ಬಿಗ್ ಬಿಲಿಯನ್ ಡೇಸ್ 2019: 'ಗೂಗಲ್ ಪಿಕ್ಸೆಲ್ 3ಎ' ಮೇಲೆ 10 ಸಾವಿರ ಬೆಲೆ ಇಳಿಕೆ!

|

ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ (Sep 29 ರಿಂದ ಆರಂಭ) ಇತ್ತೀಚಿನ ಗೂಗಲ್ ಪಿಕ್ಸೆಲ್ ಶ್ರೇಣಿ ಪೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಬಿಡುಗಡೆಯಾಗಿರುವ ಗೂಗಲ್ ಪಿಕ್ಸೆಲ್ 3 ಎ ಶ್ರೇಣಿಯು ಭಾರಿ ರಿಯಾಯಿತಿಯನ್ನು ಪಡೆದಿದ್ದು, ಪಿಕ್ಸೆಲ್ 3ಎ ಮತ್ತು ಪಿಕ್ಸೆಲ್ 3ಎ ಎಕ್ಸ್‌ಎಲ್ ಸ್ಮಾರ್ಟ್‌ಫೋನ್‌ಗಳ ಮೇಲೆ 10,000 ರೂಪಾಯಿಗಗಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಪಿಕ್ಸೆಲ್ 3ಎ

ಹೌದು, ಈ ವರ್ಷದ ಆರಂಭದಲ್ಲಿ ಪಿಕ್ಸೆಲ್ 3ಎ ಸ್ಮಾರ್ಟ್‌ಪೋನ್ 39,999 ರೂ.ಗಳಿಗೆ ಹಾಗೂ ಪಿಕ್ಸೆಲ್ 3 ಎ ಎಕ್ಸ್‌ಎಲ್ ಸ್ಮಾರ್ಟ್‌ಪೋನ್ 44,999 ರೂ.ಗಳ ಬೆಲೆಯಲ್ಲಿ ಮಾರುಕಟ್ಟೆಗೆ ಬಂದಿದ್ದವು. ಆದರೆ, ಈ ಬಾರಿಯ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ ಕ್ರಮವಾಗಿ 29,999 ರೂ. ಹಾಗೂ ರೂ. 39,999 ರೂ.ಗಳಿಗೆ ಎರಡೂ ಸ್ಮಾರ್ಟ್‌ಫೋನ್‌ಗಳು ಖರೀದಿಗೆ ಲಭ್ಯವಿವೆ. ಜೊತೆಗೆ ಐಸಿಐಸಿಐ ಮತ್ತು ಆಕ್ಸಿಸ್ ಬ್ಯಾಂಕ್ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಶೇಕಡಾ 10 ರಷ್ಟು ಕ್ಯಾಶ್‌ಬ್ಯಾಕ್ ಸಿಗಲಿದೆ.

ಪಿಕ್ಸೆಲ್ 3 ಎ ಎಕ್ಸ್‌ಎಲ್

ಪಿಕ್ಸೆಲ್ 3 ಎ ಮತ್ತು ಪಿಕ್ಸೆಲ್ 3 ಎ ಎಕ್ಸ್‌ಎಲ್ ಎರಡೂ ಒಂದೇ ರೀತಿಯ ಹಾರ್ಡ್‌ವೇರ್ ಹೊಂದಿದ್ದು, ಸ್ವಲ್ಪ ಬದಲಾವಣೆಗಳಿವೆ. ಹೊಸ ಪಿಕ್ಸೆಲ್ 3ಎ ಫೋನಿನಲ್ಲಿರುವ ಎಆರ್ ನೇವಿಗೇಷನ್ ಫೀಚರ್‌ನಲ್ಲಿ ರಿಯಲ್ ಟೈಮ್ ಮಾರ್ಗದರ್ಶಕಗಳಾದ ಏರೋ ಚಿಹ್ನೆಗಳು ಸಾಕಷ್ಟು ನಿಖರವಾಗಿದೆ ಎಂಬುದನ್ನು ಉದಾಹರಣೆ ಸಹಿತ ಗೂಗಲ್ ತೋರಿಸಿದೆ. ಹಾಗಾದರೆ, ಮಾರುಕಟ್ಟೆಯಲ್ಲಿ ಬೆಲೆ ಕಳೆದುಕೊಂಡಿರುವ ಗೂಗಲ್ ಪಿಕ್ಸೆಲ್ 3ಎ ಹಾಗೂ ಪಿಕ್ಸೆಲ್ 3ಎ ಎಕ್ಸ್‌ಎಲ್ ಫೋನ್‌ಗಳು ಹೇಗಿವೆ ಎಂಬುದನ್ನು ನೋಡೋಣ ಬನ್ನಿ.

ಡಿಸೈನ್‌

ಡಿಸೈನ್‌

ಡ್ರಾಗನ್‌ ಗ್ಲಾಸ್ ಜೊತೆಗೆ ಕಡಿಮೆ ಅಂಚು ಡಿಸ್‌ಪ್ಲೇಯೊಂದಿಗೆ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಫೋನ್‌ಗಳು ಬಿಡುಗಡೆಯಾಗಿವೆ. ಎರಡೂ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸೈನ್‌ನಲ್ಲಿದೆ ಎಂದು ಹೇಳಬಹುದಾರೂ ಸಹ, ಹಿಂಬದಿಯಲ್ಲಿರುವ ಸಿಂಗಲ್ ರಿಯರ್ ಕ್ಯಾಮೆರಾ ಮತ್ತು ಫಿಂಗರ್‌ ಸೆನ್ಸಾರ್ ಆಯ್ಕೆಗಳು ಹಳೆಯ ಮಾದರಿ ಸ್ಮಾರ್ಟ್‌ಫೋನ್‌ಗಳಲ್ಲಿ ಇರುವಂತೆ ಕಾಣಿಸುತ್ತವೆ.

ಡಿಸ್‌ಪ್ಲೇ

ಡಿಸ್‌ಪ್ಲೇ

GOLED ಮಾದರಿಯ ಅತ್ಯುತ್ತಮ 1080x2220 ಪಿಕ್ಸಲ್ ರೆಸಲ್ಯೂಶನ್ ನೊಂದಿಗೆ 5.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಸ್ಮಾರ್ಟ್‌ಫೋನ್‌ಗಳು ಹೊಂದಿವೆ. ಡಿಸ್‌ಪ್ಲೇಯು ಡ್ರಾಗನ್‌ ಟ್ರೈಯಲ್ ಗ್ಲಾಸ್ ರಕ್ಷಣೆಯನ್ನು ಪಡೆದಿದೆ. ಹಾಗೆಯೇ 24 ಬಿಟ್‌ ಕಲರ್‌ ಡೆಪ್ತ್ ಸಾಮರ್ಥ್ಯವನ್ನು ಹೊಂದಿರುವ ಡಿಸ್‌ಪ್ಲೇಯು 18.5:9 ಅನುಪಾತದಲ್ಲಿರುವುದನ್ನು ನೀವು ನೋಡಬಹುದು.

ಪ್ರೊಸೆಸರ್

ಪ್ರೊಸೆಸರ್

'ಪಿಕ್ಸಲ್ 3a' ಮತ್ತು 'ಪಿಕ್ಸಲ್ 3a XL' ಎರಡು ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಂ ಸ್ನ್ಯಾಪ್‌ಡ್ರಾಗನ್‌ 670 ಪ್ರೊಸೆಸರ್‌ ಕಾರ್ಯನಿರ್ವಹಿಸಲಿದ್ದು, ವೇಗದ ಕೆಲಸಗಳನ್ನು ನಿರ್ವಹಿಸಬಲ್ಲದು. ಇದರೊಂದಿಗೆ 4GB ಸಾಮರ್ಥ್ಯ RAM ಜೊತೆಗೆ 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿರಲಿದೆ. ಪೋನ್‌ಗಳು ಮಲ್ಟಿಟಾಸ್ಕ್ ಕಾರ್ಯಗಳನ್ನು ಸುಲಭವಾಗಿ ನಿರ್ವಹಿಸಲಿವೆ.

ಕ್ಯಾಮೆರಾ

ಕ್ಯಾಮೆರಾ

ಗೂಗಲ್ ಪಿಕ್ಸಲ್ 3a ಮತ್ತು ಪಿಕ್ಸಲ್ 3a XL ಎರಡು ಫೋನ್‌ಗಳಲ್ಲಿ ಹಿಂಬದಿಯಲ್ಲಿ 12ಎಂಪಿ ಸಾಮರ್ಥ್ಯದ ರಿಯರ್ ಕ್ಯಾಮೆರಾ ಮತ್ತು 8ಎಂಪಿ ಸೆಲ್ಫೀ ಕ್ಯಾಮೆರಾ ನೀಡಲಾಗಿದೆ. 12 ಮೈಕ್ರಾನ್‌ ಹೈ ರೆಸಲ್ಯೂಶನ್ ಶಕ್ತಿಯೊಂದಿಗೆ LED ಫ್ಲ್ಯಾಶ್,ಹೆಚ್‌ಡಿ ವಿಡಿಯೊ ಕಾಲಿಂಗ್ ಸೌಲಭ್ಯ ಸಹ ಒದಗಿಸಲಾಗಿದೆ. ಸೂಪರ್‌ RES ಜೂಮ್, ಸ್ಲೋ ಮೋಷನ್, ನೈಟ್‌ ಮೋಡ್‌ ಆಯ್ಕೆಗಳು ಇವೆ.

ಬ್ಯಾಟರಿ

ಬ್ಯಾಟರಿ

ಗೂಗಲ್ ಪಿಕ್ಸಲ್ 3a ಫೋನ್‌ 3,000mAh ಸಾಮರ್ಥ್ಯದ ಬ್ಯಾಟರಿ ಶಕ್ತಿಯನ್ನು ಹೊಂದಿದೆ. ಹಾಗೆಯೇ, ಪಿಕ್ಸಲ್ 3a XL ಪೋನ್‌ಗೆ 3,700mAh ಸಾಮರ್ಥ್ಯದ ಬ್ಯಾಟರಿಯನ್ನು ನೀಡಲಾಗಿದೆ. ಇದರೊಂದಿದೆ 18 ವ್ಯಾಟ್ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯವಿದ್ದು, ಫಾಸ್ಟ್‌ ಚಾರ್ಜಿಂಗ್ ಬೆಂಬಲ ಇರುವುದರಿಂದ 15 ನಿಮಿಷದಲ್ಲಿ 7 ಗಂಟೆಯ ಬ್ಯಾಟರಿ ಬ್ಯಾಕ್‌ಅಪ್‌ ಚಾರ್ಜ್‌ ಒದಗಿಸುತ್ತದೆ.

Best Mobiles in India

English summary
Pixel 3a, the affordable Pixel smartphone lineup launched earlier this year is getting massive discounts. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X