Subscribe to Gizbot

ಎಚ್‌ಟಿಸಿ ಒನ್‌ಗೆ ಈ ವರ್ಷದ ಬೆಸ್ಟ್‌‌‌ ಸ್ಮಾರ್ಟ್‌ಫೋನ್‌ ಪ್ರಶಸ್ತಿ

Posted By:

ತೈವಾನ್‌ ಮೂಲದ ಎಚ್‌ಟಿಸಿ ಕಂಪೆನಿನ ದುಬಾರಿ ಸ್ಮಾರ್ಟ್‌‌ಫೋನ್‌ ಎಚ್‌ಟಿಸಿ ಒನ್‌ಗೆ ಈ ವರ್ಷ‌ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಪ್ರಶಸ್ತಿ ಸಿಕ್ಕಿದೆ. ಜಿಎಸ್‌ಎಂಎ ಸಂಸ್ಥೆ ಈ ವರ್ಷ‌ದ ಗ್ಲೋಬಲ್‌ ಮೊಬೈಲ್‌ ಪ್ರಶಸ್ತಿಯನ್ನು ಬಾರ್ಸಿ‌‌ಲೋನಾದಲ್ಲಿ ನಡೆಯುತ್ತಿರುವ ಮೊಬೈಲ್‌ ವರ್ಲ್ಡ್‌ ಸಮ್ಮೇಳನದಲ್ಲಿ ಪ್ರಕಟಿಸಿದ್ದು ಎಚ್‌‌ಟಿಸಿ ಒನ್‌ಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಪ್ರಶಸ್ತಿಯನ್ನು ನೀಡಿದೆ.

ಕಳೆದ 19 ವರ್ಷಗಳಿಂದ ವಿವಿಧ ವಿಭಾಗದಲ್ಲಿ ಜಿಎಸ್‌ಎಂಎ ಸಂಸ್ಥೆ ಪ್ರಶಸ್ತಿ ನೀಡುತ್ತಿದ್ದು, ಈ ವರ್ಷದ ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌‌ಫೋನ್‌ ಮತ್ತು ಉತ್ತಮ ಫೀಚರ್‌ ಫೋನ್‌‌‌ ಪ್ರಶಸ್ತಿ ನೋಕಿಯಾ ಕಂಪೆನಿಯ ಪಾಲಾಗಿದೆ. ಆಪಲ್‌ ಕಂಪೆನಿಯ ಐಪ್ಯಾಡ್‌‌ಗೆ ಉತ್ತಮ ಮೊಬೈಲ್‌ ಟ್ಯಾಬ್ಲೆಟ್‌ ಪ್ರಶಸ್ತಿ ಸಿಕ್ಕಿದರೆ, ಎಲ್‌ಜಿಗೆ ಈ ವರ್ಷದ ಅತ್ಯಂತ ನವೀನ ಸಾಧನ ತಯಾರಕ ಕಂಪೆನಿ ಪ್ರಶಸ್ತಿ ಲಭಿಸಿದೆ. ಮುಂದಿನ ಪುಟದಲ್ಲಿಈ ಕಂಪೆನಿಗಳ ಯಾವೆಲ್ಲ ಗ್ಯಾಜೆಟ್‌‌ಗಳಿಗೆ ಈ ಪ್ರಶಸ್ತಿ ಲಭಿಸಿದೆ ಎನ್ನುವ ವಿವರ ನೀಡಲಾಗಿದ್ದು, ಪುಟ ತಿರುಗಿಸಿ ಓದಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಎಚ್‌ಟಿಸಿ ಒನ್‌

ಅತ್ಯುತ್ತಮ ಸ್ಮಾರ್ಟ್‌ಫೋನ್‌ ಎಚ್‌ಟಿಸಿ ಒನ್‌

ಬೆಲೆ:41620

ವಿಶೇಷತೆ:
ಡ್ಯುಯಲ್‌ ಸಿಮ್‌(ಸಿಡಿಎಂಎ+ಜಿಎಸ್‌ಎಂ)
4.7 ಇಂಚಿನ ಫುಲ್‌ ಎಚ್‌ಡಿ ಸ್ಕ್ರೀನ್‌ (1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್ 4.1.2 ಜೆಲ್ಲಿ ಬೀನ್‌ ಓಎಸ್‌
1.7GHz ಕ್ವಾಡ್‌ ಕೋರ್‌ ಪ್ರೊಸೆಸರ್‍
2GB RAM
16GB ಆಂತರಿಕ ಮೆಮೋರಿ
64GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
ಹಿಂದುಗಡೆ ಆಲ್ಟ್ರಾ ಪಿಕ್ಸೆಲ್‌ ಕ್ಯಾಮೆರಾ
2.1 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಬ್ಲೂಟೂತ್‌‌,ಜಿಪಿಎಸ್‌,ಎನ್‌ಎಫ್‌ಸಿ,ಮೈಕ್ರೋಯುಎಸ್‌ಬಿ,
2,300mAh ಬ್ಯಾಟರಿ

ನೋಕಿಯಾ ಲೂಮಿಯಾ 520

ಕಡಿಮೆ ಬೆಲೆಯ ಉತ್ತಮ ಸ್ಮಾರ್ಟ್‌‌ಫೋನ್‌ ನೋಕಿಯಾ ಲೂಮಿಯಾ 520

ಬೆಲೆ:7901

ವಿಶೇಷತೆ:
ಸಿಂಗಲ್‌ ಸಿಮ್‌
4 ಇಂಚಿನ WVGA ಟಚ್‌ಸ್ಕ್ರೀನ್(480 x 800 ಪಿಕ್ಸೆಲ್‌)
ವಿಂಡೋಸ್‌ ಫೋನ್‌ 8 ಓಎಸ್‌
1GHz ಡ್ಯುಯಲ್‌ ಕೋರ್‌ ಪ್ರೋಸೆಸರ್‌
512MB ರ್‍ಯಾಮ್‌
8GB ಆಂತರಿಕ ಮೆಮೋರಿ
64GB ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
1,430 mAh ಬ್ಯಾಟರಿ

 ನೋಕಿಯಾ105

ಕಡಿಮೆ ಬೆಲೆಯ ಉತ್ತಮ ಫೀಚರ್‌ ಫೋನ್‌ ನೋಕಿಯಾ105

ಬೆಲೆ:1089
ವಿಶೇಷತೆ:
ಸಿಂಗಲ್‌ ಸಿಮ್‌
1.45 ಇಂಚಿನ ಸ್ಕ್ರೀನ್‌(128 x 128 ಪಿಕ್ಸೆಲ್‌)
800 mAh ಬ್ಯಾಟರಿ
ಫ್ಲ್ಯಾಶ್‌ ಲೈಟ್‌
500 ಕಾಂಟಾಕ್ಟ್‌ ಫೋನ್‌ಬುಕ್‌

ಐಪ್ಯಾಡ್‌ ಏರ್‌

ಉತ್ತಮ ಮೊಬೈಲ್‌ ಟ್ಯಾಬ್ಲೆಟ್‌ ಐಪ್ಯಾಡ್‌ ಏರ್‌

ಬೆಲೆ:35900(16 ಜಿಬಿ +ವೈಫೈ)
ವಿಶೇಷತೆ:
9.7 ಇಂಚಿನ ರೆಟಿನಾ ಸ್ಕ್ರೀನ್‌(2048x1536 ಪಿಕ್ಸೆಲ್‌,264 ಪಿಪಿಐ)
ಐಓಎಸ್‌ 7
ಎ7 ಪ್ರೊಸೆಸರ್‌
ಎಂ7 ಮೋಶನ್‌ ಪ್ರೊಸೆಸರ್‌
16/32/64/128 ಜಿಬಿ ಆಂತರಿಕ ಮೆಮೊರಿ
1 ಜಿಬಿ ರ್‍ಯಾಮ್
5 ಎಂಪಿ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ
ಹೆಚ್ಚು ವರಿ ಮೆಮೊರಿಗೆ ಕಾರ್ಡ್‌ ಸ್ಲಾಟ್‌ ಇಲ್ಲ
ವೈಫೈ,ಬ್ಲೂಟೂತ್‌,ಜಿಪಿಎಸ್‌
8,820 mAh ಅಥವಾ 32.4 Wh ಬ್ಯಾಟರಿ

 ಅತ್ಯಂತ ನವೀನ ಸಾಧನ ತಯಾರಕ ಕಂಪೆನಿ ಪ್ರಶಸ್ತಿ: ಎಲ್‌ಜಿ

ಅತ್ಯಂತ ನವೀನ ಸಾಧನ ತಯಾರಕ ಕಂಪೆನಿ ಪ್ರಶಸ್ತಿ: ಎಲ್‌ಜಿ

ಮಾಹಿತಿ:www.gsma.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot