TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಇತರೆ ಎಲ್ಲಾ ಬ್ರ್ಯಾಂಡ್ ಗಳಂತೆ ಹಾನರ್ ಕೂಡ ಹಬ್ಬದ ಸೀಸನ್ ಸೇಲ್ ನ್ನು ಮುಂದಿನ ವಾರ ಆರಂಭಿಸುತ್ತಿದೆ. ತನ್ನ ಪ್ರೊಡಕ್ಟ್ ಗಳ ಮೇಲೆ ಆಕರ್ಷಣೀಯ ಬೆಲೆಯನ್ನೂ ಕೂಡ ನೀಡುತ್ತಿದೆ. ಅಕ್ಟೋಬರ್ 10 ರಿಂದ ಹಾನರ್ ದಸರಾ ಸೇಲ್ ಆರಂಭವಾಗಲಿದ್ದು ಅಕ್ಟೋಬರ್ 15 ರವರೆಗೆ ಇರಲಿದೆ. ಈ ಸಮಯದಲ್ಲಿ ಹಾನರ್ ಕೂಪನ್ ಬಳಕೆ ಮಾಡುವಂತೆ ಹೇಳಿದೆ.
ಕೆಲವು ಪ್ರಮುಖ ಫೋನ್ ಗಳ ಮೇಲೆ ಉತ್ತಮ ರಿಯಾಯಿತಿ ಮತ್ತು ಕೆಲವು ಇತರೆ ಹಾನರ್ ಪ್ರೊಡಕ್ಟ್ ಗಳು ಕೇವಲ ಒಂದು ರುಪಾಯಿಗೆ ಲಭ್ಯವಾಗಲಿದೆ. ಅಷ್ಟೇ ಅಲ್ಲದೆ ಹಾನರ್ ಬಿಗ್ ವೀಕ್ ಮತ್ತು ದೀಪಾವಳಿ ಸೇಲ್ ಭವಿಷ್ಯದಲ್ಲಿ ಮತ್ತೆ ಬರಲಿದೆ ಎಂಬ ಹೇಳಿಕೆಯನ್ನೂ ಕೂಡ ಹಾನರ್ ಪೇಜ್ ನೀಡಿದೆ.
ಯಾರಿಗೆ ಎಷ್ಟು ರುಪಾಯಿ ಕೂಪನ್?
ಕನಿಷ್ಟ ಖರೀದಿ ಮಾಡಿದವರಿಗೂ ಕೂಡ ಹಾನರ್ ದಸರಾ ಸೇಲ್ ನಲ್ಲಿ ಕಂಪೆನಿಯು ಕೂಪನ್ ಆಫರ್ ನ್ನು ಮಾಡುತ್ತಿದೆ. ಬಳಕೆದಾರರು 20,000 ರುಪಾಯಿ ಖರೀದಿಸಿದರೆ 1,000 ರುಪಾಯಿಯ ಕೂಪಲ್ ಪಡೆಯಲಿದ್ದಾರೆ. 10,000 ರುಪಾಯಿ ಖರೀದಿಸಿದರೆ 500 ರುಪಾಯಿ ಕೂಪನ್ ಸಿಗಲಿದೆ. ಇನ್ನು ಕಡಿಮೆ ಎಂದರೆ 5,000 ರುಪಾಯಿ ಖರೀದಿ ಮಾಡಿದವರಿಗೆ 300 ರುಪಾಯಿ ಕೂಪನ್ ಲಭ್ಯವಾಗುತ್ತದೆ.
ಇದನ್ನು ಹೊರತು ಪಡಿಸಿ ಕೆಲವು ನಿಗಧಿತ ರಿಯಾಯಿತಿಗಳನ್ನು ಕೆಲವು ಹಾನರ್ ಸ್ಮಾರ್ಟ್ ಫೋನ್ ಗಳ ಮೇಲೆ ನೀಡಲಾಗುತ್ತಿದೆ. ಹೆಚ್ಚಿನವುಗಳನ್ನು ಈಗಾಗಲೇ ಹೇಳಲಾಗಿದ್ದು, ಇನ್ನೂ ಕೆಲವು ಆಫರ್ ಗಳನ್ನು ಇನ್ನೆರಡು ಮೂರು ದಿನದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ.
ಹಾನರ್ 7ಎಸ್ ಗೆ ರಿಯಾಯಿತಿ:
ಅಕ್ಟೋಬರ್ 11 ರಿಂದ ಹಾನರ್ 7ಎಸ್ 2,500 ರುಪಾಯಿ ರಿಯಾಯಿತಿಯಲ್ಲಿ ಅಂದರೆ 6,499 ರುಪಾಯಿಗೆ ಲಭ್ಯವಾಗುತ್ತದೆ. ಬಳಕೆದಾರರು 300 ರುಪಾಯಿ ಕೂಪನ್ ಬಳಸಿ ಹೆಚ್ಚುವರಿ ರಿಯಾಯಿತಿಯನ್ನೂ ಪಡೆಯಲು ಅವಕಾಶವಿದೆ.
ಹಾನರ್ 9ಎನ್ ಗೆ ರಿಯಾಯಿತಿ:
ಹಾನರ್ 9ಎನ್ 4,000 ರುಪಾಯಿ ರಿಯಾಯಿತಿಯಲ್ಲಿ ಎರಡೂ ವೇರಿಯಂಟ್ ನ ಫೋನ್ ಗಳು ಲಭ್ಯವಾಗಲಿದ್ದು, ಅಕ್ಟೋಬರ್ 11 ರಿಂದ 11,999 ಮತ್ತು 9,999 ರುಪಾಯಿಗೆ ಲಭ್ಯವಾಗುತ್ತದೆ.500 ರುಪಾಯಿಯ ಹೆಚ್ಚುವರಿ ಕೂಪನ್ ರಿಯಾಯಿತಿಯನ್ನೂ ಕೂಡ ಗ್ರಾಹಕರು ಪಡೆದುಕೊಳ್ಳಬಹುದು.
ಹಾನರ್ 7ಎ ಗೆ ರಿಯಾಯಿತಿ:
ಹಾನರ್ 7ಎ 3,000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಅಂದರೆ 7,999 ರುಪಾಯಿಗೆ ಅಕ್ಟೋಬರ್ 11 ರಿಂದ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ ಮತ್ತು ಗ್ರಾಹಕರು ಹೆಚ್ಚುವರಿ 300 ರುಪಾಯಿ ಕೂಪನ್ ಡಿಸ್ಕೌಂಟ್ ನ್ನು ಕೂಡ ತಮ್ಮದಾಗಿಸಿಕೊಳ್ಳಬಹುದು.
ಹಾನರ್ 9 ಲೈಟ್ ಗೆ ರಿಯಾಯಿತಿ:
ಹಾನರ್ 9 ಲೈಟ್ 4,000 ರುಪಾಯಿ ರಿಯಾಯಿತಿಯಲ್ಲಿ ಅಂದರೆ 9,999 ರುಪಾಯಿ ಬೆಲೆಯಲ್ಲಿ ಅಕ್ಟೋಬರ್ 11 ರಿಂದ ಗ್ರಾಹಕರ ಕೈಗೆಟುಕುತ್ತದೆ. ಅಷ್ಟೇ ಅಲ್ಲದೆ ಹೆಚ್ಚುವರಿ 300 ರುಪಾಯಿಯ ಕೂಪನ್ ರಿಯಾಯಿತಿ ಕೂಡ ಇರುತ್ತದೆ.
ಕನಿಷ್ಟ 1,000 ರಿಯಾಯಿತಿ
ಇನ್ನೂ ಎರಡು ಫೋನ್ ಗಳಾದ ಹಾನರ್ ಪ್ಲೇ ಮತ್ತು ಹಾನರ್ 7ಸಿ ಕೂಡ ರಿಯಾಯಿತಿ ಬೆಲೆಯಲ್ಲಿ ಈ ಸಂದರ್ಬದಲ್ಲಿ ಲಭ್ಯವಾಗುತ್ತದೆ.ಆದರೆ ಎಷ್ಟು ರಿಯಾಯಿತಿ ಇರಲಿದೆ ಎಂಬ ಬಗ್ಗೆ ಹಾನರ್ ಸಂಸ್ಥೆ ಇನ್ನೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಎರಡೂ ಫೋನ್ ಗಳೂ ಕೂಡ ಅಕ್ಟೋಬರ್ 10 ರಿಂದ ಲಭ್ಯವಾಗಲಿದೆ ಎಂಬುದು ತಿಳಿದುಬಂದಿದೆ. ಬ್ಲಾಂಕ್ ಆಗಿ ಬರೆದಿರುವ ಎಲ್ಲಾ ಫೋನ್ ಗಳು ಕನಿಷ್ಟ 1,000 ರಿಯಾಯಿತಿಯನ್ನು ಹೊಂದಿರುತ್ತದೆ ಎಂದು ಅಂದಾಜಿಸಲಾಗಿದೆ. ಅಷ್ಟೇ ಅಲ್ಲದೆ ಗ್ರಾಹಕರು ವೆಬ್ ಸೈಟ್ ನಲ್ಲಿ ಆಟಗಳನ್ನು ಆಡುವ ಮೂಲಕ ವಿಶಿಷ್ಟ ಬಹುಮಾನಗಳನ್ನು ಗೆಲ್ಲುವ ಅವಕಾಶವೂ ಇದೆ.
ಒಂದು ರೂಪಾಯಿ ಫೋನ್ ಗಳು:
ಅಕ್ಟೋಬರ್ 9,12,15 ರಂದು ಬೆಳಿಗ್ಗೆ 11:45 ಕ್ಕೆ ಕ್ರಮವಾಗಿ ಹಾನರ್ 7ಎ, ಹಾನರ್ 8 ಪ್ರೋ, ಹಾನರ್ ಬ್ಯಾಂಡ್ 3 ಗಳು 1 ರುಪಾಯಿಯ ಆಫರ್ ಬೆಲೆಯಲ್ಲಿ ಸಿಗುತ್ತದೆ. ಇದೊಂದು ರೀತಿಯ ಫ್ಲ್ಯಾಶ್ ಸೇಲ್. ಯಾಕೆಂದರೆ ಖಂಡಿತ ಇದರ ಸ್ಟಾಕ್ ಗಳು ಲಿಮಿಟೆಡ್ ಆಗಿರುತ್ತದೆ. ಮೊಬಿಕ್ವಿಕ್, ವೊಡಾಫೋನ್ ಮತ್ತು ರಿಲಯನ್ಸ್ ಜಿಯೋಗಳಲ್ಲಿ ಇತರೆ ಆಫರ್ ಗಳೂ ಕೂಡ ಲಭ್ಯವಿದೆ.
ಮೊಬಿಕ್ವಿಕ್ ನಲ್ಲಿ ಶೇ.20 ರ ರಿಯಾಯಿತಿ:
ಮೊಬಿಕ್ವಿಕ್ ನಲ್ಲಿ ಹಾನರ್ 7ಎಸ್, ಹಾನರ್ ಪ್ಲೇ, ಹಾನರ್ 9ಎನ್, ಹಾನರ್ 10, ಹಾನರ್ ವ್ಯೂ 10, ಹಾನರ್ 7ಎಕ್ಸ್, ಹಾನರ್ 7ಎ, ಹಾನರ್ 9 ಲೈಟ್, ಹಾನರ್ 7ಸಿ, ಹಾನರ್ 5ಎಕ್ಸ್ ಮತ್ತು ಹಾನರ್ 8 ಪ್ರೋ ಫೋನ್ ಗಳಿಗೆ 20 ಶೇಕಡಾ ರಿಯಾಯಿತಿ ಇದೆ.
ವೊಡಾಫೋನ್ ಮತ್ತು ರಿಲಯನ್ಸ್ ಆಫರ್:
ಹಾನರ್ ಪ್ಲೇ ಖರೀದಿಸುವವರಿಗೆ ವೊಡಾಫೋನ್ 120ಜಿಬಿ ಉಚಿತ ಡಾಟಾವನ್ನು 12 ತಿಂಗಳ ಅವಧಿಗೆ ನೀಡುತ್ತದೆ. 2,200ರೂಪಾಯಿ ಕ್ಯಾಷ್ ಬ್ಯಾಕ್ + 50ಜಿಬಿ 4ಜಿ ಡಾಟಾ ವನ್ನು ರಿಲಯನ್ಸ್ ಜಿಯೋ ಹಾನರ್ 7ಎಸ್, ಹಾನರ್ 9ಎನ್, ಹಾನರ್ 7ಎ, ಹಾನರ್ 7ಸಿ ಮತ್ತು ಹಾನರ್ 10 ಖರೀದಿಸುವವರಿಗೆ ನೀಡುತ್ತಿದೆ.