ಈ ನಾಲ್ಕು ಕಾರಣಗಳಿಗೆ ಡ್ಯುಯೆಲ್ ಸಿಮ್ ಬೇಡ

By Shwetha
|

ಡ್ಯುಯೆಲ್ ಸಿಮ್‌ ಭರಾಟೆ ಈಗ ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿದೆ. ಎರಡು ಸಿಮ್ ಕಾರ್ಡ್‌ನಲ್ಲಿ ಒಂದನ್ನು ಕರೆ ಮಾಡಲು ಬಳಸಿದರೆ ಇನ್ನೊಂದನ್ನು ವೆಬ್ ಬ್ರೌಸಿಂಗ್‌ಗೆ ಅಂತ ಎತ್ತಿಟ್ಟುಕೊಳ್ಳುತ್ತಾರೆ. ಅಷ್ಟೊಂದು ತೀವ್ರವಾಗಿ ಇಂದು ಡ್ಯುಯೆಲ್ ಸಿಮ್ ಫೋನ್ ಬಳಕೆಯನ್ನು ಮಾಡುತ್ತಾರೆ.

ಮತ್ತೆ ಕೆಲವರು ಮನೆಗಾಗಿ ಒಂದು ಸಿಮ್ ಕಚೇರಿಗಾಗಿ ಇನ್ನೊಂದು ಹೀಗೆ ಮೇಂಟೇನ್ ಮಾಡುತ್ತಿದ್ದಾರೆ. ಆದರೆ ಡ್ಯುಯೆಲ್ ಸಿಮ್ ನಿಮಗೆಷ್ಟು ಪ್ರಯೋಜನಕಾರಿಯೋ ಅಷ್ಟೇ ಅಪ್ರಯೋಜನಕಾರಿಯೂ ಹೌದು. ಅದು ಏಕೆಂಬುದು ಕೆಳಗಿನ ಅಂಶಗಳ್ನು ಓದುತ್ತಾ ಹೋದರೆ ನಿಮಗೆ ತಿಳಿಯಬಹುದು.

#1

#1

ಇಂದಿನ ಸ್ಮಾರ್ಟ್‌ಫೋನ್‌ಗಳು ನಿಮ್ಮ ಮೊಬೈಲ್‌ಗೆ ನೀಡುವ ಕೊಡುಗೆಗಳು ನಿಜವಾಗಿಯೂ ಹೆಚ್ಚಾಗಿರುತ್ತದೆ. ವೈಫೈ, ಬ್ಲೂಟೂತ್, ಸ್ಕ್ರೀನ್ ರೊಟೇಶನ್, ಮೊಬೈಲ್ ಡೇಟಾ, ಜಿಪಿಎಸ್ ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಅದು ಒಳಗೊಂಡಿದ್ದರೂ ನೀಟಾದ ವ್ಯವಸ್ಥೆ ಈ ಫೋನ್‌ಗಿರುವುದಿಲ್ಲ. ಇದು ನಿಜಕ್ಕೂ ನಿಮ್ಮ ಸಂದೇಶ ರಚನೆಯ ಮತ್ತು ಕರೆ ಮೆನುವಿಗೆ ಅಪಾಯಕಾರಿ.

#2

#2

ಸಿಂಗಲ್ ಸಿಮ್ ಉಳ್ಳ ಫೋನ್‌ಗಳ ಬ್ಯಾಟರಿ ಬಾಳ್ವೆ ಹೆಚ್ಚಾಗಿರುತ್ತದೆ. ಡ್ಯುಯೆಲ್ ಸಿಮ್ ಫೋನ್‌ಗಳು ಬೇಗನೇ ಬ್ಯಾಟರಿ ಬಾಳ್ವೆಯನ್ನು ಕಳೆದುಕೊಂಡು ನಿಶ್ಚಲಗೊಳ್ಳುತ್ತವೆ. ಡ್ಯುಯೆಲ್ ಸಿಮ್ ಫೋನ್‌ಗಳಲ್ಲಿ ಸಿಗ್ನಲ್ ಮಟ್ಟವನ್ನು ಸಮಾನವಾಗಿರಿಸಲು ನಿಮ್ಮ ಫೋನ್ ಪ್ರಯತ್ನಿಸುತ್ತಿರುತ್ತದೆ ಈ ಸಮಯದಲ್ಲಿ ಫೋನ್ ಹೆಚ್ಚು ಬ್ಯಾಟರಿಯನ್ನು ಬಳಸುತ್ತದೆ. ಸಿಂಗಲ್ ಸಿಮ್ ಫೋನ್‌ನಲ್ಲಿ ಈ ಸಂಕಷ್ಟ ಇಲ್ಲದಿರುವುದರಿಂದ ಬ್ಯಾಟರಿ ಸಮಸ್ಯೆ ಇರುವುದಿಲ್ಲ.

#3

#3

ಮೊದಲೇ ಹೇಳಿದಂತೆ ಡ್ಯುಯೆಲ್ ಸಿಮ್ ಫೋನ್‌ಗಳಲ್ಲಿ ಬ್ಯಾಟರಿ ಬಾಳ್ವಿಕೆ ಅಲ್ಪ ಸಮಯದಲ್ಲಿ ಮುಗಿಯುವುದರಿಂದ ನೀವು ಇದನ್ನೇ ಹೆಚ್ಚು ನಂಬಿರಲು ಆಗುವುದಿಲ್ಲ. ನಿಮ್ಮ ಅವಶ್ಯಕತೆಗಾಗಿ ಇನ್ನೊಂದು ಫೋನ್ ಅನ್ನು ಕೂಡ ನೀವು ನಿಮ್ಮ ಬಳಿ ಇಟ್ಟುಕೊಳ್ಳಬೇಕಾಗುತ್ತದೆ.

#4

#4

ಒಮ್ಮೆ ನೀವು ಡ್ಯುಯೆಲ್ ಸಿಮ್ ಫೋನ್ ಅನ್ನು ಖರೀದಿಸಿದಿರೆಂದರೆ ಮುಗಿಯಿತು ನಿಮ್ಮ ಆಯ್ಕೆ ಬಹಳ ಸೀಮಿತವಾಗಿರುತ್ತದೆ. ನಿಮಗೆ ಐಫೋನ್ ಖರೀದಿಸಲಾಗುವುದಿಲ್ಲ ಮತ್ತು ಅತ್ಯುತ್ತಮ ಫೋನ್‌ಗಳೆಂಬ ಪಟ್ಟಿಯಲ್ಲಿರುವ ವಿಂಡೋಸ್ ಫೋನ್ ಹಾಗೂ ಆಂಡ್ರಾಯ್ಡ್ ಅನ್ನು ಕೂಡ ಬಳಸಲಾಗುವುದಿಲ್ಲ. ನೀವು ಖರೀದಿಸಿದ ಡ್ಯುಯೆಲ್ ಸಿಮ್‌ಗೆ ನೀವು ಅಂಟಿಕೊಂಡಿರಬೇಕಾಗುತ್ತದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X