ಐಸಿಐಸಿಐ ಬ್ಯಾಂಕ್ ಗಳ ಜೊತೆಗೂ ಟೈ ಅಪ್ ಇದ್ದು, 10 ಶೇಕಡಾ ಕ್ಯಾಷ್ ಬ್ಯಾಕ್ ಅವಕಾಶವನ್ನೂ ನೀಡುತ್ತಿದೆ. ಐಸಿಐಸಿಐ ಕ್ರೆಡಿಕ್ ಕಾರ್ಡ್ ಗಳ ಮೂಲಕ ಯಾರು ಖರೀದಿ ಮಾಡುತ್ತಾರೋ ಅವರಿಗೆಲ್ಲರಿಗೂ ಈ ಆಫರ್ ಲಭ್ಯವಾಗಲಿದೆ.

  ಮೇ 21 ರಿಂದ ಅಂದರೆ ಮೇ 27 ರ ವರೆಗೆ ಈ ಸೇಲ್ ಫ್ಲಿಪ್ ಕಾರ್ಟ್ ನಲ್ಲಿ ನಡೆಯಲಿದೆ. ಫ್ಲಿಪ್ ಕಾರ್ಟ್ ನೀಡುತ್ತಿರುವ ರಿಯಾಯಿತಿಯ ವಿವರಗಳು ಇಲ್ಲಿದೆ ನೋಡಿ..

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಐ ಫೋನ್ ಎಕ್ಸ್

  ಆಪಲ್ ನ ವಾರ್ಷಿಕೋರ್ಷವದ ಎಡಿಷನ್ ಫೋನ್ ಆಗಿರುವ ಐ ಪೋನ್ ಎಕ್ಸ್ 85,999 ಗೆ ಲಭ್ಯವಾಗಲಿದ್ದು, ಮೂಲ ದರಕ್ಕಿಂತ ಸುಮಾರು 4000 ರುಪಾಯಿ ಕಡಿಮೆಯಾಗಲಿದೆ. 64 ಜಿಬಿ ಸ್ಟೋರೇಜ್ ಅವಕಾಶವಿರುವ ಐ ಫೋನ್ ಎಕ್ಸ್ ಗೆ ಈ ದರ ನಿಗದಿಯಾಗಿದೆ. ಇದೇ ಸಮಯಕ್ಕೆ 256 ಜಿಬಿ ಸ್ಟೋರೇಜ್ ಇರುವ ಮಾಡೆಲ್ ನ ಫೋನ್ ಗೆ 97,920 ರುಪಾಯಿ ಇದೆ. ಇನ್ನು ಗ್ರಾಹಕರು ಐಸಿಐಸಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ 10 ಶೇಕಡಾ ಹೆಚ್ಚಿನ ರಿಯಾಯಿತಿ ಲಭ್ಯವಾಗಲಿದೆ.

  ಐ ಫೋನ್ 8, ಐ ಫೋನ್ 8 ಪ್ಲಸ್

  62,999 ರೂಪಾಯಿಗೆ ಐ ಫೋನ್ 8 ನ್ನು ಫ್ಲಿಪ್ ಕಾರ್ಟ್ ಈ ವಾರದ ಆಪಲ್ ವೀಕ್ ಸೇಲ್ ನಲ್ಲಿ ಮಾರಾಟಕ್ಕಿಟ್ಟಿದೆ. ಇದು 64 ಜಿಬಿ ಸ್ಟೋರೇಜ್ ಇರುವ ಮೊಬೈಲ್ ಗಿರುವ ಬೆಲೆ. ಇನ್ನು 256 ಜಿಬಿ ಸ್ಟೋರೇಜ್ ಇರುವ ಐ ಫೋನ್ 8 ಮೊಬೈಲ್ ನ ಬೆಲೆ 73,999 ರುಪಾಯಿಗಳು. ಇದು ಮೂಲ ದರಕ್ಕಿಂತ ಸುಮಾರು 4000 ರುಪಾಯಿ ಕಡಿಮೆ ಬೆಲೆಯಾಗಿದೆ. ಐ ಫೋನ್ 8 ರೆಡ್ ಫೋನಿನ ಬೆಲೆಯು 64,999 ರುಪಾಯಿಯಾಗಿದ್ದು, ಮೂಲ ದರಕ್ಕಿಂತ ಸುಮಾರು 2941 ರುಪಾಯಿಯ ರಿಯಾಯಿತಿ ಸಿಗಲಿದೆ.

  ಐ ಫೋನ್ 8 ಪ್ಲಸ್ ನ 64 ಜಿಬಿ ಸ್ಟೋರೇಜ್ ಅವಕಾಶವಿರುವ ಮೊಬೈಲ್ ನ ಬೆಲೆಯು 72,999 ರುಪಾಯಿಯಾಗಿದೆ. ಇನ್ನು 256 ಜಿಬಿ ಸ್ಟೋರೇಜ್ ನ ಐ ಫೋನ್ 8 ಮಾಡೆಲ್ 85,999 ರುಪಾಯಿಗೆ ಮಾರಾಟಕ್ಕಿಡಲಾಗಿದೆ. ಐಫೋನ್ 8 ಪ್ಲಸ್ ರೆಡ್ ನ 64ಜಿಬಿ ಮತ್ತು 256 ಜಿಬಿ ಬೆಲೆಯು ಕ್ರಮವಾಗಿ 74,999 ಮತ್ತು 87,999 ರುಪಾಯಿಗಳಾಗಿವೆ.

  ಐ ಫೋನ್ 7

  ಫ್ಲಿಫ್ ಕಾರ್ಟ್ ಈ ವಾರ ಬಂಪರ್ ಸೇಲ್ ನಲ್ಲಿ ಐ ಫೋನ್ 7 ಗೆ 46,999 ಬೆಲೆಯಲ್ಲಿ ಮಾರಾಟಕ್ಕಿಟ್ಟಿದೆ. ಇದು 32 ಜಿಬಿ ಮಾಡೆಲ್ ನ ಐಫೋನ್ 7 ಆಗಿದೆ. ಇದು ಗೋಲ್ಡ್, ರೋಸ್ ಗೋಲ್ಡ್ , ಬ್ಲಾಕ್ ಕಲರ್ ನ ಎಲ್ಲಾ ಮೊಬೈಲ್ ಗೂ ಒಂದೇ ದರವಾಗಿದೆ. ಆದರೆ ಬೆಳ್ಳಿಯ ಬಣ್ಣದ ಮೊಬೈಲ್ ಐ ಫೋನ್ 7 ಗೆ ಸ್ವಲ್ಪ ಹೆಚ್ಚಿನ ಬೆಲೆ ಇದ್ದು ರಿಯಾಯಿತಿ ಸೇರಿ 48,999 ರುಪಾಯಿಗಳಿಗೆ ಮಾರಾಟಕ್ಕಿಡಲಾಗಿದೆ.

  ಐ ಫೋನ್ 6 ಎಸ್

  ಐ ಫೋನ್ 6 ಎಸ್ ಮಾಡೆಲ್ ನ ಪ್ರಾಥಮಿಕ ಬೆಲೆಯು 33,999 ರುಪಾಯಿಗಳಾಗಿದ್ದು, ಇದರ ಮೂಲ ದರ 40000 ಕ್ಕಿಂತ ಬಹಳ ಕಡಿಮೆ ಇದೆ. ಗ್ರೇ ಮತ್ತು ಗೋಲ್ಡ್ ಕಲರ್ ಎಲ್ಲಾ ಐ ಫೋನ್ 6 ಎಸ್ ನ ಬೆಲೆಯೂ ಕೂಡ ಇದೇ ಆಗಿದೆ.ಇನ್ನುಳಿದಂತೆ ಐ ಫೋನ್ 6 ಎಸ್ 32 ಜಿಬಿ ರೋಸ್ ಗೋಲ್ಡ್ ಮತ್ತು ಬೆಳ್ಳಿಯ ಬಣ್ಣದ ಫೋನಿನ ಬೆಲೆಯು 34,999 ರುಪಾಯಿಗಳಾಗಿದೆ.

  ನೀವು ಫೇಸ್‌ಬುಕ್ ಆಪ್‌ ಡಿಲೀಟ್ ಮಾಡಬೇಡಿ; ಫೇಸ್‌ಬುಕ್ಕೇ ಆಪ್‌ ಡಿಲೀಟ್ ಮಾಡಲಿದೆ..!

  ಐ ಫೋನ್ ಎಸ್ ಇ

  ಫ್ಲಿಪ್ ಕಾರ್ಟ್ ನ ಆಪಲ್ ವೀಕ್ ನಲ್ಲಿ ಅತ್ಯಂತ ಉತ್ತಮ ರಿಯಾಯಿತಿ ಇರುವ ಪೋನ್ ಎಂದರೆ ಐ ಫೋನ್ ಎಸ್ ಇ, 32 ಜಿಬಿ ಸ್ಮಾರ್ಟ್ ಫೋನ್ ಕೇವಲ 17,999 ಗೆ ಮಾರಾಟಕ್ಕಿದೆ.ಅದರ ಜೊತೆಗೆ ಐಸಿಐಸಿಐ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ ಬಳಸಿದರೆ 10 ಶೇಕಡಾ ಹೆಚ್ಚಿನ ರಿಯಾಯಿತಿ ಲಭ್ಯವಾಗಲಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.

  ಇತರೆ ಮಾಹಿತಿಗಳು

  -- Apple AirPods Bluetooth Headset with Mic ಬೆಲೆ11,499 ರುಪಾಯಿಗಳು

  -- Apple EarPods with 3.5mm Headphone Plug Wired Headset with Mic 1,899ರುಪಾಯಿಗಳು

  -- Apple TV 32 GB-Model A 1625 in Black 14,698 ರುಪಾಯಿಗಳು

  -- Apple iPad 32 GB 9.7 inch with Wi-Fi 22,900 ರುಪಾಯಿಗಳು

  -- Apple iPad (6th Gen) 32 GB 9.7 inch with Wi-Fi Only 28,000 ರುಪಾಯಿಗಳು

  -- Apple iPad Pro 64 GB 10.5 inch with Wi-Fi Only 49,900 ರುಪಾಯಿಗಳು

  --Apple Watch Series 20,900 ರುಪಾಯಿಗಳು

  --Apple MacBook Air Core i5 5th Gen 55,990 ರುಪಾಯಿಗಳು

  --Apple MacBook Air Core i5 5th Gen 72,990 ರುಪಾಯಿಗಳು

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  Flipkart Apple Week Sale Starts From Today
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more