Subscribe to Gizbot

ಅಮೆಜಾನ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 7000 ಕಡಿತ..!

Written By:

ಜಾಗತಿಕ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹುವಾವೆ, ಭಾರತದಲ್ಲಿ ಹಾನರ್ ಬ್ರಾಂಡಿನಡಿಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಮಾರಾಟ ಮಾಡುತ್ತಿರುವುದು ತಿಳಿದಿರುವ ವಿಚಾರ. ಹಾನರ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಸೃಷ್ಠಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಅಮೆಜಾನ್ ಏಪ್ರಿಲ್ 16ರ ವರೆಗೆ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ನೀಡಲು ಮುಂದಾಗಿದೆ.

ಅಮೆಜಾನ್‌ನಲ್ಲಿ ಹಾನರ್ ಸ್ಮಾರ್ಟ್‌ಫೋನ್‌ಗಳ ಮೇಲೆ ರೂ. 7000 ಕಡಿತ..!

ಅಮೆಜಾನ್ ಸೇಲ್‌ನಲ್ಲಿನಲ್ಲಿ ಹಾನರ್ 7X, ಹಾನರ್ ವಿವ್ 10, ಹಾನರ್ 8 ಪ್ರೋ, ಹಾನರ್ 6X ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ಗಳನ್ನು ಕಾಣಬಹುದಾಗಿದೆ. ಈ ಸೇಲ್‌ಗೆ ಅಮೆಜಾನ್ ಹಾನರ್ ಬ್ಲಾಕ್‌ಬಸ್ಟರ್ ಡೇಸ್ ಎಂದು ನಾಮಕರಣವನ್ನು ಮಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಾನರ್ 8 ಪ್ರೋ;

ಹಾನರ್ 8 ಪ್ರೋ;

ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಉಳಿಸಿಕೊಂಡಿರುವ ಹಾನರ್ 8 ಪ್ರೋ ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಕಡಿತವನ್ನು ಕಾಣಬಹುದಾಗಿದೆ. ರೂ.29,999ಕ್ಕೆ ಮಾರಾಟವಾಗುತ್ತಿದ್ದ ಹಾನರ್ 8 ಪ್ರೋ ಸ್ಮಾರ್ಟ್‌ಫೋನ್ ರೂ.7000 ಕಡಿತಗೊಂಡು ರೂ.22,9999ಕ್ಕೆ ಲಭ್ಯವಿದೆ. ಸೇಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ಹಾನರ್ 6X:

ಹಾನರ್ 6X:

ಹಾನರ್ 6X ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆಯನ್ನು ಅಮೆಜಾನ್ ಮಾಡಿದ್ದು, 4GB RAM ಮತ್ತು 64GB ಸ್ಮಾರ್ಟ್‌ಫೋನ್ ರೂ.13,999ಕ್ಕೆ ಮಾರಾಟವಾಗುತ್ತಿದ್ದು, ಸದ್ಯ ಈ ಸ್ಮಾರ್ಟ್‌ಫೋನ್ ರೂ.9999ಕ್ಕೆ ದೊರೆಯುತ್ತಿದೆ. ಈ ಸ್ಮಾರ್ಟ್‌ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಕಾಣಬಹುದಾಗಿದೆ.

ಹಾನರ್ 7X

ಹಾನರ್ 7X

ಹಾನರ್ 7X ಸ್ಮಾರ್ಟ್‌ಫೋನ್ ಸದ್ಯ ಹೆಚ್ಚಿನ ಬೇಡಿಕೆಯಲ್ಲಿದ್ದು, ಈ ಹಿನ್ನಲೆಯಲ್ಲಿ ಯಾವುದೇ ದರ ಕಡಿತವನ್ನು ಈ ಸ್ಮಾರ್ಟ್‌ಫೋನ್ ಮೇಲೆ ಕಾಣಲು ಸಾಧ್ಯವಿಲ್ಲ. ಬದಲಾಗಿ ಎಕ್ಸ್‌ಚೇಂಜ್ ಆಫರ್ ಅನ್ನು ಕಾಣಬಹುದಾಗಿದೆ. ರೂ.14,398 ಗಳ ವರೆಗೂ ಕಡಿತವನ್ನು ಕಾಣಬಹುದಾಗಿದೆ.

Aadhaar-ಬಾಂಕ್ ಲಿಂಕ್ ಆಗಿದೆಯೇ-ಇಲ್ಲವೇ ಚೆಕ್‌ ಮಾಡಿ..!
ಹಾನರ್ ವಿವ್ 10:

ಹಾನರ್ ವಿವ್ 10:

ಹಾನರ್ ವಿವ್ 10 ಸ್ಮಾರ್ಟ್‌ಫೋನ್‌ ಸಹ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದ್ದು, ಬೇಡಿಕೆಯನ್ನು ಉಳಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಸ್ಮಾರ್ಟ್‌ಫೋನ್ ಮೇಲೆಯೂ ಯಾವುದೇ ರಿಯಾಯಿತಿಯನ್ನು ನೀಡಿಲ್ಲ. ಬದಲಾಗಿ ಸೇಲ್‌ನಲ್ಲಿ ಮಾರಾಟವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor Amazon sale: Here are the best offers on Honor 8 Pro, Honor 6X, and more. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot