ಗೂಗಲ್ ಪಿಕ್ಸಲ್ ಫೋನ್ ಖರೀದಿಸುವುದಕ್ಕೆ ಈ ಆಫರ್ ಗಳನ್ನು ಪಡೆದುಕೊಳ್ಳಿ

By Gizbot Bureau
|

ಗೂಗಲ್ ಇದೀಗ ಕೈಗೆಟುಕುವ ಬೆಲೆಯ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ನ್ನು ಪರಿಚಯಿಸಿದೆ- ಅದುವೇ ಪಿಕ್ಸಲ್ 3ಎ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್. ತನ್ನ ವಾರ್ಷಿಕ ಡೆವಲಪರ್ಸ್ ಕಾನ್ಫರೆನ್ಸ್ ಐ/ಓ 2019 ರಲ್ಲಿ ಇದನ್ನು ಪರಿಚಯಿಸಲಾಗಿದೆ.

ಗೂಗಲ್ ಪಿಕ್ಸಲ್ ಫೋನ್ ಖರೀದಿಸುವುದಕ್ಕೆ ಈ ಆಫರ್ ಗಳನ್ನು ಪಡೆದುಕೊಳ್ಳಿ

ಈ ಸ್ಮಾರ್ಟ್ ಫೋನ್ ಗಳ ಮೂಲಕ ತನ್ನ ದೊಡ್ಡ ಗ್ರಾಹಕ ಬಳಗವನ್ನು ತಲುಪುವ ಮತ್ತು ಅವರಿಗೆ ಪ್ರೀಮಿಯಂ ಅನುಭವವನ್ನು ಕೈಗೆಟುಕುವ ಬೆಲೆಯಲ್ಲಿ ನೀಡುವ ಉದ್ದೇಶವನ್ನು ಇಟ್ಟುಕೊಂಡಿದೆ. ಎರಡೂ ಸ್ಮಾರ್ಟ್ ಫೋನ್ ಗಳು ಮೇ 15 ರಿಂದ ಭಾರತದಲ್ಲಿ ಮಾರಾಟಗೊಳ್ಳಲಿದೆ. ಆನ್ ಲೈನ್ ನಲ್ಲಿ ಎಕ್ಸ್ ಕ್ಲೂಸೀವ್ ಆಗಿ ಫ್ಲಿಪ್ ಕಾರ್ಟ್ ನಲ್ಲಿ ಈ ಫೋನ್ ಗಳು ಲಭ್ಯವಾಗುತ್ತದೆ.

ಒಂದು ವೇಳೆ ನೀವೂ ಕೂಡ ಹೊಸ ಪಿಕ್ಸಲ್ ಸ್ಮಾರ್ಟ್ ಫೋನ್ ನ್ನು ಖರೀದಿಸುವ ಬಗ್ಗೆ ಚಿಂತನೆ ನಡೆಸುತ್ತಿದ್ದರೆ ಯಾವೆಲ್ಲಾ ಆಫರ್ ಗಳು ಈ ಫೋನ್ ಗಳಿಗೆ ಲಭ್ಯವಿದೆ ಎಂಬ ಬಗ್ಗೆ ಸಂಪೂರ್ಣ ವಿವರಣೆಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

ಗೂಗಲ್ ಪಿಕ್ಸಲ್ 3ಎ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್ ಗೆ ಇರುವ ಆಫರ್ ಗಳು

ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ 10% ರಿಯಾಯಿತಿ :

ಹೆಚ್ ಡಿ ಎಫ್ ಸಿ ಬ್ಯಾಂಕ್ ಗ್ರಾಹಕರಿಗೆ 10% ರಿಯಾಯಿತಿ :

HDFC ಬ್ಯಾಂಕಿನ ಗ್ರಾಹಕರು ಹೊಸ ಗೂಗಲ್ ಪಿಕ್ಸಲ್ 3ಎ ಮತ್ತು ಪಿಕ್ಸಲ್ 3ಎ ಎಕ್ಸ್ಎಕ್ಸ್ ಫೋನ್ ಖರೀದಿಗೆ ಮುಂದಾದರೆ ಅವರಿಗೆ 10% ಇನ್ಸೆಂಟ್ ರಿಯಾಯಿತಿ ಲಭ್ಯವಾಗುತ್ತದೆ. ಅಂದರೆ ಪಿಕ್ಸಲ್ 3ಎ ಗೆ 3,999 ರುಪಾಯಿ ರಿಯಾಯಿತಿ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್ ಗೆ 4,499 ರುಪಾಯಿ ರಿಯಾಯಿತಿ ಇವರಿಗೆ ಲಭ್ಯವಾಗುತ್ತದೆ.ರಿಯಾಯಿತಿಯ ನಂತರ ಪಿಕ್ಸಲ್ 3ಎ 36,000 ರುಪಾಯಿಗೆ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್ 40,500 ರುಪಾಯಿಗೆ ಖರೀದಿಸುವ ಅವಕಾಶ ಇವರಿಗೆ ಲಭ್ಯವಿದೆ. ಇದರ ಜೊತೆಗೆ ಹೆಚ್ ಡಿಎಫ್ ಸಿ ಬ್ಯಾಂಕಿನ ಗ್ರಾಹಕರು ಇಎಂಐ ಆಯ್ಕೆಯನ್ನು ಕೂಡ ಅವರ ಡೆಬಿಟ್/ ಕ್ರೆಡಿಟ್ ಕಾರ್ಡ್ ನಲ್ಲಿ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಕೆದಾರರು 5% ರಿಯಾಯಿತಿಯನ್ನು ಪಡೆಯಲಿದ್ದಾರೆ

ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಕೆದಾರರು 5% ರಿಯಾಯಿತಿಯನ್ನು ಪಡೆಯಲಿದ್ದಾರೆ

ಗೂಗಲ್ ಪಿಕ್ಸಲ್ 3ಎ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್ ಗೆ ಆಕ್ಸಿಸ್ ಬ್ಯಾಂಕ್ ಗ್ರಾಹಕರಿಗೆ 5% ರಿಯಾಯಿತಿ ಲಭ್ಯವಾಗುತ್ತದೆ. ಅಂದರೆ ಪಿಕ್ಸಲ್ 3ಎ ನ್ನು 38,000 ರುಪಾಯಿ ಮತ್ತು ಪಿಕ್ಸಲ್ 3ಎ ಎಕ್ಸ್ಎಲ್ ನ್ನು 42,700 ರುಪಾಯಿಗೆ ರಿಯಾಯಿತಿಯ ನಂತರ ಖರೀದಿಸುವ ಅವಕಾಶವಿದೆ.

ಎಕ್ಸ್ ಚೇಂಜ್ ಆಫರ್

ಎಕ್ಸ್ ಚೇಂಜ್ ಆಫರ್

ಇ-ಟೇಲರ್ ನಲ್ಲಿ ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದೆ.17,450 ರುಪಾಯಿವರೆಗೆ ಗೂಗಲ್ ಪಿಕ್ಸಲ್ 3ಎ ಗೆ ಮತ್ತು ಗೂಗಲ್ ಪಿಕ್ಸಲ್ 3ಎ ಎಕ್ಸ್ಎಲ್ ಫೋನ್ ಗಳಿಗೆ ಇತರೆ ಫೋನ್ ಗಳನ್ನು ಬದಲಾವಣೆ ಮಾಡಿ ಪಡೆದುಕೊಳ್ಳುವ ಸದವಕಾಶ ಫ್ಲಿಪ್ ಕಾರ್ಟ್ ನಲ್ಲಿ ಲಭ್ಯವಿದೆ. ಅಂದರೆ ಹಳೆಯ ಫೋನಿಗೆ 17,450 ರುಪಾಯಿವರೆಗೆ ಬೆಲೆ ಸಿಗುವ ಸಾಧ್ಯತೆ ಇದೆ. ನಿಮ್ಮದು ಯಾವ ಫೋನ್ ಮತ್ತು ಅದು ಹೇಗಿದೆ ಎಂಬುದನ್ನು ಆಧರಿಸಿರುತ್ತದೆ.

ನೋ ಕಾಸ್ಟ್ ಇಎಂಐ

ನೋ ಕಾಸ್ಟ್ ಇಎಂಐ

ಮೇಲಿನ ಎಲ್ಲಾ ಆಫಱ್ ಗಳನ್ನು ಹೊರತುಪಡಿಸಿ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದ್ದು ಪ್ರತಿ ತಿಂಗಳಿಗೆ 6,667 ರುಪಾಯಿ ಕಂತಿನ ಮೂಲಕ ಪಾವತಿಸುವ ಆಯ್ಕೆಯಲ್ಲೂ ಕೂಡ ಖರೀದಿಸಬಹುದು.

Best Mobiles in India

Read more about:
English summary
Here are are all the offers available on the new Google Pixel 3a and Google Pixel 3a XL

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X