ಹಳೇ ಸ್ಮಾರ್ಟ್‌‌ಫೋನ್‌ ನೀಡಿ ಮೋಟೋ ಜಿ ಖರೀದಿಸಿ

Posted By:

ಮೋಟೋ ಜಿ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್‌.ನೀವು ಹಳೇಯ ಸ್ಮಾರ್ಟ್‌‌ಫೋನ್‌ ನೀಡಿ ಹೊಸ ಮೋಟೋ ಜಿಯನ್ನು ಖರೀದಿಸಬಹುದು.

ಮೋಟೋ ಜಿ ಎಕ್ಸ್‌ಕ್ಲೂಸಿವ್‌ ಮಾರಾಟದ ಹಕ್ಕು ಪಡೆದಿರುವ ಫ್ಲಿಪ್‌ಕಾರ್ಟ್‌‌ ಈ ಆಫರ್‌ ಪ್ರಕಟಿಸಿದ್ದು ಮೈಕ್ರೋಮ್ಯಾಕ್ಸ್‌, ನೋಕಿಯಾ, ಸ್ಯಾಮ್‌ಸಂಗ್‌,ಆಪಲ್‌,ಸೋನಿ,ಎಚ್‌ಟಿಸಿ, ಕಾರ್ಬನ್‌,ಝೋಲೋ,ಲೆನೊವೊ,ಬ್ಲ್ಯಾಕ್‌ಬೆರಿ ಕಂಪೆನಿಯ ಹಳೇಯ ಫೋನ್‌ ನೀಡಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು ಎಂದು ಫ್ಲಿಪ್‌ಕಾರ್ಟ್‌ ತಿಳಿಸಿದೆ.

ಗ್ರಾಹಕರು ಹೆಚ್ಚಾಗಿ ಈ ಸ್ಮಾರ್ಟ್‌ಫೋನ್‌ ಖರೀದಿಸುತ್ತಿರುವ ಹಿನ್ನಲೆಯಲ್ಲಿ ಈ ಹೊಸ ಆಫರ್‌ನ್ನು ಪ್ರಕಟಿಸಿರುವುದಾಗಿ ಫ್ಲಿಪ್‌ಕಾರ್ಟ್‌ ತಿಳಿಸಿದೆ.ಮೋಟೋ ಜಿ ಜೆಲ್ಲಿ ಬೀನ್‌ ಓಎಸ್‌ ಹೊಂದಿದ್ದರೂ ಕಿಟ್‌ಕ್ಯಾಟ್‌ ಓಎಸ್‌ಗೆ ಅಪ್‌ಗ್ರೇಡ್‌ ಮಾಡಬಹುದು.

ಮೋಟೋ ಜಿ 16 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್‌‌ಫೋನ್‌ ಬೆಲೆ 13,999 ರೂಪಾಯಿ ನಿಗದಿಯಾಗಿದ್ದು ಹಳೇ ಫೋನ್‌‌ ನೀಡಿದ್ರೆ 11,999 ರೂ.ಬೆಲೆಯಲ್ಲಿ ಖರೀದಿಸಬಹುದು.ಇನ್ನೂ 8ಜಿಬಿ ಮೋಟೋ ಜಿ ಬೆಲೆ 12,499 ರೂಪಾಯಿ ನಿಗದಿಯಾಗಿದ್ದು, ಹಳೇ ಫೋನ್‌ ನೀಡಿದ್ದಲ್ಲಿ 10,499 ಬೆಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು.

 ಹಳೇ ಸ್ಮಾರ್ಟ್‌‌ಫೋನ್‌ ನೀಡಿ ಮೋಟೋ ಜಿ ಖರೀದಿಸಿ

ಮೋಟೋ ಜಿ
ವಿಶೇಷತೆ:
ಡ್ಯುಯಲ್ ಸಿಮ್‌
4.5 ಇಂಚಿನ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1280 x 720 ಪಿಕ್ಸೆಲ್‌, 329ಪಿಪಿಐ)
ಆಂಡ್ರಾಯ್ಡ್‌ 4.3 ಜೆಲ್ಲಿ ಬೀನ್‌ ಓಎಸ್‌
1.2 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
Adreno 305 ಗ್ರಾಫಿಕ್ ಪ್ರೊಸೆಸರ್‌
1ಜಿಬಿ ರ್‍ಯಾಮ್‌
8/16 ಜಿಬಿ ಆಂತರಿಕ ಮೆಮೊರಿ
5 ಎಂಪಿ ಹಿಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಗ್ಲೋನಾಸ್‌,ಮೈಕ್ರೋ ಯುಎಸ್‌ಬಿ
2070 mAh ಬ್ಯಾಟರಿ

ನಿರಂತರ ಸುದ್ದಿಗಾಗಿ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಇದನ್ನೂ ಓದಿ:ಸೋಶಿಯಲ್‌ ಮೀಡಿಯಾ ಪ್ರಪಂಚ ನೋಡಿದ್ದೀರಾ?

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot