'ಗ್ಯಾಲಾಕ್ಸಿ ಆನ್ 6' ಸ್ಮಾರ್ಟ್‌ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್!..ಏಕೆ ಗೊತ್ತಾ?!
ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಫೀಚರ್ಗಳನ್ನು ಹೊತ್ತು ಬಂದಿರುವ ಸ್ಯಾಮ್‌ಸಂಗ್ 'ಗ್ಯಾಲಾಕ್ಸಿ ಆನ್ 6' ಸ್ಮಾರ್ಟ್‌ಫೋನ್ ಖರೀದಿಸುವ ಗ್ರಾಹಕರಿಗೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ 'ಗ್ಯಾಲಾಕ್ಸಿ ಆನ್ 6' ಫೋನ್ ಖರೀದಿಸಲು 12,200 ರೂ.ವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ನೀಡುತ್ತಿದೆ.
ಹೌದು, ಕೇವಲ 14,490 ರೂ. ಬೆಲೆಯನ್ನು ಹೊಂದಿರುವ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಖರೀದಿ ಮೇಲೆ 49 ರೂ.ಗೆ ಮೊಬೈಲ್ ಸುರಕ್ಷತಾ ಪ್ಲಾನ್, ನೋ ಕಾಸ್ಟ್ ಇಎಂಐ, 1,610 ರೂಪಾಯಿಗಳಿಂದ ಕಂತುಗಳು ಸೇರಿದಂತೆ, 12,200 ರೂಪಾಯಿವರೆಗೂ ಎಕ್ಸ್‌ಚೇಂಜ್ ಆಫರ್ ಅನ್ನು ಫ್ಲಿಪ್‌ಕಾರ್ಟ್ ಪ್ರಕಟಿಸಿದೆ. ಜೊತೆಗೆ ಫೋನ್ ಮೇಲೆ ಜಿಯೋ ಆಫರ್ ಕೂಡ ಲಭ್ಯವಿದೆ.

ಈ ಸ್ಮಾರ್ಟ್‌ಫೋನ್ ಮೇಲೆ ಜಿಯೋಯಿಂದ 2,750 ರೂ.ಮೌಲ್ಯದ ಕ್ಯಾಶ್‌ಬ್ಯಾಕ್ ಸಹ ಲಭ್ಯವಿದ್ದು, 198 ರೂ.ಮತ್ತು ಅದಕ್ಕಿಂತ ಮೇಲಿನ ಮೊದಲ ನಾಲ್ಕು ರಿಚಾರ್ಜ್‌ಗಳಲ್ಲಿ ಜಿಯೋದ ಡಬಲ್ ಡೇಟಾ ಆಫರ್ ಪಡೆಯಬಹುದಾಗಿದೆ. ಹಾಗಾಗಿ, ಸ್ಮಾರ್ಟ್‌ಫೋನ್ ಖರೀದಿಸಲು ಇದು ಬೆಸ್ಟ್ ಟೈಮ್ ಆಗಿದ್ದು, ಈ ಫೋನಿನ ಫೀಚರ್ಸ್ ಮತ್ತು ವಿಶೇಷತೆಗಳನ್ನು ಮುಂದೆ ತಿಳಿಯಿರಿ.

ಸೂಪರ್ AMOLED ಡಿಸ್‌ಪ್ಲೇ
ಗ್ಯಾಲಾಕ್ಸಿ ಆನ್ 6 ಸ್ಮಾರ್ಟ್‌ಪೋನ್ 5.6 ಇಂಚಿನ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. 720x1480 ಪಿಕ್ಸೆಲ್ ಸಾಮರ್ಥ್ಯದ ಈ ಡಿಸ್‌ಪ್ಲೇ, 293ppi ಪಿಕ್ಸೆಲ್ ಡೆನ್ಸಿಟಿಯ ಬೆಜೆಲ್ ಲೆಸ್ ಡಿಸ್‌ಪ್ಲೇ ಹೊಂದಿದೆ. ಅದಲ್ಲದೇ ಸ್ಯಾಮ್‌ಸಂಗ್ ಕಂಪನಿ ಹೇಳಿಕೊಂಡಿರುವಂತೆ ಗಾತ್ರದಲ್ಲಿ ಯಾವುದೇ ಬದಲಾವಣೆ ಮಾಡದೇ ಶೇ.15ರಷ್ಟು ಹೆಚ್ಚು ಡಿಸ್‌ಪ್ಲೇಯನ್ನು ನೀಡಲಾಗಿದೆ.

ಕಾರ್ಯನಿರ್ವಹಣೆ ಹೇಗಿದೆ?
ಗ್ಯಾಲಾಕ್ಸಿ ಆನ್ 6 ಸ್ಮಾರ್ಟ್‌ಫೋನಿನಲ್ಲಿ ಸ್ಯಾಮ್‌ಸಂಗ್ ಎಕ್ಸಪಿರಿಯನ್ಸ್ ಯುಕೆ ಜತೆಗೆ ಆಂಡ್ರಾಯ್ಡ್ 8.0 ಒರಿಯೋ ಒಎಸ್ ನಿಂದ ಕಾರ್ಯನಿರ್ವಹಿಸುತ್ತದೆ. ಒಕ್ಟಾ ಕೋರ್ ಎಕ್ಸಿನೋಸ್ 7870 ಪ್ರೊಸೆಸರ್‌ನಿಂದ ಈ ಫೋನ್ ಕಾರ್ಯನಿರ್ವಹಿಸುತ್ತಿದ್ದು, 1.6GHz ವೇಗ ಹೊಂದಿರಲಿದೆ. ಮಾಲಿ T830 MP1 GPU ಹೊಂದಿದ್ದು, ಉತ್ತಮ ಕಾರ್ಯನಿರ್ವಹಣೆಯನ್ನು ನಿರೀಕ್ಷಿಸಬಹುದು.

13 MP ಕ್ಯಾಮೆರಾ
ಆನ್ 6 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ LED ಫ್ಲಾಶ್ ಜತೆ 13MP ಕ್ಯಾಮೆರಾ ಹೊಂದಿದ್ದು, ಅನಿಮೇಟೆಡ್ GIF, ಬ್ಯೂಟಿ ಫೇಸ್, ಬೆಸ್ಟ್ ಪೋಟೊ, ಫೇಸ್ ಡಿಟೆಕ್ಷನ್, ಹೆಚ್‌ಡಿಆರ್, ಪನೋರಮಾ ಮತ್ತು ಸ್ಪೋರ್ಟ್ಸ್‌ಗೆ ಬೆಂಬಲಿಸುತ್ತದೆ. LED ಫ್ಲಾಶ್ ಜತೆ 8MP ಫ್ರಂಟ್ ಕ್ಯಾಮೆರಾ ಹೊಂದಿದೆ. ಗ್ಯಾಲಾಕ್ಸಿ ಒನ್ 6 ಎರಡು ಕ್ಯಾಮೆರಾಗಳು, f/1.9 ಅಪಾರ್ಚರ್ ಲೆನ್ಸ್ ಹೊಂದಿವೆ.

RAM ಮತ್ತು ಮೆಮೊರಿ ಎಷ್ಟು?
ಹೊಸ ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಸ್ಮಾರ್ಟ್‌ಫೋನ್ 4GB RAM ಮತ್ತು 32GB ಮೆಮೊರಿ ವೆರಿಯಂಟ್‌ಗಳಲ್ಲಿ ಮಾಡುಕಟ್ಟೆಗೆ ಕಾಲಿಟ್ಟಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿಯನ್ನು ಎಸ್‌ಡಿ ಕಾರ್ಡ್ ಮೂಲಕ ಫೋನ್ 256GBವರೆಗೆ ವಿಸ್ತರಿಸುವ ಆಯ್ಕೆ ಸ್ಮಾರ್ಟ್‌ಫೋನಿನಲ್ಲಿ ನೀಡಲಾಗಿದೆ.

ಇತರೆ ಏನೆಲ್ಲಾ ಫೀಚರ್ಸ್?
ಸ್ಯಾಮ್‌ಸಂಗ್ ಗೆಲಾಕ್ಷಿ ಆನ್ 6 ಫೋನ್ ಫೇಸ್ ಅನ್‌ಲಾಕ್ , ಡ್ಯುಯಲ್ ನ್ಯಾನೋ ಸಿಮ್ ಹೊಂದಿದೆ. 4G VoLTE, ವೈ-ಫೈ, ಬ್ಲೂಟೂತ್ v4.2, ಜಿಪಿಎಸ್/ ಎ-ಜಿಪಿಎಸ್, ಮೈಕ್ರೋ-ಯುಎಸ್‌ಬಿ ಮತ್ತು 3.5mm ಹೆಡ್‌ಫೋನ್ ಜಾಕ್ ಹೊಂದಿದೆ. ಹಿಂಭಾಗದಲ್ಲಿ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ. ಹಾಗೂ 3000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.

ವಿಶಿಷ್ಟ ಫೀಚರ್ಸ್
ಸ್ಯಾಮ್‌ಸಂಗ್ ಹೊಸ ಸ್ಮಾರ್ಟ್‌ಫೋನ್‌ನಲ್ಲಿ ವಿಶಿಷ್ಟ ಫೀಚರ್ಸ್ ನೀಡಿದ್ದು, ಚಾಟ್ ಒವರ್ ವಿಡಿಯೋ ಎಂಬ ಹೊಸ ಫೀಚರ್ ನೀಡಿದೆ. ಈ ಫೀಚರ್‌ನಲ್ಲಿ ಬಳಕೆದಾರರು ವಿಡಿಯೋ ನೋಡುವಾಗ ಚಾಟ್ ಮಾಡುವ ಆಯ್ಕೆಯನ್ನು ಪಡೆದಿದ್ದಾರೆ. ಅದಲ್ಲದೇ ಮಾರಾಟಕ್ಕೂ ಮೊದಲೇ ಮೈ ಗೆಲಾಕ್ಷಿ ವಿಡಿಯೋ ಆಪ್ ಇನ್‌ಸ್ಟಾಲ್ ಮಾಡಿದ್ದು, ವಿಡಿಯೋಗಳನ್ನು ವೀಕ್ಷಿಸಲು ಹೊಸ ವೇದಿಕೆ ನೀಡಿದೆ. ಈ


Click it and Unblock the Notifications








