ಜಿಯೋ ಫೋನ್ ಡಿಲಿವರಿ ಶುರು: ನಿಮ್ಮ ಮನೆಗೆ ಯಾವತ್ತು.!

ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ಧ ಜಿಯೋ, ಹೊಸ ಜಿಯೋ ಫೋನ್‌ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಸೃಷ್ಟಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದೆ.

|

ರಿಲಯನ್ಸ್ ಮಾಲೀಕತ್ವದ ಜಿಯೋ ಮೊಬೈಲ್ ಲೋಕಕ್ಕೆ ಕಾಲಿಟ್ಟಿದ್ದು ತನ್ನ ಜಿಯೋ 4G ಜಿಯೋ ಫೋನ್‌ ಅನ್ನು ಲಾಂಚ್ ಮಾಡಿದ್ದು, ಈಗಾಗಲೇ ಅದನ್ನು ಗ್ರಾಹಕರ ಕೈಗೆ ತಲುಪಿಸುವ ಕಾರ್ಯವನ್ನು ಮಾಡುತ್ತಿದೆ. ಈ ಕಾರ್ಯದಲ್ಲಿ ನೂತನ ದಾಖಲೆಯೊಂದನ್ನು ನಿರ್ಮಿಸಲು ಮುಂದಾಗಿರುವ ಜಿಯೋ 6 ಮಿಲಿಯನ್ ಜಿಯೋ ಫೋನ್‌ಗಳನ್ನು ಗ್ರಾಹಕರಿಗೆ ತಲುಪಲಿದೆ.

ಜಿಯೋ ಫೋನ್ ಡಿಲಿವರಿ ಶುರು: ನಿಮ್ಮ ಮನೆಗೆ ಯಾವತ್ತು.!

ಓದಿರಿ: ಫ್ಲಿಪ್‌ಕಾರ್ಟ್‌ಗೆ ಮುಗಿದ್ದ ಜನರು: 20 ಗಂಟೆಯಲ್ಲಿ ದಾಖಲೆಯ ಸ್ಮಾರ್ಟ್‌ಫೋನ್ ಮಾರಾಟ!

ಭಾರತೀಯ ಮಾರುಕಟ್ಟಯಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ್ಧ ಜಿಯೋ, ಹೊಸ ಜಿಯೋ ಫೋನ್‌ ಮೂಲಕ ಮತ್ತಷ್ಟು ಹೊಸ ಗ್ರಾಹಕರನ್ನು ಸೃಷ್ಟಿಸಿಕೊಳ್ಳುವ ಪ್ರಕ್ರಿಯೆಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಸುಮಾರು 50 ಲಕ್ಷ ಜಿಯೋ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಡಲಿದೆ. ಇದರಲ್ಲಿ ಮೊದನೆಯಾದಾಗಿ 15 ದಿನದಲ್ಲಿ 6 ಮಿಲಿಯನ್ ಫೋನ್ ಬಿಡುಗಡೆ ಮಾಡಿದೆ.

ಈಗಾಗಲೇ ಬುಕ್ ಮಾಡಿದವರಿಗೆ:

ಈಗಾಗಲೇ ಬುಕ್ ಮಾಡಿದವರಿಗೆ:

ಈಗಾಗಲೇ ರೂ.500 ನೀಡಿ ಫೋನ್ ಬುಕ್ ಮಾಡಿದವರಿಗೆ ಜಿಯೋ ಫೋನ್ ಅನ್ನು ತಲುಪಿಸುವ ಕಾರ್ಯ ಮಾಡಲಿದೆ. ಈ ಕಾರ್ಯವೂ ಭಾನುವಾರದಿಂದ ಶುರುವಾಗಲಿದೆ. 10-15 ದಿನಗಳಲ್ಲಿ ಈ ಫೋನ್ ಗ್ರಾಹಕರ ಕೈ ಸೇರಲಿದೆ.

 ರೂ.1000 ಪಾವತಿ

ರೂ.1000 ಪಾವತಿ

ಈ ಜಿಯೋ ಫೋನ್ ಕೊಳ್ಳಲು ಬಳಕೆದಾರರು ರೂ.1500 ಪಾವತಿ ಮಾಡಬೇಕಾಗಿದೆ. ಬುಕ್ಕಿಂಗ್ ಸಮಯದಲ್ಲಿ ರೂ.500 ಪಾವತಿ ಮಾಡಬೇಕಾಗಿದ್ದು, ಇದಾದ ಮೇಲೆ ಮೊಬೈಲ್ ಪಡೆಯುವ ಸಂದರ್ಭದಲ್ಲಿ ರೂ.1000 ಪಾವತಿ ಮಾಡಬೇಕಾಗಿದೆ. ಈ ಹಣವೂ ತಿರುಗಿ ಪಡೆಯಬಹುದಾಗಿದೆ.

ಫೇಸ್‌ಬುಕ್ ಇದೆ:

ಫೇಸ್‌ಬುಕ್ ಇದೆ:

ಸದ್ಯ ದೊರೆತಿರುವ ಮಾಹಿತಿಯ ಪ್ರಕಾರ ಈಗಾಗಲೇ ಜಿಯೋ ಫೋನಿನಲ್ಲಿ ಫೇಸ್‌ಬುಕ್ ಆಪ್ ನೀಡಲಾಗಿದೆ. ಶೀಘ್ರವೇ ದೊರೆಯುವ ಆಪ್‌ಡೇಟ್‌ನಲ್ಲಿ ವಾಟ್ಸ್‌ಆಪ್ ಸಹ ದೊರೆಯಲಿದೆ ಎನ್ನಲಾಗಿದೆ. ಪೋನಿನಲ್ಲಿ ಜಿಯೋ ಆಪ್‌ಗಳನ್ನು ನೀಡಲಾಗಿದೆ. ಇದಲ್ಲದೇ ನೀವು ಜಿಯೋ ಸ್ಟೋರ್ ನಲ್ಲಿರುವ ಆಪ್‌ಗಳನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದೆ.

ಗ್ರಾಮೀಣ ಭಾಗವೇ ಟಾರ್ಗೆಟ್:

ಗ್ರಾಮೀಣ ಭಾಗವೇ ಟಾರ್ಗೆಟ್:

ಜಿಯೋ ಬಿಡುಗಡೆ ಮಾಡಿರುವ ಜಿಯೋ ಫೋನ್ ಅತೀ ಕಡಿಮೆ ಬೆಲೆಗೆ ದೊರೆಯುತ್ತಿರುವ 4G ಫೀಚರ್ ಫೋನ್ ಎನ್ನಲಾಗಿದೆ. ಈ ಫೋನ್ ಅನ್ನು ಹೆಚ್ಚಾಗಿ ಗ್ರಾಮೀಣ ಭಾಗದ ಜನರನ್ನು ಟಾರ್ಗೆಟ್ ಮಾಡಿಕೊಂಡು ಬಿಡುಗಡೆ ಮಾಡಲಾಗಿದೆ. ಹಳ್ಳಿ-ಹಳ್ಳಿಗೂ ಫೋನ್ ಸೇವೆ ತಲುಪಿಸುವ ಕಾರ್ಯ ಇದಾಗಿದೆ.

Best Mobiles in India

English summary
Deliveries of Reliance JioPhones, the low-cost 4G handsets, will reportedly begin from rural areas and small towns before urban centres. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X