ಅಮೇಜಾನ್ ನಲ್ಲಿ ಹಾನರ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಅಮೇಜಾನ್ ನಲ್ಲಿ ಫ್ಯಾಬ್ ಫೋನ್ ಫೆಸ್ಟ್ ಇಂದಿನಿಂದ ಆರಂಭವಾಗಿದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಸೇಲ್ ನಲ್ಲಿ ಹಾನರ್ ಸ್ಮಾರ್ಟ್ ಫೋನ್ ಗಳಾಗಿರುವ- ಹಾನರ್ 8ಎಕ್ಸ್, ಹಾನರ್ 8ಸಿ, ಹಾನರ್ ಪ್ಲೇ, ಹಾನರ್ 7ಸಿ ಮತ್ತು ನೂತನ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಹಾನರ್ ವ್ಯೂ 20 ರಿಯಾಯಿತಿ ಮತ್ತು ಆಫರ್ ಬೆಲೆಯಲ್ಲಿ ಲಭ್ಯವಿದೆ. ಈ ಸೇಲ್ ನ ಭಾಗವಾಗಿ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಹೊಂದಿರುವವರು ಹೆಚ್ಚುವರಿ 5% ಇನ್ಸೆಂಟ್ ರಿಯಾಯಿತಿಯನ್ನು ಇಎಂಐ ಖರೀದಿಯಲ್ಲಿ ಪಡೆಯುವುದಕ್ಕೆ ಅವಕಾಶವಿರುತ್ತದೆ. ಯಾವೆಲ್ಲ ಸ್ಮಾರ್ಟ್ ಫೋನ್ ಗಳು ಎಷ್ಟೆಷ್ಟು ರಿಯಾಯಿತಿಯಲ್ಲಿ ಸಿಗುತ್ತದೆ ಎಂಬ ಪಟ್ಟಿ ಇಲ್ಲಿದೆ ನೋಡಿ.

ಹಾನರ್ ವ್ಯೂ 20: ಲಭ್ಯವಿರುವ ಬೆಲೆ ರುಪಾಯಿ 37,999 ಮೇಲ್ಪಟ್ಟು

ಹಾನರ್ ವ್ಯೂ 20: ಲಭ್ಯವಿರುವ ಬೆಲೆ ರುಪಾಯಿ 37,999 ಮೇಲ್ಪಟ್ಟು

ಇದೀಗ ನಡೆಯುತ್ತಿರುವ ಸೇಲ್ ನಲ್ಲಿ ಹಾನರ್ ವ್ಯೂ 20 ಯನ್ನು ಖರೀದಿಸುವವರು ಉಚಿತವಾಗಿ ಹಾನರ್ ಎಕ್ಸ್ಸ್ಪೋರ್ಟ್ಸ್ ಇಯರ್ ಫೋನ್ ನ್ನು ಪಡೆಯಲಿದ್ದಾರೆ. ಇದನ್ನು ಸದ್ಯ 5000 ರುಪಾಯಿ ರಿಯಾಯಿತಿ ಬೆಲೆಯಲ್ಲಿ ಪಡೆಯುವುದಕ್ಕೆ ಅವಕಾಶವಿದೆ. 6ಜಿಬಿ ಮತ್ತು 8ಜಿಬಿ ಮೆಮೊರಿ ಇರುವ ಫೋನ್ ಗಳು ಕ್ರಮವಾಗಿ 37,999 ಮತ್ತು 45,999 ರುಪಾಯಿಗೆ ಸಿಗುತ್ತದೆ. ನೋ ಕಾಸ್ಟ್ ಇಎಂಐ ಆಯ್ಕೆ ಮತ್ತು 4000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಹಾನರ್ ವ್ಯೂ 20 ಗೆ ಲಭ್ಯವಿದೆ.

ಹಾನರ್ 8ಎಕ್ಸ್: ಲಭ್ಯವಿರುವ ಬೆಲೆ ರುಪಾಯಿ 13,999 ಮೇಲ್ಪಟ್ಟು

ಹಾನರ್ 8ಎಕ್ಸ್: ಲಭ್ಯವಿರುವ ಬೆಲೆ ರುಪಾಯಿ 13,999 ಮೇಲ್ಪಟ್ಟು

ಹಾನರ್ 8ಎಕ್ಸ್ ಎರಡು ವೇರಿಯಂಟ್ ನಲ್ಲಿ ಸಿಗುತ್ತದೆ. 4ಜಿಬಿ ಮತ್ತು 6ಜಿಬಿ ಮೆಮೊರಿಯು 64ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯೊಂದಿಗೆ ಪೇರ್ ಆಗಿರುತ್ತದೆ. ಎರಡೂ ಮಾಡೆಲ್ ಗಳು 4,000 ರುಪಾಯಿಯ ರಿಯಾಯಿತಿಯಲ್ಲಿ ಲಭ್ಯವಿದ್ದು ಕ್ರಮವಾಗಿ 13,999 ಮತ್ತು 15,999 ರುಪಾಯಿಗೆ ಖರೀದಿಸುವ ಅವಕಾಶವಿದೆ.

ಹಾನರ್ 8ಸಿ: ಲಭ್ಯವಿರುವ ಬೆಲೆ ರುಪಾಯಿ 9,999

ಹಾನರ್ 8ಸಿ: ಲಭ್ಯವಿರುವ ಬೆಲೆ ರುಪಾಯಿ 9,999

ಈ ಸೇಲ್ ನಲ್ಲಿ ಹಾನರ್ 8ಸಿ ಯನ್ನು 9,999 ರುಪಾಯಿಗೆ ಖರೀದಿಸಬಹುದು. ಅಂದರೆ ನೈಜ ಬೆಲೆ 12,999 ರುಪಾಯಿಗಿಂತ 3000 ರುಪಾಯಿ ಕಡಿಮೆ ಬೆಲೆಯಲ್ಲಿ ಸಿಗುತ್ತದೆ. ಈ ಸ್ಮಾರ್ಟ್ ಫೋನ್ 4ಜಿಬಿ ಮೆಮೊರಿ ಮತ್ತು 32ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ಹಾನರ್ ಪ್ಲೇ: ಲಭ್ಯವಿರುವ ಬೆಲೆ ರುಪಾಯಿ 14,999 ಮೇಲ್ಪಟ್ಟು

ಹಾನರ್ ಪ್ಲೇ: ಲಭ್ಯವಿರುವ ಬೆಲೆ ರುಪಾಯಿ 14,999 ಮೇಲ್ಪಟ್ಟು

ಹಾನರ್ ಪ್ಲೇಯನ್ನು 14,999 ರುಪಾಯಿ ಬೆಲೆಗೆ ಮತ್ತು 16,999 ರುಪಾಯಿ ಬೆಲೆಗೆ ಕ್ರಮವಾಗಿ 4ಜಿಬಿ ಮತ್ತು 6ಜಿಬಿ ಮೆಮೊರಿ ವ್ಯವಸ್ಥೆಯ ಫೋನ್ ನ್ನು ಖರೀದಿಸಬಹುದು. ಈ ಸೇಲ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯು ಹಾನರ್ ಪ್ಲೇಗೆ ಲಭ್ಯವಿದೆ. 7,000 ರುಪಾಯಿಯ ರಿಯಾಯಿತಿ ಬೆಲೆಯಲ್ಲಿ ಇದು ಲಭ್ಯವಿದೆ.

ಹಾನರ್ 7ಸಿ: ಲಭ್ಯವಿರುವ ಬೆಲೆ ರುಪಾಯಿ 7,999 ಮೇಲ್ಪಟ್ಟು

ಹಾನರ್ 7ಸಿ: ಲಭ್ಯವಿರುವ ಬೆಲೆ ರುಪಾಯಿ 7,999 ಮೇಲ್ಪಟ್ಟು

ಹಾನರ್ 7ಸಿ ಎರಡು ವೇರಿಯಂಟ್ ನ ಸ್ಟೋರೇಜ್ ವ್ಯವಸ್ಥೆಯಲ್ಲಿ ಲಭ್ಯವಾಗುತ್ತದೆ-32ಜಿಬಿ ಮತ್ತು64ಜಿಬಿ ವ್ಯವಸ್ಥೆಯು 3ಜಿಬಿ ಮತ್ತು 4ಜಿಬಿ ಮೆಮೊರಿ ವ್ಯವಸ್ಥೆಯೊಂದಿಗೆ ಪೇರ್ ಆಗಿರುತ್ತದೆ. ಎರಡು ಮಾಡೆಲ್ ಗಳು ಕ್ರಮವಾಗಿ 7,999 ಮತ್ತು 8,999 ರುಪಾಯಿ ಬೆಲೆಗೆ ಲಭ್ಯವಾಗುತ್ತದೆ.

Best Mobiles in India

English summary
Honor View 20, Honor 8X, Honor Play and other Honor smartphones available at discount up to RS 7,000 on Amazon

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X