'ಐಫೋನ್ 7' ರೇಜರ್ ಗೀಚು, ಬೆಂಡ್‌ ಟೆಸ್ಟ್‌ ವೀಡಿಯೊ ರಿವೀವ್

By Suneel
|

ಯೂಟ್ಯೂಬ್‌ ಚಾನೆಲ್‌ 'JerryRigEverything', ಬಹು ನಿರೀಕ್ಷಿತ ಆಪಲ್‌ 'ಐಫೋನ್ 7' ಅನ್ನು ಬುಧವಾರ ಖರೀದಿಸಿ ಅನ್‌ಬಾಕ್ಸ್ ಮಾಡಿದೆ. ಸಹಜವಾಗಿ ಡಿವೈಸ್‌ ಬಗ್ಗೆ ವಿಮರ್ಶೆ ನೀಡಲು ಕೀಗಳು, ರೇಜರ್ ಬಳಸಿ ಗೀರುಗಳನ್ನು ಉಂಟುಮಾಡಿದೆ. ಅಲ್ಲದೇ 'ಐಫೋನ್ 7' ಅನ್ನು ಬೆಂಡ್‌ ಸಹ ಮಾಡಿದೆ. ಈ ಎಲ್ಲಾ ಚಟುವಟಿಕೆಗಳನ್ನು ಮಾಡಲು ಕಾರಣ ಐಫೋನ್ ನೀರು ಮತ್ತು ಧೂಳು ನಿರೋಧಕ ಎಂದು ಹೇಳಲಾಗಿದೆ.

'ಐಫೋನ್ 7' ರೇಜರ್ ಗೀಚು, ಬೆಂಡ್‌ ಟೆಸ್ಟ್‌ ವೀಡಿಯೊ ರಿವೀವ್

ಯೂಟ್ಯೂಬ್‌ ಚಾನೆಲ್‌ 'JerryRigEverything' ಪ್ರಯೋಗಾತ್ಮಕ ವಿಮರ್ಶೆಯ ವೀಡಿಯೊವನ್ನು ಲೇಖನದಲ್ಲಿ ನೋಡಲು ಮರೆಯದಿರಿ. ಅಂದಹಾಗೆ 'ಐಫೋನ್ 7' ಇತರೆ ಡಿವೈಸ್‌ಗಳಂತೆ ಸಾಮಾನ್ಯವಾಗಿ ಕೀಗಳಿಂದ ಆಗುವ ಗೀರುಗಳಿಂದ ಯಾವುದೇ ತೊಂದರೆ ಆಗುವುದಿಲ್ಲ. ಆದರೆ 'ಐಫೋನ್ 7' ಹಿಂಭಾಗ ಕ್ಯಾಮೆರಾ, ಡಿಸ್‌ಪ್ಲೇ ಮೇಲೆ ಚೂಪಾದ ರೇಜರ್‌ಗಳಿಂದ ಗೀರುಗಳು ಉಂಟಾದಲ್ಲಿ ಅದು ಹಾಗೆ ಉಳಿಯುತ್ತದೆ.

ಆಪಲ್‌, 'ಐಫೋನ್ 7' ಮತ್ತು 'ಐಫೋನ್ 7 ಪ್ಲಸ್‌' ನೀಲಮಣಿ(sapphire ) ಲೆನ್ಸ್‌ ಕವರ್‌ ಅನ್ನು ಹೊಂದಿವೆ ಎಂದು ಹೇಳಿದೆ. ಆದರೆ ನೀಲಮಣಿ(sapphire ) ವಸ್ತು ಚೂಪಾದ ರೇಜರ್‌ಗಳಿಂದ ಗೀರುಗಳು ಉಂಟಾದಲ್ಲೂ ಸಹ ಸರಳವಾಗಿ ಗೀರುಗಳು ಉಳಿಯದಂತೆ ಸುರಕ್ಷತೆ ನೀಡುತ್ತದೆ.

'ಐಫೋನ್ 7' ರೇಜರ್ ಗೀಚು, ಬೆಂಡ್‌ ಟೆಸ್ಟ್‌ ವೀಡಿಯೊ ರಿವೀವ್

'ಐಫೋನ್ 7' ಅಲ್ಯೂಮಿನಿಯಂ ಹಿಂಭಾಗ ಕವರ್‌ ವಿಷಯದಲ್ಲಿ, ಮ್ಯಾಟ್ ಕಪ್ಪು ಮಾಡೆಲ್‌ ಕೀಗಳಿಂದ ಉಂಟಾದ ಗೀರುಗಳನ್ನು ತಡೆಯುತ್ತದೆ. ಆದರೆ ಅತೀ ಚೂಪಾದ ವಸ್ತುಗಳು ತಾಗಿದಲ್ಲಿ ಡಿವೈಸ್‌ ಹಾನಿಗೊಳಗಾಗುತ್ತದೆ.

'ಐಫೋನ್ 7' ರೇಜರ್ ಗೀಚು, ಬೆಂಡ್‌ ಟೆಸ್ಟ್‌ ವೀಡಿಯೊ ರಿವೀವ್

ಕಳೆದ ವರ್ಷದ ಐಫೋನ್ 6, ಐಫೋನ್ 7 ನಂತೆ ಪ್ಯಾಂಟ್‌ ಜೇಬಿನಲ್ಲಿ ಇಟ್ಟಾಗ ಬೆಂಡ್‌ ಆಗುತ್ತಿತ್ತು. ಆದರೆ 'ಐಫೋನ್ 7' ರೀತಿಯಲ್ಲಿ ಹಿಂಭಾಗ ಕವರ್‌ ಓಪನ್‌ ಆಗುತ್ತಿರಲಿಲ್ಲ. ಅಂದಹಾಗೆ ಬೆಂಡ್‌ ಟೆಸ್ಟ್‌ ಮಾಡಲು ಕಾರಣವೆಂದರೆ 'ಐಫೋನ್ 7' ನೀರು ಮತ್ತು ಧೂಳು ನಿರೋಧಕ (Waterproof) ಎಂದು ಹೇಳಲಾಗಿದೆ. 'ಐಫೋನ್ 7' ಅನ್ನು ಬೆಂಡ್‌ ಟೆಸ್ಟ್‌ಗೆ ಒಳಪಡಿಸಿದಾಗ ಹಿಂಭಾಗದ ಕವರ್‌ ಓಫನ್ ಆಗಿದ್ದು, ಸುಲಭ ರೀತಿಯಲ್ಲಿ ನೀರು ಒಳಗೆ ಹೋಗುತ್ತದೆ. 'ಐಫೋನ್ 7' ಟೆಸ್ಟ್‌ ವೀಡಿಯೊವನ್ನು ಕೆಳಗೆ ನೋಡಿ.

Best Mobiles in India

English summary
Matte black iPhone 7 undergoes brutal scratch, bend test in new video. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X