ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ Asus ZenFone 3 Max ಪೋನಿನ ಇತಿ-ಮಿತಿ

Written By:

ತೈವಾನ್ ಮೂಲದ ಕಂಪ್ಯೂಟರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಅಸಸ್ ಕಂಪನಿ, ಸದ್ಯ ಸ್ಮಾರ್ಟ್‌ಪೋನ್ ತಯಾರಿಕೆಯಲ್ಲಿ ಯಶಸ್ಸು ಕಾಣುತ್ತಿದೆ. ಸದ್ಯ ಅಸಸ್ ಪರಿಚಯಿಸುತ್ತಿರುವ ಜೆನ್‌ಪೋನ್ ಸರಣಿಯಲ್ಲಿ ಮತ್ತೊಂದು ಸ್ಮಾರ್ಟ್‌ಪೊನ್ ಮಾರುಕಟ್ಟೆಯಲ್ಲಿ ಸಖತ್ ಸದ್ದು ಮಾಡುತ್ತಿದೆ.

Asus ZenFone 3 Max ಪೋನಿನ ಇತಿ-ಮಿತಿ

ನೋಕಿಯಾದಿಂದ ಬಿಡುಗಡೆಯಾಗುತ್ತಿದೆ ಹೊಸ ಸ್ಮಾರ್ಟ್‌ಪೋನ್‌ಗಳು... !

Asus ZenFone 3 Max ಸ್ಮಾರ್ಟ್‌ಪೋನ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಮಧ್ಯಮ ಬೆಲೆಯ ಈ ಸ್ಮಾರ್ಟ್‌ಪೋನ್ ತನ್ನ ದರ್ಜೆಯಲ್ಲಿ ಉತ್ತಮ ಗುಣ ವಿಶೇಷತೆಗಳನ್ನು ಒಳಗೊಂಡಿದೆ. 5.5 ಇಂಚಿನ HD ಡಿಸ್‌ಪ್ಲೇ ಹೊಂದಿರುವ ಈ Asus ZenFone 3 Max ಸದ್ಯದ ಮಾರುಕಟ್ಟೆಯಲ್ಲಿ ಒಳ್ಳೆಯ ವಿಮರ್ಶೆಗಳಿಸಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಉತ್ತಮ ವೇಗದ ಕಾರ್ಯಚರಣೆ

ಉತ್ತಮ ವೇಗದ ಕಾರ್ಯಚರಣೆ

Asus ZenFone 3 Max ಸ್ಮಾರ್ಟ್‌ಪೋನ್ 1.4GHz ಆಕ್ಟಾ ಕೋರ್ ಕ್ವಾಲಮ್ ಸ್ನ್ಯಾಪ್‌ಡ್ರಾಗನ್ 430 ಪೋಸೆಸರ್ ಹೊಂದಿದ್ದು, ವೇಗದ ಕಾರ್ಯಚರಣೆಗೆ ಹೇಳಿ ಮಾಡಿಸಿದಂತಿದೆ. 3GB RAM ಈ ಪೋನಿನಲ್ಲಿದ್ದು, 32GB ಇಂಟರ್ನಲ್ ಮೆಮೊರಿ ಹೊಂದಿದೆ. ಅಲ್ಲದೇ SD ಕಾರ್ಡ್‌ ಹಾಕಿಕೊಂಡು 128GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾದ ಅವಕಾಶವನ್ನು ನೀಡಲಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅತ್ಯುತ್ತಮ ಬ್ಯಾಟರಿ

ಅತ್ಯುತ್ತಮ ಬ್ಯಾಟರಿ

Asus ZenFone 3 Max ದೀರ್ಘಕಾಲದ ಬ್ಯಾಟರಿ ಬಾಳಿಕೆಯನ್ನು ನೀಡುತ್ತಿದೆ. ಈ ಪೋನಿನಲ್ಲಿ ಅಸಸ್ 4000mAh ಬ್ಯಾಟರಿಯನ್ನು ಅಳವಡಿಸಿದ್ದು, ಇದು ದೀರ್ಘಕಾಲದ ಬಾಳಿಕೆಗೆ ಇದು ಸಹಕಾರಿಯಾಗಲಿದೆ. ಈ ಕಾರಣದಿಂದ ಸ್ವಲ್ಪ ಮೊಬೈಲ್ ತೂಕ ಜಾಸ್ತಿ ಎನ್ನುವ ಭಾವ ಮೂಡಬಹುದು, ಈ ಪೋನ್ ಸುಮಾರು 175 ಗ್ರಾಮ್ ತೂಕವಿದೆ.

16 MP ಮತ್ತು 8 MP ಕ್ಯಾಮೆರಾ:

16 MP ಮತ್ತು 8 MP ಕ್ಯಾಮೆರಾ:

Asus ZenFone 3 Max ಸ್ಮಾರ್ಟ್‌ಪೋನ್ ಉತ್ತಮ ಪೋಟೋ ಕ್ಲಿಕ್ಕಿಸಲು ಸಹಾಯಕಾರಿಯಾಗಿದೆ. 16 MP ಹಿಂಬದಿಯ ಕ್ಯಾಮೆರಾ ಒಳ್ಳೆ ಚಿತ್ರಗಳನ್ನು ಸೆರೆಹಿಡಿಯಲಿದೆ. ಅಲ್ಲದೇ ಸೆಲ್ಫಿ ಕ್ಲಿಕ್ಕಿಸುವ ಸಲುವಾಗಿಯೇ 8 MP ಮುಂಬದಿ ಕ್ಯಾಮೆರಾವನ್ನು ನೀಡಲಾಗಿದ್ದು, ಸೆಲ್ಫಿ ಪ್ರಿಯರು ಹೆಚ್ಚಾಗಿ ಈ ಪೋನ್ ಇಷ್ಟ ಪಡುತ್ತಿರುವುದು ಇದೇ ಕಾರಣಕ್ಕಾಗಿ. ಇದರೊಂದಿಗೆ HD ಗುಣಮಟ್ಟದ ಡಿಸ್‌ಪ್ಲೇ ವಿಡಿಯೋ ನೋಡಲು ಹಿತಕರವಾಗಿದೆ.

ಮತ್ತಿತರ ಗುಣವಿಶೇಷಣಗಳು

ಮತ್ತಿತರ ಗುಣವಿಶೇಷಣಗಳು

Asus ZenFone 3 Max ಸ್ಮಾರ್ಟ್‌ಪೋನ್ ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಡುಯಲ್ ಸಿಮ್ ಹಾಕುವ ಅವಕಾಶ ಈ ಪೋನ್ ನಲ್ಲಿದ್ದು, ಒಂದು ನ್ಯಾನೊ ಮತ್ತೊಂದು, ಮೈಕ್ರೊ ಸಿಮ್ ಹಾಕಬಹುದಾಗಿದೆ. 3G ಮತ್ತು 4G ಎರಡಕ್ಕೂ ಈ ಪೋನ್ ಸಪೋರ್ಟ್ ಮಾಡುತ್ತದೆ, ಇದರೊಂದಿಗೆ Wi-Fi, GPS, Bluetooth, USB OTG, FM ಸೇರಿದಂತೆ ಹತ್ತು ಹಲವು ವಿಶೇಷತೆಗಳು ಈ ಪೋನ್‌ನಲ್ಲಿದೆ.

Asus ZenFone 3 Max ಪೋನಿನ ಇತಿ-ಮಿತಿ

Asus ZenFone 3 Max ಪೋನಿನ ಇತಿ-ಮಿತಿ

ಸುಮಾರು 17,999 ರೂ ಗಳಿಗೆ ಮಾರಾಟವಾಗುತ್ತಿರುವ Asus ZenFone 3 Max ಇತಿ-ಮಿತಿಗಳನ್ನು ನೋಡುವುದಾದರೆ.

ಉತ್ತಮ ಅಂಶಗಳು: ಒಳ್ಳೆಯ ವಿನ್ಯಾಸ ಮತ್ತು ಗುಣಮಟ್ಟ, ಉತ್ಕೃಷ್ಟ ಡಿಸ್‌ಪ್ಲೇ, ಉತ್ತಮ ಕ್ಯಾಮೆರಾ, ದೀರ್ಘಕಾಲದ ಬ್ಯಾಟರಿ ಬಾಳಿಕೆ, ಉತ್ತಮ ಆಡಿಯೋ ಇಂಜಿನ್.
ಮಿತಿಗಳು: ಹೈಬ್ರಿಡ್ ಸಿಮ್ ವ್ಯವಸ್ಥೆ, ಗೇಮ್ ಆಡುವ ಸಂದರ್ಭದಲ್ಲಿ ವೇಗ ಕಡಿಮೆಯಾಗಲಿದೆ. ಜೊತೆಗೆ ಗೋರಿಲ್ಲ ಗ್ಲಾಸ್ ಸಹ ಅಳವಡಿಸಲಾಗಿಲ್ಲ, ಅಲ್ಲದೇ ಸ್ವಲ್ಪ ತುಟಿಯಾದ ಬೆಲೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
Asus ZenFone 3 Max smartphone was comes with a 5.50-inch touchscreen display with a resolution of 1080 pixels by 1920 pixels. The company has made Android phones powered by Intel. To know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot