Subscribe to Gizbot

ಹಾನರ್ ವ್ಯೂ 10 ವಿಮರ್ಶೆ : ರೂ 30,000 ದೊಳಗಿನ ಶ್ರೇಣಿಯಲ್ಲಿ ತೋರಿದೆ ಬೆಂಚ್ಮಾರ್ಕ್ ಕಾರ್ಯಕ್ಷಮತೆ!

Posted By: Tejaswini P G

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ರೂ 40,000 ದೊಳಗಿನ ಬೆಲೆಯ ಮೊಬೈಲ್ ಶ್ರೇಣಿಯಲ್ಲಿ ಒನ್ಪ್ಲಸ್ ಮೊಬೈಲ್ಗಳದ್ದೇ ಮೇಲುಗೈ. ರೂ 32,999 (6GB RAM) ಬೆಲೆಯ ಒನ್ಪ್ಲಸ್ 5T ತನ್ನ ಶ್ರೇಷ್ಠ ಹಾರ್ಡ್ವೇರ್ ಮತ್ತು ಸಾಫ್ಟ್ವೇರ್ ಗಳ ಮೂಲಕ ಮಾರುಕಟ್ಟೆಯನ್ನು ತನ್ನ ಮುಷ್ಟಿಯಲ್ಲಿ ಹಿಡಿದಿದೆ. ಈ ಶ್ರೇಣಿಯಲ್ಲಿ ಗುರುತಿಸಿ ಕೊಳ್ಳಲು ಶಿಯೋಮಿ ಪ್ರಯತ್ನ ನಡೆಸಿದರೂ ಯಶಸ್ವಿಯಾಗಲಿಲ್ಲ. ಆದರೆ ಮಧ್ಯಮ-ಬೆಲೆಯ ಮೊಬೈಲ್ ಶ್ರೇಣಿಯಲ್ಲಿ ಶಿಯೋಮಿ ಉತ್ತಮ ಪ್ರದರ್ಶನ ನೀಡುತ್ತಿದೆ.

ಹಾನರ್ ವ್ಯೂ 10 ವಿಮರ್ಶೆ

ಒನ್ಪ್ಲಸ್ ಮೇಲುಗೈ ಸಾಧಿಸಿರುವ ಶ್ರೇಣಿಯಲ್ಲಿ ಬೇರೆ ಯಾವುದಾದರೂ ಸಂಸ್ಥೆಯ ಮೊಬೈಲ್ಗಳು ಉತ್ತಮ ಪ್ರದರ್ಶನ ನೀಡುವಲ್ಲಿ ಸಫಲವಾಗಿದೆಯೆಂದರೆ ಅದು ಹುವಾವೆ.ಕಳೆದೆರಡು ವರ್ಷಗಳಲ್ಲಿ ಹುವಾವೆ ಉತ್ತಮ ಸ್ಮಾರ್ಟ್ಫೋನ್ಗಳನ್ನು ಲಾಂಚ್ ಮಾಡಿದ್ದು ತನ್ನ ಕಾರ್ಯಕ್ಷಮತೆಯಲ್ಲಿ ಒನ್ಪ್ಲಸ್ ಮೊಬೈಲ್ಗಳನ್ನೂ ಮೀರಿಸಿದ್ದು ಅದಕ್ಕಿಂತ ಕಡಿಮೆ ಬೆಲೆಯನ್ನೂ ಹೊಂದಿದೆ. ಡಿಸೆಂಬರ್ 2017ರಲ್ಲಿ ಲಂಡನ್ ನಲ್ಲಿ ನಡೆದ ಹಾನರ್ 7X ನ ಲಾಂಚ್ ನ ಸಂದರ್ಭದಲ್ಲಿ ಮಾಧ್ಯಮದ ಮುಂದೆ ಅನಾವರಣಗೊಳಿಸಿದ್ದ ಹಾನರ್ ವ್ಯೂ 10 ಕೂಡ ಇದೇ ಉದ್ದೇಶವನ್ನು ಹೊಂದಿದೆ.

Honor 9 Lite with four cameras (KANNADA)
ಹಾನರ್ ವ್ಯೂ 10 ಅನ್ನು "ಯುವರ್ ಫರ್ಸ್ಟ್ AI ಫೋನ್" ಎಂದೇ ಬಿಂಬಿಸಲಾಗಿದೆ. ಹಾನರ್ ವ್ಯೂ 10 ಹುವಾವೆಯ ಕಿರಿನ್ 970 AI ಚಿಪ್ಸೆಟ್ ಹೊಂದಿದ್ದು , ಈ ಚಿಪ್ಸೆಟ್ ನ್ಯೂರಲ್ ಪ್ರಾಸೆಸಿಂಗ್ ಯುನಿಟ್ ಹೊಂದಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಭಾರತದಲ್ಲಿ ರೂ 29,999 ಬೆಲೆಗೆ ಮಾರಾಟವಾಗಲಿರುವ ಹಾನರ್ ವ್ಯೂ 10 ಮಧ್ಯಮ-ಶ್ರೇಣಿಗಿಂತ ಮೇಲ್ವರ್ಗದ ಶ್ರೇಣಿಯಲ್ಲಿ ಒನ್ಪ್ಲಸ್ 5T ಗೆ ಉತ್ತಮ ಪೈಪೋಟಿ ನೀಡುವ ಸಾಮರ್ಥ್ಯ ಪಡೆದಿದೆ.

ಒನ್ಪ್ಲಸ್ 5T AI ಸಾಮರ್ಥ್ಯ ಹೊಂದಿರದ ಕಾರಣ ಹಾನರ್ ವ್ಯೂ ಅದಕ್ಕಿಂತ ಉತ್ತಮ ಫೋನ್ ಎನಿಸಬಹುದು. AI ಸಾಮರ್ಥ್ಯ ಹೊಂದಿರುವ ಚಿಪ್ಸೆಟ್ ಮಾತ್ರವಲ್ಲದೆ ಹಾನರ್ ವ್ಯೂ 10 ಡ್ಯುಯಲ್ ಲೆನ್ಸ್ ಕ್ಯಾಮೆರಾ ಸೆಟಪ್,18:9 ಆಸ್ಪೆಕ್ಟ್ ಅನುಪಾತ, ಸಾಕಷ್ಟು RAM-ಸ್ಟೋರೇಜ್, ಮತ್ತು ತೆಳುವಾದ ಲೋಹದ ವಿನ್ಯಾಸವನ್ನೂ ಹೊಂದಿದೆ. ಇಷ್ಟೆಲ್ಲಾ ಫೀಚರ್ಗಳು ಮಧ್ಯಮ-ಶ್ರೇಣಿಯ ಸ್ಮಾರ್ಟ್ಫೋನ್ಗಳ ಪೈಕಿ ಶ್ರೇಷ್ಠವಾಗಿಸುತ್ತದೆಯೇ..? ಈ ವಿಮರ್ಶೆಯ ಮೂಲಕ ಇದನ್ನು ತಿಳಿಯುವ ಪ್ರಯತ್ನ ಮಾಡಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕಿರಿನ್ 970 AI ಚಿಪ್ಸೆಟ್ : ಭವಿಷ್ಯದ ಬುದ್ಧಿವಂತ ಚಿಪ್ಸೆಟ್

ಕಿರಿನ್ 970 AI ಚಿಪ್ಸೆಟ್ : ಭವಿಷ್ಯದ ಬುದ್ಧಿವಂತ ಚಿಪ್ಸೆಟ್

ಹಾನರ್ ವ್ಯೂ 10 ನ ಬೆನ್ನೆಲುಬು ಈ ಕಿರಿನ್ 970 AI ಚಿಪ್ಸೆಟ್. ಕಿರಿನ್ 970 ಹುವಾವೆಯ ಮೊದಲ ಮೊಬೈಲ್ AI ಕಂಪ್ಯೂಟಿಂಗ್ ಪ್ಲ್ಯಾಟ್ಫಾರ್ಮ್ ಆಗಿದ್ದು ನ್ಯೂರಲ್ ಪ್ರಾಸೆಸಿಂಗ್ ಯೂನಿಟ್ ಹೊಂದಿದೆ.

ಹಾನರ್ ವ್ಯೂ 10 ನಲ್ಲಿ ನೀವು ಮಾಡುವ ಎಲ್ಲಾ ಚಟುವಟಿಕೆಗಳನ್ನು ಅಂದರೆ ಫೋಟೋಗ್ರಾಫಿ, ಮೀಡಿಯಾ ಪ್ಲೇಬ್ಯಾಕ್, ಬ್ಯಾಟರಿ ಬಳಕೆ, ಗೇಮಿಂಗ್ ಮುಂತಾದವುಗಳನ್ನು ಇದರ CPU ಮತ್ತು NPU ಯುನಿಟ್ ಗಳು ಒಟ್ಟಾಗಿ ನಿರ್ವಹಿಸುತ್ತದೆ. 10nm ಮ್ಯಾನಫ್ಯಾಕ್ಚರಿಂಗ್ ಪ್ರಾಸೆಸ್ ಮೂಲಕ ತಯಾರಿಸಲ್ಪಟ್ಟಿರುವ ಕಿರಿನ್ 970 ಪ್ರಾಸೆಸರ್ 1 ಚದರ ಸೆಂಟಿಮೀಟರ್ ವ್ಯಾಪ್ತಿಯಲ್ಲಿ 5.5 ಬಿಲಿಯನ್ ಟ್ರ್ಯಾನ್ಸಿಸ್ಟರ್ಗಳನ್ನು ಹೊಂದಿದೆ.

ಹೆಬ್ಬರಳಿನ ಉಗುರಿನಷ್ಟು ದೊಡ್ಡದಾದ ಈ ಚಿಪ್ಸೆಟ್ ಒಂದು ಒಕ್ಟಾಕೋರ್ CPU, ಒಂದು 12-ಕೋರ್ ಮಾಲಿ GPU, ಡ್ಯುಯಲ್ ISP, AI ಕಂಪ್ಯೂಟಿಂಗ್ ಆರ್ಕಿಟೆಕ್ಚರ್ ಮತ್ತು ಆಧುನಿಕ ಮೊಬೈಲ್ ಗೆ ಬೇಕಾದ ಇತರ ಅಂಶಗಳನ್ನು ಹೊಂದಿದೆ. AI ಸಂಬಂಧಿತ ಚಟುವಟಿಕೆಗಳನ್ನು ನೆರವೇರಿಸಲೆಂದೇ NPU ಅನ್ನು ಜೋಡಿಸಲಾಗಿದೆ.

ದಿನನಿತ್ಯದ ಬಳಕೆಯಲ್ಲಿ ಉತ್ತಮ ವೇಗ

ದಿನನಿತ್ಯದ ಬಳಕೆಯಲ್ಲಿ ಉತ್ತಮ ವೇಗ

2018ರ ಅಗತ್ಯಕ್ಕೆ ತಕ್ಕಂತೆ ಹಾನರ್ ವ್ಯೂ 10 ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಆಪ್ ಲೋಡ್ ಮಾಡುವಾಗ, ಮೂಲ UI ನ್ಯಾವಿಗೇಶನ್, ವೆಬ್ ಪೇಜ್ ತೆರೆಯುವಾಗ, ಕಾಲ್ ಮಾಡುವುದು ಮತ್ತು ಇತರ ದಿನ ನಿತ್ಯದ ಬಳಕೆಯಲ್ಲಿ ಯಾವುದೇ ರೀತಿಯ ಅಡೆತಡೆಗಳು ಉಂಟಾಗುವುದಿಲ್ಲ.

ಹಾನರ್ ವ್ಯೂ 10 ನಲ್ಲಿರುವ ಸಾಕಷ್ಟು RAM ಮತ್ತು AI ಸಾಮರ್ಥ್ಯದ ಒಕ್ಟಾ-ಕೋರ್ CPU ನಿಂದಾಗಿ ದಿನನಿತ್ಯದ ಬಳಕೆಯಲ್ಲಿ ಯಾವುದೇ ವಿಳಂಬವುಂಟಾಗುವುದಲ್ಲಿ. ಗೂಗಲ್ ನ ಪಿಕ್ಸೆಲ್ 2 XL ನಷ್ಟೇ ಕಂಪ್ಯೂಟಿಂಗ್ ಮತ್ತು ಮಲ್ಟಿ-ಟಾಸ್ಕಿಂಗ್ ಸಾಮರ್ಥ್ಯವಿದ್ದರೂ ಬೆಲೆ ಮಾತ್ರ ಅದರ ಅರ್ಧದಷ್ಟಿರುವುದೇ ವಿಶೇಷ.

ಇದರಲ್ಲಿರುವ NPU ವಿನಿಂದಾಗಿ ಆಪ್ ರೆಸ್ಪಾನ್ಸ್ ಟೈಮ್ ಮತ್ತು ಡೌನ್ಲೋಡ್ ವೇಗದಲ್ಲಿ ಸುಧಾರಣೆಯಿದೆ. ಬರೆದ ಟೆಕ್ಸ್ಟ್ ಅನ್ನು ಇತರ ಮೊಬೈಲ್ಗಳಿಗಿಂತ 300% ವೇಗವಾಗಿ ಭಾಷಾಂತರಿಸುವ ಸಾಮರ್ಥ್ಯ NPU ನಿಂದಾಗಿ ಹಾನರ್ ವ್ಯೂ 10 ಗೆ ಲಭಿಸಿದೆ.

ನಮ್ಮ ಅನುಭವದಲ್ಲಿ AI ಸಾಮರ್ಥ್ಯವುಳ್ಳ ಹಾನರ್ ವ್ಯೂ 10 ಅದೇ ಶ್ರೇಣಿಯ ಮತ್ತು ಅದಕ್ಕಿಂತ ಸ್ವಲ್ಪ ಮೇಲಿನ ಶ್ರೇಣಿಯ ಸ್ಮಾರ್ಟ್ಫೋನ್ಗಳಿಗಿಂತ ವೇಗವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಉತ್ತಮ ಕಾರ್ಯಕ್ಷಮತೆ ತೋರುತ್ತದೆ.

ಹಾನರ್ ವ್ಯೂ 10 vs ಇತರ ಫ್ಲ್ಯಾಗ್ಶಿಪ್ ಮೊಬೈಲ್ಗಳು(ಕಿರಿನ್ 970 AI CPU vs ಸ್ನ್ಯಾಪ್ಡ್ರಾಗನ್ 835 CPU)

ಹಾನರ್ ವ್ಯೂ 10 vs ಇತರ ಫ್ಲ್ಯಾಗ್ಶಿಪ್ ಮೊಬೈಲ್ಗಳು(ಕಿರಿನ್ 970 AI CPU vs ಸ್ನ್ಯಾಪ್ಡ್ರಾಗನ್ 835 CPU)

ಕಿರಿನ್ 970 AI ಹೊಂದಿರುವ ಹಾನರ್ ವ್ಯೂ 10 ಮತ್ತು ಸ್ನ್ಯಾಪ್ಡ್ರಾಗನ್ 835 CPU ಹೊಂದಿರುವ ಒನ್ಪ್ಲಸ್ 5T, LG v30+, ಗೂಗಲ್ ಪಿಕ್ಸೆಲ್ 2 XL ಗಳ ಕಾರ್ಯಕ್ಷಮತೆಯನ್ನು ಒಂದಕ್ಕೊಂದು ಹೋಲಿಸುವ ಪ್ರಯತ್ನ ನಡೆಸಿದೆವು.

ಈ ನಾಲ್ಕು ಮೊಬೈಲ್ಗಳ ಬಳಕೆಯಲ್ಲಿ ಆಪ್, ವೆಬ್ ಪೇಜ್, ಗೇಮ್ ಮೊದಲಾದವುಗಳ ರೆಸ್ಪಾನ್ಸ್ ಟೈಮ್ ಬಹುತೇಕ ಸಮಾನವಾಗಿದೆ. ಮೆಮೋರಿ ಮ್ಯಾನೇಜ್ಮೆಂಟ್ ನಲ್ಲಿ ಒನ್ಪ್ಲಸ್ 5T ಉತ್ತಮವೆನಿಸಿದರೆ ಹಲವು ಆಪ್ಗಳು ಇತರ ಮೊಬೈಲ್ಗಳಿಗಿಂತ ಹಾನರ್ 10 ನಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ ಪ್ರಿಸ್ಮ್ ಆಪ್ ಇತರ ಮೊಬೈಲ್ಗಳಿಗಿಂತ ವೇಗವಾಗಿ ಹಾನರ್ 10 ನಲ್ಲಿ ಕಾರ್ಯನಿರ್ವಹಿಸುತ್ತದೆ. AI ಸಾಮರ್ಥ್ಯವುಳ್ಳ ಕಿರಿನ್ 970 ಪ್ರಾಸೆಸರ್ ನಿಂದಾಗಿ ಇತರ ಮೊಬೈಲ್ಗಳಿಗಿಂತ ಹಾನರ್ ವ್ಯೂ 10 ಉತ್ತಮ ಪ್ರದರ್ಶನ ನೀಡುತ್ತದೆ.

ಹಾನರ್ ವ್ಯೂ 10 ನಲ್ಲಿ ಗೇಮಿಂಗ್ ರೆಸ್ಪಾನ್ಸ್

ಹಾನರ್ ವ್ಯೂ 10 ನಲ್ಲಿ ಗೇಮಿಂಗ್ ರೆಸ್ಪಾನ್ಸ್

ಹಾನರ್ ವ್ಯೂ 10 ಗಿಂತ ಒನ್ಪ್ಲಸ್ 5T ಉತ್ತಮ ಮತ್ತು ವೇಗವಾದ ಗೇಮ್ ರೆಸ್ಪಾನ್ಸ್ ನೀಡಿದೆ.

ಆದರೆ ಹಾನರ್ ನ EMUI ಗೇಮ್ ಸ್ಯೂಟ್ ನಲ್ಲಿ ಗೇಮಿಂಗ್ ಮೋಡ್ ಇದ್ದು ಅದನ್ನು ಸಕ್ರಿಯಗೊಳಿಸಿದಾಗ ಗೇಮ್ ಪರ್ಫಾರ್ಮೆನ್ಸ್ ಉತ್ತಮವಾಗುತ್ತದೆ ಮತ್ತು ಬ್ಯಾಟರಿ ಬಳಕೆಯೂ ಕಡಿಮೆಯಾಗುತ್ತದೆ. ಉತ್ತಮ ಕಾರ್ಯಕ್ಷಮತೆ ಗಳಿಸಲು ಸ್ಮಾರ್ಟ್ ಮೋಡ್ ಅನ್ನೂ ಬಳಸಬಹುದು.ಅಲ್ಲದೆ ಹುವಾವೆ ಯ ಅನುಸಾರ ಹಾನರ್ ವ್ಯೂ 10 ಇತರ ಆಂಡ್ರಾಯ್ಡ್ ಸಾಧನಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ.

AI ಸಾಮರ್ಥ್ಯದಿಂದ ವ್ಯೂ 10 ನ ಕ್ಯಾಮೆರಾ ಕಾರ್ಯಕ್ಷಮತೆ ಹೆಚ್ಚುತ್ತದೆಯೇ?

AI ಸಾಮರ್ಥ್ಯದಿಂದ ವ್ಯೂ 10 ನ ಕ್ಯಾಮೆರಾ ಕಾರ್ಯಕ್ಷಮತೆ ಹೆಚ್ಚುತ್ತದೆಯೇ?

ಹಾನರ್ ವ್ಯೂ 10 ನಲ್ಲಿ ಹೊಸ ರೀತಿಯ AI ಬೆಂಬಲಿತ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು NPU ಇದರಲ್ಲಿ ದೊಡ್ಡ ಪಾತ್ರವಹಿಸುತ್ತದೆ. ಕಿರಿನ್ 970 ಒಂದು ನಿಮಿಷಕ್ಕೆ 2000 ಇಮೇಜ್ಗಳನ್ನು ನಿರ್ವಹಿಸುವ ಸಾಮರ್ಥ್ಯಹೊಂದಿದ್ದು ಇತರ CPUಗಳಿಗಿಂತ ಇದು ಹೆಚ್ಚಾಗಿದೆ.

ಫೊಕಸ್ ಟೈಮ್ ಎಲ್ಲಾ ಮೊಬೈಲ್ಗಳಲ್ಲಿ ಒಂದೇ ತೆರನಾಗಿ ಕಂಡುಬಂದರೂ ಇಮೇಜ್ ಗುಣಮಟ್ಟ ಹಾನರ್ ವ್ಯೂ 10 ನಲ್ಲಿ ಉತ್ತಮವಾಗಿತ್ತು.

ಬಿಟ್‌ಕಾಯಿನ್ ಮೇಲೆ ಹೂಡಿಕೆ ಏಕೆ ಮಾಡಬಾರದು?..ಶತಕೋಟ್ಯಾಧಿಪತಿ ಹೇಳುತ್ತಾರೆ ಕೇಳಿ!!

ಮ್ಯಾಕ್ರೋ ಇಮೇಜ್ಗಳು, ಬೋಕೇ ಇಫೆಕ್ಟ್ ಮತ್ತು ಇಮೇಜ್ ಗುಣಮಟ್ಟ

ಮ್ಯಾಕ್ರೋ ಇಮೇಜ್ಗಳು, ಬೋಕೇ ಇಫೆಕ್ಟ್ ಮತ್ತು ಇಮೇಜ್ ಗುಣಮಟ್ಟ

ಹಾನರ್ ವ್ಯೂ 10 ನಲ್ಲಿ 20MP ಮೋನೋಕ್ರೋಮ್ ಲೆನ್ಸ್ ಮತ್ತು 16MP RGB ಲೆನ್ಸ್ ಗಳಿವೆ. ಇದರ AI ಸಾಮರ್ಥ್ಯದಿಂದಾಗಿ ಕ್ಯಾಮೆರಾ ತನ್ನ ಸೆಟ್ಟಿಂಗ್ ಗಳನ್ನು ಆಟೋ ಎಡ್ಜಸ್ಟ್ ಮಾಡಿಕೊಂಡು ಉತ್ತಮ ಫಲಿತಾಂಶವನ್ನು ನೀಡುತ್ತದೆ.ವ್ಯೂ 10 ನ ಡ್ಯುಯಲ್ ಲೆನ್ಸ್ ಒನ್ಪ್ಲಸ್ 5T ಗಿಂತ ಉತ್ತಮ ಮ್ಯಾಕ್ರೋ ಫೋಟೋಗ್ರಾಫಿ ನೀಡುತ್ತದೆ.

ಉತ್ತಮ ವಿವರಗಳು ಮತ್ತು ನಿಖರವಾದ ಬಣ್ಣಗಳು

ಉತ್ತಮ ವಿವರಗಳು ಮತ್ತು ನಿಖರವಾದ ಬಣ್ಣಗಳು

ಹಾನರ್ ಸ್ಮಾರ್ಟ್ಫಫೋನ್ ಒನ್ಪ್ಲಸ್ 5Tಗಿಂತ ಉತ್ತಮ ಬೋಕೇ ಫೋಟೋಗಳು ಮತ್ತು ಕಡಿಮೆ ಬೆಳಕಿನಲ್ಲಿ ಉತ್ತಮ ಫೋಟೋಗಳನ್ನು ನೀಡುತ್ತದೆ. ಅಲ್ಲದೆ ಇದರಲ್ಲಿ ಆರ್ಟಿಸ್ಟ್ ಮೋಡ್,ಮೋನೋಕ್ರೋಮ್ ಮೋಡ್,ನೈಟ್ ಮೋಡ್ ಮತ್ತು ಪ್ರೋ ಮೋಡ್ ಮೊದಲಾದ ಮೋಡ್ಗಳು ಇವೆ.

ಬೋಕೇ ಫೋಟೋ ತೆಗೆಯಬಲ್ಲ 13MP ಫ್ರಂಟ್ ಕ್ಯಾಮೆರಾ

ಬೋಕೇ ಫೋಟೋ ತೆಗೆಯಬಲ್ಲ 13MP ಫ್ರಂಟ್ ಕ್ಯಾಮೆರಾ

ಇದರ 13MP ಫ್ರಂಟ್ ಕ್ಯಾಮೆರಾ ಉತ್ತಮ ಫೋಟೋ ಸೆರೆಹಿಡಿಯಬಲ್ಲದು ಅಲ್ಲದೆ ಸೆಲ್ಫೀ ಪ್ರಿಯರ ಮನಗೆಲ್ಲುವುದರಲ್ಲಿ ಸಂಶಯವಿಲ್ಲ.

ಹಾನರ್ ವ್ಯೂ 10 ನ ಮಲ್ಟಿಮೀಡಿಯಾ ಅನುಭವ

ಹಾನರ್ ವ್ಯೂ 10 ನ ಮಲ್ಟಿಮೀಡಿಯಾ ಅನುಭವ

ಹಾನರ್ ವ್ಯೂ 10 5.99 ಇಂಚ್ LCD ಸ್ಕ್ರೀನ್ ಮತ್ತು 18:9 ಆಸ್ಪೆಕ್ಟ್ ಅನುಪಾತ ಹೊಂದಿದೆ.2160X1080 ಪಿಕ್ಸೆಲ್ಗಳ ರೆಸೊಲ್ಯೂಶನ್ ಹೊಂದಿದ್ದು ಅತ್ಯಂತ ತೆಳುವಾದ ಅಂಚು ಹೊಂದಿದೆ.ಇದರ LCD ಸ್ಕ್ರೀನ್ ಉತ್ತಮ ಸ್ಕ್ರೀನ್ ಬ್ರೈಟ್ನೆಸ್ ನೀಡುತ್ತದಾದರೂ AMOLED ಮತ್ತು OLED ಸ್ಕ್ರೀನ್ ನಷ್ಟು ಕಲರ್ ಪಂಚ್ ನೀಡುವುದಿಲ್ಲ.

ಹುವಾವೆ ಯ EMUI ಸ್ಕ್ರೀನ್ ಟೆಂಪರೇಚರ್ ಮತ್ತು ಕಲರ್ ಮೋಡ್ಗಳನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುವ ಸಾಮರ್ಥ್ಯ ನೀಡಿದರೂ ಇದರ ಬಣ್ಣಗಳು ಒನ್ಪ್ಲಸ್ 5T ನಷ್ಟು ಜೀವಂತಿಕೆ ಹೊಂದಿಲ್ಲ.

ಹಾನರ್ ವ್ಯೂ 10 ನ ವಿನ್ಯಾಸ

ಹಾನರ್ ವ್ಯೂ 10 ನ ವಿನ್ಯಾಸ

ಹಾನರ್ ವ್ಯೂ 10 ಅತ್ಯಂತ ತೆಳುವಾಗಿದ್ದು ಆಕರ್ಷಕ ವಿನ್ಯಾಸ ಹೊಂದಿರುವ ಮೊಬೈಲ್ಗಳಲ್ಲಿ ಒಂದಾಗಿದೆ. ಮೆಟಲ್ ಮತ್ತು ಗ್ಲಾಸ್ ನಿಂದ ಮಾಡಲಾಗಿರುವ ಈ ಮೊಬೈಲ್ ರೂ 50000 ಬೆಲೆಯ ಫೋನ್ಗಳಂತೆ ಆಕರ್ಷಕ ವಿನ್ಯಾಸ ಹೊಂದಿದೆ. ತುಂಬ ಹಗುರವಾಗಿದ್ದು ಕೈ ಯಿಂದ ಜಾರಿಹೋಗುವ ಅನುಭವ ನೀಡುತ್ತದೆ.

ಪಾರದರ್ಶಕ ಸಿಲಿಕಾನ್ ಕೇಸ್ನೊಂದಿಗೆ ಬರುವ ಹಾನರ್ ವ್ಯೂ 10 ನೋಡಲು ಒನ್ಪ್ಲಸ್ 5T ಗಿಂತ ಆಕರ್ಷಕವಾಗಿದ್ದರೂ ಒನ್ಪ್ಲಸ್ 5T ಕೈಯಲ್ಲಿ ಹಿಡಿದುಕೊಳ್ಳಲು ಆರಾಮದಾಯಕವಾಗಿದೆ.

ಹಾನರ್ ವ್ಯೂ 10 ನಲ್ಲಿ ಪವರ್ ಮತ್ತು ವಾಲ್ಯೂಮ್ ಬಟನ್ಗಳು ಬಲಬದಿಯಲ್ಲಿದ್ದು,ಹೈಬ್ರಿಡ್ ಸಿಮ್ ಕಾರ್ಡ್ ಟ್ರೇ ಎಡಬದಿಯಲ್ಲಿದೆ. ಮೇಲ್ಭಾಗದಲ್ಲಿ ಮೈಕ್ರೋಫೋನ್ ಮತ್ತು ಚಾರ್ಜಿಂಗ್ ಪಾಯಿಂಟ್ಗಳಿದ್ದು ಫಿಂಗರ್ಪ್ರಿಂಟ್ ಸ್ಕ್ಯಾನರ್ ಹೋಮ್ ಬಟನ್ ನ ಜೊತೆಗಿದೆ.

EMUI 8.0 ಹೆಚ್ಚು ಫೀಚರ್ ಹೊಂದಿದ್ದರೂ ಸ್ಟಾಕ್ ಆಂಡ್ರಾಯ್ಡ್ ನಷ್ಟು ಬಳಕೆದಾರ ಸ್ನೇಹಿಯಾಗಿಲ್ಲ

EMUI 8.0 ಹೆಚ್ಚು ಫೀಚರ್ ಹೊಂದಿದ್ದರೂ ಸ್ಟಾಕ್ ಆಂಡ್ರಾಯ್ಡ್ ನಷ್ಟು ಬಳಕೆದಾರ ಸ್ನೇಹಿಯಾಗಿಲ್ಲ

ಹಾನರ್ ವ್ಯೂ 10 ಆಂಡ್ರಾಯ್ಡ್ 8.0 ಓರಿಯೋ ಹೊಂದಿದ್ದು EMUI 8.0 ನ ಮೇಲ್ಪದರವನ್ನು ಹೊಂದಿದೆ.EMUI ಉತ್ತಮ ಫೀಚರ್ಗಳನ್ನು ಹೊಂದಿದೆ. ಹುವಾವೆಯ EMUI ತುಂಬ ಕಸ್ಟಮೈಸೇಬಲ್ ಆಗಿದ್ದರೂ ತುಂಬ ಅಸ್ತವ್ಯಸ್ತಗೊಂಡಂತೆ ಅನಿಸುತ್ತದೆ.

EMUI ತುಂಬ ಕಸ್ಟಮೈಸೇಬಲ್ ಆಗಿದೆ

EMUI ತುಂಬ ಕಸ್ಟಮೈಸೇಬಲ್ ಆಗಿದೆ

EMUI ತುಂಬ ಕಸ್ಟಮೈಸೇಬಲ್ ಆಗಿದ್ದು ಹೋಮ್ ಸ್ಕ್ರೀನ್ ಟೈಪ್ ಆಯ್ಕೆ ಮಾಡಬಹುದು,ಆನ್-ಸ್ಕ್ರೀನ್ ನ್ಯಾವಿಗೇಶನ್ ಬಟನ್ಗಳ ಲೇಔಟ್ ಬದಲಾಯಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಥೀಮ್ ಸ್ಟೋರ್,ಒನ್-ಹ್ಯಾಂಡೆಡ್ ಮೋಡ್ ಮೊದಲಾದ ಆಯ್ಕೆಗಳೂ ಇವೆ.ಅಲ್ಲದೆ ಆಪ್ ಟ್ವಿನ್ ಮೂಲಕ ಒಂದೇ ಆಪ್ ಗೆ ಎರಡು ವಿಭಿನ್ನ ಖಾತೆಗಳ ಮೂಲಕ ಲಾಗಿನ್ ಆಗಬಹುದು.

ಹಾನರ್ ವ್ಯೂ 10 ನಲ್ಲಿ ಫೇಸ್ ರೆಕಗ್ನಿಶನ್ ಸಾಮರ್ಥ್ಯವೂ ಇದೆ. ಹಾನರ್ ವ್ಯೂ 10 ಉತ್ತಮ ಫೀಚರ್ಗಳನ್ನು ಹೊಂದಿದ್ದರೂ ಅದು ಸ್ಟಾಕ್ ಆಂಡ್ರಾಯ್ಡ್ ಮೊಬೈಲ್ನಷ್ಟು ಬಳಕೆದಾರ ಸ್ನೇಹಿಯಾಗಿಲ್ಲ.

ಬ್ಯಾಟರಿ ಸಾಮರ್ಥ್ಯ ಮತ್ತು ಕನೆಕ್ಟಿವಿಟಿ

ಬ್ಯಾಟರಿ ಸಾಮರ್ಥ್ಯ ಮತ್ತು ಕನೆಕ್ಟಿವಿಟಿ

ಹಾನರ್ ವ್ಯೂ 10 3750 mAh ಬ್ಯಾಟರಿ ಹೊಂದಿದ್ದು ಅತಿಯಾಗಿ ಬಳಸಿದರೂ ಒಂದುದಿನ ನಿರಂತರ ಕಾರ್ಯನಿರವಹಿಸುತ್ತದೆ.ಕಿರಿನ್ 970 AI ಚಿಪ್ಸೆಟ್ ಉತ್ತಮ ಕಾರ್ಯಕ್ಷಮತೆ ಹೊಂದಿದ್ದು ಕಡಿಮೆ ಬ್ಯಾಟರಿ ಬಳಸುತ್ತದೆ. ಅಲ್ಲದೆ ಬ್ಲೂಟೂತ್,ವೈಫೈ,ಹೈಬ್ರಿಡ್ ಡ್ಯುಯಲ್ ಸಿಮ್, ಜಿಪಿಎಸ್ ಮೊದಲಾದ ಕನೆಕ್ಟಿವಿಟಿ ಆಯ್ಕೆಗಳನ್ನು ಹೊಂದಿದೆ.ಹಾನರ್ ವ್ಯೂ 10 ಎರಡೂ ಸಿಮ್ಗಳಲ್ಲಿ VoLTE ಬೆಂಬಲ ನೀಡುವುದು ಒಂದು ವಿಶೇಷತೆಯಾಗಿದೆ.

ಸಾರಾಂಶ

ಸಾರಾಂಶ

ಹಾನರ್ ವ್ಯೂ 10 ಮಧ್ಯಮ ಬೆಲೆಯ ಶ್ರೇಣಿ ಮೊಬೈಲ್ಗಳ ಪೈಕಿ ಅತ್ಯಂತ ಬುದ್ಧಿಮತ್ತೆಯಿಂದ ಕೂಡಿರುವ ಮತ್ತು ಉತ್ತಮ ಫೀಚರ್ಗಳಿಂದ ಕೂಡಿದ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಎನಿಸಿದೆ.NPU ನ ಸಹಾಯದಿಂದ AI ಕ್ಲೌಡ್ ಅನ್ನು ಸಾಧನಕ್ಕೆ ಸೇರಿಸುವ ಮೂಲಕ ರೆಸ್ಪಾನ್ಸ್ ಟೈಮ್ ಕಡಿಮೆ ಮಾಡಿದೆ. ಹಾಗಾಗಿ ಮಾರುಕಟ್ಟೆಯಲ್ಲಿ ಹಾನರ್ ವ್ಯೂ 10 ಅತ್ಯಂತ ವೇಗದ ಪ್ರತಿಕ್ರಿಯೆ ನೀಡುವ ಸ್ಮಾರ್ಟ್ಫೋನ್ ಎನಿಸಿದೆ.

ಇದರ ಮೊಬೈಲ್ AI ಬಳಕೆದಾರರ ದಿನನಿತ್ಯದ ಮೊಬೈಲ್ ಬಳಕೆಯ ಮಾದರಿಯನ್ನು ಅರ್ಥೈಸಿಕೊಂಡು ಅವರ ಅಗತ್ಯಗಳಿಗೆ ತಕ್ಕಂತೆ ಸ್ಪಂದಿಸಿ ಉತ್ತಮ ಅನುಭವವನ್ನು ನೀಡುತ್ತದೆ. ಅಲ್ಲದೆ ಉತ್ತಮ ಕ್ಯಾಮೆರಾ ವನ್ನು ಹೊಂದಿರುವ ಈ ಸ್ಮಾರ್ಟ್ಫೋನ್ 1 ದಿನದ ಕಾಲ ನಿರಂತರವಾಗಿ ಕಾರ್ಯನಿರ್ವಹಿಸುತ್ತದೆ.

ಡಿಸ್ಪ್ಲೇ ಮತ್ತು ಯೂಸರ್ ಇಂಟರ್ಫೇಸ್ ವಿಭಾಗದಲ್ಲಿ ಹಾನರ್ ವ್ಯೂ 10 ನಮ್ಮ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವುದಿಲ್ಲ.ಇದರ LCD ಪ್ಯಾನಲ್ AMOLED ಅಥವಾ OLED ಪ್ಯಾನಲ್ನಷ್ಟು ಉತ್ತಮ ಬಣ್ಣಗಳನ್ನು ನೀಡುವುದಿಲ್ಲ ಮತ್ತು UI ಸ್ಟಾಕ್ ಆಂಡ್ರಾಯ್ಡ್ ಅಥವಾ ಆಕ್ಸಿಜನ್ ಓಎಸ್ ನಷ್ಟು ಬಳಕೆದಾರ ಸ್ನೇಹಿಯಾಗಿಲ್ಲ. ಆದರೆ ರೂ 30,000 ದೊಳಗಿನ ಬೆಲೆಯ ಮೊಬೈಲ್ಗಳ ಪೈಕಿ ಇದು ಅತ್ಯಂತ ಉತ್ತಮ ಫೋನ್ ಎಂದರೆ ತಪ್ಪಾಗಲಾರದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Honor View 10 is priced at Rs. The smartphone sports a taller 18:9 aspect ratio display. The smartphone features a 5.99-inch FHD+ screen that delivers a resolution of 2160x1080p pixels. It also has a capable dual-lens camera setup
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot