ಫ್ಲಿಪ್‌ಕಾರ್ಟ್ 2018ರ ಮೊದಲ ಸೇಲ್‌ನಲ್ಲಿ ರೂ.2018ಕ್ಕೆ 4G ಸ್ಮಾರ್ಟ್‌ಫೋನ್..!
ವರ್ಷದ ಕೊನೆಯಲ್ಲಿಯೂ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ನೀಡಿದ್ದ ಆನ್‌ಲೈನ್ ಶಾಪಿಂಗ್ ತಾಣ ಫ್ಲಿಪ್‌ಕಾರ್ಟ್, 2018ರ ಹೊಸ ವರ್ಷದ ಅಂಗವಾಗಿ ಇತಿಹಾಸದಲ್ಲೇ ಕಂಡರಿಯದ ಸ್ಮಾರ್ಟ್‌ಫೋನ್ ಸೇಲ್ ಅನ್ನು ಆರಂಭಿಸಿದ್ದು, ಇದೇ ಜನವರಿ 3 ರಿಂದ 5 ನೇ ತಾರೀಖಿನವರೆಗೂ ನಡೆಯಲಿರುವ ಮೊಬೈಲ್ಸ್ ಬೊನಾನ್ಜ ಸೇಲ್ ನಲ್ಲಿ ಅಚ್ಚರಿಯ ಬೆಲೆಗೆ ಸ್ಮಾರ್ಟ್‌ಫೋನ್ ಮಾರಾಟ ಮಾಡುತ್ತಿದೆ.

ಓದಿರಿ: ಗೂಗಲ್ ಕನಸು ನನಸು: ಜನವರಿ 26ಕ್ಕೆ ರೂ. 2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್..!
ಫ್ಲಿಪ್‌ಕಾರ್ಟ್ ತನ್ನ ಮೊಬೈಲ್ ಸೇಲಿನಲ್ಲಿ ಟಾಪ್ ಎಂಡ್ ಫೋನ್‌ಗಳಿಂದ ಹಿಡಿದು ಬಜೆಟ್‌ಫೋನ್‌ಗಳ ಮೇಲೆಯೂ ಭರ್ಜರಿ ಆಫರ್ ಅನ್ನು ನೀಡಿದ್ದು, ಈಗಾಗಲೇ ಗ್ರಾಹಕರು ಮುಗಿಬಿದ್ದು ಸ್ಮಾರ್ಟ್‌ಫೋನ್ ಅನ್ನು ಖರೀದಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಸೇಲ್‌ನಲ್ಲಿ ಆಚ್ಚರಿಯೊಂದನ್ನು ಫ್ಲಿಪ್‌ಕಾರ್ಟ್ ನೀಡಿದೆ. ರೂ. 2018ಕ್ಕೆ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡುತ್ತಿದೆ.

ರೂ.2018ಕ್ಕೆ 4G ಫೋನ್..!
ಫ್ಲಿಪ್‌ಕಾರ್ಟ್ ತನ್ನ ಮೊಬೈಲ್ ಸೇಲ್‌ನಲ್ಲಿ ಈ ಬಾರಿ ವಿಶೇಷತೆಯನ್ನು ಹೊಂದಿದ್ದು 2018ರ ಸಂಭ್ರಮದಲ್ಲಿ ಕೇವಲ ರೂ.2018ಕ್ಕೆ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುತ್ತಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಲಾಂಚ್ ಆಗಿರುವ ಸ್ಪೈಪ್ ಎಲೆಕ್ಟ್ ಸ್ಮಾರ್ಟ್ 4G, ಲಾವಾ A52 ಫೋನ್ ಗಳನ್ನು ರೂ.2.018ಕ್ಕೆ ಮಾರಾಟ ಮಾಡುತ್ತಿದೆ.

ಸ್ಪೈಪ್ ಎಲೆಕ್ಟ್ ಸ್ಮಾರ್ಟ್ 4G:
ಈಗಾಗಲೇ ಮಾರುಕಟ್ಟೆಯಲ್ಲಿ ಸಾಕಷ್ಟು ಖ್ಯಾತಿಯನ್ನು ಗಳಿಸಿಕೊಂಡಿರುವ ಸ್ಪೈಪ್ ಎಲೆಕ್ಟ್ ಸ್ಮಾರ್ಟ್ 4G ಸ್ಮಾರ್ಟ್‌ಫೋನ್ ಅನ್ನು ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ರೂ. 2018ಕ್ಕೆ ದೊರೆಯುತ್ತಿದೆ. ಅದುವೇ ಹಿಡನ್ ಚಾರ್ಜ್ಸ್ ಇಲ್ಲದೇ ದೊರೆಯುತ್ತಿದೆ.


ಲಾವಾ A52 ಸ್ಮಾರ್ಟ್‌ಫೋನ್:
ಇದೇ ಮಾದರಿಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಲಾವಾ A52 ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್ ತನ್ನ ಗ್ರಾಹಕರಿಗೆ ರೂ. 2018ಕ್ಕೆ ಮಾರಾಟ ಮಾಡುತ್ತಿದೆ. ಈ ಮೂಲಕ ಮಾರುಕಟ್ಟೆಯಲ್ಲಿ ಹೊಸ ಹವಾ ಕ್ರಿಯೇಟ್ ಮಾಡಲು ಮುಂದಾಗಿದೆ ಎನ್ನಲಾಗಿದೆ.


Click it and Unblock the Notifications








