Subscribe to Gizbot

ರೂ.10,999ಕ್ಕೆ ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್ ಲಾಂಚ್: ಬುಕ್ಕಿಂಗ್ ಮಾಡಿದವರಿಗೆ ಮಾತ್ರ..!

Written By:
Honor 9 Lite with four cameras (KANNADA)

ಭಾರತೀಯ ಮಾರಕಟ್ಟೆಯಲ್ಲಿ ಬಜೆಟೆ ಬೆಲೆಯಲ್ಲಿ ದೊರೆಯುತ್ತಿರುವ ಮೊದಲ ನಾಲ್ಕು ಕ್ಯಾಮೆರಾದ ಫೋನ್ ಎನ್ನುವ ಖ್ಯಾತಿಗೆ ಇಂದು ಬಿಡುಗಡೆಯಾಗಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಪಾತ್ರವಾಗಿದೆ. ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಷ್ಟು ಕಡಿಮೆ ಬೆಲೆಗೆ ಲಾಂಚ್ ಆಗಿರುವುದಕ್ಕೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯೇ ಶಾಕ್ ಆಗಿದೆ ಎನ್ನಲಾಗಿದೆ.

ರೂ.10,999ಕ್ಕೆ ನಾಲ್ಕು ಕ್ಯಾಮೆರಾದ ಹಾನರ್ 9 ಲೈಟ್ ಲಾಂಚ್: ಬುಕ್ಕಿಂಗ್ ಮಾತ್ರ..!

ನೋಡಲು ಮತ್ತು ಬಳಕೆ ಮಾಡಲು ಉತ್ತಮವಾಗಿರುವ ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ. ಜನವರಿ 21 ರಿಂದ ಈ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ದೊರೆಯಲಿದ್ದು, ಈ ಸ್ಮಾರ್ಟ್ ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಸ್ಮಾರ್ಟ್‌ ಫೋನ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿ ಮಾಡಲಿದೆ.

ಓದಿರಿ: ಮೊಬೈಲ್ ಹೊಂದಿರುವವರೆಲ್ಲರೂ ಮಾಡಬೇಕಾದ್ದು-ಮಾಡಬಾರದ್ದು..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಫಸ್ಟ್ ಲುಕ್ ವಿಡಿಯೋ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಹೇಗೆದೆ ಎಂಬುದನ್ನು ಕನ್ನಡದಲ್ಲೇ ತಿಳಿಯಲು ಈ ಫಸ್ಟ್ ಲುಕ್ ವಿಡಿಯೋವನ್ನು ನೋಡಿರಿ.

ಬೆಲೆ:

ಬೆಲೆ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಒಟ್ಟು ಎರಡು ಆವೃತ್ತಿಯಲ್ಲಿ ಕಾಣಿಸಿಕೊಳ್ಳಲಿದ್ದು, 3GB RAM ಮತ್ತು 32GB ಆವೃತ್ತಿಯೂ ರೂ.10,999ಕ್ಕೆ ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ 4GB RAM ಮತ್ತು 64GB ಆವೃತ್ತಿಯೂ ರೂ. 14,999ಕ್ಕೆ ಲಭ್ಯವಿರಲಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಜನವರಿ 21ರಂದು ಫ್ಲಿಪ್‌ಕಾರ್ಟ್‌ನಲ್ಲಿ ಫ್ಲಾಷ್ ಸೇಲ್‌ಗೆ ಲಭ್ಯವಿರಲಿದೆ.

ನಾಲ್ಕು ಕ್ಯಾಮೆರಾ:

ನಾಲ್ಕು ಕ್ಯಾಮೆರಾ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್‌ನಲ್ಲಿ ಹಿಂಭಾಗದಲ್ಲಿ 13 MP + 2 MP ಕ್ಯಾಮೆರಾವನ್ನು ನೋಡಬಹುದಾಗಿದೆ. ಇದರೊಂದಿಗೆ ಫ್ಲಾಷ್ ಲೈಟ್ ಅನ್ನು ನೀಡಲಾಗಿದೆ. ಹಾಗೇ ಮುಂಭಾಗದಲ್ಲಿ 13 MP + 2 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಎರಡು ಕಡೆಗಳಲ್ಲಿ 1080p ವಿಡಿಯೋ ರೆಕಾರ್ಡಿಂಗ್ ಮಾಡಬಹುದಾಗಿದ್ದು, ಇದರಲ್ಲಿ ತೆಗೆಯುವ ಚಿತ್ರಗಳು ಉತ್ತಮವಾಗಿ ಮೂಡಿಬರಲಿದೆ.

ಡಿಸ್‌ಪ್ಲೇ:

ಡಿಸ್‌ಪ್ಲೇ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ 5.65 ಇಂಚಿನ FHD ಗುಣಮಟ್ಟದ IPS ಡಿಸ್‌ಪ್ಲೇಯನ್ನು ಅಳವಡಿಸಲಾಗಿದ್ದು, ಇದ್ದು ಗೊರಿಲ್ಲಾ ಗ್ಲಾಸ್ ಸುರಕ್ಷತೆಯನ್ನು ಹೊಂದಿದೆ ಎನ್ನಲಾಗಿದೆ. ಈ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಯಾವುದೇ ರೀತಿಯಲ್ಲೂ ಒಡೆಯುವುದಿಲ್ಲ ಎನ್ನಬಹುದಾಗಿದೆ.

ಪ್ರೋಸೆಸರ್:

ಪ್ರೋಸೆಸರ್:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ನಲ್ಲಿ ಆಕ್ಟಾ ಕೋರ್ ಹೈ ಸಿಲಿಕಾನ್ ಕಿರನ್ 659 ಪ್ರೋಸೆಸರ್ ಕಾಣಬಹುದಾಗಿದೆ. ಇದೊರೊಂದಿಗೆ 3GB/4GB RAM ಅನ್ನು ಕಾಣಬಹುದಾಗಿದೆ. ಉತ್ತಮವಾಗಿ ವೇಗವಾಗಿ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಒರಿಯೋ:

ಆಂಡ್ರಾಯ್ಡ್ ಒರಿಯೋ:

ಹಾನರ್ 9 ಲೈಟ್ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 8.0 ನಲ್ಲಿ ಕಾರ್ಯನಿರ್ವಹಿಸಲಿದೆ. ಇದಲ್ಲದೇ ಇದರೊಂದಿಗೆ EMUI 8.0 ಕಾಣಬಹುದಾಗಿದೆ. ಇದರಿಂದಾಗಿ ಈ ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಇಷ್ಟು ಹತ್ತಿರವಾಗಲಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Honor 9 Lite launched in India starting at Rs. 10,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot