ಗೂಗಲ್ ಪಿಕ್ಸಲ್ 3 ಫೋನಿನ ಸಮಸ್ಯೆಗಳು ಮುಗಿಯುವುದು ಯಾವಾಗ?

By Gizbot Bureau
|

ಗೂಗಲ್ ಪಿಕ್ಸಲ್ ಫೋನ್ ಗಳನ್ನು ಹೆಚ್ಚಿನವರು ಪ್ರೀತಿಸುತ್ತಾರೆ ಯಾಕೆಂದರೆ ಅವುಗಳು ಗ್ರೇಟ್ ಡಿವೈಸ್ ಗಳು ಅನ್ನಿಸಿಕೊಂಡಿವೆ. ಗೂಗಲ್ ಯಾವಾಗಲೂ ಕೂಡ ತನ್ನ ಸಾಫ್ಟ್ ವೇರ್, ಕ್ಯಾಮರಾ ಮತ್ತು ಫೀಚರ್ ಗಳಲ್ಲಿ ಹೊಸತನವನ್ನು ತರುತ್ತದೆ. ಆದರೆ ಅದ್ಯಾಕೋ ಗೊತ್ತಿಲ್ಲ ಗೂಗಲ್ ಪಿಕ್ಸಲ್ 3 ಬಿಡುಗಡೆಗೊಂಡ 6 ತಿಂಗಳಿನಿಂದ ಕೆಲವು ಸಮಸ್ಯೆಗಳನ್ನು ಎದುರಿಸುತ್ತಲೇ ಇದೆ. ಆರು ತಿಂಗಳು ಕಳೆದರೂ ಕೂಡ ಆ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಗೂಗಲ್ ಗೆ ಸಾಧ್ಯವಾಗಿಲ್ಲ ಮತ್ತು ಗೂಗಲ್ ಪಿಕ್ಸಲ್ 3 ಫೋನ್ ಖರೀದಿಸಿದವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಗೂಗಲ್ ಪಿಕ್ಸಲ್ 3 ಫೋನಿನ ಸಮಸ್ಯೆಗಳು ಮುಗಿಯುವುದು ಯಾವಾಗ?

ಸ್ಮಾರ್ಟ್ ಫೋನ್ ಇಂಡಸ್ಟ್ರಿಯಲ್ಲಿರುವ ದೊಡ್ಡ ದೊಡ್ಡ ಹೆಸರಿನ ಫೋನ್ ಗಳಿಗೆ ಸ್ಪರ್ಧೆಯೊಡ್ಡುವುದಕ್ಕೆ ಪಿಕ್ಸಲ್ 3 ಮತ್ತು ಪಿಕ್ಸಲ್ 3ಎಕ್ಸ್ಎಲ್ ಮೂಲಕ ಗೂಗಲ್ ಪ್ರಯತ್ನಿಸುತ್ತಿದೆ. ಕ್ರಮವಾಗಿ $800 ಮತ್ತು $900 ಗಳಿಗೆ ಖರೀದಿಯಾಗಿರುವ ಈ ಫೋನ್ ಗಳಲ್ಲಿರುವ ಸಮಸ್ಯೆಗಳು ಬೇಗನೆ ನಿವಾರಣೆಯಾಗಲಿ ಎಂದು ಬಯಸುತ್ತಿದ್ದಾರೆ. ಈ ಸಮಸ್ಯೆಗಳು ಗೂಗಲ್ ಸೇಲ್ ಮೇಲೂ ಕೂಡ ಪರಿಣಾಮವನ್ನುಂಟುಮಾಡುತ್ತಿದೆ. ಹಾಗಾದ್ರೆ ಇರುವ ಸಮಸ್ಯೆಗಳಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಈ ಕೆಳಗಿದೆ ಗಮನಿಸಿ.

ನಿಧಾನಗತಿಯ ಕ್ಯಾಮರಾ ಆಪ್:

ನಿಧಾನಗತಿಯ ಕ್ಯಾಮರಾ ಆಪ್:

ಪಿಕ್ಸಲ್ 3 ಫೋನಿನಲ್ಲಿ ಬಳಕೆದಾರರು ಹೇಳುತ್ತಿರುವ ದೊಡ್ಡ ದೂರು ಯಾವುದೆಂದರೆ ಕ್ಯಾಮರಾದ ಕೆಲಸ. ಪಿಕ್ಸಲ್ 3 ಫೋನಿನಲ್ಲಿ ತೆಗೆದ ಫೋಟೋಗಳು ಖಂಡಿತವಾಗಲೂ ಇಂದಿಗೂ ಕೂಡ ದಿ ಬೆಸ್ಟ್ ಫೋಟೋಗಳು ಅನ್ನಿಸಿಕೊಳ್ಳುತ್ತವೆ ಎಂಬುದೇನೋ ನಿಜ. ಶಾರ್ಪ್, ಹೆಚ್ ಡಿಆರ್, ಮತ್ತು ಸೆಲ್ಫೀ ಕ್ಯಾಮರಾಕ್ಕಾಗಿ ಇರುವ ಹೆಚ್ಚುವರಿ ಲೆನ್ಸ್ ಖಂಡಿತವಾಗಲೂ ಬಹಳ ಪ್ರಯೋಜನಕಾರಿಯಾಗಿದೆ.

ಆದರೆ, ಇದರ ಸ್ಪೀಡ್ ಮತ್ತು ಸಾಮಾನ್ಯ ರಿಯಾಲಿಟಿಗಳು ಕ್ಯಾಮರಾ ಆಪ್ ಬಗ್ಗೆ ದೂರುಗಳು ಬರುವಂತೆ ಮಾಡುತ್ತಿದೆ. ಪಿಕ್ಸಲ್ 3 ಫೋನಿನ ಬಳಕೆದಾರರು ಕ್ಯಾಮರಾ ಆಪ್ ನ ವೇಗದ ಬಗ್ಗೆ ಯಾವಾಗಲೂ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಕ್ಯಾಮರಾ ಆಪ್ ಲೋಡ್ ಆಗುವುದಕ್ಕೆ ಕೆಲವು ಸಮಯ ಹಿಡಿಯುತ್ತದೆ. ರೆಡ್ಡಿಟ್ ವರದಿಯೊಂದು ತಿಳಿಸಿರುವ ಪ್ರಕಾರ ಒಮ್ಮೆ ಆಪ್ ಸಂಪೂರ್ಣ ಲೋಡ್ ಆಗುವುದಕ್ಕೆ ಸುಮಾರು 12 ಸೆಕೆಂಡ್ ಗಳ ಕಾಲ ಬೇಕಾಗುತ್ತದೆಯಂತೆ. ಇದು ಬಳಕೆದಾರರಿಗೆ ಕಿರಿಕಿರಿ ಅನ್ನಿಸಿದೆ.

ಇತ್ತೀಚೆಗಿನ ಅಪ್ ಡೇಟ್ ಗಳಲ್ಲಿ ಗೂಗಲ್ ಈ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಪ್ರಯತ್ನಿಸಿದೆ. ಆದರೂ ಕೂಡ ಸಂಪೂರ್ಣವಾಗಿ ಪರಿಹರಿಸುವಲ್ಲಿ ಗೂಗಲ್ ವಿಫಲವಾಗಿದೆ.

ಕೆಟ್ಟ ಮೆಮೊರಿ ಮ್ಯಾನೇಜ್ ಮೆಂಟ್ :

ಕೆಟ್ಟ ಮೆಮೊರಿ ಮ್ಯಾನೇಜ್ ಮೆಂಟ್ :

ಪಿಕ್ಸಲ್ 3 ಫೋನ್ ಬಿಡುಗಡೆಯಾದಾಗಿನಿಂದ ಇರುವ ಮತ್ತೊಂದು ಪ್ರಮುಖ ಸಮಸ್ಯೆಯೇನೆಂದರೆ ಮೆಮೊರಿ ಮ್ಯಾನೇಜ್ ಮೆಂಟ್. ತನ್ನ 4ಜಿಬಿ RAM ನ್ನು ಈ ಫೋನ್ ಸರಿಯಾಗಿ ನಿರ್ವಹಿಸುತ್ತಿಲ್ಲ. ಆಪ್ಸ್ ಗಳನ್ನು ಕ್ಲೋಸ್, ರೀಸ್ಟಾರ್ಟ್, ಅಥವಾ ಮೆಮೊರಿ ಬಳಕೆಯನ್ನು ಕಡಿಮೆ ಮಾಡುವುದರ ಪರಿಣಾಮವಾಗಿ ಸರಿಯಾಗಿ ಕೆಲಸ ಆಗುವುದಿಲ್ಲ. ಎಪ್ರಿಲ್ ನಲ್ಲಿ ನಡೆದ ಮತ್ತೊಂದು ಸೆಕ್ಯುರಿಟಿ ಅಪ್ ಡೇಟ್ ಇನ್ನಷ್ಟು ಸಮಸ್ಯೆಗೂ ಕೂಡ ಕಾರಣವಾಗಿದೆ.

ಬ್ಲೂಟೂತ್ ಸಮಸ್ಯೆಗಳು :

ಬ್ಲೂಟೂತ್ ಸಮಸ್ಯೆಗಳು :

ಎಲ್ಲಾ ಮೂರೂ ಜನರೇಷನ್ನಿನ ಪಿಕ್ಸಲ್ ಫೋನ್ ಗಳಲ್ಲಿ ಕಾಣಿಸಿಕೊಂಡು ಸಾಮಾನ್ಯ ಸಮಸ್ಯೆ ಯಾವುದೆಂದರೆ ಬ್ಲೂಟೂತ್ ಸಮಸ್ಯೆ. ಗೂಗಲ್ ಫೋನ್ ಗಳಲ್ಲಿ ಬ್ಲೂಟೂತ್ ಪ್ರದರ್ಶನವು ಇತರೆ ಫೋನ್ ಗಳಿಗೆ ಉದಾಹರಣೆಗೆ ಸ್ಯಾಮ್ ಸಂಗ್ ಫೋನ್ ಗಳಿಗೆ ಹೋಲಿಸಿದರೆ ಅಷ್ಟೇನು ಆಕರ್ಷಕವಾಗಿ ಇರುವುದಿಲ್ಲ.

ಕರೆಯ ಆರಂಭದಲ್ಲೇ ಸ್ಪೀಕರ್ ಫೋನ್ ಕೆಲಸ ಮಾಡುವುದಿಲ್ಲ:

ಕರೆಯ ಆರಂಭದಲ್ಲೇ ಸ್ಪೀಕರ್ ಫೋನ್ ಕೆಲಸ ಮಾಡುವುದಿಲ್ಲ:

ವಿಚಿತ್ರ ಅನ್ನಿಸುವ ಬಗ್ ವೊಂದು ಇತ್ತೀಚೆಗೆ ಅಂದರೆ ಕಳೆದ ಕೆಲವು ತಿಂಗಳಲ್ಲಿ ಪಾಪ್ ಅಪ್ ಆಗಿದೆ. ಹಲವು ಪಿಕ್ಸಲ್ 3 ಮಾಲೀಕರು ತಮ್ಮ ಕರೆಯ ಆರಂಭದಲ್ಲಿ ಸ್ಪೀಕರ್ ಫೋನ್ ಬಳಕೆ ಮಾಡಿದರೆ ಆ ಫೀಚರ್ ಸರಿಯಾಗಿ ಕೆಲಸ ಮಾಡುವುದಿಲ್ಲ ಎಂದು ದೂರುತ್ತಿದ್ದಾರೆ. ಒಂದು ವೇಳೆ ಸ್ಪೀಕರ್ ಫೋನ್ ನ್ನು ಕೂಡಲೇ ಆನ್ ಮಾಡಿದರೆ ಕರೆಯ ಇನ್ನೊಂದು ಬದಿಯಲ್ಲಿರುವ ವ್ಯಕ್ತಿಯು ಕರೆ ಮಾಡಿದ ವ್ಯಕ್ತಿಯ ಧ್ವನಿಯನ್ನು ಕೇಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಸಮಸ್ಯೆ ವಿಚಿತ್ರವಾಗಿರುವುದಾಗಿದ್ದು ಮುಂದಿನ ದಿನಗಳಲ್ಲಿ ನಡೆಯುವ ಸಾಫ್ಟ್ ವೇರ್ ಅಪ್ ಡೇಟ್ ನಲ್ಲಿ ಗೂಗಲ್ ಈ ಸಮಸ್ಯೆಯನ್ನು ಪರಿಹರಿಸುತ್ತದೆ ಎಂಬ ನಂಬಿಕೆ ಇಡಲಾಗಿದೆ.

ಫಾಸ್ಟ್ ವಯರ್ ಲೆಸ್ ಚಾರ್ಜಿಂಗ್ ಯಾವಾಗಲೂ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ:

ಫಾಸ್ಟ್ ವಯರ್ ಲೆಸ್ ಚಾರ್ಜಿಂಗ್ ಯಾವಾಗಲೂ ಕೂಡ ಸರಿಯಾಗಿ ಕೆಲಸ ಮಾಡುವುದಿಲ್ಲ:

ಫಾಸ್ಟ್ ವಯರ್ ಲೆಸ್ ಚಾರ್ಜಿಂಗ್ ಫೀಚರ್ ಪಿಕ್ಸಲ್ 3 ಫೋನ್ ಬಿಡುಗಡೆಯಾದಾಗಿನಿಂದಲೂ ಕೂಡ ಸಮಸ್ಯೆಯಲ್ಲಿದೆ. ತನ್ನದೇ ಸ್ವಂತ ವಯರ್ ಲೆಸ್ ಚಾರ್ಜಿಂಗ್ ಮೆಥೆಡ್ ನ್ನು ಕಂಪೆನಿಯು ಪರಿಚಯಿಸಿದೆ ಮತ್ತು ಅದನ್ನು ಕ್ಯೂಐ ಚಾರ್ಜರ್ಸ್ ಎನ್ನಲಾಗಿದೆ. ಇದು 5W ನದ್ದಾಗಿರುತ್ತದೆ.ಆದರೂ ಕೂಡ ಕೆಲವು ಬಳಕೆದಾರರಿಗೆ ವಯರ್ ಲೆಸ್ ಚಾರ್ಜಿಂಗ್ ತಲೆನೋವಾಗಿ ಪರಿಣಮಿಸಿದೆ.

ಆಂಬಿಯಂಟ್ ಡಿಸ್ಪ್ಲೇ ಸ್ಕ್ರೀನ್ ಫ್ಲ್ಯಾಶಿಂಗ್ :

ಆಂಬಿಯಂಟ್ ಡಿಸ್ಪ್ಲೇ ಸ್ಕ್ರೀನ್ ಫ್ಲ್ಯಾಶಿಂಗ್ :

ಬಿಡುಗಡೆಗೊಂಡ 6 ತಿಂಗಳ ನಂತರ ಅಂದರೆ ಎಪ್ರಿಲ್ ನಲ್ಲಿ ನಡೆದ ಸೆಕ್ಯುರಿಟಿ ಅಪ್ ಡೇಟ್ ಬಳಿಕ ಅಂತೂ ಇಂತೂ ಸಂಸ್ಥೆ ಸ್ಕ್ರೀನ್ ಫ್ಲ್ಯಾಶಿಂಗ್ ಸಮಸ್ಯೆಯನ್ನು ನಿವಾರಣೆ ಮಾಡಿದ್ದು ಪಿಕ್ಸಲ್ 3 ಮಾಲೀಕರು ನಿರಾಳರಾಗಿದ್ದಾರೆ.ಸ್ಕ್ರೀನ್ ಫ್ಲ್ಯಾಶ್ ಸಮಸ್ಯೆಯು ಡಿಸ್ಪ್ಲೇಯಲ್ಲಿ ಕಾಣಿಸಿಕೊಳ್ಳುತ್ತಿತ್ತು ಮತ್ತು ಕತ್ತಲೆಯ ರೂಮಿನಲ್ಲಿದ್ದಾಗ ಪ್ರಕಾಶಮಾನವಾದ ಬೆಳಕು ಅನಗತ್ಯವಾಗಿ ಡಿಸ್ಪ್ಲೇಯಿಂದ ಬರುತ್ತಿತ್ತು. ಇದೊಂದು ಬಗ್ ನಿಂದ ಆಗುತ್ತಿದ್ದ ಸಮಸ್ಯೆಯಾಗಿದ್ದು ಇದೀಗ ನಡೆದ ಅಪ್ ಡೇಟ್ ನಲ್ಲಿ ಈ ಸಮಸ್ಯೆಯನ್ನು ಪರಿಹರಿಸಲಾಗಿದೆ.

ಕಸ್ಟಮರ್ ಸರ್ವೀಸ್ ಅಷ್ಟೇನು ಉತ್ತಮವಾಗಿಲ್ಲ:

ಕಸ್ಟಮರ್ ಸರ್ವೀಸ್ ಅಷ್ಟೇನು ಉತ್ತಮವಾಗಿಲ್ಲ:

ನಿಮ್ಮ ಫೋನಿಗೆ ಯಾವ ಸಮಸ್ಯೆಯಿದ್ದರೂ ಕೂಡ ಅದನ್ನು ಅಂತಿಮವಾಗಿ ಅಥವಾ ಕೊನೆಯ ಹಂತವಾಗಿ ಪರಿಹರಿಸಿಕೊಳ್ಳುವುದಕ್ಕಿರುವ ಮಾರ್ಗವೆಂದರೆ ನಿಮ್ಮ ಡಿವೈಸ್ ನ್ನೇ ಬದಲಾಯಿಸಿಕೊಳ್ಳುವುದು ಆದರೆ ಮತ್ತೊಂದು ಪ್ರಮುಖ ಸಮಸ್ಯೆ ಎದುರಾಗಿದ್ದದ್ದು ಪಿಕ್ಸಲ್ 3 ಸುಳ್ಳುಗಳು.ಹೌದು ಗೂಗಲ್ ನ ಗ್ರಾಹಕ ಸೇವಾ ಕೇಂದ್ರದಲ್ಲಿ ಈ ಡಿವೈಸ್ ಗಳ ಬಗ್ಗೆ ತಪ್ಪು ಮಾಹಿತಿಗಳಿದ್ದಂತೆ ಕಾಣುತ್ತಿತ್ತು.ರೆಡ್ಡಿಟ್ ನಲ್ಲಿ ಈ ಬಗ್ಗೆ ಸಾಕಷ್ಟು ಸ್ಟೋರಿಗಳು ಕೂಡ ಇವೆ. ರೀಫಂಡ್ ಬಯಸಿದ ವ್ಯಕ್ತಿಗೆ 10 ಫೋನ್ ಗಳನ್ನು ಕಳುಹಿಸಿದ ಘಟನೆಗಳೂ ಕೂಡ ನಡೆದಿತ್ತು.

9ಟು5 ಗೂಗಲ್:

ಪ್ರತಿಯೊಂದು ಸ್ಮಾರ್ಟ್ ಫೋನಿನಲ್ಲೂ ಸಮಸ್ಯೆಗಳಿರುತ್ತದೆ. ಒಳ್ಳೆಯದಿದ್ದೆಡೆ ಕೆಟ್ಟದ್ದಿರುವುದು ಸರ್ವೇಸಾಮಾನ್ಯ. ಆದರೆ ಗೂಗಲ್ ಪಿಕ್ಸಲ್ ಫೋನ್ ನಲ್ಲಿ ಕೆಲವು ಸಾಮಾನ್ಯ ವಿಚಾರಗಳೇ ಎಡವಟ್ಟಾಗಿದ್ದವು ಮತ್ತು ಅದನ್ನು ಸರಿಪಡಿಸುವಲ್ಲಿ ಎಡವಲಾಗಿದೆ. 9ಟು5ಗೂಗಲ್ ಟೀಮ್ ವಯಕ್ತಿಕವಾಗಿ ಪಿಕ್ಸಲ್ 3 ಡಿವೈಸ್ ಗಳನ್ನು ಖರೀದಿ ಮಾಡಿದೆ. ಆದರೆ ಬಿಡುಗಡೆಯಾದಾಗಿನಿಂದಲೂ ಸಮಸ್ಯೆ ಪರಿಹಾರವಾಗಿರದ ಬಗ್ಗೆ ಬೇಸರವಿದೆ.

ಹಾಗಾದ್ರೆ ಈ ಫೋನ್ ಖರೀದಿಸುವುದನ್ನೇ ಬಿಟ್ಟುಬಿಡಬೇಕೆ? ಅಥವಾ ಮುಂದುವರಿಸಬೇಕೇ ? ಖಂಡಿತ ಗೊಂದಲ. ನಿಮ್ಮ ಅಭಿಪ್ರಾಯವೇನು ಕಮೆಂಟಿಸಿ.

ಪಿಕ್ಸಲ್ 3 ಡಿವೈಸ್

ಪಿಕ್ಸಲ್ 3 ಡಿವೈಸ್

ಪ್ರತಿಯೊಂದು ಸ್ಮಾರ್ಟ್ ಫೋನಿನಲ್ಲೂ ಸಮಸ್ಯೆಗಳಿರುತ್ತದೆ. ಒಳ್ಳೆಯದಿದ್ದೆಡೆ ಕೆಟ್ಟದ್ದಿರುವುದು ಸರ್ವೇಸಾಮಾನ್ಯ. ಆದರೆ ಗೂಗಲ್ ಪಿಕ್ಸಲ್ ಫೋನ್ ನಲ್ಲಿ ಕೆಲವು ಸಾಮಾನ್ಯ ವಿಚಾರಗಳೇ ಎಡವಟ್ಟಾಗಿದ್ದವು ಮತ್ತು ಅದನ್ನು ಸರಿಪಡಿಸುವಲ್ಲಿ ಎಡವಲಾಗಿದೆ. 9ಟು5ಗೂಗಲ್ ಟೀಮ್ ವಯಕ್ತಿಕವಾಗಿ ಪಿಕ್ಸಲ್ 3 ಡಿವೈಸ್ ಗಳನ್ನು ಖರೀದಿ ಮಾಡಿದೆ. ಆದರೆ ಬಿಡುಗಡೆಯಾದಾಗಿನಿಂದಲೂ ಸಮಸ್ಯೆ ಪರಿಹಾರವಾಗಿರದ ಬಗ್ಗೆ ಬೇಸರವಿದೆ.

ಹಾಗಾದ್ರೆ ಈ ಫೋನ್ ಖರೀದಿಸುವುದನ್ನೇ ಬಿಟ್ಟುಬಿಡಬೇಕೆ? ಅಥವಾ ಮುಂದುವರಿಸಬೇಕೇ ? ಖಂಡಿತ ಗೊಂದಲ. ನಿಮ್ಮ ಅಭಿಪ್ರಾಯವೇನು ಕಮೆಂಟಿಸಿ.

Best Mobiles in India

Read more about:
English summary
Google Pixel 3 owners are still facing problems 6 months later, here’s the list

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X