Just In
- 11 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 12 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 13 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 15 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ಗೆ ಸೋಲು: ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ವಿರುದ್ಧ ಬೆನ್ ಸ್ಟೋಕ್ಸ್ ಟೀಕೆ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+: ತಿಳಿಯಲೇಬೇಕಾದ 5 ವಿಷಯಗಳು!
ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ವಿಶ್ವ ಮೊಬೈಲ್ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ. ಪ್ರತಿಬಾರಿಯೂ ಏನನ್ನಾದರೂ ಹೊಸತನ್ನು ಹೊತ್ತು ತರುವ ಸ್ಯಾಮ್ಸಂಗ್, ಈ ಬಾರಿ ಗ್ಯಾಲಕ್ಸಿ ನೋಟ್ 10 ಸರಣಿ ಫೋನ್‌ಗಳ ಮೂಲಕ ಮತ್ತೆ ತನ್ನ ಪರಾಕ್ರಮ ಮೆರೆದಿದೆ. ಪ್ರೀಮಿಯಂ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಾನು ದಿಗ್ಗಜ ಎಂಬುದನ್ನು ಕಂಪೆನಿ ಮತ್ತೊಮ್ಮೆ ತೋರಿಸಿಕೊಟ್ಟಿದೆ.!

ಹೌದು, ಇದೇ ಮೊದಲ ಬಾರಿಗೆ ನೋಟ್-ಸೀರೀಸ್ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಪರಿಚಯಿಸಿರುವ ಸ್ಯಾಮ್ಸಂಗ್ ಮೊಬೈಲ್ ಮಾರುಕಟ್ಟೆಯ ನಿರೀಕ್ಷೆಯನ್ನು ಮೀರಿಸಿದೆ. ಗ್ಯಾಲಕ್ಸಿ ನೋಟ್ 10 ಮತ್ತು ಗ್ಯಾಲಕ್ಸಿ ನೋಟ್ 10+ ಪೋನ್‌ಗಳ ಬೆಲೆ ಮತ್ತು ಫೀಚರ್ಸ್ ವಿಚಾರದಲ್ಲಿ ಕಂಪೆನಿ ಸಾಕಷ್ಟು ಉದಾರಿಯಾಗಿ ಕಂಡುಬಂದಿದ್ದು, ಫ್ಲ್ಯಾಗ್‌ಶಿಪ್ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಓಟಕ್ಕೆ ಬ್ರೇಕ್ ಹಾಕುವ ಸಲುವಾಗಿ ವಿಶ್ವದಾದ್ಯಂತ ಮೊಬೈಲ್ ಪ್ರಿಯರಿಗೆ ಸಿಹಿಸುದ್ದಿಯನ್ನು ನೀಡಿದೆ.
ಭಾರೀ ಫೀಚರ್ಸ್ ಹೊಂದಿರುವ ಗ್ಯಾಲಕ್ಸಿ ನೋಟ್ 10 ಬೆಲೆ ಕೇವಲ 67,400 ರೂ.ಗಳಿಂದ ಆರಂಭವಾಗಿದ್ದರೆ, ಗ್ಯಾಲಕ್ಸಿ ನೋಟ್ 10+ ಸರಿಸುಮಾರು ರೂ. 85,200 ರೂಪಾಯಿಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ಇನ್ನು ನೋಟ್ 10+ 5ಜಿ ಮಾದರಿಯ ಬೆಲೆ ಸರಿಸುಮಾರು 92,300 ರೂಪಾಯಿಗಳಾಗಿರಲಿವೆ. ಹಾಗಾಗಿ, ಇಂದಿನ ಲೇಖನದಲ್ಲಿ ಗ್ಯಾಲಕ್ಸಿ ನೋಟ್ 10 ಮತ್ತು ನೋಟ್ 10+ ಪೋನ್‌ಗಳ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ 5 ವಿಷಯಗಳನ್ನು ನಾನು ಪಟ್ಟಿ ಮಾಡಿದ್ದೇನೆ.

ಪರದೆ ಮತ್ತು ರೆಸಲ್ಯೂಶನ್
ಗ್ಯಾಲಕ್ಸಿ ನೋಟ್ 10 ಎಫ್‌ಹೆಚ್‌ಡಿ + (ಪಿಎಚ್‌ಪಿ) ಯೊಂದಿಗೆ 6.3-ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದರೆ, ಗ್ಯಾಲಕ್ಸಿ ನೋಟ್ 10+ ಕ್ಯೂಎಚ್‌ಡಿ + (2 ಕೆ) ರೆಸಲ್ಯೂಶನ್‌ನೊಂದಿಗೆ 6.8 ಇಂಚಿನ ಡಿಸ್ಪ್ಲೇ ಹೊಂದಿದೆ. ಎರಡೂ ಫೋನ್‌ಗಳು ಪರದೆಯ ನಾಲ್ಕು ಬದಿಗಳಲ್ಲಿ ಕನಿಷ್ಠ ಬೆಜೆಲ್‌ಗಳನ್ನು ಹೊಂದಿದ್ದು, ಮೇಲ್ಭಾಗದಲ್ಲಿ ಇನ್ಫಿನಿಟಿ-ನೋಚ್ ವಿನ್ಯಾಸದಲ್ಲಿ ಕಂಗೊಳಿಸುತ್ತಿವೆ.

ಕ್ಯಾಮೆರಾಗಳು ಮತ್ತು ಇಮೇಜಿಂಗ್
ಎರಡೂ ಮಾದರಿಗಳು ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿವೆ. 12 ಎಂಪಿ ಸ್ಟ್ಯಾಂಡರ್ಡ್ ಸೆನ್ಸಾರ್, 16 ಎಂಪಿ ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 12 ಎಂಪಿ ಟೆಲಿಫೋಟೋ ಲೆನ್ಸ್ ಹೊಂದಿವೆ. ಈ ಸಂವೇದಕಗಳ ಜೊತೆಗೆ, ನೋಟ್ 10+ ನಲ್ಲಿ 3D ಟೊಎಫ್ ಸಂವೇದಕವಿದೆ, ಇದು 3D ಮಾದರಿಗಳನ್ನು ರಚಿಸಲು ನೈಜ-ಜೀವನದ ವಸ್ತುಗಳನ್ನು ಸ್ಕ್ಯಾನ್ ಮಾಡಬಹುದು.

RAM ಮತ್ತು ಸಂಗ್ರಹಣೆ
ಗ್ಯಾಲಕ್ಸಿ ನೋಟ್ 10 ಫೋನ್ 8 ಜಿಬಿ RAM ಮತ್ತು 256 ಜಿಬಿ ಸ್ಟೋರೇಜ್ ಆರಂಭಿಕ ಮಾದರಿಯಲ್ಲಿ ಬಿಡುಗಡೆಯಾಗಿದೆ. ಹಾಗೆಯೇ ಗ್ಯಾಲಕ್ಸಿ ನೋಟ್ 10+ 12 ಜಿಬಿ RAM ಮತ್ತು 512 ಜಿಬಿ ಸ್ಟೋರೇಜ್‌ನೊಂದಿಗೆ ಲಭ್ಯವಿರುತ್ತದೆ. ನೋಟ್ 10+ ಮೈಕ್ರೊ ಎಸ್ಡಿ ಕಾರ್ಡ್ ಸ್ಲಾಟ್ ಅನ್ನು ಸಹ ಹೊಂದಿದ್ದು, ಇದು 1 ಟಿಬಿ ವರೆಗೆ ಸಂಗ್ರಹ ವಿಸ್ತರಣೆಯನ್ನು ಬೆಂಬಲಿಸುತ್ತದೆ.

ನೆಟ್‌ವರ್ಕಿಂಗ್ ಮತ್ತು ಸಂಪರ್ಕ
ಗ್ಯಾಲಕ್ಸಿ ನೋಟ್ 10 ಎರಡೂ ರೂಪಾಂತರಗಳು 4ಜಿ ಎಲ್ಟಿಇ ಮತ್ತು ವಿಒಎಲ್ಟಿಇ ಬೆಂಬಲದೊಂದಿಗೆ ಬಂದಿವೆ. ಆದಾಗ್ಯೂ, 5ಜಿ ನೆಟ್‌ವರ್ಕ್ ಬೆಂಬಲ ಹೊಂದಿರುವ ಗ್ಯಾಲಕ್ಸಿ ನೋಟ್ 10+ ಸ್ಮಾರ್ಟ್‌ಫೋನನ್ನು 2019ರ ಅಂತ್ಯದ ವೇಳೆಗೆ ಬಿಡುಗಡೆ ಮಾಡುವುದಾಗಿ ಸ್ಯಾಮ್‌ಸಂಗ್ ಕಂಪೆನಿ ಅಧಿಕೃತವಾಗಿ ದೃಢಪಡಿಸಿದೆ.

ಬ್ಯಾಟರಿ ಮತ್ತು ಚಾರ್ಜಿಂಗ್
ಗ್ಯಾಲಕ್ಸಿ ನೋಟ್ 10 3400 mAh ಬ್ಯಾಟರಿಯೊಂದಿಗೆ 25W ವೇಗದ ಚಾರ್ಜಿಂಗ್ ಫೀಚರ್ ಅನ್ನು ಹೊಂದಿದೆ. ಗ್ಯಾಲಕ್ಸಿ ನೋಟ್ 10+ ಗಮನಾರ್ಹವಾಗಿ 4300 mAh ಬ್ಯಾಟರಿಯನ್ನು ಹೊಂದಿದೆ. ಇದರ ಜೊತೆಗೆ, ಗ್ಯಾಲಕ್ಸಿ ನೋಟ್ 10+ 45W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470