5000mAh ಬ್ಯಾಟರಿ ಫೋನ್ 'ಜಿಯೋನಿ ಎಮ್7 ಪವರ್' ಲಾಂಚ್!..ಟ್ರೆಂಡ್ ಹೆಚ್ಚಿಸಿದ ಡಿಸ್‌ಪ್ಲೇ!!

6 ಇಂಚ್ ಫುಲ್‌ವೀವ್ ಡಿಸ್‌ಪ್ಲೇ, 5000mAh ಬ್ಯಾಟರಿ ಹೊತ್ತು 'ಜಿಯೋನಿ ಎಮ್7 ಪವರ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಕೂಡಲೇ ಟ್ರೆಂಡ್ ಸೃಷ್ಟಿಸಿದೆ.!!

|

ಬಹುದಿನಗಳಿಂದ ತೆರೆಮರೆಗೆ ಸರಿದಿದ್ದ ಜಿಯೋನಿ ಮೊಬೈಲ್ ಕಂಪೆನಿ ಇದೀಗ ಬೆಜೆಲ್‌ಲೆಸ್‌ ಡಿಸ್‌ಪ್ಲೇ ಸ್ಮಾರ್ಟ್‌ಫೋನ್ ಮೂಲಕ ಮತ್ತೆ ಭಾರತದ ಮೊಬೈಲ್ ಮಾರುಕಟ್ಟೆಗೆ ಅಪ್ಪಳಿಸಿದೆ.! 6 ಇಂಚ್ ಫುಲ್‌ವೀವ್ ಡಿಸ್‌ಪ್ಲೇ, 5000mAh ಬ್ಯಾಟರಿ ಹೊತ್ತು 'ಜಿಯೋನಿ ಎಮ್7 ಪವರ್' ಸ್ಮಾರ್ಟ್‌ಫೋನ್ ಬಿಡುಗಡೆಯಾಗಿ ಕೂಡಲೇ ಟ್ರೆಂಡ್ ಸೃಷ್ಟಿಸಿದೆ.!!

ಶಿಯೋಮಿಗಿಂತಲೂ ಅತ್ಯಂತ ಕಡಿಮೆ ಬೆಲೆಯಲ್ಲಿ ಫುಲ್‌ವೀವ್ ಡಿಸ್‌ಪ್ಲೇ ಹೊಂದಿರುವ 'ಜಿಯೋನಿ ಎಮ್7 ಪವರ್' ಫೋನ್ ಅನ್ನು ಪರಿಚಯಿಸಿರುವುದು ಮೊಬೈಲ್ ಟ್ರೆಂಡ್ ಆಗಲು ಕಾರಣವಾಗಿದೆ. ಕಳೆದ ಸಪ್ಟೆಂಬರ್ ತಿಂಗಳೀನಲ್ಲಿಯೇ ಚೀನಾದಲ್ಲಿ ಲಾಂಚ್ ಆಗಿ ಹೆಸರು ಗಳಿಸಿದ್ದ ಈ ಫೋನ್ ಭಾರತದಲ್ಲಿ ಇಂದು ಹವಾ ಎಬ್ಬಿಸಿದೆ.!!

ಬ್ಯಾಟರಿ, ಕ್ಯಾಮೆರಾ ಮತ್ತು ಡಿಸ್‌ಪ್ಲೇ ಮೇಲೆ ಹೆಚ್ಚು ಅವಲಂಬಿತವಾಗಿರುವ ಜಿಯೋನಿ ಈ ಸ್ಮಾರ್ಟ್‌ಫೋನ್‌ ಅನ್ನು ಒಪ್ಪೊ ಮತ್ತು ವಿವೊ ಮೊಬೈಲ್ ಕಂಪೆನಿಗಳಿಗೆ ಸೆಡ್ಡು ಹೊಡೆಯಲು ರೂಪಿಸಿದ್ದು, ಹಾಗಾದರೆ, ಜಿಯೋನಿ ಎಮ್7 ಪವರ್ ಫೋನ್ ಏನೆಲ್ಲಾ ಫೀಚರ್ಸ್ ಹೊಂದಿದೆ? ಭಾರತದಲ್ಲಿ ಬೆಲೆ ಎಷ್ಟು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಎಮ್7 ಪವರ್ ಡಿಸ್‌ಪ್ಲೇ ಮತ್ತು ವಿನ್ಯಾಸ!!

ಎಮ್7 ಪವರ್ ಡಿಸ್‌ಪ್ಲೇ ಮತ್ತು ವಿನ್ಯಾಸ!!

ಮೊದಲೇ ಹೇಳಿದಂತೆ ಜಿಯೋನಿ ಎಮ್7 ಪವರ್ 18:9 ಆಸ್ಪೆಕ್ಟ್ ರೆಷ್ಶೂವಿನಲ್ಲಿ 6 ಇಂಚ್ (720x1440 ಪಿಕ್ಸೆಲ್) ಫುಲ್‌ವೀವ್ ಡಿಸ್‌ಪ್ಲೇ ಹೊಂದಿದೆ. ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್ ಸ್ಮಾರ್ಟ್‌ಫೋನಿಗಿದ್ದು, ವಿನ್ಯಾಸದಲ್ಲಿ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಮೀರಿಸುವ ಲುಕ್ ಹೊಂದಿದೆ ಎನ್ನಬಹುದು.!!

ಪ್ರೊಸೆಸರ್ ಮತ್ತು ಒಎಸ್!!

ಪ್ರೊಸೆಸರ್ ಮತ್ತು ಒಎಸ್!!

ಬ್ಯಾಟರಿ, ಕ್ಯಾಮೆರಾ ಮತ್ತು ಡಿಸ್‌ಪ್ಲೇ ಎಲ್ಲಾ ವಿಭಾಗಗಳಲ್ಲಿಯೂ ಉನ್ನತ ಮಟ್ಟ ಕಾಯ್ದುಕೊಂಡಿರುವ ಜಿಯೋನಿ ಎಮ್7 ಪವರ್ ಫೋನ್‌ನಲ್ಲಿ ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳಂತೆ ಸ್ನ್ಯಾಪ್‌ಡ್ರಾಗನ್ 435 SoCo ಪ್ರೊಸೆಸರ್ ಅನ್ನು ಬಳಕೆ ಮಾಡಿದೆ. ಇನ್ನು ಫೋನ್ ಆಂಡ್ರಾಯ್ಡ್ 7.1.1 ನ್ಯೂಗಾದಲ್ಲಿ ಫೋನ್ ಕಾರ್ಯನಿರ್ವಹಣೆ ನೀಡಲಿದೆ.!!

RAM ಮತ್ತು ಮೆಮೊರಿ!!

RAM ಮತ್ತು ಮೆಮೊರಿ!!

ಡ್ಯುಯಲ್ ಸಿಮ್ ಸಪೋರ್ಟ್ ಮಾಡುವ ಜಿಯೋನಿ ಎಮ್7 ಪವರ್ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಮೆಮೊರಿ ವೆರಿಯಂಟ್‌ನಲ್ಲಿ ಮಾರುಕಟ್ಟೆಗೆ ಕಾಲಿಟ್ಟಿದೆ. ಎಸ್‌ಡಿ ಕಾರ್ಡ್ ಮೂಲಕ ಫೋನ್ ಮೆಮೊರಿಯನ್ನು 256GB ವರೆಗೂ ವಿಸ್ತರಿಸಿಕೊಳ್ಳಬಹುದಾದ ಅವಕಾಶ ಫೋನ್‌ನಲ್ಲಿದೆ.!!

ಕ್ಯಾಮೆರಾ ಮತ್ತು ಇತರ ಫೀಚರ್ಸ್!!

ಕ್ಯಾಮೆರಾ ಮತ್ತು ಇತರ ಫೀಚರ್ಸ್!!

ಸ್ಮಾರ್ಟ್‌ಫೋನ್ ಕ್ಯಾಮೆರಾಗೆ ಹೆಚ್ಚು ಹೊತ್ತು ನೀಡಿರುವ ಜಿಯೋನಿ ಎಮ್7 ಪವರ್ ಫೋನ್‌ನಲ್ಲಿ 13 ಮೆಗಾಪಿಕ್ಸೆಲ್ ಆಟೊಫೋಕಸ್ ರಿಯರ್ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲಾಶ್ ಒಳಗೊಂಡ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಿದೆ. ಇನ್ನು 4G ವೋಲ್ಟ್, 3.5MM ಹೆಡ್‌ಫೋನ್ ಜಾಕ್, ಬ್ಲೂಟೂತ್ v4.1, ಮೈಕ್ರೊ ಯುಎಸ್‌ಬಿ ಯಂತಹ ಬಹುತೇಕ ಎಲ್ಲಾ ಫೀಚರ್ಸ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ.!!

ಬೆಲೆ ಮತ್ತು ಮಾರಾಟ!!

ಬೆಲೆ ಮತ್ತು ಮಾರಾಟ!!

ಇಷ್ಟೇಲ್ಲಾ ಫೀಚರ್ಸ್ ಹೊಂದಿರುವ ಜಿಯೋನಿ ಎಮ್7 ಪವರ್ ಸ್ಮಾರ್ಟ್‌ಫೋನ್‌ ಭಾರತದಲ್ಲಿ 16,999 ರೂಪಾಯಿಗಳಿಗೆ ಬಿಡುಗಡೆಯಾಗಿದೆ. ಬೆಜೆಲ್ ಲೆಸ್ ಡಿಸ್‌ಪ್ಲೇ ಮತ್ತು ಬ್ಯಾಟರಿಯಲ್ಲಿ ಹೆಚ್ಚು ಎನ್ನಬಹುದಾದ ಈ ಫೋನ್ ಅನ್ನು ಈ ತಿಂಗಳ 25ನೇ ತಾರೀಖಿನಿಂದ ಅಮೆಜಾನ್‌ನಲ್ಲಿ ಖರೀದಿಸಬಹುದು.!!

ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!..ವಿಡಿಯೊ!!ಐಫೋನ್ X 'ಫೇಸ್ ಐಡಿ' ಫೇಲ್!?..ತಾಯಿ ಮತ್ತು ಮಗನ ಮುಖ ಗುರಿತಿಸದ ಫೇಸ್‌ಲಾಕ್!..ವಿಡಿಯೊ!!

Best Mobiles in India

English summary
Gionee M7 Power was launched in India on Wednesday. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X