ಫ್ಲಿಪ್ ಕಾರ್ಟ್ ಮೊಬೈಲ್ ಬೊನಾನ್ಜ ಆಫರ್: ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಡೀಲ್ಸ್ ಗಳು

By Gizbot Bureau
|

ಫ್ಲಿಪ್ ಕಾರ್ಟ್ ಮೊಬೈಲ್ ಬೊನಾನ್ಜ ಸೇಲ್ ಮತ್ತೆ ಪ್ರಾರಂಭವಾಗುತ್ತಿದ್ದು ಬೇರೆಬೇರೆ ಬ್ರ್ಯಾಂಡಿನ ಸ್ಮಾರ್ಟ್ ಫೋನ್ ಗಳಿಗೆ ಆಕರ್ಷಕ ಬೆಲೆಯನ್ನು ನೀಡಲಾಗುತ್ತಿದೆ. ಡಿಸೆಂಬರ್ 1 ರಿಂದ ಡಿಸೆಂಬರ್ 5 -2019 ರ ವರೆಗೆ ಈ ಸೇಲ್ ನಡೆಯಲಿದ್ದು ಇದನ್ನು ಬಿಗ್ ಶಾಪಿಂಗ್ ಡೇಸ್ ಎಂದು ಕರೆಯಲಾಗಿದೆ. ಪ್ರೈಮ್ ಸದಸ್ಯರು ಸೇಲಿನ ಲಾಭವನ್ನು ನವೆಂಬರ್ 30 ರ 8 ಘಂಟೆಯಿಂದಲೇ ಪಡೆದುಕೊಳ್ಳಬಹುದು. ಈ ಸಮಯದಲ್ಲಿ ಕೆಲವು ಹೊಸ ವಸ್ತುಗಳು ಕೂಡ ಬಿಡುಗಡೆಗೊಳ್ಳುವ ಸಾಧ್ಯತೆ ಇದೆ.

ಫ್ಲಿಪ್ ಕಾರ್ಟ್

ಫ್ಲಿಪ್ ಕಾರ್ಟ್ ನಲ್ಲಿ ಫೋನ್ ಗಳನ್ನು ಈ ಸೇಲ್ ನಲ್ಲಿ ಖರೀದಿಸುವುದಾದರೆ ಹೆಚ್ ಡಿಎಫ್ ಸಿ ಬ್ಯಾಂಕಿನ ಡೆಬಿಟ್ ಕಾರ್ಡ್ ನಲ್ಲಿ ಕ್ಯಾಷ್ ಬ್ಯಾಕ್ ಲಭ್ಯವಿದೆ. ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಅನಿಯಮಿತ ಕ್ಯಾಷ್ ಬ್ಯಾಕ್ ಲಭ್ಯವಿದೆ. ಆಕ್ಸಿಸ್ ಬ್ಯಾಂಕ್ ಬಝ್ ಕ್ರೆಡಿಟ್ ಕಾರ್ಡ್ ನಲ್ಲಿ ಹೆಚ್ಚುವರಿ ರಿಯಾಯಿತಿ, ಎಕ್ಸ್ ಚೇಂಜ್ ಆಫರ್ ಗಳು ಸೇರಿದಂತೆ ಇನ್ನೂ ಅನೇಕ ಲಾಭಗಳನ್ನು ಗ್ರಾಹಕರು ಪಡೆದುಕೊಳ್ಳುವುದಕ್ಕೆ ಈ ಸೇಲ್ ನಲ್ಲಿ ಅವಕಾಶವಿದೆ.

4GB RAM ಮತ್ತು64GB ROM ಆಯ್ಕೆಯ ಸ್ಮಾರ್ಟ್ ಫೋನ್ 64,900 ರುಪಾಯಿ ಬೆಲೆಗೆ ಲಭ್ಯವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಕೆಲವು ಸ್ಮಾರ್ಟ್ ಫೋನ್ ಗಳನ್ನು ಖರೀದಿಸಬಹುದಾಗಿದ್ದು ಆರಂಭಿಕ ಇಎಂಐ ಮಾಸಿಕ 5,409 ರುಪಾಯಿಗೆ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9

ಹೆಚ್ಚುವರಿಯಾಗಿ 32,501 ರುಪಾಯಿ ರಿಯಾಯಿತಿಯು ಫ್ಲಿಪ್ ಕಾರ್ಟಿನ ಈ ಸೇಲ್ ನಲ್ಲಿ ಈ ಫೋನ್ ಖರೀದಿಸುವುದರಿಂದಾಗಿ ನೀವು ಪಡೆದುಕೊಳ್ಳಬಹುದು. ಇದರ ಬೆಲೆ 29,999 ರುಪಾಯಿಗಳಾಗಿದ್ದು 52% ರಿಯಾಯಿತಿ ಬೆಲೆಯಲ್ಲಿ ಲಭ್ಯವಿದೆ. ಇನ್ನು 10,800 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್9 ಪ್ಲಸ್

6GB RAM ಮತ್ತು 64GB ROM ಆಯ್ಕೆಯ ಈ ಸ್ಮಾರ್ಟ್ ಫೋನ್ 37,999 ರುಪಾಯಿ ಬೆಲೆಗೆ ಸಿಗುತ್ತದೆ. ಇದರ ಪ್ರಮುಖ ವೈಶಿಷ್ಟ್ಯತೆಯೆಂದರೆ 24MP + 12MP ಹಿಂಭಾಗದ ಕ್ಯಾಮರಾ ಸೆಟ್ ಅಪ್ ಗಳಿವೆ ಮತ್ತು 8MP ಸೆಲ್ಫೀ ಸೆನ್ಸರ್ ಇದೆ. 3,500mAh ಬ್ಯಾಟರಿ ಸೌಲಭ್ಯವಿದೆ ಮತ್ತು Exynos 9810 ಆಕ್ಟಾ ಕೋರ್ ಪ್ರೊಸೆಸರ್ ನ್ನು ಈ ಫೋನ್ ಹೊಂದಿದೆ.

ಆಪಲ್ ಐಫೋನ್ 8

ಆಪಲ್ ಐಫೋನ್ 8

ಈ ಹ್ಯಾಂಡ್ ಸೆಟ್ಟಿಗೆ 10,800 ರುಪಾಯಿ ವರೆಗೆ ಎಕ್ಸ್ ಚೇಂಜ್ ಆಫರ್ ಲಭ್ಯವಾಗಲಿದೆ. 2GB RAM ಮತ್ತು 64GB ROM ಆಯ್ಕೆಯ ಈ ಫೋನಿಗೆ 36,999 ರುಪಾಯಿ ಬೆಲೆ ಇದೆ. ಈ ಡಿವೈಸ್ ನ್ನು 3,084 ರುಪಾಯಿ ಮಾಸಿಕ ಪಾವತಿ ಮಾಡಿ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿ ಮಾಡಬಹುದು.

ಗೂಗಲ್ ಪಿಕ್ಸಲ್ 3ಎ

ಗೂಗಲ್ ಪಿಕ್ಸಲ್ 3ಎ

ಈ ಸ್ಮಾರ್ಟ್ ಫೋನ್ ನ್ನು ಇಎಂಐ ಆಯ್ಕೆಯಲ್ಲಿ 2,917 ರುಪಾಯಿಯ ಮಾಸಿಕ ಕಂತಿನಲ್ಲಿ ಖರೀದಿಸಬಹುದು. ಈ ಹ್ಯಾಂಡ್ ಸೆಟ್ಟಿಗೆ ಒಂದು ವರ್ಷದ ವಾರೆಂಟಿ ಸಿಗುತ್ತದೆ ಮತ್ತು ಫೋನ್ ಆಕ್ಸಸರೀಸ್ ಗಳಿಗೆ 6 ತಿಂಗಳ ವಾರೆಂಟಿ ಲಭ್ಯವಿದೆ. ಈ ಡಿವೈಸ್ FHD+ ಡಿಸ್ಪ್ಲೇ, ಫೇಸ್ ಅನ್ ಲಾಕ್ ಮತ್ತು 3,000mAh ಬ್ಯಾಟರಿ ವ್ಯವಸ್ಥೆಯನ್ನು ಇದು ಹೊಂದಿದೆ.

ಗೂಗಲ್ ಪಿಕ್ಸಲ್ 3ಎ ಎಕ್ಸ್ಎಲ್

ಗೂಗಲ್ ಪಿಕ್ಸಲ್ 3ಎ ಎಕ್ಸ್ಎಲ್

3,334 ರುಪಾಯಿಯ ಮಾಸಿಕ ಇಎಂಐ ಆಯ್ಕೆಯಲ್ಲಿ ಈ ಹ್ಯಾಂಡ್ ಸೆಟ್ ಲಭ್ಯವಿದೆ. ಇದನ್ನು ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. 10,800 ರುಪಾಯಿ ಎಕ್ಸ್ ಚೇಂಜ್ ಆಫರ್ ನಲ್ಲಿಯೂ ಕೂಡ ನೀವು ಈ ಫೋನ್ ನ್ನು ಖರೀದಿಸಬಹುದು.

ಆಪಲ್ ಐಫೋನ್ 7

ಆಪಲ್ ಐಫೋನ್ 7

2GB RAM ಮತ್ತು 32GB ROM ಆಯ್ಕೆಯ ಈ ಸ್ಮಾರ್ಟ್ ಫೋನಿನ ಬೆಲೆ 27,999 ರುಪಾಯಿಗಳು.ಇದರಲ್ಲಿ ರೆಟಿನಾ HD ಡಿಸ್ಪ್ಲೇ, 12MP ಹಿಂಭಾಗದ ಕ್ಯಾಮರಾ, 7MP ಮುಂಭಾಗದ ಕ್ಯಾಮರಾ ಮತ್ತು iOS 13 ನ್ನು ಈ ಫೋನ್ ಹೊಂದಿದೆ..

ಆಸೂಸ್ 5ಝಡ್

ಆಸೂಸ್ 5ಝಡ್

6GB RAM/128GB ROM ವ್ಯವಸ್ಥೆಯ ಈ ಫೋನಿನ ಬೆಲೆ 18,999 ರುಪಾಯಿಗಳು ಅಂದರೆ 47% ರಿಯಾಯಿತಿ ಈ ಸೇಲ್ ನಲ್ಲಿ ನಿಮಗೆ ಲಭ್ಯವಾಗುತ್ತದೆ. ಇದರಲ್ಲಿ ಪ್ಲೆಥೋರಾ ಫೀಚರ್ ಗಳು ಲಭ್ಯವಿದ್ದು 6.2-ಇಂಚಿನ FHD+ ಡಿಸ್ಪ್ಲೇ ಇದೆ. 3,300mAh ಬ್ಯಾಟರಿ ಸೌಲಭ್ಯವಿದ್ದು ಡುಯಲ್ ಎಐ ಹಿಂಭಾಗದ ಕ್ಯಾಮರಾ ವ್ಯವಸ್ಥೆಯನ್ನು ಹೊಂದಿದೆ.

ROG ಫೋನ್ 2

ROG ಫೋನ್ 2

8GB RAM ಮತ್ತು 128GB ROM ಆಯ್ಕೆಯ ಈ ಸ್ಮಾರ್ಟ್ ಫೋನ್ 37,999 ರುಪಾಯಿ ಬೆಲೆಗೆ ಸಿಗುತ್ತದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದಾಗಿದ್ದು ಮಸಿಕ 3,167 ರುಪಾಯಿ ಪಾವತಿ ಮಾಡಿ ಖರೀದಿ ಮಾಡಬಹುದು.

Most Read Articles
Best Mobiles in India

English summary
Flipkart Mobile Bonanza Offers: Attractive Deals On Premium Smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X